ಕಲ್ಯಾಣದಲ್ಲಿ ಸಂಭ್ರಮ ಸಡಗರ
Team Udayavani, Nov 23, 2018, 6:00 AM IST
ಕೆಲವು ಸಮಾರಂಭಗಳೇ ಹಾಗೆ. ಅಲ್ಲಿ ಮಾತಿಗಿಂತ ಹೆಚ್ಚಾಗಿ ಖುಷಿ, ಎಕ್ಸೆ„ಟ್‌ಮೆಂಟ್ ತುಂಬಿರುತ್ತದೆ. ಏನೋ ಮಾತನಾಡಬೇಕು, ಎಲ್ಲವನ್ನು ಹೇಳಿಕೊಳ್ಳಬೇಕೆಂಬ ಉತ್ಸಾಹವೂ ಜೊತೆಗಿರುತ್ತದೆ. ಇತ್ತೀಚೆಗೆ ಆ ತರಹದ ಒಂದು ಸಂಭ್ರಮಕ್ಕೆ ಸಾಕ್ಷಿಯಾಗಿದ್ದು “ಸೀತಾರಾಮ ಕಲ್ಯಾಣ’ದ ಪತ್ರಿಕಾಗೋಷ್ಠಿ. ನಿಮಗೆ ಗೊತ್ತಿರುವಂತೆ ನಿಖಿಲ್ ಕುಮಾರಸ್ವಾಮಿ ನಾಯಕರಾಗಿ ನಟಿಸುತ್ತಿರುವ ಎರಡನೇ ಸಿನಿಮಾವಿದು. ಬಹುತಾರಾಗಣದ ಈ ಚಿತ್ರ ಈಗ ಚಿತ್ರೀಕರಣ ಮುಗಿಸಿ ತೆರೆಗೆ ಬರುವ ಸಿದ್ಧತೆಯಲ್ಲಿದೆ. ಚಿತ್ರೀಕರಣ ಮುಗಿಸಿದ ಖುಷಿಯನ್ನು ಹೇಳಿಕೊಳ್ಳಲು ಚಿತ್ರತಂಡ ಇತ್ತೀಚೆಗೆ ಪತ್ರಿಕಾಗೋಷ್ಠಿ ಕರೆದಿತ್ತು. ಅದನ್ನು ಪತ್ರಿಕಾಗೋಷ್ಠಿ ಎನ್ನುವುದಕ್ಕಿಂತ ಮದುವೆ ಸಮಾರಂಭ ಎಂದರೆ ತಪ್ಪಿಲ್ಲ. ಚಿತ್ರದ ಟೈಟಲ್‌ಗೆ ತಕ್ಕಂತೆ ಅದ್ಧೂರಿಯಾಗಿ ಆಯೋಜಿಸಲಾಗಿತ್ತು. ಚಿತ್ರದಲ್ಲಿ ನಟಿಸಿದ ಬಹುತೇಕ ಕಲಾವಿದರನ್ನು ಆಹ್ವಾನಿಸಲಾಗಿತ್ತು. ಮದುವೆ ಸಮಾರಂಭಕ್ಕೆ ಹೇಗೆ ಬರುತ್ತಾರೋ ಆ ಅದ್ಧೂರಿತನದಲ್ಲೇ ಎಲ್ಲರೂ ಬಂದಿದ್ದರು. ನಿಖೀಲ್, ರಚಿತಾ ರಾಮ್, ನಿರ್ದೇಶಕ ಹರ್ಷ, ಶರತ್ ಕುಮಾರ್, ಮಧುಬಾಲ, ಭಾಗ್ಯಶ್ರೀ ಹೀಗೆ ಪಟ್ಟಿ ಮಾಡುತ್ತಾ ಹೋದರೆ ಬೆಳೆಯುತ್ತಾ ಹೋಗುತ್ತದೆ.
