ಮುಂದ್ ಒಂದ್ ದಿನ ಗಿನ್ನೆಸ್ ಸೇರಬಹುದು!
ಹೀಗೊಂದ್ ಭಿನ್ನ ಸಿನ್ಮಾ
Team Udayavani, Jun 28, 2019, 5:00 AM IST
“ಇದು ಎಲ್ಲೆಡೆ, ಎಲ್ಲರಿಗೂ ಸಲ್ಲುವ ಕಥೆ. ಆ ಕಥೆ ಸುತ್ತ ತಿರುಗುವ ಹದಿನಾಲ್ಕು ಪಾತ್ರಗಳು. ಯಾವ ಪಾತ್ರಕ್ಕೂ ಮೇಕಪ್ ಇಲ್ಲ. ನೈಜತೆಗೆ ಹೆಚ್ಚು ಒತ್ತು. ಹಲವು ವಿಶೇಷತೆಗಳ ಚಿತ್ರಣಕ್ಕೆ ಆದ್ಯತೆ. ಹೀಗಾಗಿ ಇದು ಗಿನ್ನೆಸ್ ದಾಖಲೆಗೂ ಸೇರುವ ಸಾಧ್ಯತೆ ಹೆಚ್ಚು… ‘
– ಹೀಗೆ ತುಂಬಾ ನಂಬಿಕೆಯಿಂದ ಹೇಳಿದ್ದು ನಿರ್ದೇಶಕ ನವೀನ್ ಶಕ್ತಿ. ಅವರು ಹೀಗೆ ಹೇಳಲು ಕಾರಣ ಅವರ ಮೊದಲ ನಿರ್ದೇಶನದ “ಮುಂದ್ ಒಂದ್ ದಿನ’ ಚಿತ್ರ. ಇತ್ತೀಚೆಗಷ್ಟೇ ಚಿತ್ರಕ್ಕೆ ಮುಹೂರ್ತ ನೆರವೇರಿದೆ. ತಮ್ಮ ಚಿತ್ರದೊಳಗಿನ ವಿಶೇಷತೆಗಳನ್ನೆಲ್ಲಾ ಪಟ್ಟಿ ಮಾಡುತ್ತಾ ಹೋದರು ನಿರ್ದೇಶಕ ನವೀನ್ ಶಕ್ತಿ. ಅಂದಹಾಗೆ, ನಿರ್ದೇಶಕರು ಇಲ್ಲಿ ಗಿನ್ನೆಸ್ ದಾಖಲೆ ಎಂಬ ಪದ ಬಳಸಿದ್ದಾರೆ. ಆದರೆ, ಅಂಥದ್ದೊಂದು ವಿಶೇಷತೆಗೆ ಕಾರಣವಾಗುವ ಅಂಶಗಳೇನು ಎಂಬ ಪ್ರಶ್ನೆಗೆ ಸಿನಿಮಾ ನೋಡಬೇಕು ಎಂಬ ಉತ್ತರ ಅವರಿಂದ ಬರುತ್ತದೆ. “ಮುಂದ್ ಒಂದ್ ದಿನ’ ಚಿತ್ರದಲ್ಲಿ ವಯಸ್ಸಾದ ಅಪ್ಪ-ಅಮ್ಮನನ್ನು ಮಕ್ಕಳು ನೋಡಿಕೊಳ್ಳದಿದ್ದರೆ, ಮುಂದ್ ಒಂದ್ ದಿನ ಏನಾಗುತ್ತದೆ ಎಂಬುದನ್ನೇ ಇಲ್ಲಿ ಭಾವನಾತ್ಮಕವಾಗಿ ಹೇಳುವ ಪ್ರಯತ್ನ ಮಾಡಿದ್ದಾರಂತೆ. ಚಿಕ್ಕಬಳ್ಳಾಪುರ ಮತು ¤ಕೋಲಾರ ಸುತ್ತ ಮುತ್ತ ಸುಮಾರು 25 ದಿನಗಳ ಕಾಲ ಚಿತ್ರೀಕರಿಸುವ ಯೋಜನೆ ಇದೆ ಎಂಬುದು ನಿರ್ದೇಶಕರ ಮಾತು.
