ಪೊಲೀಸರ ಮಾನವೀಯತೆಗೆ ಸಾಯಿಪ್ರಕಾಶ್ ಕನ್ನಡಿ
Team Udayavani, Mar 3, 2017, 3:50 AM IST
ಸಾಯಿಕುಮಾರ್ ಅಂದಾಕ್ಷಣ ಥಟ್ಟನೆ ನೆನಪಾಗೋದೇ ಖಡಕ್ ಪೊಲೀಸ್ ಅಧಿಕಾರಿಯ ಪಾತ್ರ. “ಮಡಮಕ್ಕಿ’ ಚಿತ್ರದ ಬಳಿಕ ಸಾಯಿಕುಮಾರ್, “ರಿಯಲ್ ಪೊಲೀಸ್’ ಚಿತ್ರದಲ್ಲಿ ಪಕ್ಕಾ ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಂಡಿದ್ದಾರೆ. ಅವರಿಲ್ಲಿ ಮಾನವೀಯತೆ
ಜತೆ ಪ್ರಾಮಾಣಿಕ ತೋರುವ ಪೊಲೀಸ್ ಅಧಿಕಾರಿ ಪಾತ್ರವಂತೆ. ಹಿರಿಯ ನಿರ್ದೇಶಕ ಸಾಯಿಪ್ರಕಾಶ್ ನಿರ್ದೇಶನದ 98 ನೇ ಸಿನಿಮಾವಿದು. ಇಲ್ಲಿ ಡ್ರಗ್ಸ್ಗೆ ಅಂಟಿಕೊಂಡಿರುವ ವಿದ್ಯಾರ್ಥಿ, ಜಿಹಾದ್ ಗೆ ಸೇರಿಸುವ ಕೆಟ್ಟ ಅಪ್ಪ, ಪೊಲೀಸರ ನಡುವಿನ
ಸಂಬಂಧ, ಪೊಲೀಸ್ ವ್ಯವಸ್ಥೆಯೊಳಗಿನ ಭ್ರಷ್ಟಾಚಾರ ಇತ್ಯಾದಿ ಮಿಶ್ರಣವೇ ಸಿನಿಮಾದ ಹೈಲೆಟ್.
ಪೊಲೀಸರಿಗೂ ಮಾನವೀಯತೆ ಇದೆ ಎಂಬುದೇ ಪ್ರಮುಖ ಅಂಶ. ಸಿನಿಮಾ ಇನ್ನೇನು ರಿಲೀಸ್ಗೆ ರೆಡಿಯಾಗಿದೆ. ಉಳಿದದ್ದನ್ನೆಲ್ಲಾ “ರಿಯಲ್ ಪೊಲೀಸ್’ನಲ್ಲಿ ಕಾಣಬಹುದು’ ಎಂದರು ನಿರ್ದೇಶಕರು. ಅಂದು ಮಾಜಿ ಪೊಲೀಸ್ ಅಧಿಕಾರಿ ಜ್ಯೋತಿಪ್ರಕಾಶ್ಮಿರ್ಜಿ ಅವರನ್ನು ಆಹ್ವಾನಿಸಿತ್ತು ಚಿತ್ರತಂಡ. “ರಿಯಲ್ ಪೊಲೀಸ್’ ಚಿತ್ರದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಮಿರ್ಜಿ, “ಕರ್ನಾಟಕದಲ್ಲಿ ಒಳ್ಳೇಯ ಪೊಲೀಸರಿದ್ದಾರೆ. ಉತ್ತಮ ರೀತಿ ಸೇವೆ ಸಲ್ಲಿಸುತ್ತಿದ್ದಾರೆ. ಸಿನಿಮಾಗಳಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳನ್ನು ಭ್ರಷ್ಟರಂತೆ ಬಿಂಬಿಸಲಾಗುತ್ತದೆ. ಆದರೆ, ರೀಲ್ನಲ್ಲಿರುವಂತೆ, ರಿಯಲ್ ಆಗಿ ಪೊಲೀಸರು ಇರುವುದಿಲ್ಲ’ ಎಂದರು ಮಿರ್ಜಿ. ನಿರ್ಮಾಪಕ ಸಾಧಿಕ್ವುಲ್ಲಾ ಖಾನ್ಗೆ “ರಿಯಲ್ ಪೊಲೀಸ್’ ಎಂಬ ಒಳ್ಳೆಯ ಸಿನಿಮಾ ಮಾಡಿರುವುದು ಖುಷಿಕೊಟ್ಟಿದೆಯಂತೆ. ಇಲ್ಲಿ ಪೊಲೀಸ್ ಇಲಾಖೆಯ ಕಾರ್ಯವೈಖರಿ ಹೇಗೆಲ್ಲಾ ಇರುತ್ತೆ, ಸಮಾಜದಲ್ಲಿ ಪೊಲೀಸರದು ಎಷ್ಟೊಂದು ಪ್ರಮುಖ ಪಾತ್ರವಿದೆ ಎಂಬುದನ್ನಿಲ್ಲಿ
ತೋರಿಸಲಾಗಿದೆ ಎಂದರು ಅವರು.
