ಬಣ್ಣ  ಮತ್ತು ಧ್ವನಿಗಳ ಮಧುರ ಸಂಗಮ, ಕಾಗದದ ದೋಣಿ!


Team Udayavani, Feb 3, 2017, 3:45 AM IST

pjimage (10).jpg

ಪ್ರಯೋಗ ಮಾಡಬೇಕು ಎನ್ನುವ ಕಾರಣಕ್ಕೆ ಪ್ರಯೋಗ ಮಾಡಬಾರದು, ಅಲ್ಲಿ ಸಮಾನ ಮನಸ್ಕರು ಇದ್ದಾಗ ಇನ್ನೂ ಚೆನ್ನಾಗಿರುತ್ತದೆ ಎಂದು ನಾಗಾಭರಣ ಹೇಳಿಕೊಂಡರು. ಪಾತ್ರಕ್ಕೆ ಇಷ್ಟುದ್ದ ಕೂದಲು ಬಿಟ್ಟು, ಕೊನೆಯ ಕ್ಷಣದಲ್ಲಿ ಅದನ್ನು ಕತ್ತರಿಸು ವಂತಾಯಿತು ಎಂದರು.

ಬಿ. ಸುರೇಶ ಸದ್ದಿಲ್ಲದೆ “ಉಪ್ಪಿನ ಕಾಗದ’ ಎಂಬ ಹೊಸ ಚಿತ್ರವನ್ನು ಮಾಡಿ ಮುಗಿಸಿದ್ದಾರೆ. ಈ ಬೆಂಗಳೂರು ಚಿತ್ರೋತ್ಸವ ದಲ್ಲಿ ಚಿತ್ರ ಪ್ರದರ್ಶನ ಕಾಣಲಿದೆ. ಅದಾಗುತ್ತಿ ದ್ದಂತೆಯೇ ಚಿತ್ರವನ್ನು ಬಿಡುಗಡೆ ಮಾಡುವ ಯೋಚನೆ ನಿರ್ಮಾಪಕಿ ಶೈಲಜಾನಾಗ್‌ ಅವರಿಗಿದೆ. ಈ ಮಧ್ಯೆ ಚಿತ್ರದ ಹಾಡುಗಳನ್ನು ಮತ್ತು ಟ್ರೇಲರ್‌ ಬಿಡುಗಡೆ ಮಾಡಲಾಯಿತು. ಬಿಡುಗಡೆ ಮಾಡಿದ್ದು ಹಿರಿಯ ನಿರ್ದೇಶಕ ಟಿ.ಎಸ್‌. ನಾಗಾಭರಣ. ಈ ಚಿತ್ರಕ್ಕವರು ವಿಶೇಷ ಅತಿಥಿಯಷ್ಟೇ ಅಲ್ಲ, ಚಿತ್ರದ ಹೀರೋನೂ ಅವರೇ.

“ಉಪ್ಪಿನ ಕಾಗದ’ ಚಿತ್ರವನ್ನು ಎರಡು ಕಥೆಗಳನ್ನು ಮಿಕ್ಸ್‌ ಮಾಡಿ ಮಾಡ ಲಾಗಿದೆಯಂತೆ. ಅಫ್ಘಾನಿಸ್ತಾನದಲ್ಲಿ ನಡೆದ ಒಂದು ಕಥೆ ಮತ್ತು ಬಾಗಲ ಕೋಟೆಯಲ್ಲಿ ನೋಡಿದ ಒಂದು ಘಟನೆಯನ್ನು ಮಿಕ್ಸ್‌ ಮಾಡಿ ಅವರು ಈ ಚಿತ್ರದ ಕಥೆ ಬರೆದಿದ್ದಾರೆ. “ಈ ಎರಡನ್ನೂ ಹೇಗಾದರೂ ಬೆಳೆಸಬೇಋಕು ಎಂದುಕೊಂಡೆ. ಬರೆದೆ. ಸರಿ ಹೋಗಲಿಲ್ಲ. ಮತ್ತೆ ಬರೆದೆ. ನಾನು ಇದುವರೆಗೂ ಇಷ್ಟು ಮೌನವಿರುವ ಚಿತ್ರ ಮಾಡಿರಲಿಲ್ಲ. ಈ ಚಿತ್ರಕ್ಕೆ ಯಾರಿಂದ ಸಂಗೀತ ಮಾಡಿಸಬೇಕು ಎಂದು ಗೊತ್ತಾಗಲಿಲ್ಲ. ಅನುಮಾನದಿಂದಲೇ ಹರಿಕೃಷ್ಣನನ್ನ ಕೇಳಿದೆ. ಎರಡು ಹಾಡು ರೆಕಾರ್ಡ್‌ ಮಾಡಿ, ಕೊನೆಗೆ ಅದು ಬೇಡ ಎಂದು ಬಿಟ್ಟಿದ್ದೂ ಇದೆ. ಮುಂಚೆ ನಾಗಾಭರಣ ಅವರಿಗೆ ಉದ್ದ ಕೂದಲು ಬಿಡೋದಕ್ಕೆ ಹೇಳಿದ್ದೆ. ಒಮ್ಮೆ ಪ್ರಕಾಶ್‌ ರೈ ಜೊತೆಗೆ ಇಳಯರಾಜ ಅವರನ್ನು ಭೇಟಿ ಮಾಡುವ ಪ್ರಸಂಗ ಬಂತು. ಅವರ ಹೇರ್‌ಸ್ಟೈಲ್‌ ಪಕ್ಕಾ ಆಗಿದೆ ಎಂದು ನಾಗಾಭರಣರ ಹೇರ್‌ಸ್ಟೈಲ್‌ ಬದಲಾಯಿಸೋಕೆ ಹೇಳಿದೆ. ಇನ್ನು ಅವರ ಜೊತೆಗೆ ಮಂಡ್ಯ ರಮೇಶ್‌, ಅಪೂರ್ವ ಭಾರದ್ವಾಜ್‌ ಮುಂತಾದವರು ನಟಿಸಿದ್ದಾರೆ. ಅದ್ವೆ„ತ ಗುರುಮೂರ್ತಿ ಛಾಯಾಗ್ರಹಣ ಮಾಡಿದ್ದಾರೆ’ ಎಂದು ವಿವರ ಕೊಟ್ಟರು ಸುರೇಶ.

