ಪೋಲಿ ಲಾಡ್ಜ್
ಮಿತಿಮೀರಿದ ಚೇಷ್ಟೆ - ಇದು ವಿಜಯ ಪ್ರಸಾದ
Team Udayavani, Sep 6, 2019, 5:58 AM IST
‘ಪರಿಮಳ ಲಾಡ್ಜ್’ ಎಂಬ ಟೀಸರ್ ರಿಲೀಸ್ ಆದ ಬೆನ್ನಲ್ಲೇ ಅದನ್ನು ವೀಕ್ಷಿಸಿದ ಬಹುತೇಕರು ಟೀಸರ್‌ನಲ್ಲಿರುವ ಸಂಭಾಷಣೆ ಜೊತೆಗೆ ಟೈಟಲ್ ಕಾರ್ಡ್‌ನಲ್ಲಿ ಬಳಸಲಾದ ಪದಗಳ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಕಾಮಿಡಿ, ಚೇಷ್ಟೇ, ಡಬಲ್ ಮೀನಿಂಗ್ ಸಿನಿಮಾಗಳಲ್ಲಿ ಸಹಜ ನಿಜ. ಆದರೆ, ಅದು ಅತಿಯಾದರೆ ಪ್ರೇಕ್ಷಕರಿಗೆ ಇಷ್ಟವಾಗುವುದಿಲ್ಲ. ಈಗ ‘ಪರಿಮಳ ಲಾಡ್ಜ್’ ಟೀಸರ್ ಬಗ್ಗೆಯೂ ಈ ತರಹದ್ದೇ ಕಾಮೆಂಟ್ ಕೇಳಿಬರುತ್ತಿದೆ.
ಇದು ಸ್ವಲ್ಪ ಓವರ್ ಆಯಿತು… ಇಷ್ಟೆಲ್ಲಾ ಬೇಕಿರಲಿಲ್ಲ…. ಚೇಷ್ಟೇ ಓಕೆ, ಆದರೆ ಅದು ಇಷ್ಟು ಮಿತಿ ಮೀರಬಾರದು … ಸಿನಿಮಾ ಸಭ್ಯತೆಯ ಎಲ್ಲೆಯೊಳಗಿರಬೇಕು …
– ‘ಪರಿಮಳ ಲಾಡ್ಜ್’ ಎಂಬ ಟೀಸರ್ ರಿಲೀಸ್ ಆದ ಬೆನ್ನಲ್ಲೇ ಅದನ್ನು ವೀಕ್ಷಿಸಿದ ಬಹುತೇಕರ ಮಾತಿದು. ಅದಕ್ಕೆ ಕಾರಣ, ಟೀಸರ್‌ನಲ್ಲಿರುವ ಸಂಭಾಷಣೆ ಜೊತೆಗೆ ಟೈಟಲ್ ಕಾರ್ಡ್‌ನಲ್ಲಿ ಬಳಸಲಾದ ಪದಗಳು. ಕಾಮಿಡಿ, ಚೇಷ್ಟೇ, ಡಬಲ್ ಮೀನಿಂಗ್ ಸಿನಿಮಾಗಳಲ್ಲಿ ಸಹಜ ನಿಜ. ಆದರೆ, ಅದು ಅತಿಯಾದರೆ ಪ್ರೇಕ್ಷಕರಿಗೆ ಇಷ್ಟವಾಗುವುದಿಲ್ಲ. ಈಗ ‘ಪರಿಮಳ ಲಾಡ್ಜ್’ ಟೀಸರ್ ಬಗ್ಗೆಯೂ ಈ ತರಹದ್ದೇ ಕಾಮೆಂಟ್ ಕೇಳಿಬರುತ್ತಿದೆ. ಹಾಗಂತ ಚಿತ್ರತಂಡ ಬೇಸರಗೊಂಡಿಲ್ಲ. ಚಿತ್ರತಂಡದ ಉದ್ದೇಶ ಕೂಡಾ ಈ ಟೀಸರ್ ಬಗ್ಗೆ ಜನ ಮಾತನಾಡಬೇಕೆಂಬುದು. ವಿಜಯ ಪ್ರಸಾದ್ ಈ ಚಿತ್ರದ ನಿರ್ದೇಶಕರು. ಈ ಹಿಂದೆ ‘ಸಿದ್ಲಿಂಗು’, ‘ನೀರ್‌ದೋಸೆ’ ಹಾಗೂ ಈಗ ‘ತೋತಾಪುರಿ’ ಚಿತ್ರಗಳನ್ನು ನಿರ್ದೇಶಿಸುತ್ತಿರುವ ವಿಜಯಾ ಪ್ರಸಾದ್, ತಮ್ಮ ‘ತೋತಾಪುರಿ’ ಚಿತ್ರ ಮುಗಿಯುವ ಮುನ್ನವೇ ‘ಪರಿಮಳ ಲಾಡ್ಜ್’ ಕೈಗೆತ್ತಿಕೊಂಡಿದ್ದಾರೆ. ಇತ್ತೀಚೆಗೆ ಚಿತ್ರದ ಟೀಸರ್ ರಿಲೀಸ್ ಆಗಿದ್ದು, ನಟ ದರ್ಶನ್ ಟೀಸರ್ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭಕೋರಿದರು.
