ಹಳೇ ಹೆಸರಿನಲ್ಲಿ ಹೊಸ ಕಥೆ!
Team Udayavani, Oct 6, 2017, 11:58 AM IST
ಎರಡು ಮೂರು ವರ್ಷಗಳ ಹಿಂದೆ “ಶಿರಾಡಿ ಘಾಟ್’ ಎಂಬ ಚಿತ್ರ ಶುರುವಾಗಿತ್ತು. ಒಂದು ಹಂತದ ಚಿತ್ರೀಕರಣವೂ ಮುಗಿದಿತ್ತು. ಆದರೆ, ಮೊದಲ ಹಂತದ ಚಿತ್ರೀಕರಣ ಮುಗಿಸಿಕೊಂಡು ಬರುವಾಗ ಒಂದು ದೊಡ್ಡ ದುರ್ಘಟನೆ ನಡೆಯಿತು. ಈ ದುರ್ಘಟನೆಯಲ್ಲಿ ಇಬ್ಬರು ಸತ್ತರೆ, ಇನ್ನೊಬ್ಬರು ಈಗಲೂ ಕೋಮದಲ್ಲಿದ್ದಾರೆ. ಇದೆಲ್ಲದರಿಂದ ನಡುಗಿ ಹೋಗಿದ್ದ ನಿರ್ಮಾಪಕ ಕಂ ನಾಯಕ ಸೂರ್ಯ, ಒಂದಿಷ್ಟು ದಿನಗಳ ಕಾಲ ಚಿತ್ರರಂಗದಿಂದ ದೂರವೇ ಇದ್ದರು. ಈಗ ಅವರು ಪುನಃ ಬಂದಿದ್ದಾರೆ. ಅದೇ ಹೆಸರಿಟ್ಟುಕೊಂಡು ಇನ್ನೊಂದು ಚಿತ್ರ ನಿರ್ಮಿಸಿ, ಅದರಲ್ಲಿ ನಟಿಸುವುದಕ್ಕೆ ಸಜ್ಜಾಗಿದ್ದಾರೆ.
ಹಳೆಯ “ಶಿರಾಡಿ ಘಾಟ್’ಗೂ, ಹೊಸ “ಶಿರಾಡಿ ಘಾಟ್’ಗೂ ಸಾಕಷ್ಟು ಬದಲಾವಣೆ ಇದೆಯಂತೆ. ಪ್ರಮುಖವಾಗಿ ಹೆಸರು ಮತ್ತು ನಿರ್ಮಾಪಕ ಬಿಟ್ಟು, ಇನ್ನೆಲ್ಲವೂ ಬದಲಾಗಿದೆ. ನಿರ್ಮಾಪಕ ಸೂರ್ಯ ಮಾತ್ರ ಇದು ತಮ್ಮ ಮೊದಲ ಚಿತ್ರವಾದ್ದರಿಂದ, ಅದೇ ಹೆಸರಿರಲಿ ಎಂದು ಅದೇ ಹೆಸರಿಟ್ಟುಕೊಂಡು, ಸಂಪೂರ್ಣ ಹೊಸ ಸಿನಿಮಾ ಮಾಡುವುದಕ್ಕೆ ಸಜ್ಜಾಗಿದ್ದಾರೆ. ಹಳೆಯ ಕಥೆಯನ್ನು ಪಕ್ಕಕ್ಕಿಟ್ಟು, ಕನಕಪುರದ ಕೆ. ಗಂಗಾಧರ್ ಎನ್ನುವವರು ಬರೆದ ಕಥೆಯನ್ನು ಚಿತ್ರಕ್ಕೆ ಆಯ್ಕೆ ಮಾಡಿಕೊಂಡಿದ್ದಾರೆ. ಚಿತ್ರವನ್ನು ಗಡ್ಡ ವಿಜಿ ನಿರ್ದೇಶಿಸಿದರೆ, ರೇಣುಕುಮಾರ್ ಛಾಯಾಗ್ರಹಣ ಮಾಡುತ್ತಿದ್ದಾರೆ. ಇನ್ನು ವೀರ ಸಮರ್ಥ್ ಅವರ ಸಂಗೀತ ನಿರ್ದೇಶನವಿದೆ. ಚಿತ್ರ ಪ್ರಾರಂಭವಾಗುವ ಮುನ್ನಾ ದಿನ ತಮ್ಮ ಇಡೀ ತಂಡದೊಂದಿಗೆ ಮಾತನಾಡುವುದಕ್ಕೆ ಮಾಧ್ಯಮದವರೆದುರು ಬಂದಿದ್ದರು ಸೂರ್ಯ ಅಲಿಯಾಸ್ ಉಮೇಶ್ ಸಕ್ಕರೆನಾಡು.
ಹೋಟೆಲ್ ಕ್ಲೀನರ್ ಒಬ್ಬನ ಸುತ್ತ ಕಥೆ ಸುತ್ತುದಂತೆ. ಆ ಕ್ಲೀನರ್ ಹಿಂದೆ ಏನೋ ರಹಸ್ಯ ಅಡಗಿದೆ ಅಂತ ನಾಯಕಿ
ಅವನ ಹಿಂದೆ ಬೀಳುತ್ತಾಳಂತೆ. ಅವನು ಸಾಮಾನ್ಯನಾ ಅಥವಾ ಅಸಮಾನ್ಯನಾ ಎಂದು ಗೊತ್ತಾಗುವ ಮೂಲಕ
ಚಿತ್ರ ಮುಗಿಯುತ್ತದಂತೆ. ಇದೊಂದು ಹಾರರ್ ಚಿತ್ರ ಎನ್ನುತ್ತಾರೆ ವಿಜಿ. “ಚಿತ್ರದಲ್ಲಿ ಡ್ರಾಮಾ, ಸೆಂಟಿಮೆಂಟ್ ಎಲ್ಲವೂ ಇದೆ. ಇದೆಲ್ಲದರ ಜೊತೆಗೆ ಹಾರರ್ ಅಂಶಗಳೂ ಇವೆ. ಯಾವುದೇ ಗೊಂದಲವಿ9ಲ್ಲದೆ ಸರಳವಾಗಿ ಚಿತ್ರ ಸಾಗುತ್ತದೆ.
ಬೆಂಗಳೂರು, ಮೈಸೂರು, ಹಾಸನ, ಸಕಲೇಶಪುರ, ಮಡಿಕೇರಿ ಮತ್ತು ಎಲ್ಲಕ್ಕಿಂತ ಹೆಚ್ಚಾಗಿ ಶಿರಾಡಿ ಘಾಟ್‌ನಲ್ಲಿ ಚಿತ್ರೀಕರಣ ನಡೆಯಲಿದೆ ಎಂದು ಮಾಹಿತಿ ಕೊಡುತ್ತಾರೆ ನಿರ್ದೇಶಕ ಗಡ್ಡ ವಿಜಿ. ಸೂರ್ಯಗೆ ನಾಯಕಿಯಾಗಿ ಜಯಶ್ರೀ ಇದ್ದಾರೆ. ಜೊತೆಗೆ ಕರಿಸುಬ್ಬು ಒಂದು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಮಿಕ್ಕಂತೆ ಅರಸು, “ಕುರಿ’ ರಂಗ, ಮೈಸೂರಿನ ಬಚ್ಚನ್ ಸೇರಿದಂತೆ ಚಿತ್ರದಲ್ಲಿ ಹಲವರು ನಟಿಸುತ್ತಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.