ಶಾಲೆಯ ಸುತ್ತ ಮತ್ತೂಂದು ಮಕ್ಕಳ ಚಿತ್ರ ಹುಡುಗರಿಬ್ಬರ ಸಾಹಸಗಾಥೆ
Team Udayavani, Sep 4, 2020, 4:21 PM IST
ರಾಜ್ಯದ ಅನೇಕ ಕಡೆಗಳಲ್ಲಿ ಸರ್ಕಾರಿ ಕನ್ನಡ ಶಾಲೆಗಳನ್ನು ಮುಚ್ಚುವ ಬಗ್ಗೆ ಆಗಾಗ್ಗೆ ಚರ್ಚೆಗಳು, ಹೋರಾಟಗಳು ನಡೆಯುತ್ತಲೇ ಇರುತ್ತವೆ. ಈಗ ಇದೇ ವಿಷಯವನ್ನುಇಟ್ಟುಕೊಂಡು ಮಕ್ಕಳ ಚಿತ್ರವೊಂದು ತಯಾರಾಗುತ್ತಿದೆ. ಅಂದಹಾಗೆ, ಆ ಚಿತ್ರದ ಹೆಸರು “ನಮ್ಮ ಪ್ರೀತಿಯ ಶಾಲೆ’. ಇತ್ತೀಚೆಗೆ ಈ ಚಿತ್ರದ ಮುಹೂರ್ತ ಅದ್ಧೂರಿಯಾಗಿ ನೆರವೇರಿದ್ದು, ಸದ್ಯ ಚಿತ್ರತಂಡ ಚಿತ್ರೀಕರಣಕ್ಕೆ ಹೊರಟಿದೆ.
ಗ್ರಾಮೀಣ ಭಾಗದಲ್ಲಿ ಸರ್ಕಾರಿ ಶಾಲೆಗಳು ಎದುರಿಸು ತ್ತಿರುವ ಸಮಸ್ಯೆಗಳು, ಅವುಗಳಿಗಿರುವ ಸವಾಲು ಗಳು, ವಿದ್ಯಾರ್ಥಿಗಳು ಮತ್ತು ಪೋಷಕರ ಸ್ಥಿತಿ -ಗತಿಗಳ ಸುತ್ತ ಈ ಚಿತ್ರದ ಕಥೆ ನಡೆಯಲಿದೆ. ಕನ್ನಡದಲ್ಲಿ ಇಲ್ಲಿಯವರೆಗೆ ಹಲವು ಚಿತ್ರಗಳಿಗೆ ಛಾಯಾಗ್ರಹಕರಾಗಿ ಕೆಲಸ ಮಾಡಿದ ಅನುಭವವಿರುವ ಸೇಲ್ವಂ “ನಮ್ಮ ಪ್ರೀತಿಯ ಶಾಲೆ’ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸುತ್ತಿದ್ದಾರೆ. ಈ ಚಿತ್ರ ಸರ್ಕಾರಿ ಶಾಲೆಯ ಇಬ್ಬರು ಹುಡುಗರ ಸುತ್ತ ನಡೆಯಲಿದ್ದು, ಮಾಸ್ಟರ್ ಮಹಾನಿಧಿ, ಮಾಸ್ಟರ್ ಜೀವಿತ್, ದತ್ತಣ್ಣ, ಕೃಷ್ಣೋಜಿ ರಾವ್ ಮೊದಲಾದವರು ಈ ಚಿತ್ರದ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ.
ಮುಹೂರ್ತದ ವೇಳೆ ಚಿತ್ರದ ಬಗ್ಗೆ ಮಾತನಾಡಿದ ನಿರ್ದೇಶಕ ಸೇಲ್ವಂ, “ಕರ್ನಾಟಕದಲ್ಲಿ ಹತ್ತಾರು ವರ್ಷಗಳಿಂದ ನಡೆಯುತ್ತಿರುವ ಸರ್ಕಾರಿ ಶಾಲೆಗಳ ಅಸ್ತಿತ್ವದ ಹೋರಾಟ ಈ ಚಿತ್ರದ ಕಥಾವಸ್ತು. ಕಣ್ಣಾರೆ ಕಂಡ, ಕೇಳಿದ ವಿಷಯಗಳು, ನೈಜ ಘಟನೆಗಳನ್ನು ಆಧರಿಸಿ ಈ ಸಿನಿಮಾ ಮಾಡುತ್ತಿದ್ದೇವೆ. ಇದರಲ್ಲೊಂದು ಸಂದೇಶವಿದೆ. ಗ್ರಾಮೀಣ ಭಾಗದ ಇಬ್ಬರು ಹುಡುಗರು ತಮ್ಮ ಶಾಲೆಯನ್ನು ಉಳಿಸಿಕೊಳ್ಳಲು ಹೇಗೆಲ್ಲ ಹೋರಾಟ ಮಾಡುತ್ತಾರೆ ಅನ್ನೋದು ಸಿನಿಮಾದ ಕಥೆಯ ಒಂದು ಎಳೆ’ ಎಂದು ಚಿತ್ರದ ಕಥಾಹಂದರದ ಬಗ್ಗೆ ಮಾಹಿತಿ ನೀಡಿದರು. “ಶ್ರೀಯೋಗ ಲಕ್ಷ್ಮೀ ನರಸಿಂಹ ಸ್ವಾಮಿ ಕಂಬೈನ್ಸ್’ ಬ್ಯಾನರ್‌ನಲ್ಲಿ ಉದ್ಯಮಿ ವೈ.ಆರ್ ವೇಮಿ ರೆಡ್ಡಿ ಮತ್ತು ಸೇಲ್ವಂ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಚಿತ್ರದ ಎರಡು ಹಾಡು ಗಳಿಗೆ ಪಳನಿ ಡಿ. ಸೇನಾಪತಿ ಸಂಗೀತ ಸಂಯೋಜಿಸುತ್ತಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Sagara: ಚಿರತೆ ಉಗುರು, ಹಲ್ಲು ಅಕ್ರಮ ಸಾಗಣೆ… ಸೊತ್ತು ಸಮೇತ ವ್ಯಕ್ತಿ ವಶ
Mudhol: ಸಾಲಬಾಧೆಗೆ ಹೆದರಿ ರೈತ ಮಹಿಳೆ ಬಾವಿಗೆ ಹಾರಿ ಆತ್ಮಹತ್ಯೆ
Belegavi: ‘ನಾ ಡ್ರೈವರ್’ ಹಾಡಿನ ಗಾಯಕ ಮಾಳು ನಿಪನಾಳನಿಂದ ಯುವಕನ ಮೇಲೆ ಹಲ್ಲೆ
Horoscope: ಉದ್ಯೋಗ ಸ್ಥಾನದಲ್ಲಿ ಎರಡೂ ಬಗೆಯ ಅನುಭವಗಳು ಆಗಲಿದೆ
MUDA Case: ತನಿಖೆ ಸಿಬಿಐಗೆ ವಹಿಸಲು ಹೈಕೋರ್ಟ್‌ಗೆ ಅರ್ಜಿ; ಇಂದು ವಿಚಾರಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.