ಭುವನ್ ರಾಂಧವ
Team Udayavani, Nov 9, 2018, 6:00 AM IST
ಭುವನ್ ಪೊನ್ನಪ್ಪ ಅಭಿನಯದ “ರಾಂಧವ’ ಚಿತ್ರದ ಟ್ರೇಲರ್ ಬಿಡುಗಡೆಯಾಗಿದೆ. ಮಾಜಿ ಉಪಮುಖ್ಯಮಂತ್ರಿ ಆರ್. ಅಶೋಕ್, ಹಿರಿಯ ನಟ ದೊಡ್ಡಣ್ಣ, ಪ್ರಿಯಾಂಕಾ ಉಪೇಂದ್ರ, ಅಮೂಲ್ಯ ಟ್ರೇಲರ್ ಬಿಡುಗಡೆ ಸಮಾರಂಭಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿ ಟ್ರೇಲರ್ ಬಿಡುಗಡೆಗೊಳಿಸಿ ಚಿತ್ರತಂಡಕ್ಕೆ ಶುಭಕೋರಿದರು.
“ರಾಂಧವ’ ಚಿತ್ರದಲ್ಲಿ ಮುಂಬೈ ಬೆಡಗಿ ಅಪೂರ್ವ, ಭುವನ್ ಅವರಿಗೆ ನಾಯಕಿಯಾಗಿದ್ದಾರೆ. ಈ ಚಿತ್ರವನ್ನು ಸುನೀಲ್ ಎಸ್. ಅಚಾರ್ಯ ನಿರ್ದೇಶನ ಮಾಡಿದ್ದು, ಗಾಯಕ ಶಶಾಂಕ್ ಶೇಷಗಿರಿ ಈ ಚಿತ್ರದ ಹಾಡುಗಳಿಗೆ ಸಂಗೀತ ನಿರ್ದೇಶಕರು.
ಇನ್ನು “ರಾಂಧವ’ ಚಿತ್ರದಲ್ಲಿ ನಾಯಕ ನಟ ಭುವನ್ ಮೂರು ವಿಭಿನ್ನ ಶೈಲಿಯ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರಂತೆ.
“ಮೊದಲ ಬಾರಿಗೆ ಒಂದೇ ಚಿತ್ರದಲ್ಲಿ ಮೂರು ಬಗೆಯ ಪಾತ್ರ ಮಾಡುವಂತಹ ಅವಕಾಶ ಈ ಚಿತ್ರದಲ್ಲಿ ಸಿಕ್ಕಿದೆ. ಒಂದು ಫೋಟೋಗ್ರಾಫರ್ ರಾಬರ್ಟ್ ಪಾತ್ರ, ಮತ್ತೂಂದು ರಾಜ ರಾಂಧವ ಪಾತ್ರ. ಇವೆರಡರ ಜೊತೆಗೆ ಇನ್ನೊಂದು ಸರ್‌ಪ್ರೈಸ್ ಪಾತ್ರವಿದ್ದು, ಅದು ಏನು ಅನ್ನೋದನ್ನ ತೆರೆಮೇಲೆ ನೋಡಬೇಕು. ಎಲ್ಲ ಪಾತ್ರಗಳನ್ನೂ ಒಗ್ಗೂಡಿಸಿದಾಗ ಚಿತ್ರದ ಕಥೆ ಗೊತ್ತಾಗುತ್ತದೆ.
ಚಿತ್ರದಲ್ಲಿ ಈ ಪಾತ್ರಗಳನ್ನು ಮಾಡುವ ಸಲುವಾಗಿ ಸುಮಾರು ಒಂದು ವರ್ಷ ತಯಾರಿ ಮಾಡಿಕೊಂಡಿದ್ದೇನೆ’ ಎನ್ನುತ್ತಾರೆ ನಟ ಭುವನ್. ಮೊದಲಿಗೆ ರಾಬರ್ಟ್ ಪಾತ್ರದ ಚಿತ್ರೀಕರಣ ಮಾಡಿಕೊಂಡು ನಂತರ ಆ ಸರ್‌ಪ್ರೈಸ್ ಪಾತ್ರವನ್ನು ಮುಗಿಸಿ, ಕೊನೆಯದಾಗಿ ಆ ರಾಜ ರಾಂಧವನ ಪಾತ್ರವನ್ನು ಚಿತ್ರೀಕರಿಸಲಾಯಿತಂತೆ. “ಚಿಕ್ಕ ವಯಸ್ಸಿನಿಂದಲೇ ನಾಟಕಗಳಲ್ಲಿ ಅಭಿನಯಿಸಿದ ಅನುಭವ ಇರುವುದರಿಂದ, ಮೂರು ಪಾತ್ರಗಳನ್ನು ನಿರ್ವಹಿಸುವುದು ಸುಲಭವಾಯಿತು. ಪಾತ್ರಗಳಲ್ಲಿ ತುಂಬ ಸವಾಲುಗಳಿದ್ದರೂ, ಇಷ್ಟಪಟ್ಟು
ಮಾಡಿದ್ದೇನೆ’ ಎನ್ನುತ್ತಾರೆ ಭುವನ್.
ಚಿತ್ರದ ಬಗ್ಗೆ ಮಾತನಾಡಿದ ನಿರ್ದೇಶಕ ಸುನೀಲ್ ಆಚಾರ್ಯ, “ಚಿತ್ರರಂಗದ ಹಿನ್ನೆಲೆ ಇಲ್ಲದಿದ್ದರೂ, ಆಸಕ್ತಿಯಿಂದ ಈ ಕ್ಷೇತ್ರವನ್ನು ಆರಿಸಿಕೊಂಡು ಇಲ್ಲಿದೆ ಬಂದಿದ್ದೇನೆ. ಮೊದಲನೇ ಚಿತ್ರವಾದರೂ, ಎಲ್ಲರೂ ತುಂಬ ಸಹಕರಿಸಿದ್ದಾರೆ. ಇದರಲ್ಲಿ ಲವ್, ಸಸ್ಪೆನ್ಸ್
ಎಲ್ಲವೂ ಇದೆ. ಇಂದಿನ ಪ್ರೇಕ್ಷಕರ ಅಭಿರುಚಿಯನ್ನು ಗಮನದಲ್ಲಿಟ್ಟುಕೊಂಡು ಈ ಚಿತ್ರವನ್ನು ಮಾಡಿದ್ದೇವೆ. ಚಿತ್ರ ಎಲ್ಲರಿಗೂ ಇಷ್ಟವಾಗಲಿದೆ ಎಂಬ ಭರವಸೆ ಇದೆ’ ಎಂದರು. “ಪೊಟಾಟೋ ಟಾಕೀಸ್’ ಬ್ಯಾನರ್‌ನಲ್ಲಿ ಶಾಂತಕುಮಾರ್ ಈ ಚಿತ್ರವನ್ನು
ನಿರ್ಮಾಣ ಮಾಡಿದ್ದಾರೆ. ಸದ್ಯ ನಿಧಾನವಾಗಿ ಚಿತ್ರದ ಪ್ರಚಾರ ಕೆಲಸಗಳಿಗೆ ಚಾಲನೆ ನೀಡಿರುವ ಚಿತ್ರತಂಡ, ಜನವರಿ ವೇಳೆಗೆ “ರಾಂಧವ’ನನ್ನು ಪ್ರೇಕ್ಷಕರ ಮುಂದೆ ತರುವ ಸಿದ್ಧತೆಯಲ್ಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.