ಹರಕೆಯ ಸಿನಿಮಾ : ಮಾದೇವನ ಮಹಿಮೆ

Team Udayavani, Apr 5, 2019, 7:00 AM IST

Suchi-Mahadeva

ಕನ್ನಡಕ್ಕೆ ಭಕ್ತಿ ಪ್ರಧಾನ ಚಿತ್ರಗಳು ಹೊಸದೇನಲ್ಲ. ಆದರೆ, ಈಗಿನ ಕಮರ್ಷಿಯಲ್‌ ಚಿತ್ರಗಳ ನಡುವೆಯೂ ಭಕ್ತಿಪ್ರಧಾನ ಚಿತ್ರ ಮಾಡಿ ಬಿಡುಗಡೆಗೆ ಸಜ್ಜಾಗಿರುವುದು ಸದ್ಯದ ಮಟ್ಟಿಗೆ ಹೊಸ ಸುದ್ದಿ. ಹೌದು, “ಕೂಗಿ ಕರೆದೆನಲ್ಲೋ ಮಾದೇವ’ ಎಂಬ ಭಕ್ತಿಪ್ರಧಾನ ಚಿತ್ರ ಇದೀಗ ಚಿತ್ರೀಕರಣಗೊಂಡು ಬಿಡುಗಡೆ ಹಂತ ತಲುಪಿದೆ. ಇತ್ತೀಚೆಗೆ ಲಹರಿ ಸಂಸ್ಥೆ ಮೂಲಕ ಚಿತ್ರದ ಆಡಿಯೋ ಬಿಡುಗಡೆ ಮಾಡಲಾಯಿತು. ಈ ಚಿತ್ರದ ಮೂಲಕ ಬಹುತೇಕ ಪ್ರತಿಭೆಗಳು ಸಿನಿಮಾರಂಗಕ್ಕೆ ಕಾಲಿಟ್ಟಿವೆ. ನಿರ್ದೇಶಕ ನಟ ಆರಾಧ್ಯ ಅವರಿಗೆ ಮೊದಲ ಚಿತ್ರವಾದರೆ, ನಿರ್ಮಾಪಕ ಆರ್‌.ಎಂ.ಗುರಪ್ಪ, ನಾಯಕ, ನಾಯಕಿ ಸೇರಿದಂತೆ ತಂತ್ರಜ್ಞರಿಗೂ ಇದು ಮೊದಲ ಅನುಭವ.

