ಒಂದು ದಿನ ಅಂತ ಶುರುವಾಗಿದ್ದು 15 ದಿನ ಆಯ್ತು

Team Udayavani, Mar 30, 2018, 8:15 AM IST

24.jpg

“ಹೀಗೊಂದು ದಿನ’ ಎಂಬ ಸಿನಿಮಾವೊಂದು ತಯಾರಾಗಿರುವ ವಿಚಾರ ನಿಮಗೆ ಗೊತ್ತಿರಬಹುದು. ಈಗ ಆ ಚಿತ್ರ ಬಿಡುಗಡೆಯ ಹಂತಕ್ಕೆ ಬಂದಿದ್ದು, ಈ ವಾರ ಬಿಡುಗಡೆಯಾಗುತ್ತಿದೆ. ಚಿತ್ರವನ್ನು ಚಂದ್ರಶೇಖರ್‌ ನಿರ್ಮಿಸಿದ್ದಾರೆ. “ಹೀಗೊಂದು ದಿನ’ ಮಹಿಳಾ ಪ್ರಧಾನ ಚಿತ್ರವಾದ ಕಾರಣ, ಚಿತ್ರವನ್ನು ಮಹಿಳಾ ದಿನಾಚರಣೆಯಂದು ಬಿಡುಗಡೆ ಮಾಡಲು ನಿರ್ಮಾಪಕರು ಯೋಚಿಸಿದ್ದರಂತೆ. ಆದರೆ, ಕಾರಣಾಂತರಗಳಿಂದ ಚಿತ್ರ ಇಂದು ಬಿಡುಗಡೆಯಾಗುತ್ತಿದೆ.

“ಇದು ಅನ್‌ಕಟ್‌ ಸಿನಿಮಾ. ಒಂದೇ ದಿನ ಚಿತ್ರೀಕರಿಸಬೇಕೆಂದು ಆಲೋಚಿಸಿದ್ದೆವು. ಆದರೆ, ಅದು ಕಷ್ಟ ಎಂದು ಗೊತ್ತಾಗಿ 12 ರಿಂದ 15 ದಿನ ಚಿತ್ರೀಕರಣ ಮಾಡಿದ್ದೇವೆ. ಈಗಾಗಲೇ ಚಿತ್ರದ ಹಾಡುಗಳನ್ನು ಜನ ಇಷ್ಟಪಟ್ಟಿದ್ದಾರೆ. ಚಿತ್ರ ಇಂದು ಕರ್ನಾಟಕದಲ್ಲಿ
ಬಿಡುಗಡೆಯಾಗುತ್ತಿದ್ದು, ಮುಂದಿನ ದಿನಗಳಲ್ಲಿ ಇಟಲಿ, ಜರ್ಮನ್‌, ಯುಎಸ್‌ಎನಲ್ಲೂ ತೆರೆಕಾಣಲಿದೆ’ ಎಂದು ವಿವರ ನೀಡಿದರು
ಚಂದ್ರಶೇಖರ್‌. ಚಿತ್ರವನ್ನು ವಿಕ್ರಮ್‌ ಯೋಗಾನಂದ್‌ ನಿರ್ದೇಶನ ಮಾಡಿದ್ದಾರೆ. ಇವರಿಗಿದು ಚೊಚ್ಚಲ ಸಿನಿಮಾ. ನಿರ್ದೇಶಕರು ಕೂಡಾ ಆರಂಭದಲ್ಲಿ ಒಂದೇ ದಿನದಲ್ಲಿ ಈ ಸಿನಿಮಾವನ್ನು ಮಾಡಿ ಮುಗಿಸಬೇಕೆಂದುಕೊಂಡಿದ್ದರಂತೆ. ಆದರೆ, ಚಿತ್ರ ಹೆಚ್ಚು ಸೂಕ್ಷ್ಮ
ಅಂಶಗಳನ್ನು ಬಯಸಿದ್ದರಿಂದ ಹೆಚ್ಚು ದಿನ ಚಿತ್ರೀಕರಿಸಿದರಂತೆ. ಬೆಳಗ್ಗೆ 6 ರಿಂದ 8 ಗಂಟೆವರೆಗೆ ನಡೆಯುವ ಕಥೆಯಾಗಿದ್ದು, ಅದೇ ಲೈಟಿಂಗ್‌ನಲ್ಲಿ ಚಿತ್ರೀಕರಿಸಲಾಗಿದೆಯಂತೆ.  6 ರಿಂದ 8 ಗಂಟೆವರೆಗಿನ ಸಮಯದಲ್ಲಿ ಹುಡುಗಿಯೊಬ್ಬಳ ಜೀವನದಲ್ಲಿ ಏನೇನು ನಡೆಯುತ್ತದೆ ಎಂಬ ಅಂಶದೊಂದಿಗೆ ಸಿನಿಮಾ ಸಾಗುತ್ತದೆಯಂತೆ. ಚಿತ್ರದಲ್ಲಿ ಸಿಂಧು ಲೋಕನಾಥ್‌ ನಾಯಕಿ.

