ಗಮನಿಸಬೇಕಾದ ಅಂಶ
Team Udayavani, Oct 27, 2017, 12:43 PM IST
ಚಿತ್ರ ಗೆದ್ದಿದೆ ಎಂಬ ಖುಷಿಯಲ್ಲಿ ಚಿತ್ರತಂಡವಿದೆ ರೋಹಿತ್ ಪದಕಿ ನಿರ್ದೇಶನದ “ದಯವಿಟ್ಟು ಗಮನಿಸಿ’ ಚಿತ್ರತಂಡ ಕೂಡ ಖುಷಿಯ ಮೂಡ್‌ನಲ್ಲಿದೆ. ಕಾರಣ ಜನ ಚಿತ್ರವನ್ನು ಮೆಚ್ಚಿಕೊಂಡಿದ್ದಾರಂತೆ. ಸಂತೋಷ ಕೂಟದ ನೆಪದಲ್ಲಿ ಮಾಧ್ಯಮ ಹಾಗೂ ಚಿತ್ರತಂಡಕ್ಕೆ ಥ್ಯಾಂಕ್ಸ್ ಹೇಳಲೆಂದೇ ನಿರ್ದೇಶಕ ಮತ್ತು ನಿರ್ಮಾಪಕರು ಮಾಧ್ಯಮ ಮುಂದೆ ಬಂದಿದ್ದರು.
ಮೊದಲು ಮಾತು ಶುರುಮಾಡಿದ್ದು ನಿರ್ದೇಶಕ ರೋಹಿತ್ ಪದಕಿ. “ನಿರೀಕ್ಷೆಯಂತೆ ಚಿತ್ರಕ್ಕೆ ಎಲ್ಲೆಡೆಯಿಂದ ಮೆಚ್ಚುಗೆ ಸಿಕ್ಕಿದೆ. ಈ ಯಶಸ್ಸು ಮತ್ತು ಇಡೀ ಸಿನಿಮಾವನ್ನು ನನ್ನ ಕಲಾವಿದರು, ತಂತ್ರಜ್ಞರಿಗೆ ಅರ್ಪಿಸುತ್ತೇನೆ. ಇಲ್ಲಿ ಪ್ರತಿಯೊಬ್ಬರೂ ನನ್ನದು ಅಂತಾನೇ ಹಗಲಿರುಳು ದುಡಿದಿದ್ದಾರೆ. ಸಿನಿಮಾ ನೋಡಿದವರು ಚರ್ಚೆ ಮಾಡುತ್ತಿದ್ದಾರೆ. ಬಟ್ಟೆಯಿಂದ ಹಿಡಿದು ಭಾಷೆವರೆಗೂ ಮಾತಾಡುತ್ತಿದ್ದಾರೆ. ಒಂದೊಳ್ಳೆಯ ಸಿನಿಮಾ ಮಾಡಿದ ತೃಪ್ತಿ ನನಗಿದೆ. ಜನರು ನಮ್ಮ ಪ್ರಯತ್ನ ಒಪ್ಪಿಕೊಂಡ ಖುಷಿಯೂ ಇದೆ’ ಎಂದರು ಪದಕಿ. ರಾಜೇಶ್ ನಟರಂಗ ಅವರಿಗೆ ಇದೊಂದು ಒಳ್ಳೆಯ ಬದಲಾವಣೆಯಂತೆ. “ಈ ರೀತಿಯ ಪ್ರಯತ್ನವನ್ನು ಮೆಚ್ಚಿಕೊಂಡ ಪ್ರೇಕ್ಷಕ ವರ್ಗಕ್ಕೆ ಚಿತ್ರತಂಡದಿಂದ ಕೃತಜ್ಞತೆ ಸಲ್ಲಿಸುತ್ತೇನೆ. ನಾನು ಮೊದಲು ಚಿತ್ರ ನೋಡಿದಾಗ, ಇದು ಯಾವ ಜಾನರ್ ಸಿನಿಮಾ, ಜನ ಸ್ವೀಕರಿಸುತ್ತಾರಾ ಎಂಬ ಗೊಂದಲವಿತ್ತು. ಆದರೆ, ಈಗ ಸಿಗುತ್ತಿರುವ ಪ್ರ ತಿಕ್ರಿಯೆ ನೋಡಿದರೆ ಖುಷಿಯಾಗುತ್ತಿದೆ. ಬರೀ ಇನ್ಸ್‌ಪೆಕ್ಟರ್ ಪಾತ್ರ ಮಾಡಿ ಬೇಜಾರಾಗಿತ್ತು. ಇಲ್ಲೊಂದಷ್ಟು ಬದಲಾವಣೆಯ ಪಾತ್ರ ಸಿಕ್ಕಿದೆ. ಬದಲಾವಣೆ ಬಯಸುವ ಜನರಿಗೆ ಈ ಚಿತ್ರ ಖುಷಿ ಕೊಡುತ್ತೆ ಎಂಬುದು ರಾಜೇಶ್ ನಟರಂಗ ಮಾತು.