ಆಡಿಯೋ ಹೊರಬಂದ ನಂತರ ಮೊದಲು ಮಾತಿಗಿಳಿದ ನಿರ್ದೇಶಕ ನಟ ಆರಾಧ್ಯ ಹೇಳಿದ್ದಿಷ್ಟು. “ಈ ಚಿತ್ರದ ಶೀರ್ಷಿಕೆ ಹುಟ್ಟೋಕೆ ಕಾರಣ. ಪಾದಯಾತ್ರೆ. ಒಮ್ಮೆ ಮಾದೇಶನ ಬೆಟ್ಟಕ್ಕೆ ಪಾದಯಾತ್ರೆ ಮಾಡುವ ಸಂದರ್ಭದಲ್ಲಿ ಭಕ್ತರೊಂದಿಗೆ ಮಾತನಾಡುವಾಗ, ಮಾದೇಶನನ್ನು ಕೂಗಿ ಕರೆದರೆ ಖಂಡಿತ ಬಂದು ಸಮಸ್ಯೆ ನಿವಾರಿಸುತ್ತಾನೆ ಅಂತ ಹೇಳುತ್ತಿದ್ದರು. ಆಗ ಅಲ್ಲೇ ಹರಕೆ ಹೊತ್ತುಕೊಂಡೆ ನಿನ್ನ ಪವಾಡದ ಸಿನಿಮಾ ಮಾಡ್ತೀನಿ ಆಶೀರ್ವದಿಸು ಮಾದೇವ ಅಂದುಕೊಂಡೆ. ಒಂದು ವರ್ಷದ ಒಳಗೆ ಚಿತ್ರ ಶುರುವಾಗಿ ಬಿಡುಗಡೆಗೂ ಸಿದ್ಧವಾಗಿದೆ. ಇನ್ನು, “ಕೂಗಿ ಕರೆದೆನಲ್ಲೋ ಮಾದೇವ’ ಎಂಬ ಶೀರ್ಷಿಕೆ ಕೂಡ ಅಲ್ಲೇ ಹುಟ್ಟುಕೊಂಡಿತು. ಇದಕ್ಕೂ ಮುನ್ನ ಮಾದೇವನ ಕುರಿತು ಹಾಡೊಂದನ್ನು ಬರೆದು ನಿರ್ಮಾಪಕರಿಗೆ ಕೇಳಿಸಿದ್ದೆ. ಅವರು ಇಷ್ಟಪಟ್ಟು, ಇದನ್ನು ಇಟ್ಟುಕೊಂಡು ಚಿತ್ರ ಮಾಡುವ ಇಂಗಿತ ವ್ಯಕ್ತಪಡಿಸಿದ್ದೇ ತಡ, ಚಿತ್ರವಾಯ್ತು. ಇದು ಹಳ್ಳಿಯೊಂದರ ಭಕ್ತ ಕುಟುಂಬದ ಕಷ್ಟ ನಷ್ಟಗಳ ಕುರಿತ ಚಿತ್ರ. ಆ ಕುಟುಂಬಕ್ಕೆ ಮಂತ್ರವಾದಿಯೊಬ್ಬ ಕಷ್ಟ ಕೊಡುತ್ತಾನೆ. ಆಗ ಭಕ್ತರ ಕರೆಗೆ ಬರುವ ಮಾದೇವ ಅವರ ಸಮಸ್ಯೆಯನ್ನು ಹೇಗೆ ಪರಿಹರಿಸುತ್ತಾನೆ ಎಂಬುದೇ ಸಾರಾಂಶ. ಮಂಡ್ಯ, ಕೆ.ಎಂ.ದೊಡ್ಡಿ, ಮಾದೇಶ್ವರನ ಬೆಟ್ಟ ಸುತ್ತಮುತ್ತ ಚಿತ್ರೀಕರಿಸಲಾಗಿದೆ’ ಎಂಬ ವಿವರ ಕೊಟ್ಟರು ನಿರ್ದೇಶಕರು.

ವಿಷ್ಣುಸಿಂಹ ಚಿತ್ರದ ನಾಯಕ. ಇವರಿಗಿದು ಮೊದಲ ಚಿತ್ರ. “ನನಗೆ ಸಿಕ್ಕ ಒಳ್ಳೆಯ ಅವಕಾಶ ಇದು. ನಾನು ಸಿನಿಮಾಗೆ ಬೇಕಿದ್ದೆಲ್ಲವನ್ನೂ ಕಲಿತಿದ್ದೇನೆ. ಆದರೆ, ಫೈಟ್‌ ಕಲಿತಿರಲಿಲ್ಲ. ಆದರೂ ಇಲ್ಲಿ ಎರಡು ಭರ್ಜರಿ ಫೈಟ್‌ ಮಾಡಿದ್ದೇನೆ. ಡ್ಯಾನ್ಸ್‌ ಕೂಡ ಸಿಂಪಲ್‌ ಆಗಿಯೇ ಇದೆ. ಮೊದಲ ಸಲವೇ ಭಕ್ತಿಪ್ರಧಾನ ಚಿತ್ರ ಮಾಡಿದ್ದು ಸಂತಸವಾಗಿದೆ’ ಎಂಬುದು ವಿಷ್ಣು ಸಿಂಹ ಮಾತು. ಇನ್ನು ನಾಯಕಿ ರಕ್ಷಿತಾಗೂ ಇದು ಮೊದಲ ಚಿತ್ರ. ಅವರಿಲ್ಲಿ ದ್ವಿತಿಯಾರ್ಧದಲ್ಲಿ ಬಂದರೂ ಗುರುತಿಸಿಕೊಳ್ಳುವಂತಹ ಪಾತ್ರ ನನ್ನ ಪಾಲಿಗೆ ಬಂದಿದೆ ಎಂದು ಖುಷಿಗೊಂಡರು. ಕುಮಾರಿ ಸೃಷ್ಠಿ ಇಲ್ಲಿ ಮಾದೇವನ ಭಕ್ತೆಯಾಗಿ ನಟಿಸಿದ ಅನುಭವ ಹಂಚಿಕೊಂಡರು.