ಒಂದರ್ಥದಲ್ಲಿ ಈ ಚಿತ್ರದ ನಾಯಕಿ ಹಾಗೂ ನಾಯಕ ಅವರೇ ಎಂದರೆ ತಪ್ಪಲ್ಲ. “ಇದು ಎಲ್ಲರ ಜೀವನದಲ್ಲಿ ನಡೆಯುವ ಕಥೆ. ಏನೋ
ಕೆಲಸಕ್ಕೆಂದು ನಾವು ಬೇಗ ಮನೆ ಬಿಡುತ್ತೇವೆ. ಆದರೆ, ಕೆಲವೊಮ್ಮೆ ದಾರಿ ಮಧ್ಯೆ ಏನೇನೋ ತೊಂದರೆಗಳು ಎದುರಾಗುತ್ತವೆ. ಆ
ತೊಂದರೆಗಳನ್ನೆಲ್ಲಾ ದಾಟಿ ತನ್ನ ಗುರಿ ತಲುಪುತ್ತಾಳಾ ಎಂಬುದು ಇಲ್ಲಿನ ಕುತೂಹಲಕರ ಅಂಶ’ ಎಂದು ಚಿತ್ರದ ಬಗ್ಗೆ ಹೇಳಿಕೊಂಡರು ಸಿಂಧು. ಚಿತ್ರದಲ್ಲಿ ನಟಿಸಿದ ಶಂಕರ್‌ ನಾರಾಯಣ್‌, ಗಾಯಕರಾದ ಸಿಂಚನಾ ದೀಕ್ಷಿತ್‌, ಸ್ಪರ್ಶ. ಸಂಗೀತ ನಿರ್ದೇಶಕ ಅಭಿಲಾಷ್‌
ಗುಪ್ತಾ ಕೂಡಾ ತಮ್ಮ ಅನುಭವ ಹಂಚಿಕೊಂಡರು.

ಟಾಪ್ ನ್ಯೂಸ್

Supreme Court: 3 ತಿಂಗಳಿಗಿಂತ ದೊಡ್ಡ ಮಕ್ಕಳ ದತ್ತು ಪಡೆದರೆ ಹೆರಿಗೆ ರಜೆ ಏಕಿಲ್ಲ

Supreme Court: 3 ತಿಂಗಳಿಗಿಂತ ದೊಡ್ಡ ಮಕ್ಕಳ ದತ್ತು ಪಡೆದರೆ ಹೆರಿಗೆ ರಜೆ ಏಕಿಲ್ಲ

November 20: ಲಾವೋಸ್‌ನಲ್ಲಿ ಭಾರತ, ಚೀನ ರಕ್ಷಣ ಸಚಿವರ ಸಭೆ

November 20: ಲಾವೋಸ್‌ನಲ್ಲಿ ಭಾರತ, ಚೀನ ರಕ್ಷಣ ಸಚಿವರ ಸಭೆ

muslim marriage

Marriage registration ಪ್ರಮಾಣಪತ್ರ ನೀಡುವ ಅಧಿಕಾರ ವಕ್ಫ್ ಬೋರ್ಡ್‌ಗೆ ಎಲ್ಲಿದೆ?

