ಅಧ್ಯಕ್ಷೀಯ ಭಾಷಣ
ಶರಣ್ ಹೊಸ ನಿರೀಕ್ಷೆ ...
Team Udayavani, Jun 28, 2019, 5:00 AM IST
ಯೋಗಾನಂದ ಮುದ್ದಾನ್ ಧರ್ಮಸ್ಥಳದಲ್ಲಿ ಮಂಜುನಾಥ ಸ್ವಾಮಿಯ ದರ್ಶನಕ್ಕಾಗಿ ನಿಂತಿದ್ದಾಗ, ಅವರಿಗೊಂದು ಫೋನ್ ಬಂತಂತೆ. ಫೋನ್ ಮಾಡಿದ ವ್ಯಕ್ತಿ “ಈ ಸಿನಿಮಾವನ್ನು ನೀವೇ ನಿರ್ದೇಶನ ಮಾಡಿ’ ಎಂದರಂತೆ. ಯೋಗಾನಂದ್ ಮುಖದಲ್ಲಿ ನಗು. ದೇವರ ಆಶೀರ್ವಾದ ಪಡೆದು ಬೆಂಗಳೂರಿಗೆ ಬಂದ ಯೋಗಾನಂದ್, ಆ ಸಿನಿಮಾವನ್ನು ಕೈಗೆತ್ತಿಕೊಳ್ಳುತ್ತಾರೆ. ಈಗ ಆ ಚಿತ್ರ ಬಿಡುಗಡೆಯ ಹಂತಕ್ಕೆ ಬಂದಿದೆ. ಹೀಗೆ ಯೋಗಾನಂದ್ ನಿರ್ದೇಶಿಸಿದ ಚಿತ್ರ “ಅಧ್ಯಕ್ಷ ಇನ್ ಅಮೆರಿಕ’. ಅಷ್ಟಕ್ಕೂ ಯಾರು ಈ ಯೋಗಾನಂದ್ ಎಂದು ನೀವು ಕೇಳಬಹುದು. ಇಲ್ಲಿವರೆಗೆ ಅನೇಕ ಕಮರ್ಷಿಯಲ್ ಸಿನಿಮಾಗಳಿಗೆ ಸಂಭಾಷಣೆ ಜೊತೆಗೆ ಸಹ ನಿರ್ದೇಶಕರಾಗಿ ಕೆಲಸ ಮಾಡಿರುವವರು ಯೋಗಾನಂದ್. ಈಗ “ಅಧ್ಯಕ್ಷ ಇನ್ ಅಮೆರಿಕ’ ಮೂಲಕ ನಿರ್ದೇಶಕರಾಗಿದ್ದಾರೆ.
“ಅಧ್ಯಕ್ಷ’ ಎಂಬ ಪದ ಕೇಳಿದ ಕೂಡಲೇ ನಿಮಗೊಂದು ಹೆಸರು ಖಂಡಿತಾ ನೆನಪಿಗೆ ಬರುತ್ತದೆ. ಅದು ನಟ ಶರಣ್ ಅವರದು. ಶರಣ್‌ಗೆ “ಅಧ್ಯಕ್ಷ’ ಚಿತ್ರ ದೊಡ್ಡ ಯಶಸ್ಸು ತಂದುಕೊಟ್ಟಿದ್ದು ನಿಮಗೆ ಗೊತ್ತೇ ಇದೆ. ಈಗ “ಅಧ್ಯಕ್ಷ ಇನ್ ಅಮೆರಿಕ’ ಚಿತ್ರದಲ್ಲೂ ಶರಣ್ ನಾಯಕರಾಗಿ ನಟಿಸಿದ್ದಾರೆ. ಇವರಿಗೆ ಜೋಡಿಯಾಗಿ ರಾಗಿಣಿ ಕಾಣಿಸಿಕೊಂಡಿದ್ದಾರೆ. ಅಂದಹಾಗೆ, ಇದು ಮಲಯಾಳಂನ “ಟು ಸ್ಟೇಟ್ಸ್’ ಚಿತ್ರದಿಂದ ಸ್ಫೂರ್ತಿ ಪಡೆದ ಚಿತ್ರ. ಹಾಗಂತ ನಿರ್ದೇಶಕ ಯೋಗಾನಂದ್ ಯಥಾವತ್ ಅದನ್ನೇ ಭಟ್ಟಿ ಇಳಿಸಿಲ್ಲವಂತೆ. ಮೂಲ ಅಂಶವನ್ನಿಟ್ಟುಕೊಂಡು ಉಳಿದಂತೆ ಶರಣ್ ಮ್ಯಾನರಿಸಂಗೆ ತಕ್ಕಂತೆ ಬದಲಿಸಲಾಗಿದೆಯಂತೆ. ಹೆಸರಿಗೆ ತಕ್ಕಂತೆ ಚಿತ್ರದ ಶೇ. 70ರಷ್ಟು ಭಾಗವನ್ನು ಅಮೆರಿಕದ ಸಿಯಾಟಲ್ ಎಂಬ ಜಾಗದಲ್ಲಿ ಚಿತ್ರೀಕರಿಸಲಾಗಿದೆ. ಚಿತ್ರದ ಮೂರು ಹಾಡುಗಳನ್ನು ಕೂಡಾ ಅಲ್ಲಿನ ಸುಂದರ ತಾಣಗಳಲ್ಲಿ ಚಿತ್ರೀಕರಿಸಲಾಗಿದೆ. ಅಧ್ಯಕ್ಷ ಆದ ನಂತರ ಅಮೆರಿಕಾಕ್ಕೆ ಹೋಗಿ ಏನು ಮಾಡುತ್ತಾನೆಂಬ ಅಂಶದೊಂದಿಗೆ ಸಿನಿಮಾ ಸಾಗುತ್ತದೆ ಎನ್ನುವುದು ಯೋಗಾನಂದ್ ಮಾತು.