“ರೋಹಿತ್‌ಗೆ ಮತ್ತೆ ಈ ರೀತಿಯ ಸಿನಿಮಾ ಮಾಡೋಕೆ ಆಗಲ್ಲ’ ಎಂದು ಮಾತಿಗಿಳಿದರು ರಘು ಮುಖರ್ಜಿ. ಈ ಚಿತ್ರದ ಕಥೆ ಮತ್ತು ಪಾತ್ರ ನೋಡಿದವರಿಗೆ ಆ ಎಲ್ಲಾ ಪಾತ್ರಗಳೊಳಗೆ ಹೋಗಿ ವಾಪಾಸ್ ಬರ್ತಾರೆ. ಇಲ್ಲಿ ಯಾರೂ ಹೀರೋ ಇಲ್ಲ. ಕಥೆಯೇ ನಾಯಕ. ಎಷ್ಟೋ ಜನ ಕಾಲ್ ಮಾಡಿ, ನಮ್ಮಲ್ಲಿರುವ ಆಸೆಯನ್ನು ನೀವು ಪಾತ್ರ ಮೂಲಕ ವ್ಯಕ್ತಪಡಿಸಿದ್ದೀರ ಅಂತ ಹೇಳಿದ್ದಾರೆ. ಒಳ್ಳೇ ಚಿತ್ರ ಮಾಡಿದ್ದು ತೃಪ್ತಿ ಕೊಟ್ಟಿದೆ’ ಎಂದರು ರಘು ಮುಖರ್ಜಿ. ಭಾವನಾ ರಾವ್‌ಗೆ ಎಲ್ಲಾ ಕಡೆಯಿಂದಲೂ ಮೆಚ್ಚುಗೆ ಸಿಕ್ಕಿದೆಯಂತೆ. ಕನ್ನಡದಲ್ಲಿ ಒಳ್ಳೆಯ ಚಿತ್ರ ಬರಲ್ಲ, ಅನ್ನೋರು ಇತ್ತ ಕಡೆ ಗಮನಿಸಿ ಅಂದರು ಭಾವನಾ ರಾವ್. ನಿರ್ಮಾಪಕ ಕೃಷ್ಣ ಸಾರ್ಥಕ್‌ಗೆ ಇಂಥದ್ದೊಂದು ಚಿತ್ರ ಮಾಡಿದ್ದಕ್ಕೂ ಸಾರ್ಥಕ ಎನಿಸಿದೆಯಂತೆ. ಅನೂಪ್ ಸೀಳಿನ್‌ಗೆ ಒಳ್ಳೆಯ ಚಿತ್ರ ಕೊಟ್ಟರೆ, ಜನರು ಮೆಚ್ಚಿಕೊಳ್ಳುತ್ತಾರೆ ಎಂಬ
ನಂಬಿಕೆ ಮೊದಲೇ ಇತ್ತಂತೆ. ಅದು ಈಗ ನಿಜವಾಗಿದೆ ಅಂದರು ಅವರು. ಚಿತ್ರ ಕುರಿತು ಸಂಯುಕ್ತಾ ಹೊರನಾಡು, ಅವಿನಾಶ್ ಶತಮರ್ಷನ್ ಮಾತಾಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sandalwood: ಸ್ಟಾರ್ ಸಿನಿಮಾ ಹೆಚ್ಚು ಬಂದರೆ ಚಿತ್ರರಂಗಕ್ಕೆ ಪೂರಕ: ಎನ್. ನರಸಿಂಹಲು
Dhruva-Prem: ಡಿ.24ಕ್ಕೆ ʼಕೆಡಿʼ ಶಿವ ಶಿವ ಹಾಡು ರಿಲೀಸ್
Dhruva Sarja: ಪ್ರತಿ ಸಿನಿಮಾವೂ ನನಗೆ ಹೊಸ ಪಾಠ…: ಧ್ರುವ ಹೇಳಿದ್ದೇನು
Kiccha Sudeepa; ತಾಯಿಯನ್ನು ಉಳಿಸಿಕೊಳ್ಳಲಾಗದ ಆ ಕ್ಷಣ ನಾನು ಯೂಸ್‌ಲೆಸ್ ಅನಿಸಿತು…
UI Movie: 9 ವರ್ಷ ಬಳಿಕ ಉಪ್ಪಿ ಡೈರೆಕ್ಟ್ ಮಾಡಿದ ಯು-ಐ ಸಿನಿಮಾದ ಹೈಲೈಟ್ಸ್ ಏನು?
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.