ಗಣೇಶ್ರಾವ್ ಇಲ್ಲಿ ನಾಯಕಿ ತಂದೆಯಾಗಿ ಕಾಣಿಸಿಕೊಂಡಿದ್ದಾರಂತೆ. ಕ್ಯಾಮೆರಾಮೆನ್ ಜೆ.ಜಿ.ಕೃಷ್ಣ ಅವರಿಗೆ ಚಿತ್ರೀಕರಣದಲ್ಲಿ
ಸಾಕಷ್ಟು ಹೊಸ ಅನುಭವಗಳಾಗಿವೆಯಂತೆ. ಸಾಯಿಕೃಷ್ಣ ಇದೇ ಮೊದಲ ಸಲ ತಂದೆಯ ನಿರ್ದೇಶನದಲ್ಲಿ ಭಯೋತ್ಪಾದಕನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರಂತೆ. ಸುಹಾಸ್, ಅಕ್ಷಿತಾ ಭೂಪಯ್ಯ, ಆನಂದ್, ರಾಜಗೋಪಾಲ್, ರಮೇಶ್ ಪಂಡಿತ್,
ಅರ್ಬಾಜ್, ಸಂಗೀತ ನಿರ್ದೇಶಕ ಬಲರಾಂ ಚಿತ್ರದ ಬಗ್ಗೆ ಮಾತಾಡಿದರು. ಮಾರ್ಚ್ 10 ರಂದು ಬಿಡುಗಡೆಯಾಗುತ್ತಿರುವ ಈ ಚಿತ್ರವನ್ನು ಗೋಕುಲ್ ರಾಜ್ ವಿತರಣೆ ಮಾಡುತ್ತಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Karnataka By Poll Results: ಮತಎಣಿಕೆ-ಚನ್ನಪಟ್ಟಣ, ಶಿಗ್ಗಾಂವಿ, ಸಂಡೂರು “ಕೈ” ಮುನ್ನಡೆ
By Election: ನಿಖಿಲ್ ವಿರುದ್ದ ಮುನ್ನಡೆ ಸಾಧಿಸಿದ ಯೋಗೇಶ್ವರ್; ಕುತೂಹಲದತ್ತ ಚನ್ನಪಟ್ಟಣ
Karkala: ಶಾಲಾ ವಾಹನಕ್ಕೆ ಢಿಕ್ಕಿ ಹೊಡೆದು ಬೈಕ್ ಸವಾರ ಸ್ಥಳದಲ್ಲೇ ಸಾವು
Zebra Movie Review: ಜೀಬ್ರಾ ಕ್ರಾಸ್ನಲ್ಲಿ ಕಣ್ಣಾ ಮುಚ್ಚಾಲೆ!
Wayanad: ಪ್ರಿಯಾಂಕಾ ಗಾಂಧಿ ‘ಕೈ’ ಹಿಡಿಯಲಿದ್ದಾರಾ ಮತದಾರರು… 85,000 ಮತಗಳಿಂದ ಮುನ್ನಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.