ದಡ್ಡರು ಈ ಚಿತ್ರ ನೋಡುವಂತಿಲ್ಲ!

ಅತಿ ಬುದ್ಧಿವಂತ ನಿರ್ದೇಶಕನ ಮಾತು

Team Udayavani, Jul 5, 2019, 5:00 AM IST

26

‘ಇದು ಬುದ್ಧಿವಂತರಿಗೆ ಅರ್ಪಣೆ. ದಡ್ಡರು ಈ ಸಿನಿಮಾ ನೋಡುವಂತಿಲ್ಲ…!

-ಇದು ಯಾರೋ ಸ್ಟಾರ್‌ ಡೈರೆಕ್ಟರ್‌ ಆಗಲಿ ಅಥವಾ ಸ್ಟಾರ್‌ ನಟರಾಗಲಿ ಹೇಳಿದ ಮಾತಲ್ಲ. ಈಗಷ್ಟೇ ಸಿನಿಮಾರಂಗಕ್ಕೆ ಎಂಟ್ರಿಕೊಟ್ಟಿರುವ ಅದರಲ್ಲೂ ಮೊದಲ ಬಾರಿಗೆ ಚಿತ್ರವೊಂದನ್ನು ನಿರ್ದೇಶಿಸಿರುವ ನಿರ್ದೇಶಕರೊಬ್ಬರು ಹೇಳಿದ ಮಾತು. ನಿಜಕ್ಕೂ ಅದು ಬುದ್ಧಿವಂತರಿಗೆ ಅರ್ಪಣೆಯಾಗುವ ಚಿತ್ರನಾ? ದಡ್ಡರು ಸಿನಿಮಾ ನೋಡುವಂತಿಲ್ಲವೇ? ಅದಕ್ಕೆ ಉತ್ತರ ಚಿತ್ರ ಬರುವವರೆಗೂ ಕಾಯಬೇಕು. ಅಂದಹಾಗೆ, ಆ ಚಿತ್ರದ ಹೆಸರು ‘ಆಡಿಸಿ ನೋಡು ಬೀಳಿಸಿ ನೋಡು ‘.

ಶೀರ್ಷಿಕೆ ಓದಿದ ಮೇಲೆ ‘ಕಸ್ತೂರಿ ನಿವಾಸ ‘ ಚಿತ್ರದ ‘ಆಡಿಸಿ ನೋಡು ಬೀಳಿಸಿ ನೋಡು’ ಚಿತ್ರದ ಜನಪ್ರಿಯ ಹಾಡು ನೆನಪಿಗೆ ಬರದೇ ಇರದು. ಅಂತಹ ಒಳ್ಳೆಯ ಶೀರ್ಷಿಕೆಯ ಚಿತ್ರವನ್ನು ದಡ್ಡರು ನೋಡುವಂತಿಲ್ಲ ಅಂತ ಹೇಳಿದ ನಿರ್ದೇಶಕರ ಹೆಸರು ಮನೋಜ್‌ ಶ್ರೀಹರಿ. ಇವರಿಗಿದು ಮೊದಲ ಚಿತ್ರ. ಅಷ್ಟಕ್ಕೂ ಅವರು ಹಾಗೆ ಹೇಳಿದ್ದು ಯಾಕೆ? ಇದಕ್ಕೆ ಉತ್ತರಿಸಿದ ನಿರ್ದೇಶಕರು, ‘ಇಲ್ಲಿ ಕಥೆಯೊಳಗೊಂದು ಕಥೆ ಇದೆ. ಸ್ಕ್ರೀನ್‌ಪ್ಲೇನಲ್ಲಿ ಮಲ್ಟಿ ಲೇಯರ್‌ಗಳಿವೆ. ತುಂಬಾ ಗಂಭೀರವಾಗಿದ್ದರೆ ಮಾತ್ರ ಚಿತ್ರ ಅರ್ಥವಾಗುತ್ತೆ. ಬುದ್ಧಿವಂತರಿಗೆ ಈ ಚಿತ್ರವನ್ನು ಅರ್ಪಿಸುತ್ತಿದ್ದೇನೆ. ದಡ್ಡರು ಈ ಚಿತ್ರ ನೋಡಬಾರದು ಅಂತ ಹೇಳ್ಳೋಕೆ ಕಾರಣವಿಷ್ಟೇ, ಇದು ಒಂದೇ ಸಲ ಅರ್ಥವಾಗದ ಚಿತ್ರ. ಅದರಲ್ಲೂ ಸ್ಕ್ರೀನ್‌ಪ್ಲೇ ಹೊಸ ರೀತಿಯಲ್ಲಿರುವುದರಿಂದ ದಡ್ಡರು ನೋಡಂಗಿಲ್ಲ ‘ ಎಂದರು ಅವರು. ಹಾಗಾದರೆ, ದಡ್ಡರು ಯಾರು? ಇದಕ್ಕೆ ಉತ್ತರಿಸಲು ತಡವರಿಸಿದ ಮನೋಜ್‌, ‘ಅದೇನೋ ಗೊತ್ತಿಲ್ಲ ಸರ್‌, ‘ಬುದ್ಧಿವಂತರಿಗೆ ಮಾತ್ರ ಈ ಚಿತ್ರ’ ಎಂದು ಬುದ್ಧಿವಂತರಂತೆ ಹೇಳಿಕೊಂಡರು. ‘ನಾನು ಉಪೇಂದ್ರ ಫ್ಯಾನ್‌. ನಾನು ಏಕಲವ್ಯ ಇದ್ದಂತೆ. ಅವರು ದಶರಥ ಇದ್ದಂಗೆ ಅಂತ ಒಂದೇ ಸ್ಪೀಡ್‌ನ‌ಲ್ಲಿ ಹೇಳುತ್ತಾ ಹೋದರು. ಅವರ ಮಾತಿನ ಸ್ಪೀಡ್‌ನ‌ಲ್ಲಿ ಉಪೇಂದ್ರ ಅವರನ್ನು ‘ದ್ರೋಣಾಚಾರ್ಯ’ ಎನ್ನುವ ಬದಲು ‘ದಶರಥ’ ಅಂತ ಹೇಳಿಬಿಟ್ಟರು.

