Varamahalakshmi: ಮುಹೂರ್ತ, ಟೀಸರ್, ಟ್ರೇಲರ್… ಚಂದನವನದಲ್ಲಿ ಲಕ್ಷ್ಮೀ ಸಂಭ್ರಮ
Team Udayavani, Aug 16, 2024, 11:29 AM IST
ವರಮಹಾಲಕ್ಷ್ಮೀ ಹಬ್ಬವನ್ನು ಅತೀ ಹೆಚ್ಚು ಸಂಭ್ರಮಿಸುವ ಯಾವುದಾದರೂ ಕ್ಷೇತ್ರವೊಂದಿದ್ದರೆ ಬಹುಶಃ ಅದು ಸಿನಿಮಾ ಕ್ಷೇತ್ರವೇ ಇರಬೇಕು. ಈ ಹಬ್ಬದ ಮೇಲೆ ಚಿತ್ರರಂಗಕ್ಕೆ ವಿಶೇಷವಾದ ನಂಬಿಕೆ. ಅದೇ ಕಾರಣದಿಂದ ತಮ್ಮ ಸಿನಿಮಾಗಳ ಮುಹೂರ್ತ, ಟೀಸರ್, ಟ್ರೇಲರ್, ಫಸ್ಟ್ ಲುಕ್… ಹೀಗೆ ಸಿನಿಮಾ ಸಂಬಂಧಿತ ಕಾರ್ಯಗಳನ್ನು ಮಾಡುತ್ತಲೇ ಇರುತ್ತದೆ. ಈ ಬಾರಿಯೂ ಸ್ಯಾಂಡಲ್‌ವುಡ್ ವರ ಮಹಾಲಕ್ಷ್ಮೀ ಹಬ್ಬವನ್ನು ಸಂಭ್ರಮಿಸುತ್ತಿದೆ.
ಸಿನಿಮಾಗಳ ಮುಹೂರ್ತ, ಫಸ್ಟಲುಕ್, ಟೀಸರ್, ಟ್ರೇಲರ್ ಬಿಡುಗಡೆಯಾಗುತ್ತಿದೆ. ಮುಖ್ಯವಾಗಿ ಇಂದು ಶಿವರಾಜ್‌ಕುಮಾರ್ ನಟನೆಯ 131ನೇ ಚಿತ್ರದ ಮುಹೂರ್ತ ಇಂದು ಕಂಠೀರವ ಸ್ಟುಡಿಯೋದಲ್ಲಿ ನಡೆಯಲಿದೆ. ಈ ಚಿತ್ರವನ್ನು ಕಾರ್ತಿಕ್ ಅದ್ವೆ„ತ್ ನಿರ್ದೇಶನ ಮಾಡುತ್ತಿದ್ದು, ಎಸ್. ಎನ್.ರೆಡ್ಡಿ ಹಾಗೂ ಸುಧೀರ್ ಪಿ ನಿರ್ಮಿಸುತ್ತಿದ್ದಾರೆ. ಅಂದಹಾಗೆ ಈ ಚಿತ್ರ ಕನ್ನಡದ ಜೊತೆಗೆ ತೆಲುಗು, ತಮಿಳು ಹಾಗು ಮಲಯಾಳಂನಲ್ಲೂ ಬಿಡುಗಡೆಯಾಗುತ್ತಿದೆ. ಸದ್ಯ ಶಿವರಾಜ್ ಕುಮಾರ್ ಅವರ “ಭೈರತಿ ರಣಗಲ್’ ಬಿಡುಗಡೆಯ ಹಂತಕ್ಕೆ ಬಂದಿದ್ದು, ಅರ್ಜುನ್ ಜನ್ಯಾ ನಿರ್ದೇಶನದ “45′ ಚಿತ್ರೀಕರಣದಲ್ಲಿದ್ದಾರೆ.
ವಿಭಿನ್ನ ಕಂಟೆಂಟ್ ಸಿನಿಮಾಗಳ ಮೂಲಕ ತಮ್ಮದೇ ಆದ ಛಾಪು ಮೂಡಿಸಿರುವ ನಟ, ನಿರ್ದೇಶಕ ರಾಜ್ ಬಿ ಶೆಟ್ಟಿ ನಟನೆಯ ಹೊಸ ಸಿನಿಮಾ ಇಂದು ಸೆಟ್ಟೇರುತ್ತಿದೆ. ಸಾಹಸ ನಿರ್ದೇಶಕ ರವಿವರ್ಮಾ ನಿರ್ಮಾಣದಲ್ಲಿ ರವಿ ಸಾರಂಗ್ ನಿರ್ದೇಶಿಸುತ್ತಿರುವ ಈ ಸಿನಿಮಾದ ಮುಹೂರ್ತ ಇಂದು ವರಸಿದ್ಧಿ ವಿನಾಯಕ ದೇವಸ್ಥಾನದಲ್ಲಿ ನಡೆಯುತ್ತಿದ್ದು, ಇದು ರೆಗ್ಯುಲರ್ ಪ್ಯಾಟರ್ನ್ ಬಿಟ್ಟ ಸಿನಿಮಾ ಎನ್ನಲಾಗಿದೆ.