ಈ ಚಿತ್ರದಲ್ಲಿ ನೀನಾಸಂ ಸತೀಶ್ ಹಾಗೂ ‘ಲೂಸ್‌ಮಾದ’ ಯೋಗೇಶ್ ನಾಯಕರು. ಉಳಿದಂತೆ ಸುಮನ್ ರಂಗನಾಥ್, ದತ್ತಣ್ಣ, ಬುಲೆಟ್ ಪ್ರಕಾಶ್ ನಟಿಸುತ್ತಿದ್ದಾರೆ. ಚಿತ್ರದ ಬಗ್ಗೆ ಮಾತನಾಡುವ ನಿರ್ದೇಶಕ ವಿಜಯ ಪ್ರಸಾದ್, ‘ನನ್ನ ಸಿನಿಮಾಗಳಲ್ಲಿ ಚೇಷ್ಟೇ ಜಾಸ್ತಿ ಇರುತ್ತದೆ. ಆ ಮೂಲಕ ಗಂಭೀರ ವಿಷಯವನ್ನು ಹೇಳುತ್ತೇನೆ. ‘ಪರಿಮಳ ಲಾಡ್ಜ್’ ಕೂಡಾ ಆ ತರಹದ ಕಥೆ ಹೊಂದಿರುವ ಸಿನಿಮಾ. ಸಾಮಾನ್ಯವಾಗಿ ಲಾಡ್ಜ್ ಅಂದರೆ ಅದೊಂದು ತರಹೇವಾರಿ ಚಟುವಟಿಕೆಯ ತಾಣ ಎಂಬುದು ನೆನಪಾಗುತ್ತೆ. ಜಗತ್ತಿನಲ್ಲಿರುವ ಪ್ರತಿಯೊಬ್ಬರದೂ ಒಂದೊಂದು ಕಥೆ ಇದ್ದೇ ಇರುತ್ತೆ.
ಹಾಗೆಯೇ ಪ್ರತಿ ರೂಮ್‌ನಲ್ಲೂ ಒಂದು ಬದುಕು, ನೋವು, ಗಾಢವಾದ ಕಥೆ ಇದ್ದೇ ಇರುತ್ತೆ. ಇಲ್ಲಿ ವಿಡಂಬನೆ ಇದೆ, ಮನರಂಜನೆಯೂ ಇದೆ. ಗಂಭೀರವಾಗಿ ಸಾಗುವ ಕಥೆಯೇ ಚಿತ್ರದ ಜೀವಾಳ’ ಎಂದು ವಿವರ ಕೊಡುತ್ತಾರೆ ನಿರ್ದೇಶಕ ವಿಜಯ್ ಪ್ರಸಾದ್. ವಿಜಯ್ ಪ್ರಸಾದ್ ಈಗಾಗಲೇ ಲೂಸ್‌ಮಾದ ಜೊತೆ ‘ಸಿದ್ಲಿಂಗು’ ಚಿತ್ರ ಮಾಡಿದ್ದರು. ಇದು ಎರಡನೇ ಕಾಂಬಿನೇಷನ್. ನೀನಾಸಂ ಸತೀಶ್ ಹಾಗೂ ಯೋಗೇಶ್ ಕೂಡಾ ‘ಪರಿಮಳ ಲಾಡ್ಜ್’ ಬಗ್ಗೆ ಮಾತನಾಡಿದರು.
