![ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು](https://www.udayavani.com/wp-content/uploads/2025/02/9-21-415x249.jpg)
![ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು](https://www.udayavani.com/wp-content/uploads/2025/02/9-21-415x249.jpg)
Team Udayavani, Nov 27, 2020, 11:18 AM IST
ಸಿನಿಮಾರಂಗವೆಂದರೆ ಹಾಗೇ, ಅದು ಎಂಥವರನ್ನೂ ಕೂಡ ಒಮ್ಮೆಯಾದರೂ ತನ್ನತ್ತ ಸೆಳೆಯುತ್ತದೆ. ಪ್ರತಿದಿನ ಇಂಥ ಸೆಳೆತಕ್ಕೆ ಸಿಕ್ಕು, ಸಿನಿಮಾರಂಗಕ್ಕೆ ಬರುತ್ತಿರುವವರು ಅದೆಷ್ಟೋ ಮಂದಿ. ಹೀಗೆ ಬಂದ ಅಸಂಖ್ಯಾತರಲ್ಲಿ ಕೆಲವೇ ಕೆಲವರು ಈಜಿ ಜಯಿಸಿ, ತಮ್ಮದೇಯಾದ ಚಾಪು ಮೂಡಿಸುತ್ತಾರೆ. ಹೀಗೆ ಸಿನಿಮಾ ಸೆಳೆತಕ್ಕೆ ಸಿಕ್ಕ ಡಾಕ್ಟರ್ ಒಬ್ಬರು ಈಗ ಡೈರೆಕ್ಟರ್‌ಕ್ಯಾ ಪ್ ತೊಟ್ಟು ಸಿನಿಮಾರಂಗಕ್ಕೆ ಅಡಿಯಿಡುತ್ತಿದ್ದಾರೆ. ಅಂದಹಾಗೆ, ಅವರ ಹೆಸರು ಡಾ. ರಾಘವೇಂದ್ರ ಬಿ.ಎಸ್.
ವೃತ್ತಿಯಲ್ಲಿ ನ್ಯೂರಾಲಜಿಸ್ಟ್ ಆಗಿರುವ ಡಾ. ರಾಘವೇಂದ್ರ ಚಿಕ್ಕ ವಯಸ್ಸಿನಿಂದಲೇ ಸಿನಿಮಾದ ಕಡೆಗೆ ಆಸಕ್ತಿ ಬೆಳೆಸಿಕೊಂಡವರು. ತಮ್ಮ ವೈದ್ಯಕೀಯ ಶಿಕ್ಷಣ ಪೂರ್ಣಗೊಂಡ ಬಳಿಕ, ವೈದ್ಯಕೀಯ ವೃತ್ತಿಯಲ್ಲೇ ತೊಡಗಿಕೊಂಡ ಡಾ. ರಾಘವೇಂದ್ರ, ಜೊತೆ ಜೊತೆಗೆ ಸಿನಿಮಾ ರಂಗದಲ್ಲೂ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಲವ್ಲಿ ಸ್ಟಾರ್ ಪ್ರೇಮ್ ಅಭಿನಯದ “ಪ್ರೇಮಂ ಪೂಜ್ಯಂ’ ಚಿತ್ರವನ್ನು ನಿರ್ದೇಶಿಸಿ, ನಿರ್ದೇಶಕನಾಗಿ ಸ್ಯಾಂಡಲ್ ವುಡ್‌ನಲ್ಲಿ ಗುರುತಿಸಿಕೊಳ್ಳುತ್ತಿರುವ ಡಾ. ರಾಘವೇಂದ್ರ, ಆದಷ್ಟು ಬೇಗ ತಮ್ಮ ಚೊಚ್ಚಲ ಚಿತ್ರವನ್ನು ತೆರೆಗೆ ತರಲು ಅಣಿಯಾಗಿದ್ದಾರೆ.
ತಮ್ಮ ಮೊದಲ ನಿರ್ದೇಶನದ ಬಗ್ಗೆ ಮಾತನಾಡುವ ಡಾ. ರಾಘವೇಂದ್ರ, “ಸುಮಾರು ನಾಲ್ಕೈದು ವರ್ಷದ ಹಿಂದೆಯೇ ಈ ಸಬೆjಕ್ಟ್ ಮೇಲೆ ಸಿನಿಮಾ ಮಾಡುವ ಯೋಚನೆಯಿಂದ ಕೆಲಸ ಆರಂಭಿಸಿದ್ದೆ. ಲವ್ಲಿ ಸ್ಟಾರ್ ಪ್ರೇಮ್‌ಕೂಡ “ಪ್ರೇಮಂ ಪೂಜ್ಯಂ’ಕಥೆಕೇಳಿ ಇಷ್ಟಪಟ್ಟು ಈ ಸಿನಿಮಾ ಮಾಡಲು ಒಪ್ಪಿಕೊಂಡರು. ಅದರಂತೆ “ಪ್ರೇಮಂ ಪೂಜ್ಯಂ’ ಸಿನಿಮಾ ಕೂಡ ಶುರುವಾಯ್ತು.ಕನ್ನಡದ ಮಟ್ಟಿಗೆ ಇದೊಂದು ವಿಭಿನ್ನ ಪ್ರೇಮಕಥೆ ಇರುವ ಸಿನಿಮಾ. ಲವ್ಲಿ ಸ್ಟಾರ್ ಪ್ರೇಮ್ ಇಲ್ಲಿಯವರೆಗೂ ಕಾಣಿಸಿಕೊಳ್ಳದಂತಹ ಸುಮಾರು ಆರೇಳು ಡಿಫರೆಂಟ್ ಗೆಟಪ್‌ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ’ ಎನ್ನುತ್ತಾರೆ.