1-libbb

Libya; 8 ವರ್ಷಗಳ ಬಳಿಕ ಲಿಬಿಯಾಕ್ಕೆ ತೆರಳಲು ಭಾರತೀಯರಿಗೆ ಅನುಮತಿ

sidda dkshi

CM-DCM ಮಹಾರಾಷ್ಟ್ರ ಚುನಾವಣ ಪ್ರಚಾರದಲ್ಲಿ ಭಾಗಿ

Iran: ಹಿಜಾಬ್‌ ನಿರಾಕರಿಸಿದರೆ ವಿಶೇಷ ಕ್ಲಿನಿಕ್‌: ಇರಾನ್‌ ತೀರ್ಮಾನಕ್ಕೆ ಆಕ್ರೋಶ

Iran: ಹಿಜಾಬ್‌ ನಿರಾಕರಿಸಿದರೆ ವಿಶೇಷ ಕ್ಲಿನಿಕ್‌: ಇರಾನ್‌ ತೀರ್ಮಾನಕ್ಕೆ ಆಕ್ರೋಶ

HDK (3)

Siddaramaiah; ಕೊಳ್ಳೆ ಹೊಡೆಯುತ್ತಿದ್ದರೂ ನಿಮ್ಮನ್ನು ಮುಟ್ಟಬಾರದಾ: ಎಚ್‌ಡಿಕೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

priyanka upendra in life is beautiful movie

Priyanka Upendra: ಬ್ಯೂಟಿಫುಲ್‌ ಲೈಫ್‌ ನಲ್ಲಿ ಪ್ರಿಯಾಂಕಾ

Sanju Weds Geetha 2: ಅವನು ಸಂಜು ಅವಳು ಗೀತಾ!; ಹಾಡಿನಲ್ಲಿ ಪ್ರೇಮ ಕಥನ

Sanju Weds Geetha 2: ಅವನು ಸಂಜು ಅವಳು ಗೀತಾ!; ಹಾಡಿನಲ್ಲಿ ಪ್ರೇಮ ಕಥನ

Bhairathi Ranagal: ಭೈರತಿ ಪಾತ್ರಕ್ಕೊಂದು ಸದುದ್ದೇಶವಿದೆ..: ಶಿವರಾಜ್‌ ಕುಮಾರ್‌

Bhairathi Ranagal: ಭೈರತಿ ಪಾತ್ರಕ್ಕೊಂದು ಸದುದ್ದೇಶವಿದೆ..: ಶಿವರಾಜ್‌ ಕುಮಾರ್‌

Rakesh Adiga in Maryade Prashne movie

Rakesh Adiga: ನಾನು ಮಿಡಲ್‌ ಕ್ಲಾಸ್‌ ಹುಡುಗ ಮರ್ಯಾದೆ ಉಳಿಸಿ!

ಮುರಳಿಗೆ ಮತ್ತೆ ಗೆಲುವಾಗಿದೆ..: ಗೆದ್ದು ನಕ್ಕ ʼಬಘೀರʼ

Bagheera: ಮುರಳಿಗೆ ಮತ್ತೆ ಗೆಲುವಾಗಿದೆ..: ಗೆದ್ದು ನಕ್ಕ ʼಬಘೀರʼ

MUST WATCH

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

ಹೊಸ ಸೇರ್ಪಡೆ

Supreme Court: 3 ತಿಂಗಳಿಗಿಂತ ದೊಡ್ಡ ಮಕ್ಕಳ ದತ್ತು ಪಡೆದರೆ ಹೆರಿಗೆ ರಜೆ ಏಕಿಲ್ಲ

Supreme Court: 3 ತಿಂಗಳಿಗಿಂತ ದೊಡ್ಡ ಮಕ್ಕಳ ದತ್ತು ಪಡೆದರೆ ಹೆರಿಗೆ ರಜೆ ಏಕಿಲ್ಲ

November 20: ಲಾವೋಸ್‌ನಲ್ಲಿ ಭಾರತ, ಚೀನ ರಕ್ಷಣ ಸಚಿವರ ಸಭೆ

November 20: ಲಾವೋಸ್‌ನಲ್ಲಿ ಭಾರತ, ಚೀನ ರಕ್ಷಣ ಸಚಿವರ ಸಭೆ

muslim marriage

Marriage registration ಪ್ರಮಾಣಪತ್ರ ನೀಡುವ ಅಧಿಕಾರ ವಕ್ಫ್ ಬೋರ್ಡ್‌ಗೆ ಎಲ್ಲಿದೆ?

1-libbb

Libya; 8 ವರ್ಷಗಳ ಬಳಿಕ ಲಿಬಿಯಾಕ್ಕೆ ತೆರಳಲು ಭಾರತೀಯರಿಗೆ ಅನುಮತಿ

sidda dkshi

CM-DCM ಮಹಾರಾಷ್ಟ್ರ ಚುನಾವಣ ಪ್ರಚಾರದಲ್ಲಿ ಭಾಗಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.