‘ಹೋಗಲಿ, ನಿಮ್‌ ಸಿನ್ಮಾ ಕಥೆ ಏನು’ ಎಂಬ ಪತ್ರಕರ್ತರ ಪ್ರಶ್ನೆಗೆ, ‘ನನಗೆ ಸಂಗೀತ ಗೊತ್ತು. ನಿರ್ದೇಶನದ ಮೇಲೆ ವಿಶ್ವಾಸವಿರಲ್ಲ. ಆಯ್ಯಪ್ಪ ಯಾತ್ರೆ ವೇಳೆ ನಿರ್ಮಾಪಕರು ಪರಿಚಯವಾಗಿದ್ದರು. ಅವರಿಗೆ ಈ ಕಥೆಯ ಒನ್‌ಲೈನ್‌ ಹೇಳಿದ್ದೆ . ಇಷ್ಟವಾಗಿ ಚಿತ್ರ ಮಾಡಿದ್ದಾರೆ. ಆಡಿಯನ್ಸ್‌ಗೆ ಗೊಂದಲವಾಗುವ ಚಿತ್ರವಿದು’ ಅಂತ ಹೇಳಿದರೇ ಹೊರತು, ಕಥೆಯ ಗುಟ್ಟು ಬಿಟ್ಟುಕೊಡಲಿಲ್ಲ.

ನಿರ್ಮಾಪಕ ಮನು ಅವರಿಗೆ ಇದು ಮೊದಲ ಚಿತ್ರ. ಕಮ್ಮಿ ಬಜೆಟ್‌ನಲ್ಲಿ ಸಿನಿಮಾ ಮಾಡಲು ಬಂದ ಅವರಿಗೆ ಚಿತ್ರ ಡಬ್ಬಲ್ ಬಜೆಟ್ ಆಗಿದೆಯಂತೆ. ಆಶಾಭಂಡಾರಿ ಚಿತ್ರದಲ್ಲಿ ನಾಯಕಿಯಾಗಿದ್ದು, ಅವರಿಲ್ಲಿ ಪತ್ರಕರ್ತೆಯಂತೆ. ಉಳಿದಂತೆ ಚಿತ್ರದಲ್ಲಿ ಸೋಮು, ಶಿವಪ್ರಸಾದ್‌, ಮೋಹನ್‌, ಆದರ್ಶ್‌, ಕಾವ್ಯಾ, ಯೋಗಿ, ಸುನೀಲ್, ಮಂಜುನಾಥ್‌ ಕೆಲಸ ಮಾಡಿದ್ದಾರೆ.

