ಪಾರಿವಾಳ vs ಪಾರಿಜಾತ: ಮಾಯಾ ಬಜಾರ್‌ ಅಲ್ಲ ಸುನಿ ಬಜಾರ್‌


Team Udayavani, Jan 19, 2018, 1:16 PM IST

19-54.jpg

“ಪಾರಿವಾಳ ಮತ್ತು ಪಾರಿಜಾತ ನಡುವಿನ ಕಥೆಯಿದು …’
– ಹೀಗೆ ಹೇಳಿ ಪತ್ರಕರ್ತರ ಮುಖ ನೋಡಿದರು ಸುನಿ. ಸಣ್ಣ ಜಾತ್ರೆಯನ್ನು ನೆನಪಿಸುವಷ್ಟು ಜನ ಸೇರಿದ್ದರಿಂದ ತಾನು ಮಾತನಾಡಿದ್ದು, ಪತ್ರಕರ್ತರಿಗೆ ಕೇಳಿಸಿತೋ, ಇಲ್ಲವೋ ಎಂಬ ಕನ್‌ಫ್ಯೂಶನ್‌ ಸುನಿಗಿತ್ತು. ಹಾಗಾಗಿ, ಒಮ್ಮೆ ಮೈಕ್‌ನಲ್ಲಿ, ಇನ್ನೊಮ್ಮೆ ಮೈಕ್‌ ಕೆಳಗಿಡುತ್ತಲೇ ತಮ್ಮ ಹೊಸ ಸಿನಿಮಾದ ವಿವರ ಕೊಟ್ಟರು ಸುನಿ. ಸುನಿ ವಿವರ ಕೊಟ್ಟಿದ್ದು, “ಬಜಾರ್‌’ ಚಿತ್ರದ ಬಗ್ಗೆ. ಇದು ಸುನಿ ನಿರ್ದೇಶನದ ಹೊಸ ಸಿನಿಮಾ. “ಚಮಕ್‌’ ಬಿಡುಗಡೆಯಾಗಿ ಎರಡು ವಾರ ಪೂರೈಸುವಷ್ಟರಲ್ಲಿ ಸುನಿ ತಮ್ಮ ಹೊಸ ಸಿನಿಮಾಕ್ಕೆ ಮುಹೂರ್ತ ಮಾಡಿದ್ದಾರೆ. “ಬಜಾರ್‌’ ಮೂಲಕ ಸುನಿ ಹೊಸ ಹುಡುಗ ಧನ್‌ವೀರ್‌ನನ್ನು ಪರಿಚಯಿಸುತ್ತಿದ್ದಾರೆ. ಧನ್‌ವೀರ್‌ಗೆ ಅದಿತಿ ಪ್ರಭುದೇವ ನಾಯಕಿ. ತಮ್ಮ ಮಗನಿಗಾಗಿ ತಿಮ್ಮೇಗೌಡ ಅವರು “ಬಜಾರ್‌’ ನಿರ್ಮಿಸುತ್ತಿದ್ದಾರೆ. 

ಅಂದಹಾಗೆ, “ಬಜಾರ್‌’ನಲ್ಲಿ ಸುನಿ ಏನು ಹೇಳಲು ಹೊರಟಿದ್ದಾರೆಂದು ನೀವು ಕೇಳಬಹುದು. ಇಲ್ಲಿ ಲವ್‌ಸ್ಟೋರಿ ಜೊತೆಗೆ ಪಾರಿವಾಳ ರೇಸ್‌ ಕೂಡಾ ಈ ಚಿತ್ರದ ಹೈಲೈಟ್‌. ಪಾರಿವಾಳ ರೇಸ್‌ ಅನ್ನು ಮೂಲವಾಗಿಟ್ಟುಕೊಂಡು “ಬಜಾರ್‌’ ಚಿತ್ರದ ಕಥೆ ಸಾಗುತ್ತದೆ. “ಬಜಾರ್‌’ಗೆ ಎಂ.ಎಲ್‌. ಪ್ರಸನ್ನ ಅವರ ಕಥೆ ಇದ್ದು, ಶ್ರೀಕಾಂತ್‌ ಅವರ ಸಂಭಾಷಣೆ ಇದೆ. ಶಿವಧ್ವಜ್‌ ಈ ಚಿತ್ರದ ಪ್ರೊಡಕ್ಷನ್‌ ಡಿಸೈನರ್‌. 

