ಆಧ್ಯಾತ್ಮಿಕ ಹಿನ್ನೆಲೆಯ ನಮೋ


Team Udayavani, Mar 16, 2018, 8:15 AM IST

a-26.jpg

ಪ್ರಧಾನ ಮಂತ್ರಿಗಳ ನಾಯಕತ್ವ ಗುಣದಿಂದ ಸ್ಫೂರ್ತಿ ಪಡೆದು… ನಿರ್ದೇಶಕಿ ರೂಪಾ ಅಯ್ಯರ್‌ ಪ್ರಧಾನಿ ನರೇಂದ್ರ ಮೋದಿ ಕುರಿತು ಸಿನಿಮಾ ಮಾಡಲು ಹೊರಟಿದ್ದಾರೆ. ಆ ಚಿತ್ರಕ್ಕೆ ಅವರಿಟ್ಟಿರುವ ಹೆಸರು “ನಮೋ – ಟ್ರೂ ಇಂಡಿಯನ್‌’. ಕನ್ನಡ ಮತ್ತು ಹಿಂದಿಯಲ್ಲಿ ಈ ಚಿತ್ರ ತಯಾರಾಗಲಿದ್ದು, ಸದ್ಯ ಕಲಾವಿದರ ಆಯ್ಕೆ ಪ್ರಕ್ರಿಯೆ ನಡೆಯುತ್ತಿದೆ.

“ಮುಖಪುಟ’, “ಚಂದ್ರ’ ಹಾಗೂ “ಕಲರ್’ನಂತಹ ಸಿನಿಮಾ ಮಾಡಿದ್ದ ರೂಪಾ ಅಯ್ಯರ್‌ ಈಗ ನರೇಂದ್ರ ಮೋದಿಯವರ ಕುರಿತು ಸಿನಿಮಾ ಮಾಡಲು ಕಾರಣವೇನು ಎಂದು ನೀವು ಕೇಳಬಹುದು. ಅದಕ್ಕೆ ಕಾರಣ ನರೇಂದ್ರ ಮೋದಿಯವರ ನಾಯಕತ್ವ ಗುಣವಂತೆ. “ಗಾಂಧೀಜಿ ನಂತರ ನನ್ನನ್ನು ತುಂಬಾ ಪ್ರೇರೇಪಿಸಿದ ನಾಯಕ ಎಂದರೆ ಮೋದಿ. ಅವರ ನಾಯಕತ್ವ ಗುಣ ನನಗೆ ಇಷ್ಟ. ಇಡೀ ವಿಶ್ವವೇ ತಿರುಗಿ ನೋಡುವಂತಹ ವ್ಯಕ್ತಿಯಾಗಿ ಬೆಳೆದ ಮೋದಿಯವರ ಹಿಂದೆ ಸಾಕಷ್ಟು ಕುತೂಹಲಕಾರಿ ಅಂಶಗಳಿವೆ. ಅವೆಲ್ಲವನ್ನಿಟ್ಟುಕೊಂಡು ಈ ಸಿನಿಮಾ ಮಾಡುತ್ತಿದ್ದೇವೆ. ಇದು ಆಧ್ಯಾತ್ಮ ಹಿನ್ನೆಲೆಯಲ್ಲಿ ಸಾಗುತ್ತದೆ’ ಎಂದು ಚಿತ್ರದ
ಬಗ್ಗೆ ವಿವರ ಕೊಟ್ಟರು ರೂಪಾ. ಮೋದಿಯವರ ಗುರುಗಳು, ಅವರ ತಾಯಿ, ಮೋದಿಯವರೊಂದಿಗೆ ಹೆಚ್ಚು ಒಡನಾಟ ಇಟ್ಟುಕೊಂಡಿದ್ದವರನ್ನು ಕೂಡಾ ಮಾತನಾಡಿಸಿ, ಮಾಹಿತಿ ಪಡೆಯುತ್ತಿದ್ದಾರಂತೆ.

