ಹಳೇ ಪಂಟ್ರು ಸಿನಿನೆಂಟ್ರು
ಅಂಡರ್ ವರ್ಲ್ಡ್ನಲ್ಲಿ ಹೊಸಬರು
Team Udayavani, May 31, 2019, 6:00 AM IST
ಅಮಾಯಕ ಹುಡುಗರು ರೌಡಿಸಂಗೆ ಬರೋದು, ಅವರನ್ನು ಬಳಸಿಕೊಂಡು ಕೆಲಸ ಮಾಡಿಸುವ ಒಂದಷ್ಟು ಮಂದಿ, ಕೊನೆಗೊಂದು ಸಂದೇಶ … ಕನ್ನಡ ಚಿತ್ರರಂಗದಲ್ಲಿ ಈ ತರಹದ ಅದೆಷ್ಟೊ ಸಿನಿಮಾಗಳು ಬಂದಿವೆ. ಅದರಲ್ಲೂ ಚಿತ್ರರಂಗಕ್ಕೆ ಬರುವ ಕೆಲವು ಹೊಸ ನಾಯಕ ನಟರಿಗೆ ಅಂಡರ್‌ವರ್ಲ್ಡ್ ಶೇಡ್‌ನ ಚಿತ್ರಗಳಲ್ಲಿ ಮಿಂಚಬೇಕೆಂಬ ಆಸೆ. ಅದೇ ಕಾರಣದಿಂದ ಕೆಲವು ಹೊಸ ತಂಡಗಳು ಈ ತರಹದ ಕಥೆಯನ್ನು ಆಯ್ಕೆ ಮಾಡಿಕೊಳ್ಳುತ್ತವೆ. ಈಗ “ಪಂಟ್ರಾ’ ಎಂಬ
ಹೊಸಬರ ತಂಡ ಕೂಡಾ ಇದನ್ನೇ ಮಾಡಿದೆ.
ಹೊಸಬರೇ ಸೇರಿ ಮಾಡಿರುವ “ಪಂಟ್ರಾ’ ಚಿತ್ರದಲ್ಲಿ ಮೂವರು ಅಮಾಯಕ ಹುಡುಗರನ್ನು ಹೇಗೆ ಉಪಯೋಗಿಸಿಕೊಳ್ಳುತ್ತಾರೆ ಮತ್ತು ಇದರಿಂದ ಏನೆಲ್ಲಾ ಆಗುತ್ತದೆ ಎಂಬ ಅಂಶವನ್ನಿಟ್ಟುಕೊಂಡು ಸಿನಿಮಾ ಮಾಡಲಾಗಿದೆ. ಜೊತೆಗೆ ತಪ್ಪನ್ನು ಕ್ಷಮಿಸಿ ಒಳ್ಳೆಯವರಾಗಲು ಸಹಾಯ ಮಾಡಿ ಎಂಬ ಸಂದೇಶವೂ ಇದೆಯಂತೆ. ಚಿತ್ರದಲ್ಲಿ ರೌಡಿಸಂ ಜೊತೆಗೆ ಕಾಮಿಡಿ, ಸೆಂಟಿಮೆಂಟ್‌ಗೂ ಜಾಗ ಕಲ್ಪಿಸಲಾಗಿದೆ ಎಂಬುದು ಚಿತ್ರತಂಡದ ಮಾತು. ಧನು ಆರ್. ಈ ಚಿತ್ರದ ನಿರ್ದೇಶಕರು. ಚಿತ್ರದಲ್ಲಿ ಪ್ರಶಾಂತ್ ಸಿದಿಟಛಿ ಪ್ರಮುಖ ಪಾತ್ರ ಮಾಡಿದ್ದಾರೆ. ಇಲ್ಲಿವರೆಗೆ ಹಾಸ್ಯ ಪಾತ್ರಗಳಲ್ಲಿ ಹೆಚ್ಚಾಗಿ ಕಾಣಿಸಿಕೊಂಡಿದ್ದ ಪ್ರಶಾಂತ್ ಈ ಚಿತ್ರದಲ್ಲಿ ಸಖತ್ ರಗಡ್ ಆಗಿ ಕಾಣಿಸಿಕೊಂಡಿದ್ದಾರಂತೆ.