ಉಪೇಂದ್ರ ನಿರ್ದೇಶನ, ನಟನೆಯ “ಯು-ಐ’ ಸಿನಿಮಾದ ಹೊಸ ಅಪ್‌ಡೇಟ್ ಅನ್ನು ಚಿತ್ರತಂಡ ಇಂದು ಅಭಿಮಾನಿಗಳ ಮಡಿಲಿಗೆ ಹಾಕಲಿದ್ದು, ಸಿನಿಪ್ರೇಮಿಗಳ ಕುತೂಹಲದಿಂದ ಎದುರು ನೋಡುತ್ತಿದ್ದಾರೆ. ಇದರ ಜೊತೆಗೆ ಮಂಸೋರೆ ನಿರ್ದೇಶನದ ಹೊಸ ಚಿತ್ರದ ಟೈಟಲ್ ಲಾಂಚ್ ಕೂಡಾ ಇಂದು ನಡೆಯಲಿದ್ದು, ಈ ಚಿತ್ರವನ್ನು ದೇವರಾಜ್ ಆರ್ ನಿರ್ಮಿಸುತ್ತಿದ್ದಾರೆ. ಇದಲ್ಲದೇ ಪೆನ್ ಡ್ರೈವ್ ಚಿತ್ರದ ಮುಹೂರ್ತ ಕೂಡಾ ಇಂದು ನಡೆಯಲಿದೆ.
ವರಮಹಾಲಕ್ಷ್ಮೀ ಹಬ್ಬದ ಹಿನ್ನೆಲೆಯಲ್ಲಿ ಕೆಲವು ಸಿನಿಮಾಗಳ ಟ್ರೇಲರ್ ಕೂಡಾ ಬಿಡುಗಡೆಯಾಗಿದೆ. ರಿಷಭ್ ಶೆಟ್ಟಿ ನಿರ್ಮಾಣದಲ್ಲಿ ಪ್ರಮೋದ್ ಶೆಟ್ಟಿ ನಾಯಕರಾಗಿ ನಟಿಸಿರುವ “ಲಾಫಿಂಗ್ ಬುದ್ಧ’ ಚಿತ್ರದ ಟ್ರೇಲರ್ ಬಿಡುಗಡೆಯಾಗಿದೆ. ಇದರ ಜೊತೆಗೆ ಅನೇಕ ಹೊಸಬರ ಚಿತ್ರಗಳ ಪೋಸ್ಟರ್, ಟೀಸರ್‌ಗಳು ಕೂಡಾ ಇಂದು ಬಿಡುಗಡೆಯಾ ಗುತ್ತಿದ್ದು, ಲಕ್ಷ್ಮೀ ಕಟಾಕ್ಷ ಸಿಗುವ ನಿರೀಕ್ಷೆಯಲ್ಲಿದೆ ಸ್ಯಾಂಡಲ್ ವುಡ್.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sandalwood: ಸ್ಟಾರ್ ಸಿನಿಮಾ ಹೆಚ್ಚು ಬಂದರೆ ಚಿತ್ರರಂಗಕ್ಕೆ ಪೂರಕ: ಎನ್. ನರಸಿಂಹಲು
Dhruva-Prem: ಡಿ.24ಕ್ಕೆ ʼಕೆಡಿʼ ಶಿವ ಶಿವ ಹಾಡು ರಿಲೀಸ್
Dhruva Sarja: ಪ್ರತಿ ಸಿನಿಮಾವೂ ನನಗೆ ಹೊಸ ಪಾಠ…: ಧ್ರುವ ಹೇಳಿದ್ದೇನು
Kiccha Sudeepa; ತಾಯಿಯನ್ನು ಉಳಿಸಿಕೊಳ್ಳಲಾಗದ ಆ ಕ್ಷಣ ನಾನು ಯೂಸ್‌ಲೆಸ್ ಅನಿಸಿತು…
UI Movie: 9 ವರ್ಷ ಬಳಿಕ ಉಪ್ಪಿ ಡೈರೆಕ್ಟ್ ಮಾಡಿದ ಯು-ಐ ಸಿನಿಮಾದ ಹೈಲೈಟ್ಸ್ ಏನು?
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Mumbai: ಕಾರು ಢಿಕ್ಕಿ; ರಸ್ತೆ ಬದಿ ಆಡುತ್ತಿದ್ದ 4ರ ಬಾಲಕ ಸ್ಥಳದಲ್ಲೇ ಮೃ*ತ್ಯು
CT Ravi; ಚಿಕ್ಕಮಗಳೂರಿಗೆ ಬಂದ ಕೂಡಲೇ ಟೆಂಪಲ್ ರನ್ ಆರಂಭಿಸಿದ ಸಿ.ಟಿ.ರವಿ
Healt: ಶಿಶುವಿನ ಹಾಲು ಹಲ್ಲುಗಳು ನೀವು ತಿಳಿದಿರಬೇಕಾದ 9 ಲಕ್ಷಣಗಳು
Jayadeva Hospital ಉದ್ಘಾಟನಾ ಸಮಾರಂಭದಿಂದ ದೂರ ಉಳಿದ ಸಚಿವ ಪ್ರಿಯಾಂಕ್ ಖರ್ಗೆ
Kalaburagi; ಜಾಹೀರಾತು, ಫಲಕದಲ್ಲಿ ಹೆಸರಿಲ್ಲ: ಶಾಸಕ ಅಲ್ಲಮಪ್ರಭು ಬೆಂಬಲಿಗರಿಂದ ಪ್ರತಿಭಟನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.