ಈ ಚಿತ್ರಕ್ಕೆ ಸಂದೀಪ್ ಹೀರೋ. ಈ ಹಿಂದೆ ರಂಗಭೂಮಿಯಲ್ಲಿ ಕೆಲಸ ಮಾಡಿದ ಅನುಭವ ಸಂದೀಪ್ ಅವರಿಗಿದೆ. ಇಲ್ಲಿ ಅವರಿಗೆ ಎರಡು ಶೇಡ್ ಇರುವ ಪಾತ್ರವಂತೆ. ಒಂದು ಪಾತ್ರದಲ್ಲಿ ರೈತನಾಗಿ ಕಾಣಿಸಿಕೊಂಡರೆ, ಇನ್ನೊಂದು ಪಾತ್ರ ಯಾವುದು, ಹೇಗಿರುತ್ತೆ ಎಂಬುದನ್ನು ಸಿನಿಮಾದಲ್ಲೇ ನೋಡಬೇಕು ಎಂಬುದು ಅವರ ಮಾತು.
ಇನ್ನು, “ಕೆಜಿಎಫ್’ನಲ್ಲಿ ಕಾಣಿಸಿಕೊಂಡಿದ್ದ ಅರ್ಚನಾ ಜೋಯಿಸ್, ಇಲ್ಲಿ ಎರಡು ರೀತಿಯ ಪಾತ್ರದಲ್ಲಿ ನಟಿಸಿದ್ದಾರಂತೆ. ಒಂದು ಯೌವ್ವನದ ಪಾತ್ರ. ಇನ್ನೊಂದು ವಯಸ್ಸಾದ ಮಹಿಳೆಯ ಪಾತ್ರವಂತೆ ಅದು.ಇವರನ್ನು ಹೊರತುಪಡಿಸಿದರೆ ಒಂದಷ್ಟು ರಂಗಾಭರಣದ ಕಲಾವಿದರು ನಟಿಸುತ್ತಿದ್ದು, ಅವರೆಲ್ಲರಿಗೂ ಇಲ್ಲಿ ವಿಶೇಷ ಪಾತ್ರ ಹೆಣೆಯಲಾಗಿದೆಯಂತೆ. ಕೆ.ಕಲ್ಯಾಣ್, ನಾಗೇಂದ್ರ ಪ್ರಸಾದ್, ಯೋಗರಾಜಭಟ್ ಸಾಹಿತ್ಯ ವಿದೆ. ವಿನು ಮನಸು ಸಂಗೀತ ಸಂಯೋಜಿಸುತ್ತಿದ್ದಾರೆ. ಕೆಎಎಸ್ ನಿವೃತ್ತ ಅಧಿಕಾರಿ ಬಿಳಿದಾಳ ಕೆಂಪಯ್ಯ ಅವರಿಲ್ಲಿ ಸಂಭಾಷಣೆ ಬರೆಯುತ್ತಿದ್ದಾರೆ. “ಹೆಬ್ಬೆಟ್ ರಾಮಕ್ಕ’ ಚಿತ್ರ ನಿರ್ಮಿಸಿದ್ದ ಕವಿತಾರಾಜ್, ಎಸ್.ಎ.ಪುಟ್ಟರಾಜು ನಿರ್ಮಾಣ ಮಾಡುತ್ತಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
US Polls: ಕಮಲಾ ಗೆಲುವಿಗಾಗಿ ಪೂರ್ವಿಕರ ಗ್ರಾಮದಲ್ಲಿ ಅರ್ಚನೆ, ಅಭಿಷೇಕ!
Bharat Brand: ಭಾರತ್ ಬ್ರ್ಯಾಂಡ್-2ಗೆ ಚಾಲನೆ: 30ಕ್ಕೆ ಗೋಧಿ ಹಿಟ್ಟು, ಕೆ.ಜಿ.ಅಕ್ಕಿಗೆ 34
US Polls; ಟ್ರಂಪ್‌ಗೆ ಗೆಲುವು: ಭವಿಷ್ಯ ನುಡಿದ ಪ್ರಸಿದ್ಧ ನೀರಾನೆ ಮೂಡೆಂಗ್
Award: ಪ್ರೊ.ತಾಳ್ತಜೆ ವಸಂತ ಕುಮಾರ್‌ಗೆ ಕನಕ ಗೌರವ ಪ್ರಶಸ್ತಿ
Chikkamagaluru: ನ.9ರಿಂದ 11ರ ತನಕ ದತ್ತಪೀಠಕ್ಕೆ ಪ್ರವಾಸಿಗರಿಗೆ ನಿರ್ಬಂಧ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.