ಏನಿದು “ಉಪ್ಪಿನ ಕಾಗದ”? ತಮ್ಮ ಚಿತ್ರಗಳಲ್ಲೇ ಇದು ಹೆಚ್ಚು ಮೌನವಿರುವ ಸಿನಿಮಾ ಎನ್ನುತ್ತಾರೆ ಸುರೇಶ. “ಎಲ್ಲವನ್ನೂ ಅನುಮಾನದಿಂದ ನೋಡುವ ಮಧ್ಯದಲ್ಲಿ, ಎಲ್ಲ ಬಣ್ಣಗಳಿಳೂ ಮತ್ತು ಎಲ್ಲಾ ಧ್ವನಿಗಳಿಗೂ ಬದುಕುವ ಅವಕಾಶ ಕಲ್ಪಿಸುವ ಪ್ರಯತ್ನವನ್ನು ಈ ಚಿತ್ರದಲ್ಲಿ ಮಾಡಿದ್ದೇವೆ. ಇಲ್ಲಿ ಯಾವುದೇ ಪೊಲಿಟಿಕಲ್‌ ಸ್ಟೇಟ್‌ಮೆಂಟ್‌ ಇಲ್ಲ. ನದಿಯಾಗಬೇಕು ಎನ್ನುವುದು ಚಿತ್ರದ ಕಲ್ಪನೆ. ಏಕೆಂದರೆ, ನೀರಿನಲ್ಲಿ ಎಲ್ಲಾ ಬಣ್ಣಗಳಿವೆ. ನನ್ನ ಎಲ್ಲಾ ಸಿನಿಮಾಗಳು ಕರಪತ್ರದ ತರಹ ಇತ್ತು. ಇದರಲ್ಲಿ ಹಾಗಿರಲ್ಲ. ತುಂಬಾ ಕಾವ್ಯಮಯವಾದ ಮಾಗಘವನ್ನು ಈ ಚಿತ್ರದಲ್ಲಿ ಅನುಸರಿಸಿದ್ದೇನೆ’ ಎಂದು ಚಿತ್ರದ ಟ್ರೀಟ್‌ಮೆಂಟ್‌ ಬಗ್ಗೆ ಹೇಳುತ್ತಾರೆ ಸುರೇಶ.