ನಿರ್ದೇಶಕ ಗುರುಪ್ರಸಾದ್‌ “ನಮೋ’ ಸ್ಕ್ರಿಪ್ಟ್ನಲ್ಲಿ ತೊಡಗಿದ್ದಾರೆ. ನರೇಂದ್ರ ಮೋದಿಯವರ ಕುರಿತಾಗಿ ಬಂದಿರುವ ಪುಸ್ತಕಗಳು ಸೇರಿದಂತೆ ಅನೇಕ ಅಂಶಗಳ ಮೂಲಕ ಮಾಹಿತಿ ಸಂಗ್ರಹಿಸುತ್ತಿದ್ದಾರೆ. “ನನಗೆ ವೈಯಕ್ತಿಕವಾಗಿಯೂ ಮೋದಿ ಎಂದರೆ ತುಂಬಾ ಇಷ್ಟ. ತುಂಬಾ ವರ್ಷಗಳಿಂದ ನಾನು ಅವರನ್ನು ಫಾಲೋ ಮಾಡಿಕೊಂಡು ಬರುತ್ತಿದ್ದೇನೆ. ಬೇರೆಯವರು ರಾಜಕೀಯ, ಪ್ರಜಾಕೀಯ
ಎನ್ನುತ್ತಿರುವ ಹೊತ್ತಿಗೆ ಮೋದಿಯವರು ಅಪನಗದೀಕರಣ, ಸ್ವಚ್ಛ ಭಾರತದಂತಹ ಅದ್ಭುತ ಕಾರ್ಯಗಳನ್ನು ಮಾಡುತ್ತಿದ್ದಾರೆ. ಅವರ ಸ್ವತ್ಛ ಭಾರತ ಅನೇಕರಿಗೆ ಪ್ರೇರಣೆ. ನಾನು ಕೂಡಾ ಅದರಿಂದ ಪ್ರೇರಣೆಯಾಗಿ ಕಲ್ಯಾಣಿ ಯೊಂದನ್ನು ಸ್ವಚ್ಛ ಗೊಳಿಸಿದ್ದೇನೆ. ಹೀಗೆ
ಮೋದಿ ಅವರ ಬಗ್ಗೆ ಸಾಕಷ್ಟು ವಿಷಯಗಳಿವೆ. ಹಾಗಂತ ಅವರು ಮಾಡಿದ ಕಾರ್ಯಗಳನ್ನು ಇಟ್ಟುಕೊಂಡು ಮಾಡಿದರೆ ಅದು ಡಾಕ್ಯುಮೆಂಟರಿಯಾಗುತ್ತದೆ. ಹಾಗಾಗಿ, ಸಿನಿಮೇಟಿಕ್‌ ಅಂಶಗಳನ್ನು ಸ್ಕ್ರಿಪ್ಟ್ನಲ್ಲಿ ಸೇರಿಸುತ್ತೇನೆ’ ಎಂದು “ನಮೋ’ ಬಗ್ಗೆ ಹೇಳಿದರು.

ಸ್ಕ್ರಿಪ್ಟ್ನಲ್ಲಿ ನಿರ್ದೇಶಕ ಸುನೀಲ್‌ ಪುರಾಣಿಕ್‌ ಕೂಡಾ ಕೈ ಜೋಡಿಸುತ್ತಿದ್ದಾರೆ. ಡಾ.ಜಯಲಕ್ಷ್ಮೀ ನರೇಂದ್ರ ಮೋದಿಯವರ ಕುರಿತ ಆಧ್ಯಾತ್ಮಿಕ ಅಂಶಗಳನ್ನು ಸೇರಿಸಲಿದ್ದಾರಂತೆ. ಚಿತ್ರವನ್ನು ಅಮೆರಿಕಾದಲ್ಲಿರುವ ಗಾಯತ್ರಿ ರವಿ ನಿರ್ಮಿ ಸುತ್ತಿದ್ದಾರೆ. “ರೂಪಾ
ಅಯ್ಯರ್‌ ಅವ ರನ್ನು ನಾವು ಮಗಳೆಂದು ಸ್ವೀಕರಿಸಿದ್ದೇವೆ. ಆಕೆ ರಾಜಕೀ ಯಕ್ಕೆ ಬಂದರೆ ಪ್ರಧಾನಿ ಯಾಗಿ ಬೆಳೆ ಯುವ ಶಕ್ತಿ
ಆಕೆಗಿದೆ. ಈಗ ಆಕೆ ಸಿನಿಮಾ ಮಾಡುತ್ತಿದ್ದು, ನಮ್ಮ ಸಂಪೂರ್ಣ ಬೆಂಬಲವಿದೆ’  ಎಂದರು. ಚಿತ್ರಕ್ಕೆ ಗೌತಮ್‌ ಶ್ರೀವತ್ಸ ಸಂಗೀತವಿದೆ.

ಟಾಪ್ ನ್ಯೂಸ್

rain-dk

Rain Alert: ರಾಜ್ಯದಲ್ಲಿ ಕನಿಷ್ಠ ತಾಪಮಾನ 4 ಡಿ.ಸೆ ಏರಿಕೆ; ಹಲವೆಡೆ 24ರಂದು ಮಳೆ ಸಾಧ್ಯತೆ

1-puri

Puri; ವರ್ಷಾರಂಭದೊಂದಿಗೆ ಜಗನ್ನಾಥ ದೇಗುಲದಲ್ಲಿ ಹೊಸ ದರ್ಶನ ವ್ಯವಸ್ಥೆ

tirupati

Tirupati; ದೇವಸ್ಥಾನದಲ್ಲೂ ಶೀಘ್ರ ಎಐ ಚಾಟ್‌ಬಾಟ್‌!

RD-Parede

Parade: ಗಣರಾಜ್ಯೋತ್ಸವಕ್ಕೆ 15 ಸ್ತಬ್ಧಚಿತ್ರ ಆಯ್ಕೆ: ಮತ್ತೆ ದೆಹಲಿಗೆ ಕೊಕ್‌

YOutube

Click Bite: ಹಾದಿ ತಪ್ಪಿಸಿದರೆ ವೀಡಿಯೋ ಡಿಲೀಟ್‌: ಯೂಟ್ಯೂಬ್‌!

