ಪ್ರೇಮ ಪೂಜೆಯಲ್ಲಿ ಪ್ರೇಮ್
ನೆನಪಿರಲಿ, ಈ ಬಾರಿ ಬರ್ತ್‌ಡೇ ಆಚರಣೆ ಇಲ್ಲ
Team Udayavani, Apr 17, 2020, 10:34 AM IST
“ಇದು ನನ್ನ ವೃತ್ತಿ ಬದುಕಿನ ಅತೀ ಭರವಸೆಯ ಸಿನಿಮಾ…’ – ಹೀಗೆ ಹೇಳುತ್ತಾ ಹೋದರು ನಟ “ನೆನಪಿರಲಿ’ ಪ್ರೇಮ್. ಅವರು ಹೇಳಿಕೊಂಡಿದ್ದು, ಬಹು ನಿರೀಕ್ಷೆಯ “ಪ್ರೇಮಂ ಪೂಜ್ಯಂ’ ಚಿತ್ರದ ಬಗ್ಗೆ.
ಹೌದು. ಇದು ಅವರ ಅಭಿನಯದ 25ನೇ ಚಿತ್ರ. ಹೀಗಾಗಿ ಈ ಚಿತ್ರಅವರಲ್ಲಿ ಸಾಕಷ್ಟು ಭರವಸೆ ಮೂಡಿಸಿದೆ. ಅದಕ್ಕೆ ಕಾರಣ, ಚಿತ್ರದ ಕಥೆ ಹಾಗು ತಂಡ. ಸದ್ಯಕ್ಕೆ ಚಿತ್ರ ಬಹುತೇಕ ಮುಗಿಯುವ ಹಂತ ತಲುಪಿದೆ. ಇನ್ನು, ಫೈಟ್ ಹಾಗು ಹಾಡು ಸೇರಿ ಎಂಟು ದಿನಗಳ ಚಿತ್ರೀಕರಣಗೊಂಡರೆ ಚಿತ್ರ ಮುಗಿಯಲಿದೆ. ಈ ಕುರಿತು ಹೇಳಿಕೊಳ್ಳುವ ಪ್ರೇಮ್, “ಇದು ನನ್ನ ವೃತ್ತಿ ಬದುಕಿನ ದೊಡ್ಡ ಬಜೆಟ್‌ನ ಚಿತ್ರ. ಅಷ್ಟೇ ಅಲ್ಲ, 25ನೇ ಸಿನಿಮಾ ಆಗಿರುವು ದರಿಂದ ಸಾಕಷ್ಟು ನಿರೀಕ್ಷೆಯೂ ಇದೆ. ಒಂದೊಳ್ಳೆಯ ಕಥೆ, ಪಾತ್ರ ಇರುವುದರಿಂದ ಸಿನಿಮಾ ಎಲ್ಲಾ ವರ್ಗದವರಿಗೂ ಇಷ್ಟ ಆಗುತ್ತೆ ಎಂಬ ನಂಬಿಕೆ ಇದೆ ‘ ಎನ್ನುತ್ತಾರೆ ಪ್ರೇಮ್.