“ಪ್ರಸನ್ನ ಅವರ ಕಥೆ ತುಂಬಾ ಚೆನ್ನಾಗಿದೆ. ಇಲ್ಲಿ ಎಲ್ಲಾ ಅಂಶಗಳು ಕೂಡಿವೆ. ಕಮರ್ಷಿಯಲ್‌ ಆಗಿ ಏನೇನು ಬೇಕೋ, ಅವೆಲ್ಲವನ್ನು ಸೇರಿಸಿದ್ದೇವೆ. ಮುಖ್ಯವಾಗಿ ಈ ಸಿನಿಮಾ ಪಾರಿವಾಳ ರೇಸ್‌ ಜೊತೆಗೆ ಸಾಗುತ್ತದೆ. ಪ್ರಸನ್ನ ಅವರು ಸಾಕಷ್ಟು ಸ್ಟಡಿ ಮಾಡಿಯೇ ಕಥೆ ಹೆಣೆದಿದ್ದಾರೆ. ಈ ಹಿಂದೆ ಕೆಲವು ಸಿನಿಮಾಗಳಲ್ಲಿ ಪಾರಿವಾಳ ರೇಸ್‌ ಬಗ್ಗೆ ಬಂದಿರಬಹುದು. ಆದರೆ, ಇಲ್ಲಿ ತುಂಬ ಆಳವಾಗಿ ಅದರ ಬಗ್ಗೆ ತೋರಿಸುತ್ತಿದ್ದೇವೆ. ಜೊತೆಗೆ ಇಲ್ಲಿ ರೌಡಿಸಂ, ಲವ್‌ ಇದೆ’ ಎಂದು ಸಿನಿಮಾ ಬಗ್ಗೆ ವಿವರ ನೀಡಿದರು. 

ಚಿತ್ರಕ್ಕೆ ಕಥೆ ಒದಗಿಸಿದ ಎಂ.ಎಲ್‌. ಪ್ರಸನ್ನ ಅವರು, “ಸುನಿ ಒಂದಷ್ಟು ಬದಲಾವಣೆ ಮಾಡಿಕೊಂಡಿದ್ದು, ಅವೆಲ್ಲವೂ ಕಥೆಗೆ ಪೂರಕವಾಗಿರುತ್ತದೆ ಎಂಬ ನಂಬಿಕೆ ಇದೆ ಎಂದರು. ನಾಯಕ ಧನ್‌ವೀರ್‌ ಮೂರು ವರ್ಷದಿಂದ ಚಿತ್ರರಂಗಕ್ಕೆ ಬರಬೇಕೆಂದು ಪ್ರಯತ್ನಿಸುತ್ತಿದ್ದರಂತೆ. ಅದು ಈಗ ಈಡೇರಿದೆ ಎಂದರು. “ಧೈರ್ಯಂ’ ನಂತರ ನಾಯಕಿ ಅದಿತಿ ನಟಿಸುತ್ತಿರುವ ಎರಡನೇ ಸಿನಿಮಾವಿದು. ಇಲ್ಲಿ ಅವರು ಪಾರಿಜಾತ ಎಂಬ ಪಾತ್ರ ಮಾಡುತ್ತಿದ್ದಾರೆ. ಈ ಚಿತ್ರವನ್ನು ತಿಮ್ಮೇಗೌಡ ಅವರು ನಿರ್ಮಿಸುತ್ತಿದ್ದಾರೆ. ಈ ಚಿತ್ರದ ಮೂಲಕ ಮಗನನ್ನು ಲಾಂಚ್‌ ಮಾಡುತ್ತಿದ್ದಾರೆ. “ನನ್ನ ತಂದೆ ರಂಗಭೂಮಿಯಲ್ಲಿದ್ದವರು. ಅವರ ಕಲಾಸಕ್ತಿ ಈಗ ನನ್ನ ಮಗನಿಗೆ ಬಂದಿದೆ. ಹಾಗಾಗಿ, ಸಿನಿಮಾ ನಿರ್ಮಿಸುತ್ತಿದ್ದೇನೆ. ಮುಂದೆ ಈ ಬ್ಯಾನರ್‌ನಲ್ಲಿ ಬೇರೆ ನಾಯಕರಿಗೂ ಸಿನಿಮಾ ಮಾಡುವ ಆಸೆ ಇದೆ’ ಎಂದರು.