ಇನ್ನು “ಉಪ್ಪಿನ ಕಾಗದ’ ಈ ಚಿತ್ರಕ್ಕೆ ಸೂಕ್ತವಾದ ಹೆಸರು ಎಂಬುದು ಅವರ ಅಭಿಪ್ರಾಯ. “ಈ ಉಪ್ಪಿನ ಕಾಗದ ಅಥವಾ ಸ್ಯಾಂಡ್‌ ಪೇಪರ್‌ನ ಸಪಾಟು ಮಾಡುವುದಕ್ಕೆ ಬಳಸುತ್ತಾರೆ. ಅದೇ ತರಹ ಭಿನ್ನಾಭಿಪ್ರಾಯವನ್ನ ಸಪಾಟು ಮಾಡಿಕೊಂಡರೆ ಬದುಕು ಚೆನ್ನಾಗುತ್ತದೆ ಎಂದು ಈ ಚಿತ್ರದ ಸಾರ. ನಿಜ ಹೇಳಬೇಕೆಂದರೆ, ಇಲ್ಲಿ ಆಚಾರಿ ಪಾತ್ರವೇ ಒಂದು ಮೆಟಾಫ‌ರ್‌. ನಮ್ಮೆಲ್ಲರಲ್ಲೂ ಒಬ್ಬ ಆಚಾರಿ ಇರುತ್ತಾನೆ. ನಾವೆಲ್ಲಾ ಮಕ್ಕಳನ್ನು ಬೆಳೆಸುತ್ತೀವಿ, ಪಾಠ ಮಾಡುತ್ತೀವಿ. ಯಾವ ಬಂಡೇಲಿ ಯಾವ ಗೊಮ್ಮಟ ಕಾಣಾ¤ನೋ, ಯಾವ ಬಂಡೆಯಲ್ಲಿ ಯಾವ ಶಿಲಾ ಬಾಲಿಕೆ ಕಾಣುತ್ತಾಳ್ಳೋ ಗೊತ್ತಿಲ್ಲ’ ಎಂದರು.

ಪ್ರಯೋಗ ಮಾಡಬೇಕು ಎನ್ನುವ ಕಾರಣಕ್ಕೆ ಪ್ರಯೋಗ ಮಾಡಬಾರದು, ಅಲ್ಲಿ ಸಮಾನ ಮನಸ್ಕರು ಇದ್ದಾಗ ಇನ್ನೂ ಚೆನ್ನಾಗಿರುತ್ತದೆ ಎಂದು ನಾಗಾಭರಣ ಹೇಳಿಕೊಂಡರು. ಪಾತ್ರಕ್ಕೆ ಇಷ್ಟುದ್ದ ಕೂದಲು ಬಿಟ್ಟು, ಕೊನೆಯ ಕ್ಷಣದಲ್ಲಿ ಅದನ್ನು ಕತ್ತರಿಸುವಂತಾಯಿತು ಎಂದು ಹೇಳಿದರು. 

ಈ ಹಾಡುಗಳನ್ನು ಸಂಯೋಜಿಸಿದ್ದು ತಾವು ಎಂದು ಸಂಗೀತಗಾರರೇ ನಂಬಲಿಲ್ಲ ಎಂದು ಹರಿಕೃಷ್ಣ ಹೇಳಿಕೊಂಡರು. ಸೀನಿಯರ್‌ಗಳಿಗೆ ಸಿಗದ ಅವಕಾಶ ತಮ್ಮಂಥ ಹೊಸ ನಟಿಗೆ ಸಿಕ್ಕಿದ್ದಾಗಿ ಅಪೂರ್ವ ಹೇಳಿಕೊಂಡರು.

– ಚೇತನ್‌ ನಾಡಿಗೇರ್‌

ಟಾಪ್ ನ್ಯೂಸ್

Na-Dsoza-Family

ಸಾಹಿತ್ಯದಾಚೆಗೂ ಬೆಳೆದು ನಿಂತ ಸಾಗರದ ನಾ.ಡಿ’ಸೋಜಾ!

supreme-Court

Protect: ಹೆತ್ತವರನ್ನು ಸಾಕದಿದ್ದರೆ ಗಿಫ್ಟ್ ಡೀಡ್‌ ರದ್ದು: ಸುಪ್ರೀಂ ಕೋರ್ಟ್‌

ವಲಸೆ ನಿಯಮ ಸಡಿಲಿಸಿದ ನ್ಯೂಜಿಲ್ಯಾಂಡ್‌ ಸರಕಾರ‌; ಭಾರತೀಯರಿಗೆ ಹೆಚ್ಚಿನ ಅವಕಾಶ ಸಾಧ್ಯತೆ

ವಲಸೆ ನಿಯಮ ಸಡಿಲಿಸಿದ ನ್ಯೂಜಿಲ್ಯಾಂಡ್‌ ಸರಕಾರ‌; ಭಾರತೀಯರಿಗೆ ಹೆಚ್ಚಿನ ಅವಕಾಶ ಸಾಧ್ಯತೆ

HDK–Siddu

Alleged: ಇದು 60 ಪರ್ಸೆಂಟ್‌ ಲಂಚದ ಕಾಂಗ್ರೆಸ್‌ ಸರಕಾರ: ಎಚ್‌.ಡಿ.ಕುಮಾರಸ್ವಾಮಿ ಆರೋಪ

Kalpeni Island: ಲಕ್ಷದ್ವೀಪದಲ್ಲಿ ಯುರೋಪ್‌ನ ಯುದ್ಧ ನೌಕೆ ಅವಶೇಷ ಪತ್ತೆ!

