ಪೊರ್ಕಿ ಹುಚ್ಚ ವೆಂಕಟ್
Team Udayavani, Apr 28, 2017, 9:29 AM IST
ವೆಂಕಟ್ ನಿರ್ದೇಶಿಸಿ, ನಟಿಸಿರುವ “ಪೊರ್ಕಿ ಹುಚ್ಚ ವೆಂಕಟ್’ ಈ ವಾರ ಬಿಡುಗಡೆಯಾಗುತ್ತಿರುವ ಚಿತ್ರ. ಈಗಾಗಲೇ “ಹುಚ್ಚ ವೆಂಕಟ್’ ಎಂಬ ಚಿತ್ರ ಬಂದಿದೆಯಲ್ಲಾ ಎಂಬ ಪ್ರಶ್ನೆ ಬರಬಹುದು. ಆದರೆ, ವೆಂಕಟ್ ಅವರ ತಾಯಿ ಯಾವಾಗಲೂ ಅವರನ್ನು “ಪೊರ್ಕಿ’ ಎನ್ನುತ್ತಿದ್ದರಿಂದ, ಕಥೆ, ಚಿತ್ರಕಥೆ, ಸಂಭಾಷಣೆ, ಸಾಹಿತ್ಯ ಬರೆದು ಇನ್ನೊಂದು ಚಿತ್ರ ನಿರ್ದೇಶನ ಮಾಡಿದ್ದಾಗಿ ಹೇಳುತ್ತಾರೆ ವೆಂಕಟ್.
ವೆಂಕಟ್ ಸಾಮಾನ್ಯವಾಗಿ “ನನ್ ಮಗಂದ್… ನನ್ ಎಕ್ಕಡ …’ ಎಂದು ಹೇಳುತ್ತಲೇ ಇರುತ್ತಾರೆ. ಹೀಗೆ ಮಾತ್ ಮಾತಿಗೂ ಡೈಲಾಗ್ ಹೇಳಿ ಎಲ್ಲೆಡೆ ಜೋರು ಸುದ್ದಿಯಾಗಿದ್ದ ವೆಂಕಟ್, ಯಾಕೆ ಹಾಗೆ ಹೇಳುತ್ತಿದ್ದರು, ಹಾಗೆಲ್ಲ ವರ್ತಿಸುತ್ತಿದ್ದದ್ದು ಯಾಕೆ ಎಂಬುದಕ್ಕೆ ರಿಲೀಸ್
ಆಗುತ್ತಿರುವ ಅವರ “ಪೊರ್ಕಿ ಹುಚ್ಚ ವೆಂಕಟ್’ ಚಿತ್ರದಲ್ಲಿ ಉತ್ತರ ಕೊಟ್ಟಿದ್ದಾರಂತೆ. “ಪೊರ್ಕಿ ಹುಚ್ಚ ವೆಂಕಟ್’ ಚಿತ್ರ ನೋಡಿದವರೆಲ್ಲರಿಗೂ ಇಷ್ಟವಾಗುತ್ತೆ ಎಂಬ ವಿಶ್ವಾಸ ವೆಂಕಟ್ಗಿದೆ. ಈ ಚಿತ್ರಕ್ಕೆ ಚವ್ಹಾಣ್ ಕ್ಯಾಮೆರಾ ಹಿಡಿದಿದ್ದಾರೆ. ಅವರಿಗೆ ಇದು ವೆಂಕಟ್ ಜತೆ ಮೂರನೇ ಸಿನಿಮಾ. ಇನ್ನು, ಸತೀಶ್ ಬಾಬು ಈ ಚಿತ್ರಕ್ಕೆ ಸಂಗೀತ ಸಂಯೋಜಿಸಿದ್ದು, ವೆಂಕಟ್ ಸಹ ಒಂದು ಹಾಡು ಹಾಡಿದ್ದಾರೆ.
ಚಿತ್ರದಲ್ಲಿ ರಚನಾ ಮತ್ತು ಸೌಮ್ಯ ನಾಯಕಿಯರಾಗಿ ನಟಿಸಿದ್ದಾರೆ. ಉಳಿದಂತೆ ಜೈಜಗದೀಶ್, ಕೀರ್ತಿರಾಜ್, ರಮೇಶ್ ಭಟ್
ಇತರರು ಚಿತ್ರದಲ್ಲಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Assembly Election: ಮಹಾರಾಷ್ಟ್ರ ಗೆಲ್ಲಲು 10 ಗ್ಯಾರಂಟಿಗಳ ಕೊಟ್ಟ ʼಮಹಾಯುತಿʼ!
By Election: ಮುಖ್ಯಮಂತ್ರಿ ಗರ್ವದ ಸೊಕ್ಕು ಮುರಿಯಬೇಕು: ಎಚ್.ಡಿ.ದೇವೇಗೌಡ ಗುಡುಗು
Super App: ರೈಲು ಬುಕಿಂಗ್, ಟ್ರ್ಯಾಕ್ಗೆ ‘’ಸೂಪರ್ಆ್ಯಪ್’: ಮುಂದಿನ ತಿಂಗಳು ಬಿಡುಗಡೆ
Kambala: ಪೆಟಾ ಪಿಐಎಲ್; ವಿಚಾರಣೆ ನ.12ಕ್ಕೆ ಮುಂದೂಡಿದ ಹೈಕೋರ್ಟ್
MUDA Case: ಕೇವಲ 14 ಸೈಟ್ಗಾಗಿ ನಾನು ರಾಜಕಾರಣ ಮಾಡಬೇಕಾ?: ಸಿಎಂ ಸಿದ್ದರಾಮಯ್ಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.