ಡಾ. ಅಮೃತ ಸ್ಪೀಕಿಂಗ್
ಪ್ರಿಯಾಮಣಿ ಪ್ರಕಾರ...
Team Udayavani, Aug 23, 2019, 5:38 AM IST
‘ನನ್ನ ಪ್ರಕಾರ’ ಚಿತ್ರದ ಟ್ರೇಲರ್‌ಗೆ ಮೆಚ್ಚುಗೆ ವ್ಯಕ್ತವಾಗುವ ಮೂಲಕ ಪ್ರಿಯಾಮಣಿಗೆ ‘ನನ್ನ ಪ್ರಕಾರ’ ಚಿತ್ರದ ಮೇಲಿನ ವಿಶ್ವಾಸ ಹೆಚ್ಚಿದೆ. ‘ಇದು ಔಟ್ ಅಂಟ್ ಔಟ್ ಕ್ರೈಮ್ ಥ್ರಿಲ್ಲರ್ ಸಿನಿಮಾ. ತುಂಬಾ ಕುತೂಹಲದೊಂದಿಗೆ ಸಾಗುತ್ತದೆ. ನಿರ್ದೇಶಕ ವಿನಯ್ ಬಾಲಾಜಿ ಮಾಡಿಕೊಂಡಿರುವ ಸ್ಕ್ರೀನ್‌ಪ್ಲೇ ತುಂಬಾ ಹೊಸದಾಗಿದೆ. ಮೊದಲ ಬಾರಿಗೆ ನಿರ್ದೇಶನ ಮಾಡಿದ್ದಾರೆಂದು ಅನಿಸೋದಿಲ್ಲ. ಡಾ.ಅಮೃತಾ ಪಾತ್ರಕ್ಕೆ ನಾನೇ ಬೇಕೆಂದುಕೊಂಡು ನನ್ನಿಂದಲೇ ಮಾಡಿಸಿದ್ದಾರೆ. ಪಾತ್ರಕ್ಕೆ ನ್ಯಾಯ ಒದಗಿಸಿದ್ದೇನೆಂಬ ವಿಶ್ವಾಸ, ಖುಷಿ ಇದೆ’ ಎನ್ನುತ್ತಾರೆ ಪ್ರಿಯಾಮಣಿ.
ಚಿತ್ರ ರಂಗದಲ್ಲಿ ಸ್ಟಾರ್‌ನಟಿಯಾಗಿ ಮೆರೆದು ಆ ನಂತರ ಮದುವೆಯಾಗಿ, ಒಂದು ಗ್ಯಾಪ್‌ನ ಬಳಿಕ ಮತ್ತೆ ಬಣ್ಣ ಹಚ್ಚುವ ನಟಿಯರಿಗೊಂದು ಕುತೂಹಲವಿರುತ್ತದೆ. ಮದುವೆಗೆ ಮುಂಚೆ ತಮ್ಮನ್ನು, ತಮ್ಮ ಪಾತ್ರವನ್ನು ಇಷ್ಟಪಟ್ಟು, ಪ್ರೋತ್ಸಾಹಿಸಿದ ಅಭಿಮಾನಿಗಳು ಮದುವೆ ನಂತರ ಹೇಗೆ ಸ್ವೀಕರಿಸುತ್ತಾರೆಂದು. ಈಗ ಅದೇ ಕುತೂಹಲ ಪ್ರಿಯಾಮಣಿಯವರಲ್ಲೂ ಇದೆ. ಕನ್ನಡ ಸೇರಿದಂತೆ ಪರಭಾಷೆಯಲ್ಲೂ ಬೇಡಿಕೆಯ ನಟಿಯಾಗಿ ಮಿಂಚಿದ ಪ್ರಿಯಾಮಣಿ, ಮದುವೆ ಬಳಿಕ ಸ್ವಲ್ಪ ದಿನ ನಟನೆಗೆ ಬ್ರೇಕ್ ತಗೊಂಡಿದ್ದರು. ಆದರೆ, ಅವರಿಗೆ ಬರುತ್ತಿರುವ ಅವಕಾಶಗಳೇನೂ ಕಡಿಮೆಯಾಗಿರಲಿಲ್ಲ. ಬ್ರೇಕ್‌ನ ಬ್ರೇಕ್ ಮಾಡಿದ ನಂತರ ಪ್ರಿಯಾಮಣಿ ಒಪ್ಪಿದ ಮೊದಲ ಸಿನಿಮಾ ‘ನನ್ನ ಪ್ರಕಾರ’. ಈಗ ಈ ಚಿತ್ರದ ಮೇಲೆ ಪ್ರಿಯಾಮಣಿ ನಿರೀಕ್ಷೆ ಇಟ್ಟಿದ್ದಾರೆ. ‘ನನ್ನ ಪ್ರಕಾರ’ ಇಂದು ತೆರೆಕಾಣುತ್ತಿದೆ. ಈ ಚಿತ್ರದ ವಿಶೇಷವೆಂದರೆ ಮದುವೆಯಾದ ಬಳಿಕ ಪ್ರಿಯಾಮಣಿ ಒಪ್ಪಿದ ಹಾಗೂ ಬಿಡುಗಡೆಯಾಗುತ್ತಿರುವ ಮೊದಲ ಸಿನಿಮಾ. ಇಂದು ಪ್ರಿಯಾಮಣಿ ಅವರ ವೆಡ್ಡಿಂಗ್ ಆ್ಯನಿವರ್ಸರಿ. ಈ ದಿನವೇ ‘ನನ್ನ ಪ್ರಕಾರ’ ಚಿತ್ರ ಬಿಡುಗಡೆಯಾಗುತ್ತಿರುವುದರಿಂದ ಪ್ರಿಯಾಮಣಿ ಖುಷಿಯಾಗಿದ್ದಾರೆ.
‘ನನ್ನ ಪ್ರಕಾರ’ ಚಿತ್ರದಲ್ಲಿ ಪ್ರಿಯಾಮಣಿ ಅಮೃತಾ ಎಂಬ ಡಾಕ್ಟರ್ ಪಾತ್ರ ಮಾಡಿದ್ದಾರೆ. ