ಟಾಯ್ಲೆಟ್-ಏಕ್ ಕಥಾ
Team Udayavani, Aug 25, 2017, 6:15 AM IST
ರಾಜಕೀಯ ವಿಡಂಬನೆ ಕುರಿತು ಈಗಾಗಲೇ ಹಲವು ಚಿತ್ರಗಳು ಬಂದಿವೆ. ಈಗ “ಮುಖ್ಯಮಂತ್ರಿ ಕಳೆದೋದ್ನಪ್ಪೊ’ ಕೂಡ ಸೇರಿದೆ. ಈಗಾಗಲೇ ಚಿತ್ರೀಕರಣ ಮುಗಿಸಿ, ತೆರೆಗೆ ಬರಲು ಅಣಿಯಾಗಿದೆ ಚಿತ್ರತಂಡ. ಈ ಚಿತ್ರದ ಮೂಲಕ ಶಿವಕುಮಾರ್ ಭದ್ರಯ್ಯ ನಿರ್ದೇಶಕರಾಗುತ್ತಿದ್ದಾರೆ. ಕಥೆ, ಚಿತ್ರಕಥೆ, ಸಂಭಾಷಣೆ ಮತ್ತು ನಿರ್ಮಾಣವೂ ಇವರದೇ. ಇನ್ನು, ಈ ಚಿತ್ರದ ಹೀರೋ ಅವರ ಪುತ್ರ ಭರತ್ ಭದ್ರಯ್ಯ. ಇತ್ತೀಚೆಗೆ ಚಿತ್ರದ ಹಾಡುಗಳ ಬಿಡುಗಡೆ ಕಾರ್ಯಕ್ರಮ ಆಯೋಜಿಸಿದ್ದರು. ಕರ್ನಾಟಕ ರಕ್ಷಣಾ ವೇದಿಕೆಯ ಶಿವರಾಮೇಗೌಡ ಇತರರು ಆಡಿಯೋ ಸಿಡಿ ಬಿಡುಗಡೆ ಮಾಡಿ ಶುಭಹಾರೈಸಿದರು. ಅದಕ್ಕೂ ಮುನ್ನ, ಚಿತ್ರದ ಮೂರು ಹಾಡು, ಒಂದು ಪ್ರೋಮೋ ತೋರಿಸಲಾಯಿತು. ಆ ಬಳಿಕ ನಿರ್ದೇಶಕರು ಸಿನಿಮಾ ಬಗ್ಗೆ ಮಾತಿಗಿಳಿದರು.
“ಇದು ರಾಜಕೀಯ ವಾಸ್ತವತೆಯ ಕುರಿತ ಸಿನಿಮಾ. ಇಲ್ಲಿ ಮತದಾರರಿಗೂ ಒಂದು ಸಂದೇಶವಿದೆ. ಸಮಾಜದಲ್ಲಿ ಆಗುತ್ತಿರುವ ಭ್ರಷ್ಟತೆ, ಮೌಡ್ಯತೆಯನ್ನು ಇಲ್ಲಿ ತೋರಿಸಲಾಗಿದೆ. ಕೆಟ್ಟ ರಾಜಕಾರಣಿಗಳು ಹೇಗೆಲ್ಲಾ ಜನರನ್ನು ವಂಚಿಸುತ್ತಾರೆ ಎಂಬುದು ಚಿತ್ರದ ಕಥೆ. ಒಂದು ಶೌಚಾಲಯ ಹಗರಣ ದೊಡ್ಡ ಸುದ್ದಿಯಾದಾಗ, ಮುಖ್ಯಮಂತ್ರಿ ಕಳೆದೋಗ್ತಾನೆ. ಆಮೇಲೆ ಏನಾಗುತ್ತೆ ಅನ್ನೋದೇ ಕಥೆ. ಕಥೆಗೆ ಪೂರಕವಾಗಿ ಹಾಡುಗಳಿವೆ. ಇಲ್ಲಿ ಬಹುತೇಕ ಹೊಸಬರೇ ಇದ್ದಾರೆ. ಬಾಬು ಹಿರಣ್ಣಯ್ಯ ಚಿತ್ರದ ಹೈಲೆಟ್. ಅವರಿಲ್ಲಿ ಮುಖ್ಯಮಂತ್ರಿಯಾಗಿ ನಟಿಸಿದ್ದಾರೆ. ಇಲ್ಲಿ ಇನ್ನೊಬ್ಬ ಮುಖ್ಯಮಂತ್ರಿ ಇದ್ದಾರೆ. ಅದು ಸಿನಿಮಾದಲ್ಲೇ ನೋಡಬೇಕು’ ಅಂದರು ಶಿವಕುಮಾರ್.
ಬಾಬು ಹಿರಣ್ಣಯ್ಯ ಅವರು ಕಳೆದ ಮೂರು ದಶಕಗಳಿಂದಲೂ ಅವರ ತಂದೆ ಮಾಸ್ಟರ್ ಹಿರಣ್ಣಯ್ಯ ಅವರ ಜತೆ “ಲಂಚಾವತಾರ’
ನಾಟಕ ಮಾಡುತ್ತ ಬಂದಿದ್ದಾರೆ. ಅವರು ನಾಟಕ ಮಾಡಿದ್ದು ಬದಲಾವಣೆ ಸಿಗುತ್ತೆ ಅಂತ ಅಲ್ಲವಂತೆ. “”ಲಂಚಾವತಾರ’ದಿಂದ ಹಿರಣ್ಣಯ್ಯ ಅವರ ಹೊಟ್ಟೆಪಾಡು ಆಯೆ¤à ವಿನಃ, ಸಮಾಜ ಬದಲಾಗಲಿಲ್ಲ ಎಂಬುದು ಬಾಬು ಹಿರಣ್ಣಯ್ಯ ಅವರ ಮಾತು. ಇಲ್ಲಿ ಶಿವಕುಮಾರ್ ಅವರ ಕಥೆ ಚೆನ್ನಾಗಿದೆ. ಇದರ ಮೂಲಕ ಬದಲಾವಣೆ ಆಗುತ್ತೆ ಅಂತ ಹೇಳಲ್ಲ.
ಆದರೆ, ವಾಸ್ತವತೆಯನ್ನು ಚೆನ್ನಾಗಿ ಬಿಂಬಿಸಲಾಗಿದೆ. ನೋಡುಗರಿಗೆ ಸ್ವಲ್ಪವಾದರೂ ನಾಟಿದರೆ ಸಾಕು’ ಅಂದರು ಬಾಬು ಹಿರಣ್ಣಯ್ಯ.ಅಂದು ಶುಭಹಾರೈಸಲು ಬಿ.ಟಿ.ಲಲಿತಾ ನಾಯ್ಕ ಬಂದಿದ್ದರು. ಆಲೂರು ನಾಗಪ್ಪ ಚಿತ್ರದ ನಾಯಕ ಭರತ್ ಭದ್ರಯ್ಯ ಅವರಿಗೆ “ನ್ಯಾಚುರಲ್ ಸ್ಟಾರ್’ ಬಿರುದು ಕೊಟ್ಟು ಖುಷಿಯಾದರು. ನಾಯಕಿ ಅಮೂಲ್ಯ ರಾಜ್ ಮೊದಲ ಸಿನಿಮಾದ ಅನುಭವ ಹಂಚಿಕೊಂಡರು. ಸಂಗೀತ ನಿರ್ದೇಶಕ ನಯನ್ ನಾಲ್ಕು ಹಾಡುಗಳ ಬಗ್ಗೆ ಹೇಳಿಕೊಂಡರು. ಎಲ್ಲರೂ ಮಾತಾಡಿ ಮುಗಿಸುವ ಹೊತ್ತಿಗೆ, ಸಮಯ ಮೀರಿತ್ತು, ಪತ್ರಿಕಾಗೋಷ್ಠಿಗೂ ತೆರೆಬಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sandalwood: ಸ್ಟಾರ್ ಸಿನಿಮಾ ಹೆಚ್ಚು ಬಂದರೆ ಚಿತ್ರರಂಗಕ್ಕೆ ಪೂರಕ: ಎನ್. ನರಸಿಂಹಲು
Dhruva-Prem: ಡಿ.24ಕ್ಕೆ ʼಕೆಡಿʼ ಶಿವ ಶಿವ ಹಾಡು ರಿಲೀಸ್
Dhruva Sarja: ಪ್ರತಿ ಸಿನಿಮಾವೂ ನನಗೆ ಹೊಸ ಪಾಠ…: ಧ್ರುವ ಹೇಳಿದ್ದೇನು
Kiccha Sudeepa; ತಾಯಿಯನ್ನು ಉಳಿಸಿಕೊಳ್ಳಲಾಗದ ಆ ಕ್ಷಣ ನಾನು ಯೂಸ್‌ಲೆಸ್ ಅನಿಸಿತು…
UI Movie: 9 ವರ್ಷ ಬಳಿಕ ಉಪ್ಪಿ ಡೈರೆಕ್ಟ್ ಮಾಡಿದ ಯು-ಐ ಸಿನಿಮಾದ ಹೈಲೈಟ್ಸ್ ಏನು?
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Arrest Warrant: ರಾಬಿನ್ ಉತ್ತಪ್ಪ ವಿರುದ್ದ ಬಂಧನ ವಾರೆಂಟ್; ಜೈಲು ಪಾಲಾಗ್ತಾರಾ ಕ್ರಿಕೆಟಿಗ
Mangaluru: ಕರಾವಳಿ ಉತ್ಸವದಲ್ಲಿ ಹೆಲಿಕಾಪ್ಟರ್ ಮೂಲಕ ನಗರದ ದರ್ಶನಕ್ಕೆ ಅವಕಾಶ
M. Chinnaswamy ಸ್ಟಾಂಡ್‌ಗೆ ಶಾಂತಾ ರಂಗಸ್ವಾಮಿ ಹೆಸರಿಡಲು ಯಾಕೆ ಹಿಂದೇಟು? ಏನಿದು ವಿವಾದ?
Mandya :ಗಂಡ ಗದ್ಯ, ಹೆಂಡತಿ ಪದ್ಯ, ಮಕ್ಕಳು ರಗಳೆ!: ಹಾಸ್ಯ ಸಾಹಿತಿ ವೈ.ವಿ.ಗುಂಡೂರಾವ್
Mangaluru: ಸಹಬಾಳ್ವೆ ಬೆಸೆಯುತ್ತಿದೆ ‘ಕುಸ್ವಾರ್’
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.