ಚಿತ್ರಾನ್ನವೂ ಅಲ್ಲ; ಮೊಸರನ್ನವೂ ಅಲ್ಲ: ಇದು ವರ್ತಮಾನ
Team Udayavani, Mar 23, 2018, 7:30 AM IST
ಏನು ಟ್ರೇಲರ್ ಹೀಗಿದೆ?
“ವರ್ತಮಾನ’ ಚಿತ್ರದ ಟ್ರೇಲರ್ ನೋಡಿದವರೆಲ್ಲಾ ಈ ಮಾತು ಹೇಳಿದರಂತೆ. ಇದಕ್ಕೆ ನಿರ್ದೇಶಕ ಉಮೇಶ್ ಹೇಳುವುದೇನೆಂದರೆ, ಯಾಕೆ ಹೀಗೆ ಇರಬಾರದು ಅಂತ? ಜನಕ್ಕೆ ಚಿತ್ರಾನ್ನ ಗೊತ್ತು, ಮೊಸರನ್ನವೂ ಗೊತ್ತು. ಹೊಸದೇನಾದರೂ ಬಡಿಸೋಣ ಅಂತ ಬೇರೆ ತರಹ ಚಿತ್ರ ಮಾಡಿದ್ದೀವಿ. ಸುಮಾರು ಮೂರು ವರ್ಷದ ಕಷ್ಟ ಈ ಚಿತ್ರದಲ್ಲಿದೆ. ಎಡಿಟಿಂಗ್‌ಗೇ ಆರು ತಿಂಗಳ ಕಾಲ ಕೆಲಸ ಮಾಡಿದ್ದೇವೆ. ಒಟ್ಟಿನಲ್ಲಿ ಒಂದು ವಿಭನ್ನ ಪ್ರಯತ್ನ ಮಾಡಿದ್ದೀವಿ’ ಎನ್ನುತ್ತಾರೆ ನಿರ್ದೇಶಕ ಉಮೇಶ್.
“ವರ್ತಮಾನ’ ಚಿತ್ರವು ಇಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಸಂಚಾರಿ ವಿಜಯ್, ಸಂಜನಾ ಪ್ರಕಾಶ್, ವಾಣಿಶ್ರೀ ಮುಂತಾದವರು ಅಭಿನಯಿಸಿರುವ ಈ ಚಿತ್ರಕ್ಕೆ ಉಮೇಶ್ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸಿದರೆ, ಹೇಮಾ ಮತ್ತು ಮನು ಬಿಲ್ಲೇಮನೆ ನಿರ್ಮಿಸಿದ್ದಾರೆ. ಚಿತ್ರ ಬಿಡುಗಡೆಯಾಗುತ್ತಿರುವ ವಿಷಯವನ್ನು ಹೃಳುವುದಕ್ಕೆಂದೇ ಉಮೇಶ್, ತಮ್ಮ ಚಿತ್ರತಂಡದವರ ಜೊತೆಗೆ ಬಂದಿದ್ದರು. ಉಮೇಶ್ ಗಮನಿಸಿರುವಂತೆ, ಈ ತರಹದ ಚಿತ್ರಗಳನ್ನು ಜನ ಸ್ವೀಕರಿಸುವುದು ಕರ್ನಾಟಕ ಮತ್ತು ಫ್ರಾನ್ಸ್‌ನಲ್ಲಿ ಮಾತ್ರವಂತೆ.
“ಎಷ್ಟೋ ವರ್ಷಗಳ ಹಿಂದೆ ಉಪೇಂದ್ರ ತಮ್ಮ ಚಿತ್ರಗಳ ಮೂಲಕ ಕಥೆ ಹೇಳುವ ಪ್ಯಾಟರ್ನ್ ಬದಲಾಯಿಸಿದರು. ಆಮೇಲೆ ಸಾಕಷ್ಟು ಚಿತ್ರಗಳು ಬಂದವು. ಈ ಚಿತ್ರದಿಂದ ದುಡ್ಡು ಬರುತ್ತಾ ಎಂದು ಎಲ್ಲಾ ಕೇಳ್ತಾರೆ. ಬಂದರೆ ಗೆಲ್ತಿವಿ. ಇಲ್ಲಾ ಮುಳುಗ್ತಿವಿ. ಆದರೆ, ಈ ಚಿತ್ರವನ್ನು ಜನ ನೋಡುತ್ತಾರೆ ಎಂಬ ನಂಬಿಕೆ ನಮಗಿದೆ’ ಎನ್ನುತ್ತಾರೆ ಉಮೇಶ್.
ಇದು ಭೂತ ಮತ್ತು ಭವಿಷ್ಯದ ನಡುವೆ ನಡೆಯುವ ಒಂದು ಜರ್ನಿ ಎನ್ನುತ್ತಾರೆ ಸಂಚಾರಿ ವಿಜಯ್. “ಉಮೇಶ್ ಫಾರ್ಮುಲಾ ಮುರಿದು ಈ ಚಿತ್ರ ಮಾಡಿದ್ದಾರೆ. ಇದರ ನಿರೂಪಣಾ ಶೈಲಿ ಬೇರೆ ತರಹ ಇದೆ. ಮಲ್ಟಿಪ್ಲೆಕ್ಸ್ ಪ್ರೇಕ್ಷಕರನ್ನು ಗಮನದಲ್ಲಿಟ್ಟುಕೊಂಡು ಈ ಚಿತ್ರ
ಮಾಡಲಾಗಿದೆ’ ಎಂದರು. ನಾಯಕಿ ಸಂಜನಾ ಪ್ರಕಾಶ್ ಗೆ ಇದುವರೆಗೂ ಕಥೆ ಗೊತ್ತಿಲ್ಲವಂತೆ. ನಿರ್ದೇಶಕರ ಮೇಲಿನ ನಂಬಿಕೆ ಮೇಲೆ ಅವರು ಚಿತ್ರದಲ್ಲಿ ನಟಿಸಿದ್ದಾರಂತೆ. ಇನ್ನು ಚಿತ್ರದಲ್ಲೊಂದು ಪ್ರಮುಖ ಪಾತ್ರ ಮಾಡಿರುವ ವಾಣಿಶ್ರೀ ಸಹ ಅದೇ ತರಹ ಹೇಳಿಕೊಂಡರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.