Mandya-Sahitya

ಮಂಡ್ಯ ಸಾಹಿತ್ಯ ಸಮ್ಮೇಳನದಲ್ಲಿ ಕನ್ನಡಕ್ಕಾಗಿ ಕೈಗೊಂಡ 5 ನಿರ್ಣಯಗಳೇನು ಗೊತ್ತಾ?

KSG-Terrorist

Kasaragodu: ಸ್ಲೀಪರ್‌ ಸೆಲ್‌ ರಚನೆಗಾಗಿ ಭಾರತಕ್ಕೆ ಬಂದಿದ್ದ ಭಯೋತ್ಪಾದಕ ಶಾಬ್‌ಶೇಖ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಸ್ಟಾರ್‌ ಸಿನಿಮಾ ಹೆಚ್ಚು ಬಂದರೆ ಚಿತ್ರರಂಗಕ್ಕೆ ಪೂರಕ: ಎನ್‌. ನರಸಿಂಹಲು

Sandalwood: ಸ್ಟಾರ್‌ ಸಿನಿಮಾ ಹೆಚ್ಚು ಬಂದರೆ ಚಿತ್ರರಂಗಕ್ಕೆ ಪೂರಕ: ಎನ್‌. ನರಸಿಂಹಲು

KD

Dhruva-Prem: ಡಿ.24ಕ್ಕೆ ʼಕೆಡಿʼ ಶಿವ ಶಿವ ಹಾಡು ರಿಲೀಸ್‌

Dhruva Sarja: ಪ್ರತಿ ಸಿನಿಮಾವೂ ನನಗೆ ಹೊಸ ಪಾಠ…: ಧ್ರುವ ಹೇಳಿದ್ದೇನು

Dhruva Sarja: ಪ್ರತಿ ಸಿನಿಮಾವೂ ನನಗೆ ಹೊಸ ಪಾಠ…: ಧ್ರುವ ಹೇಳಿದ್ದೇನು

Kiccha Sudeepa; ತಾಯಿಯನ್ನು ಉಳಿಸಿಕೊಳ್ಳಲಾಗದ ಆ ಕ್ಷಣ ನಾನು ಯೂಸ್‌ಲೆಸ್‌ ಅನಿಸಿತು…

Kiccha Sudeepa; ತಾಯಿಯನ್ನು ಉಳಿಸಿಕೊಳ್ಳಲಾಗದ ಆ ಕ್ಷಣ ನಾನು ಯೂಸ್‌ಲೆಸ್‌ ಅನಿಸಿತು…

UI Movie: 9 ವರ್ಷ ಬಳಿಕ ಉಪ್ಪಿ ಡೈರೆಕ್ಟ್‌ ಮಾಡಿದ ಯು-ಐ ಸಿನಿಮಾದ ಹೈಲೈಟ್ಸ್‌ ಏನು?

UI Movie: 9 ವರ್ಷ ಬಳಿಕ ಉಪ್ಪಿ ಡೈರೆಕ್ಟ್‌ ಮಾಡಿದ ಯು-ಐ ಸಿನಿಮಾದ ಹೈಲೈಟ್ಸ್‌ ಏನು?

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

rain-dk

Rain Alert: ರಾಜ್ಯದಲ್ಲಿ ಕನಿಷ್ಠ ತಾಪಮಾನ 4 ಡಿ.ಸೆ ಏರಿಕೆ; ಹಲವೆಡೆ 24ರಂದು ಮಳೆ ಸಾಧ್ಯತೆ

Karnataka; ರಾಜ್ಯದ ಕಾಡಿಗೆ ಕೊಡಲಿ! ಮಾನವ-ವನ್ಯಜೀವಿ ಸಂಘರ್ಷ ಹೆಚ್ಚಳ?

Karnataka; ರಾಜ್ಯದ ಕಾಡಿಗೆ ಕೊಡಲಿ! ಮಾನವ-ವನ್ಯಜೀವಿ ಸಂಘರ್ಷ ಹೆಚ್ಚಳ?

1-puri

Puri; ವರ್ಷಾರಂಭದೊಂದಿಗೆ ಜಗನ್ನಾಥ ದೇಗುಲದಲ್ಲಿ ಹೊಸ ದರ್ಶನ ವ್ಯವಸ್ಥೆ

tirupati

Tirupati; ದೇವಸ್ಥಾನದಲ್ಲೂ ಶೀಘ್ರ ಎಐ ಚಾಟ್‌ಬಾಟ್‌!

RD-Parede

Parade: ಗಣರಾಜ್ಯೋತ್ಸವಕ್ಕೆ 15 ಸ್ತಬ್ಧಚಿತ್ರ ಆಯ್ಕೆ: ಮತ್ತೆ ದೆಹಲಿಗೆ ಕೊಕ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.