ಈ ಚಿತ್ರವನ್ನು ಪ್ರಸನ್ನ ನಿರ್ಮಿಸುತ್ತಿದ್ದಾರೆ. ಚಿತ್ರಕ್ಕೆ ಅನೂಪ್ ಸೀಳೀನ್ ಸಂಗೀತ. ನಿರಂಜನ್ ಬಾಬು ಛಾಯಾಗ್ರಹಣವಿದೆ. ಸುರೇಶ್ ಅರಸ್ ಸಂಕಲನವಿದೆ. ಕಥೆ, ಚಿತ್ರಕಥೆ, ಸಂಭಾಷಣೆ ಮತ್ತು ಸಾಹಿತ್ಯದ ಜೊತೆಗೆ ನಿರ್ದೇಶನವನ್ನೂ ಮಾಡುತ್ತಿರುವ ವಿಜಯ್‌ಪ್ರಸಾದ್. ಟೀಸರ್ ನೋಡಿದ ಒಂದಷ್ಟು ಮಂದಿ ಮುಜುಗರಪಟ್ಟರೆ, ಪಡ್ಡೆಗಳು ಮಾತ್ರ ಸಿನಿಮಾದ ಬಗ್ಗೆ ಕುತೂಹಲದಿಂದಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sandalwood: ಸ್ಟಾರ್ ಸಿನಿಮಾ ಹೆಚ್ಚು ಬಂದರೆ ಚಿತ್ರರಂಗಕ್ಕೆ ಪೂರಕ: ಎನ್. ನರಸಿಂಹಲು
Dhruva-Prem: ಡಿ.24ಕ್ಕೆ ʼಕೆಡಿʼ ಶಿವ ಶಿವ ಹಾಡು ರಿಲೀಸ್
Dhruva Sarja: ಪ್ರತಿ ಸಿನಿಮಾವೂ ನನಗೆ ಹೊಸ ಪಾಠ…: ಧ್ರುವ ಹೇಳಿದ್ದೇನು
Kiccha Sudeepa; ತಾಯಿಯನ್ನು ಉಳಿಸಿಕೊಳ್ಳಲಾಗದ ಆ ಕ್ಷಣ ನಾನು ಯೂಸ್‌ಲೆಸ್ ಅನಿಸಿತು…
UI Movie: 9 ವರ್ಷ ಬಳಿಕ ಉಪ್ಪಿ ಡೈರೆಕ್ಟ್ ಮಾಡಿದ ಯು-ಐ ಸಿನಿಮಾದ ಹೈಲೈಟ್ಸ್ ಏನು?
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Bareilly Court: ಪ್ಯಾಲೆಸ್ತೀನ್ ಪರ ಘೋಷಣೆ: ಸಂಸದ ಒವೈಸಿಗೆ ಸಮನ್ಸ್
Sajipamunnur: ಅಪಘಾತದ ವೇಳೆ ಗೋಮಾಂಸ ಸಾಗಾಟ ಪತ್ತೆ; ಪ್ರಕರಣ ದಾಖಲು
Davangere:ಡಾ| ಬಿ.ಆರ್. ಅಂಬೇಡ್ಕರ್ ಅವಹೇಳನ; ಶಾ ರಾಜೀನಾಮೆಗೆ ಒತ್ತಾಯಿಸಿ ಬೃಹತ್ ಪ್ರತಿಭಟನೆ
ಸರಣಿ ರಜೆ-ವಿಶ್ವವಿಖ್ಯಾತ ಹಂಪಿಯಲ್ಲಿ ಪ್ರವಾಸಿಗರ ಸಂಖ್ಯೆ ಹೆಚ್ಚಳ
ಸಿ.ಟಿ.ರವಿ ಆ ಪದ ಬಳಸಿಲ್ಲವಾದ್ರೆ ಧರ್ಮಸ್ಥಳಕ್ಕೆ ಬಂದು ಆಣೆ ಪ್ರಮಾಣ ಮಾಡಲಿ: ಸಚಿವೆ ಲಕ್ಷ್ಮೀ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.