ಪೂರ್ಣಚಂದ್ರ ತೇಜಸ್ವಿ ಸಂಗೀತವಿದ್ದು, ಅವರ ‘ಹಾಡಿಯೋ’ ಆಡಿಯೋ ಸಂಸ್ಥೆ ಮೂಲಕ ಹಾಡುಗಳನ್ನು ಹೊರತರಲಾಗಿದೆ. ಗೂಗಲ್ ಲೆನ್ಸ್‌ ಮೂಲಕ ಕ್ಯು ಆರ್‌ ಕೋಡ್‌ ಕ್ಲಿಕ್ಕಿಸಿ ಹಾಡು ಕೇಳ­ಬಹುದು. ಅಂದು ನೀನಾಸಂ ಸತೀಶ್‌ ಆಡಿಯೋ ಬಿಡುಗಡೆ ಮಾಡಿ, ‘ಹೊಸಬರು ಚಿತ್ರ ಮಾಡಿದ್ದಾರೆ. ಅವರಿಗೆ ಒಳ್ಳೆಯದಾಗಬೇಕು. ಸಿನಿಮಾಗೆ ಬಜೆಟ್ ಮುಖ್ಯ ಅಲ್ಲ. ಕಂಟೆಂಟ್ ಮುಖ್ಯ. ಒಳ್ಳೆಯ ಚಿತ್ರಕ್ಕೆ ಫ‌ಲ ಸಿಕ್ಕೇ ಸಿಗುತ್ತೆ ‘ ಎಂದರು ಸತೀಶ್‌.

ಟಾಪ್ ನ್ಯೂಸ್

BGT: Another shock for Team India; After Virat and Rahul, another batsman is injured

BGT: ಟೀಂ ಇಂಡಿಯಾಗೆ ಮತ್ತೆ ಆಘಾತ; ವಿರಾಟ್‌, ರಾಹುಲ್‌ ಬಳಿಕ ಮತ್ತೊಬ್ಬ ಬ್ಯಾಟರ್‌ ಗೆ ಗಾಯ

1-ragaaa

PM Modi ಅವರು ಜೋ ಬೈಡೆನ್ ಅವರಂತೆ ನೆನಪಿನ ಶಕ್ತಿ ಕಳೆದುಕೊಳ್ಳುತ್ತಿದ್ದಾರೆ: ರಾಹುಲ್ ಗಾಂಧಿ

Resign: ಶಿರೋಮಣಿ ಅಕಾಲಿದಳದ ಅಧ್ಯಕ್ಷ ಸ್ಥಾನಕ್ಕೆ ಸುಖಬೀರ್ ಸಿಂಗ್ ಬಾದಲ್ ರಾಜೀನಾಮೆ

Resign: ಶಿರೋಮಣಿ ಅಕಾಲಿದಳದ ಅಧ್ಯಕ್ಷ ಸ್ಥಾನಕ್ಕೆ ಸುಖಬೀರ್ ಸಿಂಗ್ ಬಾದಲ್ ರಾಜೀನಾಮೆ

DKShi

Maharashtra; ನಮ್ಮ ಮೈತ್ರಿ ಕೂಟ ಗೆದ್ದು ಮಹಾರಾಷ್ಟ್ರ ಉಳಿಸಲಿದೆ: ಡಿ.ಕೆ. ಶಿವಕುಮಾರ್

Mangaluru: Kumaraswamy will turn whenever, however: Jameer Ahmed

Mangaluru: ಕುಮಾರಸ್ವಾಮಿ ಯಾವಾಗ, ಹೇಗೆ ಬೇಕಾದರೂ ಟರ್ನ್ ಆಗುತ್ತಾರೆ: ಜಮೀರ್‌ ಅಹಮದ್‌

Kollywood: ಬಹಿರಂಗ ಪತ್ರ ಬರೆದು ಧನುಷ್‌ ಮೇಲೆ ರೇಗಾಡಿದ ನಟಿ ನಯನತಾರಾ; ಆಗಿರುವುದೇನು?

Kollywood: ಬಹಿರಂಗ ಪತ್ರ ಬರೆದು ಧನುಷ್‌ ಮೇಲೆ ರೇಗಾಡಿದ ನಟಿ ನಯನತಾರಾ; ಆಗಿರುವುದೇನು?