ಅಂದು ನಿಖೀಲ್ ಎಲ್ಲರಿಗೂ ಥ್ಯಾಂಕ್ಸ್ ಹೇಳುವ ಮೂಡ್‌ನಲ್ಲಿದ್ದರು. ಅದು ನಿರ್ದೇಶಕರಿಂದ ಹಿಡಿದು ಚಿತ್ರಕ್ಕೆ ಪ್ರತ್ಯಕ್ಷ, ಪರೋಕ್ಷವಾಗಿ ದುಡಿದ ಪ್ರತಿಯೊಬ್ಬರನ್ನು ನೆನೆಯುತ್ತಾ, ಅವರೆಲ್ಲರನ್ನು ವೇದಿಕೆಗೆ ಕರೆದು ಬೆನ್ನುತಟ್ಟುತ್ತಿದ್ದರು. ಇದೇ ವೇಳೆ ಈ ಸಿನಿಮಾದಲ್ಲಿ ತಂದೆಯವರನ್ನು ತುಂಬಾನೇ ಮಿಸ್ ಮಾಡಿಕೊಂಡಿದ್ದಾಗಿ ಹೇಳಲು ಅವರು ಮರೆಯಲಿಲ್ಲ. “ಜಾಗ್ವಾರ್ ಸಿನಿಮಾದಲ್ಲಿ ನಮ್ಮ ತಂದೆ ಸಂಪೂರ್ಣವಾಗಿ ನಮ್ಮ ಜೊತೆಗಿದ್ದರು. ರಾತ್ರಿ ಹಗಲು ಸೆಟ್‌ನಲ್ಲಿ ಇದ್ದು, ಎಲ್ಲದರ ಬಗ್ಗೆ ಗಮನಹರಿಸುತ್ತಿದ್ದರು. ಆದರೆ ಈ ಬಾರಿ ಅವರಿಗೆ ಅದು ಸಾಧ್ಯವಾಗಿಲ್ಲ. ಹಾಗಾಗಿ, ಅವರನ್ನು ತುಂಬಾನೇ ಮಿಸ್ ಮಾಡಿಕೊಂಡೆವು. ಆದರೆ ಚಿತ್ರದ ಪ್ರತಿ ದಿನದ ಆಗುಹೋಗುಗಳನ್ನು ಅವರ ಗಮನಕ್ಕೆ ತರುತ್ತಿದ್ದೆವು’ ಎಂದರು ನಿಖೀಲ್. ಇನ್ನು ನಿರ್ದೇಶಕ ಹರ್ಷಗೆ “ಸೀತಾರಾಮ ಕಲ್ಯಾಣ’ ಒಳ್ಳೆಯ ಅನುಭವ ಕೊಟ್ಟಿದೆಯಂತೆ. ಒಂದು ತುಂಬು ಕುಟುಂಬವನ್ನು ನಡೆಸಿಕೊಂಡು ಹೋಗುವಂತಹ ಅನುಭವವಂತೆ. ನಟ ಶರತ್ ಕುಮಾರ್, ನಟಿಯರಾದ ರಚಿತಾ ರಾಮ್, ಮಧುಬಾಲ, ಭಾಗ್ಯಶ್ರೀ ತಮ್ಮ ಅನುಭವ ಹಂಚಿಕೊಂಡರು. ಚಿತ್ರದ ಕಾರ್ಯಕಾರಿ ನಿರ್ಮಾಪಕ ಸುನೀಲ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sandalwood: ಸ್ಟಾರ್ ಸಿನಿಮಾ ಹೆಚ್ಚು ಬಂದರೆ ಚಿತ್ರರಂಗಕ್ಕೆ ಪೂರಕ: ಎನ್. ನರಸಿಂಹಲು
Dhruva-Prem: ಡಿ.24ಕ್ಕೆ ʼಕೆಡಿʼ ಶಿವ ಶಿವ ಹಾಡು ರಿಲೀಸ್
Dhruva Sarja: ಪ್ರತಿ ಸಿನಿಮಾವೂ ನನಗೆ ಹೊಸ ಪಾಠ…: ಧ್ರುವ ಹೇಳಿದ್ದೇನು
Kiccha Sudeepa; ತಾಯಿಯನ್ನು ಉಳಿಸಿಕೊಳ್ಳಲಾಗದ ಆ ಕ್ಷಣ ನಾನು ಯೂಸ್‌ಲೆಸ್ ಅನಿಸಿತು…
UI Movie: 9 ವರ್ಷ ಬಳಿಕ ಉಪ್ಪಿ ಡೈರೆಕ್ಟ್ ಮಾಡಿದ ಯು-ಐ ಸಿನಿಮಾದ ಹೈಲೈಟ್ಸ್ ಏನು?
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.