ಉಳಿದಂತೆ ಶಿವಮೊಗ್ಗ ಸಂತೋಷ್ ಮತ್ತು ಸುನಿಲ್ ನಟಿಸಿದ್ದಾರೆ. ಚಿತ್ರದಲ್ಲಿ ಮಧು ಮಂದಗೆರೆ, ಮೇಘಶ್ರೀ, ಉಗ್ರಂ ರವಿ, ನಾರಾಯಣ ಸ್ವಾಮಿ ನಟಿಸಿದ್ದಾರೆ. ಲಕ್ಷೀ ಪತಿಕುಮಾರ್ ನಿರ್ಮಾಣ ಚಿತ್ರಕ್ಕಿದೆ. ಎಂ.ಪಿ.ಬಸವಣ್ಣ, ಅರ್ಜುನ್ ಶೆಟ್ಟಿ ಸಾಹಿತ್ಯದ ಹಾಡುಗಳಿಗೆ ಎಂ.ಎಸ್.ತ್ಯಾಗರಾಜು ಸಂಗೀತ
ನೀಡಿದ್ದಾರೆ. ಮಂಡ್ಯ, ಮಳವಳ್ಳಿ, ಬೆಂಗಳೂರು ಸುತ್ತಮುತ್ತ ಸುಮಾರು 35 ದಿನಗಳ ಕಾಲ ಚಿತ್ರೀಕರಣ ನಡೆದಿದೆ. ಅಂದಹಾಗೆ, ಇತ್ತೀಚೆಗೆ ಚಿತ್ರದ ಆಡಿಯೋ ಬಿಡುಗಡೆಯಾಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sandalwood: ಸ್ಟಾರ್ ಸಿನಿಮಾ ಹೆಚ್ಚು ಬಂದರೆ ಚಿತ್ರರಂಗಕ್ಕೆ ಪೂರಕ: ಎನ್. ನರಸಿಂಹಲು
Dhruva-Prem: ಡಿ.24ಕ್ಕೆ ʼಕೆಡಿʼ ಶಿವ ಶಿವ ಹಾಡು ರಿಲೀಸ್
Dhruva Sarja: ಪ್ರತಿ ಸಿನಿಮಾವೂ ನನಗೆ ಹೊಸ ಪಾಠ…: ಧ್ರುವ ಹೇಳಿದ್ದೇನು
Kiccha Sudeepa; ತಾಯಿಯನ್ನು ಉಳಿಸಿಕೊಳ್ಳಲಾಗದ ಆ ಕ್ಷಣ ನಾನು ಯೂಸ್‌ಲೆಸ್ ಅನಿಸಿತು…
UI Movie: 9 ವರ್ಷ ಬಳಿಕ ಉಪ್ಪಿ ಡೈರೆಕ್ಟ್ ಮಾಡಿದ ಯು-ಐ ಸಿನಿಮಾದ ಹೈಲೈಟ್ಸ್ ಏನು?
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Mandya; ಭೀಕರ ಅಪಘಾ*ತದಲ್ಲಿ ಮೂವರು ವಿದ್ಯಾರ್ಥಿಗಳು ಮೃ*ತ್ಯು
ತಾಯಿಯ ಕ್ಯಾನ್ಸರ್ ಚಿಕಿತ್ಸೆಗೆ ಕೂಡಿಟ್ಟ ಹಣದಲ್ಲೇ ರಮ್ಮಿ ಆಡಿದ ಮಗ.. ಕೊನೆಗೆ ಜೀವ ಕಳೆದುಕೊಂಡ
ಸಿನೆಮಾ ಪೋಸ್ಟರ್ ಗಳ ಕೋಣೆಯಲ್ಲಿ-ಹಾಲಿವುಡ್ ನಿರ್ದೇಶಕರ ದಂಡು; ಮರೆ ಯಲಾಗದ ಅದ್ಭುತ ಕ್ಷಣ
Vijay Hazare Trophy;ಕೃಷ್ಣನ್ ಶ್ರೀಜಿತ್ ಅಮೋಘ ಶತಕ:ಬಲಿಷ್ಠ ಮುಂಬೈ ಎದುರು ಕರ್ನಾಟಕ ಜಯಭೇರಿ
ಕತಾರ್:ಪ್ರಾಣಾಪಾಯದಿಂದ ಪಾರಾದ ಕಥನ- ಸಾಧಕಿ ಶರೀನ್ ಶಹನ ಜತೆ ಸಂವಾದ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.