ಇದನ್ನೂ ಓದಿ :ಎಂಟು ತಿಂಗಳ ಬಳಿಕ ಒಂದೇ ದಿನ ಮೂರು ಸಿನಿಮಾ
“ಹೆಸರೇ ಹೇಳುವಂತೆ, “ಪ್ರೇಮಂ ಪೂಜ್ಯಂ’ ಪಕ್ಕಾ ರೊಮ್ಯಾಂಟಿಕ್-ಲವ್‌ಸ್ಟೋರಿ ಸಬೆjಕ್ಟ್ ಸಿನಿಮಾ. ಇಂದಿನ ಯೂಥ್ಸ್ಗೆ ಇಷ್ಟವಾಗುವಂಥ ಹತ್ತಾರು ವಿಷಯಗಳನ್ನು ಸಿನಿಮಾದಲ್ಲಿ ಹೇಳುತ್ತಿದ್ದೇವೆ. ನೋಡುಗರಿಗೆಕಂಪ್ಲೀಟ್ ಎಂಟಟರೈನ್ಮೆಂಟ್‌ಕೊಡುವಂಥ ಸಿನಿಮಾವಿದು. ಇದರಲ್ಲಿ ಬರೋಬ್ಬರಿ 13-14 ಹಾಡುಗಳಿವೆ. “ಪ್ರೇಮಲೋಕ’ ಸಿನಿಮಾದ ನಂತರ “ಪ್ರೇಮಂ ಪೂಜ್ಯಂ’ಕನ್ನಡದಲ್ಲಿ ಮತ್ತೂಂದು ಮ್ಯೂಸಿಕಲ್ ಹಿಟ್ ಸಿನಿಮಾ ಆಗುತ್ತದೆ’ ಎಂಬ ಭರವಸೆಯ ಮಾತುಗಳನ್ನಾಡುತ್ತಾರೆ ಡಾ. ರಾಘವೇಂದ್ರ.
“ನಮ್ಮ ಪ್ಲಾನ್ ಪ್ರಕಾರ ಇಷ್ಟೊತ್ತಿಗಾಗಲೇ “ಪ್ರೇಮಂ ಪೂಜ್ಯಂ’ ಚಿತ್ರ ತೆರೆಗೆ ಬರಬೇಕಿತ್ತು. ಆದ್ರೆಕೋವಿಡ್ ಲಾಕ್‌ಡೌನ್‌ನಿಂದಾಗಿ ಸಿನಿಮಾದ ಪೋಸ್ಟ್ ಪ್ರೊಡಕ್ಷನ್ಸ್‌ಕೆಲಸಗಳು ಸ್ವಲ್ಪ ತಡವಾಯ್ತು. ಹಾಗಾಗಿ ಸಿನಿಮಾ ರಿಲೀಸ್ ಆಗೋದುಕೂಡ ಸ್ವಲ್ಪ ತಡವಾಗುತ್ತಿದೆ’ ಎನ್ನುವ ನಿರ್ದೇಶಕ ಡಾ. ರಾಘವೇಂದ್ರ, “ಈಗಾಗಲೇ ಸಿನಿಮಾದ ಶೂಟಿಂಗ್ ಪೂರ್ಣಗೊಂಡಿದ್ದು, ಪೋಸ್ಟ್ ಪ್ರೊಡಕ್ಷನ್‌ಕೆಲಸಗಳು ಅಂತಿಮ ಹಂತದಲ್ಲಿದೆ. ಇದೇ ಡಿಸೆಂಬರ್‌ನಿಂದ “ಪ್ರೇಮಂ ಪೂಜ್ಯಂ’ ಪ್ರಮೋಶನ್ ಕೆಲಸಗಳಿಗೆ ಚಾಲನೆ ನೀಡಲಿದ್ದು, ಮುಂದಿನ ವರ್ಷದ ಫೆಬ್ರವರಿ ವೇಳೆಗೆ ಸಿನಿಮಾ ರಿಲೀಸ್ ಮಾಡುವ ಯೋಚನೆ ಇದೆ’ ಎನ್ನುತ್ತಾರೆ.