 ಚಿತ್ರಕ್ಕೆ ಸಂತೋಷ್‌ ರೈ ಪಾತಾಜೆ ಛಾಯಾಗ್ರಹಣವಿದ್ದು, ಪಾರಿವಾಳ ರೇಸ್‌ ಸೆರೆ ಹಿಡಿಯೋದು ಸವಾಲಿನ ಕೆಲಸ ಎಂದರು. ಇನ್ನು, ಸಂಗೀತ ನಿರ್ದೇಶಕ ರವಿ ಬಸ್ರೂರು, ಎಲ್ಲಾ ಪತ್ರಿಕಾಗೋಷ್ಠಿಗಳಲ್ಲಿ ಹೇಳುವಂತೆ ಇಲ್ಲೂ, “ಪ್ರತಿಭೆ ಇರೋದು ಮುಖ್ಯವಲ್ಲ. ಅದನ್ನು ಗುರುತಿಸಿ ಅವಕಾಶ ಕೊಡುವ ಮನಸ್ಸು ಮುಖ್ಯ’ ಎಂಬ ಅವರ ಹಳೆಯ ಮಾತನ್ನು ಪುನರುತ್ಛರಿಸಿದರು.

ಟಾಪ್ ನ್ಯೂಸ್

Chalavadi2

Ambedkar Row: ಕಾಂಗ್ರೆಸ್‌ ಎಂದರೆ ಫೇಕ್‌ ಗಾಂಧಿಗಳ ಪಕ್ಷ: ಛಲವಾದಿ ನಾರಾಯಣಸ್ವಾಮಿ

police crime

Delhi bom*b ಬೆದರಿಕೆ; ಮಕ್ಕಳಿಗೆ ರಜೆ ಬೇಕಾಗಿತ್ತು: ಕಾರಣ ಬಿಚ್ಚಿಟ್ಟ ಪೊಲೀಸರು!

ಇಂದು ರಾಷ್ಟ್ರೀಯ ರೈತ ದಿನ: ರೈತರ ಬದುಕು ಹಸನಾದರಷ್ಟೇ ಉಳಿದೀತು ಕೃಷಿ ಸಂಸ್ಕೃತಿ

ಇಂದು ರಾಷ್ಟ್ರೀಯ ರೈತ ದಿನ: ರೈತರ ಬದುಕು ಹಸನಾದರಷ್ಟೇ ಉಳಿದೀತು ಕೃಷಿ ಸಂಸ್ಕೃತಿ

Shabarimala

Sabarimala Railway: ಶಬರಿಮಲೆ ತೀರ್ಥಾಟನೆ: ಕೇರಳಕ್ಕೆ 10 ವಿಶೇಷ ರೈಲು

1-eng

Champions Trophy, ಭಾರತ ಪ್ರವಾಸಕ್ಕೆ ಇಂಗ್ಲೆಂಡ್‌ ತಂಡ ಪ್ರಕಟ

PM Modi

PM Modi;ಇಂದು 71000ಕ್ಕೂ ಅಧಿಕ ಮಂದಿಗೆ ಉದ್ಯೋಗ ಪತ್ರ ವಿತರಣೆ

naksal (2)

Chhattisgarh; ನಕ್ಸಲ್‌ ವ್ಯಾಪ್ತಿ 9500 ಚ.ಕಿ.ಮೀ.ಗೆ ಇಳಿಕೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಸ್ಟಾರ್‌ ಸಿನಿಮಾ ಹೆಚ್ಚು ಬಂದರೆ ಚಿತ್ರರಂಗಕ್ಕೆ ಪೂರಕ: ಎನ್‌. ನರಸಿಂಹಲು