ನಿರ್ಮಾಪಕ ಗುರಪ್ಪ ಅವರು ರಂಗಭೂಮಿ ಹಿನ್ನೆಲೆಯಿಂದ ಬಂದವರು. ಹಾಗಾಗಿ ಅವರಿಗೆ ಸಿನಿಮಾ ಮೇಲೂ ಆಸಕ್ತಿ ಇತ್ತಂತೆ. ಒಳ್ಳೆಯ ಕಥೆ ಆಗಿದ್ದರಿಂದ ಕಡಿಮೆ ಬಜೆಟ್‌ನಲ್ಲೇ ಚೆಂದದ ಸಿನಿಮಾ ಮಾಡಿದ್ದಾಗಿ ಹೇಳಿಕೊಂಡರು. ಕಿರಣ್‌ರಾಜ್‌ ಮತ್ತು ರವಿರಾಜ್‌ ಚಿತ್ರಕ್ಕೆ ಸಂಗೀತ ನೀಡಿದ್ದಾರೆ. ಭಾಗ್ಯಶ್ರೀ, ಶರತ್‌ಬಾಬು ಚಿತ್ರದ ಕುರಿತು ಮಾತನಾಡಿದರು.

ಟಾಪ್ ನ್ಯೂಸ್

Bhairathi Ranagal Trailer: ʼರೋಣಪುರʼದ ರಣ ಬೇಟೆಗಾರ ಈ ʼಭೈರತಿ ರಣಗಲ್ʼ; ಟ್ರೇಲರ್‌ ಔಟ್

Bhairathi Ranagal Trailer: ʼರೋಣಪುರʼದ ರಣ ಬೇಟೆಗಾರ ಈ ʼಭೈರತಿ ರಣಗಲ್ʼ; ಟ್ರೇಲರ್‌ ಔಟ್

ADGP V/s HDK: ಕೇಂದ್ರ ಸಚಿವ ಕುಮಾರಸ್ವಾಮಿ ವಿರುದ್ಧ ಎಫ್‌ ಐಆರ್‌ ದಾಖಲು-HDK ಎ1

ADGP V/s HDK: ಕೇಂದ್ರ ಸಚಿವ ಕುಮಾರಸ್ವಾಮಿ ವಿರುದ್ಧ ಎಫ್‌ ಐಆರ್‌ ದಾಖಲು-HDK ಎ1

Belagavi: ಕರ್ನಾಟಕ ಮತ್ತು ಮಹಾರಾಷ್ಟ್ರ ಗಡಿ ವಿವಾದ ಮುಗಿದ ಅಧ್ಯಾಯ: ಸಚಿವ ಎಚ್.ಕೆ. ಪಾಟೀಲ್

Belagavi: ಕರ್ನಾಟಕ ಮತ್ತು ಮಹಾರಾಷ್ಟ್ರ ಗಡಿ ವಿವಾದ ಮುಗಿದ ಅಧ್ಯಾಯ: ಸಚಿವ ಎಚ್.ಕೆ. ಪಾಟೀಲ್

MUDA Case: ಸಿಬಿಐ ತನಿಖೆ ಕೋರಿದ್ದ ಅರ್ಜಿ ವಿಚಾರಣೆ ನ.26ಕ್ಕೆ ಮುಂದೂಡಿದ ಹೈಕೋರ್ಟ್

MUDA Case: ಸಿಬಿಐ ತನಿಖೆ ಕೋರಿದ್ದ ಅರ್ಜಿ ವಿಚಾರಣೆ ನ.26ಕ್ಕೆ ಮುಂದೂಡಿದ ಹೈಕೋರ್ಟ್

Belagavi: ತಹಶೀಲ್ದಾರ್ ಕೊಠಡಿಯಲ್ಲೇ ಸಿಬ್ಬಂದಿ ನೇಣಿಗೆ ಶರಣು, ಸ್ಥಳದಲ್ಲಿ ಡೆತ್ ನೋಟ್ ಪತ್ತೆ

Belagavi: ತಹಶೀಲ್ದಾರ್ ಕೊಠಡಿಯಲ್ಲೇ ಸಿಬ್ಬಂದಿ ನೇಣಿಗೆ ಶರಣು, ಸ್ಥಳದಲ್ಲಿ ಡೆತ್ ನೋಟ್ ಪತ್ತೆ

MUDA Case: ಮಾಧ್ಯಮಗಳಿಗೆ ಪ್ರತಿಕ್ರಿಯಿಸಲು ನಿರಾಕರಿಸಿದ ಸಿಎಂ ಸಿದ್ದರಾಮಯ್ಯ

MUDA Case: ಲೋಕಾಯುಕ್ತ ನೋಟಿಸ್ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಲು ನಿರಾಕರಿಸಿದ ಸಿಎಂ