Nara Ramamurthy: ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ಸಹೋದರ ನಾರಾ ರಾಮಮೂರ್ತಿ ನಾಯ್ಡು ನಿಧನ

Nara Ramamurthy: ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ಸಹೋದರ ನಾರಾ ರಾಮಮೂರ್ತಿ ನಾಯ್ಡು ನಿಧನ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

priyanka upendra in life is beautiful movie

Priyanka Upendra: ಬ್ಯೂಟಿಫುಲ್‌ ಲೈಫ್‌ ನಲ್ಲಿ ಪ್ರಿಯಾಂಕಾ

Sanju Weds Geetha 2: ಅವನು ಸಂಜು ಅವಳು ಗೀತಾ!; ಹಾಡಿನಲ್ಲಿ ಪ್ರೇಮ ಕಥನ

Sanju Weds Geetha 2: ಅವನು ಸಂಜು ಅವಳು ಗೀತಾ!; ಹಾಡಿನಲ್ಲಿ ಪ್ರೇಮ ಕಥನ

Bhairathi Ranagal: ಭೈರತಿ ಪಾತ್ರಕ್ಕೊಂದು ಸದುದ್ದೇಶವಿದೆ..: ಶಿವರಾಜ್‌ ಕುಮಾರ್‌

Bhairathi Ranagal: ಭೈರತಿ ಪಾತ್ರಕ್ಕೊಂದು ಸದುದ್ದೇಶವಿದೆ..: ಶಿವರಾಜ್‌ ಕುಮಾರ್‌

Rakesh Adiga in Maryade Prashne movie

Rakesh Adiga: ನಾನು ಮಿಡಲ್‌ ಕ್ಲಾಸ್‌ ಹುಡುಗ ಮರ್ಯಾದೆ ಉಳಿಸಿ!

ಮುರಳಿಗೆ ಮತ್ತೆ ಗೆಲುವಾಗಿದೆ..: ಗೆದ್ದು ನಕ್ಕ ʼಬಘೀರʼ

Bagheera: ಮುರಳಿಗೆ ಮತ್ತೆ ಗೆಲುವಾಗಿದೆ..: ಗೆದ್ದು ನಕ್ಕ ʼಬಘೀರʼ

MUST WATCH

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

ಹೊಸ ಸೇರ್ಪಡೆ

Kota-Shrinivas

Udupi: ಸಿಎನ್‌ಜಿ ಪೂರೈಕೆಯಲ್ಲಿ ಕೊರತೆಯಾಗದಂತೆ ಕ್ರಮ ಕೈಗೊಳ್ಳಿ: ಸಂಸದ ಕೋಟ ಸೂಚನೆ

BGT: Another shock for Team India; After Virat and Rahul, another batsman is injured

BGT: ಟೀಂ ಇಂಡಿಯಾಗೆ ಮತ್ತೆ ಆಘಾತ; ವಿರಾಟ್‌, ರಾಹುಲ್‌ ಬಳಿಕ ಮತ್ತೊಬ್ಬ ಬ್ಯಾಟರ್‌ ಗೆ ಗಾಯ

1-ragaaa

PM Modi ಅವರು ಜೋ ಬೈಡೆನ್ ಅವರಂತೆ ನೆನಪಿನ ಶಕ್ತಿ ಕಳೆದುಕೊಳ್ಳುತ್ತಿದ್ದಾರೆ: ರಾಹುಲ್ ಗಾಂಧಿ

Resign: ಶಿರೋಮಣಿ ಅಕಾಲಿದಳದ ಅಧ್ಯಕ್ಷ ಸ್ಥಾನಕ್ಕೆ ಸುಖಬೀರ್ ಸಿಂಗ್ ಬಾದಲ್ ರಾಜೀನಾಮೆ

Resign: ಶಿರೋಮಣಿ ಅಕಾಲಿದಳದ ಅಧ್ಯಕ್ಷ ಸ್ಥಾನಕ್ಕೆ ಸುಖಬೀರ್ ಸಿಂಗ್ ಬಾದಲ್ ರಾಜೀನಾಮೆ

DKShi

Maharashtra; ನಮ್ಮ ಮೈತ್ರಿ ಕೂಟ ಗೆದ್ದು ಮಹಾರಾಷ್ಟ್ರ ಉಳಿಸಲಿದೆ: ಡಿ.ಕೆ. ಶಿವಕುಮಾರ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.