Sandalwood: ಸ್ಟಾರ್‌ ಸಿನಿಮಾ ಹೆಚ್ಚು ಬಂದರೆ ಚಿತ್ರರಂಗಕ್ಕೆ ಪೂರಕ: ಎನ್‌. ನರಸಿಂಹಲು

KD

Dhruva-Prem: ಡಿ.24ಕ್ಕೆ ʼಕೆಡಿʼ ಶಿವ ಶಿವ ಹಾಡು ರಿಲೀಸ್‌

Dhruva Sarja: ಪ್ರತಿ ಸಿನಿಮಾವೂ ನನಗೆ ಹೊಸ ಪಾಠ…: ಧ್ರುವ ಹೇಳಿದ್ದೇನು

Dhruva Sarja: ಪ್ರತಿ ಸಿನಿಮಾವೂ ನನಗೆ ಹೊಸ ಪಾಠ…: ಧ್ರುವ ಹೇಳಿದ್ದೇನು

Kiccha Sudeepa; ತಾಯಿಯನ್ನು ಉಳಿಸಿಕೊಳ್ಳಲಾಗದ ಆ ಕ್ಷಣ ನಾನು ಯೂಸ್‌ಲೆಸ್‌ ಅನಿಸಿತು…

Kiccha Sudeepa; ತಾಯಿಯನ್ನು ಉಳಿಸಿಕೊಳ್ಳಲಾಗದ ಆ ಕ್ಷಣ ನಾನು ಯೂಸ್‌ಲೆಸ್‌ ಅನಿಸಿತು…

UI Movie: 9 ವರ್ಷ ಬಳಿಕ ಉಪ್ಪಿ ಡೈರೆಕ್ಟ್‌ ಮಾಡಿದ ಯು-ಐ ಸಿನಿಮಾದ ಹೈಲೈಟ್ಸ್‌ ಏನು?

UI Movie: 9 ವರ್ಷ ಬಳಿಕ ಉಪ್ಪಿ ಡೈರೆಕ್ಟ್‌ ಮಾಡಿದ ಯು-ಐ ಸಿನಿಮಾದ ಹೈಲೈಟ್ಸ್‌ ಏನು?

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Chalavadi2

Ambedkar Row: ಕಾಂಗ್ರೆಸ್‌ ಎಂದರೆ ಫೇಕ್‌ ಗಾಂಧಿಗಳ ಪಕ್ಷ: ಛಲವಾದಿ ನಾರಾಯಣಸ್ವಾಮಿ

police crime

Delhi bom*b ಬೆದರಿಕೆ; ಮಕ್ಕಳಿಗೆ ರಜೆ ಬೇಕಾಗಿತ್ತು: ಕಾರಣ ಬಿಚ್ಚಿಟ್ಟ ಪೊಲೀಸರು!

ಇಂದು ರಾಷ್ಟ್ರೀಯ ರೈತ ದಿನ: ರೈತರ ಬದುಕು ಹಸನಾದರಷ್ಟೇ ಉಳಿದೀತು ಕೃಷಿ ಸಂಸ್ಕೃತಿ

ಇಂದು ರಾಷ್ಟ್ರೀಯ ರೈತ ದಿನ: ರೈತರ ಬದುಕು ಹಸನಾದರಷ್ಟೇ ಉಳಿದೀತು ಕೃಷಿ ಸಂಸ್ಕೃತಿ

Shabarimala

Sabarimala Railway: ಶಬರಿಮಲೆ ತೀರ್ಥಾಟನೆ: ಕೇರಳಕ್ಕೆ 10 ವಿಶೇಷ ರೈಲು

1-eng

Champions Trophy, ಭಾರತ ಪ್ರವಾಸಕ್ಕೆ ಇಂಗ್ಲೆಂಡ್‌ ತಂಡ ಪ್ರಕಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.