ಕರ್ನಾಟಕದ ಮಂಡ್ಯದಿಂದ ಹಿಡಿದು ಹಿಮಾಚಲ ಪ್ರದೇಶ, ವಿಯೇಟ್ನಾಂ ದೇಶದವರೆಗೂ ಹಲವುಕಡೆಗಳಲ್ಲಿ “ಪ್ರೇಮಂ ಪೂಜ್ಯಂ’ ಸಿನಿಮಾದ ಶೂಟಿಂಗ್ ಮಾಡಲಾಗಿದೆ. ನಟ ಲವ್ಲಿ ಸ್ಟಾರ್ ಪ್ರೇಮ್ ಅಭಿನಯದ 25 ನೇ ಚಿತ್ರ ಇದಾಗಿದ್ದು, ಚಿತ್ರದಲ್ಲಿ ಐಂದ್ರಿತಾ ರೇ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಚಿತ್ರಕ್ಕೆ ನವೀನ್ ಕುಮಾರ್ ಛಾಯಾಗ್ರಹಣ, ಹರೀಶ್‌ಕೊಮ್ಮೆ ಸಂಕಲನವಿದೆ. ಡಾ. ರಕ್ಷಿತ್‌ಕೆಡಂಬಾಡಿ, ಡಾ. ರಾಜಕುಮಾರ್ ಜಾನಕಿರಾಮನ್ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ.
ಹೊಸತರದ ಕಥೆಯನ್ನು ನಿರ್ದೇಶಕ ಡಾ. ರಾಘವೇಂದ್ರ, ತುಂಬಚೆನ್ನಾಗಿ ತೆರೆಮೇಲೆ ಹೇಳುತ್ತಿದ್ದಾರೆ. ನನ್ನವೃತ್ತಿ ಜೀವನದಲ್ಲಿ 25ನೇ ಸಿನಿಮಾವಾಗಿದ್ದು, ಸಾಕಷ್ಟು ನಿರೀಕ್ಷೆ ಇದೆ. ಕನ್ನಡದ ಪ್ರೇಕ್ಷಕರಿಗೆ ಇದೊಂದು ಹೊಸಥರದ ಅನುಭವ ಕೊಡುವ ಸಿನಿಮಾವಾಗಲಿದೆ ಎಂಬ ಭರವಸೆಯಿದೆ. -ನೆನಪಿರಲಿಪ್ರೇಮ್, ನಟ
ಪೂರ್ಣ ಮನರಂಜನೆ ಕೊಡುವಂಥ ಸಿನಿಮಾವಿದು. ಇದರಲ್ಲಿ ಬರೋಬ್ಬರಿ 13-14 ಹಾಡುಗಳಿವೆ. “ಪ್ರೇಮಲೋಕ’ ಸಿನಿಮಾದ ನಂತರ “ಪ್ರೇಮಂ ಪೂಜ್ಯಂ’ಕನ್ನಡದಲ್ಲಿ ಮತ್ತೂಂದು ಮ್ಯೂಸಿಕಲ್ ಹಿಟ್ ಸಿನಿಮಾ ಆಗುತ್ತದೆ ಎಂಬ ವಿಶ್ವಾಸವಿದೆ. – ಡಾ. ರಾಘವೇಂದ್ರ ಬಿ.ಎಸ್., ನಿರ್ದೇಶಕ
-ಜಿ. ಎಸ್. ಕಾರ್ತಿಕ ಸುಧನ್
Actor Darshan: ಪ್ರೇಮ್ – ದರ್ಶನ್ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್ ಪೋಸ್ಟರ್ ಔಟ್
Mallu Jamkhandi: ʼವಿದ್ಯಾ ಗಣೇಶʼ ನಂಬಿ ಬಂದವರು
Sandalwood: ʼನಾಗವಲ್ಲಿ ಬಂಗಲೆ’ಯಿಂದ ಹಾಡು ಬಂತು
ದಾಂಪತ್ಯ ಜೀವನಕ್ಕೆ ಕಾಲಿಟ್ಟ ಧನಂಜಯ – ಧನ್ಯತಾ: ಮದುವೆ ಬಳಿಕ ನವ ಜೋಡಿ ಹೇಳಿದ್ದೇನು?
Devil Teaser: ಚಾಲೆಂಜ್.. ಹೂಂ.. ಟೀಸರ್‌ನಲ್ಲೇ ʼಡೆವಿಲ್’ ಲುಕ್ ಕೊಟ್ಟ ʼದಾಸʼ
Politics: ಸಿದ್ದರಾಮಯ್ಯ 5 ವರ್ಷವೂ ಸಿಎಂ: ಕೊತ್ತೂರು ಮಂಜುನಾಥ್
ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು
Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್
You seem to have an Ad Blocker on.
To continue reading, please turn it off or whitelist Udayavani.