Canada: ಹಿಂದೂ ದೇಗುಲದ ಮೇಲೆ ದಾಳಿ-ಖಲಿಸ್ತಾನಿಗಳ ವಿರುದ್ಧ ಸಾವಿರಾರು ಭಾರತೀಯರ  ಪ್ರತಿಭಟನೆ

Canada: ಹಿಂದೂ ದೇಗುಲದ ಮೇಲೆ ದಾಳಿ-ಖಲಿಸ್ತಾನಿಗಳ ವಿರುದ್ಧ ಸಾವಿರಾರು ಭಾರತೀಯರ ಪ್ರತಿಭಟನೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

aaram aravinda swamy movie song hudukuta hoda

Aaram Aravinda Swamy: ಹುಡುಕತ್ತಾ ಹೋದ ಅರವಿಂದ್‌ ಸ್ವಾಮಿ

Sandalwood: ಗೆಲುವಿನ ಓಟದಲ್ಲಿ ಮಂಕಾದ ಹೊಸಬರು; ಕೈ ಹಿಡಿಯದ ಪ್ರೇಕ್ಷಕ

Sandalwood: ಗೆಲುವಿನ ಓಟದಲ್ಲಿ ಮಂಕಾದ ಹೊಸಬರು; ಕೈ ಹಿಡಿಯದ ಪ್ರೇಕ್ಷಕ

abhimanyu kashinath ellige payana yavudo daari movie

Ellige Payana Yavudo Daari Movie; ದಾರಿ ಹೊಸದಾಗಿದೆ ಗೆಲುವು ಬೇಕಾಗಿದೆ

Komal Kumar: ಯಲಾಕುನ್ನಿ ಪೈಸಾ ವಸೂಲ್‌ ಸಿನಿಮಾ

Komal Kumar: ಯಲಾಕುನ್ನಿ ಪೈಸಾ ವಸೂಲ್‌ ಸಿನಿಮಾ

director suri

Cini Talk: ಸಿನಿಮಾ ನಿರ್ದೇಶಕ ಬಿಝಿನೆಸ್‌ ಮ್ಯಾನ್‌ ಅಲ್ಲ!: ನಿರ್ದೇಶಕ ಸೂರಿ ಮಾತು

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

Bengaluru: ನಿಲ್ಲದ ಪಟಾಕಿ ಅವಘಡ: ಮತ್ತೆ 10 ಮಂದಿ ಕಣ್ಣಿಗೆ ತೊಂದರೆ

Bengaluru: ನಿಲ್ಲದ ಪಟಾಕಿ ಅವಘಡ: ಮತ್ತೆ 10 ಮಂದಿ ಕಣ್ಣಿಗೆ ತೊಂದರೆ

Sandalwood: ಕರಾವಳಿ ಸಂಸ್ಕೃತಿ ಸುತ್ತ ದಿಂಸೋಲ್‌

Sandalwood: ಕರಾವಳಿ ಸಂಸ್ಕೃತಿ ಸುತ್ತ ದಿಂಸೋಲ್‌

2(1)

Puttur: ವಿದ್ಯುತ್‌ ಕಂಬ ಏರುವ ತರಬೇತಿ!; ಪವರ್‌ಮನ್‌ ಉದ್ಯೋಗಕ್ಕೆ ಸ್ಥಳೀಯರಿಗೆ ಪ್ರೋತ್ಸಾಹ

1(1)

Belthangady: ಗ್ರಾಮೀಣ ರಸ್ತೆಗಳಲ್ಲೂ ಗುಂಡಿ

Bhairathi Ranagal Trailer: ʼರೋಣಪುರʼದ ರಣ ಬೇಟೆಗಾರ ಈ ʼಭೈರತಿ ರಣಗಲ್ʼ; ಟ್ರೇಲರ್‌ ಔಟ್

Bhairathi Ranagal Trailer: ʼರೋಣಪುರʼದ ರಣ ಬೇಟೆಗಾರ ಈ ʼಭೈರತಿ ರಣಗಲ್ʼ; ಟ್ರೇಲರ್‌ ಔಟ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.