ಕೃಷಿ ಚಟುವಟಿಕೆಯತ್ತ ಪ್ರಿಯಾ ಚಿತ್ತ
Team Udayavani, Apr 3, 2020, 2:43 PM IST
ಕೋವಿಡ್ 19 ಎಫೆಕ್ಟ್ ನಿಂದಾಗಿ ಒಂದೆಡೆ ಚಿತ್ರರಂಗವೇ ಸ್ಥಬ್ಧಗೊಂಡಿದೆ. ಇನ್ನೊಂದೆಡೆ ಬಹುತೇಕ ಚಿತ್ರೀಕರಣದ ಚಟುವಟಿಕೆಗಳೇ ಸ್ಥಗಿತಗೊಂಡಿದೆ. ಸ್ಟಾರ್ ನಟ,ನಟಿಯರೆಲ್ಲರೂ ಮನೆ ಸೇರಿದ್ದಾರೆ. ಮಕ್ಕಳೊಂದಿಗೆ, ಕುಟುಂಬದೊಂದಿಗೆ ಆಟವಾಡುತ್ತ, ಸಿನಿಮಾಗಳನ್ನು ವೀಕ್ಷಿಸುತ್ತ ಕಾಲ ಕಳೆಯುತ್ತಿದ್ದಾರೆ. ಅಂತೆಯೇ ಕೆಲ ಕಲಾವಿದರು ಕೃಷಿಚಟುವಟಿಕೆಯಲ್ಲೂ ನಿರತರಾಗಿದ್ದಾರೆ.
ಈಗಾಗಲೇ ಕಿಶೋರ್ ಅವರು ಕೃಷಿಯಲ್ಲಿ ನಿರತರಾಗಿರುವುದು ಗೊತ್ತೇ ಇದೆ. ಬಿಡುವಿನ ಸಮಯದಲ್ಲಿ ಅವರು ಕೃಷಿಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವ ಮೂಲಕ ಪಕ್ಕಾ ರೈತರಾಗುವುದನ್ನು ಎಲ್ಲರೂ ನೋಡಿದ್ದಾರೆ.
ಈಗ ನಟಿ ಪ್ರಿಯಾ ಹಾಸನ್ ಅವರ ಸರದಿ. ಹೌದು, ಪ್ರಿಯಾ ಹಾಸನ್ ಅಂದಾಕ್ಷಣ ನೆನಪಾಗೋದೇ “ಜಂಭದ ಹುಡುಗಿ ‘ ಸಿನಿಮಾ. ಆ ಸಿನಿಮಾ ಮೂಲಕ ಚಿತ್ರರಸಿಕರ ಮನಗೆದ್ದ ಪ್ರಿಯಾ ಹಾಸನ್, ಒಂದಷ್ಟು ಸಾಹಸಮಯ ಸಿನಿಮಾಗಳ ಮೂಲಕ ಎಲ್ಲರಿಗೂ ಪ್ರಿಯವಾದರು. ನಟನೆ, ನಿರ್ದೇಶನ, ನಿರ್ಮಾಣ ಈ ಮೂರು ವಿಭಾಗದಲ್ಲೂ ತಮ್ಮನ್ನು ತೊಡಗಿಸಿಕೊಂಡಿದ್ದ ಪ್ರಿಯಾಹಾಸನ್, ಮದುವೆ ನಂತರ ಚಿತ್ರರಂಗದದಿಂದ ತುಸು ದೂರ ಇದ್ದರು. ಹಾಗಂತ, ಸಿನಿಮಾ ಪ್ರೀತಿಯನ್ನು ಬಿಡಲಿಲ್ಲ. ಕುಟುಂಬದೊಂದಿಗೆ ಸ್ವಲ್ಪ ಹೊತ್ತು ಕಾಲ ಕಳೆದ ಅವರು, ಸಿನಿಮಾ ಗ್ಯಾಪ್ ನಡುವೆ ಕೃಷಿಯತ್ತ ತಮ್ಮ ಚಿತ್ತ ಹರಿಸಿದ್ದಾರೆ.
ಅದರಲ್ಲೂ ಈಗ ಸಿನಿಮಾಗೆ ಬರಲು ಸಿದ್ಧವಾಗಿರುವ ಪ್ರಿಯಾಹಾಸನ್, ಇನ್ನೇನು ಕೋವಿಡ್ 19 ಸಮಸ್ಯೆ ಬಗೆಹರಿಯುತ್ತಿದ್ದಂತೆಯೇ ಅವರು, ಸಿನಿಮಾಗೆ ಕೈ ಹಾಕಲಿದ್ದಾರೆ. ಈಗಾಗಲೇ ಅದಕ್ಕೆ ತಯಾರಿಯೂ ನಡೆದಿದೆ. ಸಿನಿಮಾ ಜೊತೆಯಲ್ಲೇ ಅವರೀಗ ತಮ್ಮ ಹೊಲದತ್ತ ಚಿತ್ತ ಹರಿಸಿದ್ದಾರೆ. ಹೊಲದಲ್ಲಿ ಬೆಳೆದ ಬೆಳೆಯನ್ನು ನೋಡಿಕೊಳ್ಳುವ ಮೂಲಕ ನೀರು ಹರಿಬಿಡುವುದು, ಹೊಲದಲ್ಲೇ ಕಟ್ಟಿರುವ ಹಸು ಹಾಲು ಕರೆಯುವ ಕೆಲಸ ಮಾಡುವ ಮೂಲಕ ಸಮಯ ದೂಡುತ್ತಿದ್ದಾರೆ.
ಅಂದಹಾಗೆ, ಕೋವಿಡ್ 19 ಸಮಸ್ಯೆ ಬಗೆಹರಿಯುತ್ತಿದ್ದಂತೆಯೇ ಅವರು, ಹೊಸ ಸಿನಿಮಾ ಮೂಲಕ ಪ್ರೇಕ್ಷಕರ ಮುಂದೆ ಬರಲು ಸಜ್ಜಾಗುತ್ತಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Arrested: ಬಿಹಾರದ ಬೆಡ್‌ಶೀಟ್ ಗ್ಯಾಂಗ್‌ನ 8 ಮಂದಿ ಸೆರೆ
Crime Follow Up: ಅಸ್ಸಾಂ ಯುವತಿ ಹತ್ಯೆ ಕೇಸ್; ಆರೋಪಿ ಸೆರೆಗೆ 3 ತಂಡ ರಚನೆ
Bomb Threat: ಹೋಟೆಲ್, ಶಾಲೆ ಆಯ್ತು, ಈಗ ಬ್ಯಾಂಕ್‌ಗೆ ಬಾಂಬ್ ಬೆದರಿಕೆ ಇ-ಮೇಲ್ ಸಂದೇಶ
ಇಸ್ಪೀಟ್ ಅಡ್ಡೆಯ ಮೇಲೆ ಡಿವೈಎಸ್ಪಿ ದಾಳಿ; ಮಾಜಿ ಅಧ್ಯಕ್ಷ-ಹಾಲಿ ಉಪಾಧ್ಯಕ್ಷ ಸೇರಿ 8 ಜನರ ಬಂಧನ
Anthyarambha: ನ.28ರಂದು ಕೊಂಕಣಿ ಚಲನಚಿತ್ರ “ಅಂತ್ಯಾರಂಭ’ ಪ್ರದರ್ಶನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.