ನಾಯಕ ಶರಣ್ ಖುಷಿಯಾಗಿದ್ದಾರೆ. ಅದಕ್ಕೆ ಕಾರಣ ಸಿನಿಮಾ ಮೂಡಿಬಂದಿರುವ ರೀತಿ. “ಇದು ದೊಡ್ಡ ಬಜೆಟ್‌ನ ಚಿತ್ರ. ನಿರ್ಮಾಪಕರು ಯಾವುದಕ್ಕೂ ಕೊರತೆ ಮಾಡದೇ ಚಿತ್ರದ ಟೈಟಲ್‌ಗೆ ತಕ್ಕಂತೆ ಸಿನಿಮಾ ಮಾಡಿದ್ದಾರೆ. ಇಲ್ಲಿ ಶರಣ್ ಇಷ್ಟಪಡುವವರಿಗೆ ಬೇಕಾದ ಎಲ್ಲಾ ಅಂಶಗಳು ಇವೆ. ನಿರ್ದೇಶಕ ಯೋಗಾನಂದ್ ಬರಹಗಾರರಾಗಿರುವುದರಿಂದ ಒಳ್ಳೆಯ ಸಂಭಾಷಣೆ ಇದೆ’ ಎಂಬುದು ಶರಣ್ ಮಾತು. ಚಿತ್ರದಲ್ಲಿ ರಾಗಿಣಿ ಎನ್‌ಆರ್‌ಐ ಆಗಿ ಕಾಣಿಸಿಕೊಂಡಿದ್ದಾರೆ. ಸಖತ್ ಬೋಲ್ಡ್ ಅಂಡ್ ಗ್ಲಾಮರಸ್ ಪಾತ್ರ ಸಿಕ್ಕಿದೆಯಂತೆ. ಸಾಮಾನ್ಯವಾಗಿ ಶರಣ್ ಸಿನಿಮಾಗಳಿಗೆ ಅರ್ಜುನ್ ಜನ್ಯಾ ಸಂಗೀತವಿರುತ್ತದೆ. ಆದರೆ, ಈ ಬಾರಿ “ಅಧ್ಯಕ್ಷ ಇನ್ ಅಮೆರಿಕ’ ಚಿತ್ರಕ್ಕೆ ವಿ.ಹರಿಕೃಷ್ಣ ಸಂಗೀತ ನೀಡಿದ್ದಾರೆ. ಚಿತ್ರವನ್ನು ಪೀಪಲ್ ಮೀಡಿಯಾ ಫ್ಯಾಕ್ಟರಿ ನಿರ್ಮಿಸಿದ್ದು, ಶೈಲೇಂದ್ರ ಬಾಬು ವಿತರಣೆಯ ಹಕ್ಕು ಪಡೆದಿದ್ದಾರೆ. ಮುಂದಿನ ತಿಂಗಳು ಚಿತ್ರ ಬಿಡುಗಡೆಯಾಗುವ ಸಾಧ್ಯತೆ ಇದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sandalwood: ಸ್ಟಾರ್ ಸಿನಿಮಾ ಹೆಚ್ಚು ಬಂದರೆ ಚಿತ್ರರಂಗಕ್ಕೆ ಪೂರಕ: ಎನ್. ನರಸಿಂಹಲು
Dhruva-Prem: ಡಿ.24ಕ್ಕೆ ʼಕೆಡಿʼ ಶಿವ ಶಿವ ಹಾಡು ರಿಲೀಸ್
Dhruva Sarja: ಪ್ರತಿ ಸಿನಿಮಾವೂ ನನಗೆ ಹೊಸ ಪಾಠ…: ಧ್ರುವ ಹೇಳಿದ್ದೇನು
Kiccha Sudeepa; ತಾಯಿಯನ್ನು ಉಳಿಸಿಕೊಳ್ಳಲಾಗದ ಆ ಕ್ಷಣ ನಾನು ಯೂಸ್‌ಲೆಸ್ ಅನಿಸಿತು…
UI Movie: 9 ವರ್ಷ ಬಳಿಕ ಉಪ್ಪಿ ಡೈರೆಕ್ಟ್ ಮಾಡಿದ ಯು-ಐ ಸಿನಿಮಾದ ಹೈಲೈಟ್ಸ್ ಏನು?
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Belthangady: ಬೈಕ್ ಸವಾರ ಸಾವು ಪ್ರಕರಣ; ಸರಕಾರಿ ಬಸ್ ಚಾಲಕನಿಗೆ ಶಿಕ್ಷೆ;ದಂಡ
Egg Thrown: ಶಾಸಕ ಮುನಿರತ್ನ ಮೇಲೆ ಮೊಟ್ಟೆ ಎಸೆತ: ಬಿಜೆಪಿ ನಾಯಕರು ಗರಂ
New Products KMF: ಮಾರುಕಟ್ಟೆಗೆ ಬಂತು “ನಂದಿನಿ’ ಇಡ್ಲಿ, ದೋಸೆ ಹಿಟ್ಟು
GST: ಖರೀದಿ, ಮಾರಾಟ ದರದ ವ್ಯತ್ಯಾಸಕ್ಕಷ್ಟೇ 18% ಜಿಎಸ್‌ಟಿ
Pro Kabaddi League-11: ಇಂದು ಎಲಿಮಿನೇಟರ್ ಸ್ಪರ್ಧೆ ಸೋತವರು ಮನೆಗೆ, ಗೆದ್ದವರು ಸೆಮಿಗೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.