ಏಪ್ರಿಲ್ 18 ಪ್ರೇಮ್ ಅವರ ಹುಟ್ಟುಹಬ್ಬ. ಪ್ರತಿ ಬಾರಿಯೂ ತಮ್ಮ ಹುಟ್ಟುಹಬ್ಬನ್ನು ಅಭಿಮಾನಿಗಳ ಜೊತೆ ಆಚರಿಸಿಕೊಳ್ಳುತ್ತಿದ್ದ ಪ್ರೇಮ್, ಈ ಬಾರಿ ಬರ್ತ್‌ಡೇ ಆಚರಿಸಿಕೊಳ್ಳುತ್ತಿಲ್ಲ. ಅದಕ್ಕೆ ಕಾರಣ, ಕೋವಿಡ್ 19 . ಇದರಿಂದ ಸಾಮಾಜಿಕ ಅಂತರ ಕಾಪಾಡಿಕೊಳ್ಳ ಬೇಕಿದೆ. ಹಾಗಾಗಿ, ಫ್ಯಾನ್ಸ್ ದಯವಿಟ್ಟು ಮನೆಯ ಬಳಿ ಬರದೆ, ಸೋಶಿಯಲ್ ಮೀಡಿಯಾ ಮೂಲಕವೇ, ಫೋನ್ ಹಾಗು ಮೆಸೇಜ್ ಮಾಡುವ ಮೂಲಕ ನನಗೆ ಹುಟ್ಟುಹಬ್ಬ ಶುಭಾಶಯ ಕೋರಬೇಕು ಎಂದು ಮನವಿ ಮಾಡಿದ್ದಾರೆ. ಈ ಸಲ ಫ್ಯಾನ್ಸ್ ತಮ್ಮ ಮನೆಯಲ್ಲೇ ಇದ್ದು, ಅಲ್ಲಿಂದಲೇ ಶುಭಕೋರಬೇಕು. ಆರೋಗ್ಯಕರ ದೃಷ್ಟಿಯಿಂದಾಗಿ ನಾನು ಬರ್ತ್‌ಡೇ ಆಚರಿಸಿಕೊಳ್ಳುತ್ತಿಲ್ಲ. ಮನೆಯವರ ಜೊತೆಯೇ ಇದ್ದು, ಸಂಭ್ರಮದ ಕ್ಷಣ ಕಳೆಯುತ್ತೇನೆ ಎನ್ನುವ ಪ್ರೇಮ್, ಸದ್ಯಕ್ಕೆ ನಾನು “ಪ್ರೇಮಂ ಪೂಜ್ಯಂ’ ಸಿನಿಮಾ ಬಗ್ಗೆ ಹೆಚ್ಚು ಗಮನಹರಿಸಿದ್ದೇನೆ. ಎಲ್ಲವೂ ನನ್ನ ಮೇಲೆ ಜವಾಬ್ದಾರಿ ಇರುವುದರಿಂದ ಸಿನಿಮಾವನ್ನು ಚೆನ್ನಾಗಿ ಕಟ್ಟಿಕೊಡಬೇಕಿದೆ. ಆದ್ದರಿಂದ ಯಾವ ಕಥೆ ಕೇಳದೆ, ಇದೊಂದೇ ಸಿನಿಮಾಗೆ ಗಮನಹರಿಸಿದ್ದೇನೆ. ಈ ಚಿತ್ರ ಬಿಡುಗಡೆ ಬಳಿಕ ಬೇರೆ ಸಿನಿಮಾ ಬಗ್ಗೆ ಯೋಚಿಸುತ್ತೇನೆ ಎಂದು ವಿವರ ಕೊಡುತ್ತಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Review Meeting: ಉನ್ನತ ಶಿಕ್ಷಣಕ್ಕೆ ಬೋಧಕರ ಕೊರತೆ: ಸಿಎಂ ಸಿದ್ದರಾಮಯ್ಯ ಗರಂ
ನಕ್ಸಲರನ್ನು ಅಮಿತ್ ಶಾ ಸ್ವಾಗತಿಸಿದಾಗ ಏಕೆ ಬೆಚ್ಚಿ ಬಿದ್ದಿಲ್ಲ?: ಸಿಎಂ ತಿರುಗೇಟು
Naxal Package: “ಮೊದಲೇ ಪ್ಯಾಕೇಜ್ ನೀಡಿದ್ದರೆ ವಿಕ್ರಂಗೌಡ ಪ್ರಾಣ ಉಳಿಯುತ್ತಿತ್ತು’: ಸಹೋದರ
Belagavi: ಜೀವಂತ ವ್ಯಕ್ತಿ ಹೆಸರಿನಲ್ಲಿ ಮರಣ ಪ್ರಮಾಣ ಪತ್ರ ನೀಡಿದ ಅಧಿಕಾರಿಗಳು!
Udupi: ಗೀತಾರ್ಥ ಚಿಂತನೆ-150: ತಣ್ತೀನಿಶ್ಚಯ ಬಳಿಕವೇ ಧ್ಯಾನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.