Kalpeni Island: ಲಕ್ಷದ್ವೀಪದಲ್ಲಿ ಯುರೋಪ್‌ನ ಯುದ್ಧ ನೌಕೆ ಅವಶೇಷ ಪತ್ತೆ!

Aizawl: ಮಿಜೋರಾಂನಲ್ಲಿ ದೇಶದ ಮೊದಲ ಬೀಟಾ ತಲೆಮಾರಿನ ಮಗು ಜನನ

Aizawl: ಮಿಜೋರಾಂನಲ್ಲಿ ದೇಶದ ಮೊದಲ ಬೀಟಾ ತಲೆಮಾರಿನ ಮಗು ಜನನ

CT-Ravi

Compliant: ಸಿಆರ್‌ಪಿಎಫ್ ಭದ್ರತೆ ಕೊಡಿಸಿ, ನನ್ನ ಜೀವಕ್ಕೆ ಅಪಾಯ ಇದೆ: ಸಿ.ಟಿ.ರವಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kiccha Sudeep supports Sanju Weds Geetha 2 movie

Sanju Weds Geetha 2: ಸಂಜು-ಗೀತಾಗೆ ಕಿಚ್ಚ ಸಾಥ್‌‌

Public Picture; ಪ್ರೇಕ್ಷಕ ಏನು ಬಯಸುತ್ತಾನೆ ಗೊತ್ತಾ?

Public Picture; ಪ್ರೇಕ್ಷಕ ಏನು ಬಯಸುತ್ತಾನೆ ಗೊತ್ತಾ?

Sandalwood: ತೆರೆ ಮೇಲೆ ಗನ್ಸ್‌ ಆ್ಯಂಡ್‌ ರೋಸಸ್‌

Sandalwood: ತೆರೆ ಮೇಲೆ ಗನ್ಸ್‌ ಆ್ಯಂಡ್‌ ರೋಸಸ್‌

Sandalwood Rewind 2024; ಹಳಬರಿಗೆ ಜೈಕಾರ ಹೊಸಬರಿಗೆ ಉರಿ ಖಾರ; ಚಂದನವನದ ಚೆಂದದ ಲೆಕ್ಕ

Sandalwood Rewind 2024; ಹಳಬರಿಗೆ ಜೈಕಾರ ಹೊಸಬರಿಗೆ ಉರಿ ಖಾರ; ಚಂದನವನದ ಚೆಂದದ ಲೆಕ್ಕ

ಸ್ಟಾರ್‌ ಸಿನಿಮಾ ಹೆಚ್ಚು ಬಂದರೆ ಚಿತ್ರರಂಗಕ್ಕೆ ಪೂರಕ: ಎನ್‌. ನರಸಿಂಹಲು

Sandalwood: ಸ್ಟಾರ್‌ ಸಿನಿಮಾ ಹೆಚ್ಚು ಬಂದರೆ ಚಿತ್ರರಂಗಕ್ಕೆ ಪೂರಕ: ಎನ್‌. ನರಸಿಂಹಲು

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

4

Bajpe: ಗುರುಪುರ ಪೇಟೆಯ ಹಲವೆಡೆ ಕಳವು

Na-Dsoza-Family

ಸಾಹಿತ್ಯದಾಚೆಗೂ ಬೆಳೆದು ನಿಂತ ಸಾಗರದ ನಾ.ಡಿ’ಸೋಜಾ!

supreme-Court

Protect: ಹೆತ್ತವರನ್ನು ಸಾಕದಿದ್ದರೆ ಗಿಫ್ಟ್ ಡೀಡ್‌ ರದ್ದು: ಸುಪ್ರೀಂ ಕೋರ್ಟ್‌

ವಲಸೆ ನಿಯಮ ಸಡಿಲಿಸಿದ ನ್ಯೂಜಿಲ್ಯಾಂಡ್‌ ಸರಕಾರ‌; ಭಾರತೀಯರಿಗೆ ಹೆಚ್ಚಿನ ಅವಕಾಶ ಸಾಧ್ಯತೆ

ವಲಸೆ ನಿಯಮ ಸಡಿಲಿಸಿದ ನ್ಯೂಜಿಲ್ಯಾಂಡ್‌ ಸರಕಾರ‌; ಭಾರತೀಯರಿಗೆ ಹೆಚ್ಚಿನ ಅವಕಾಶ ಸಾಧ್ಯತೆ

HDK–Siddu

Alleged: ಇದು 60 ಪರ್ಸೆಂಟ್‌ ಲಂಚದ ಕಾಂಗ್ರೆಸ್‌ ಸರಕಾರ: ಎಚ್‌.ಡಿ.ಕುಮಾರಸ್ವಾಮಿ ಆರೋಪ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.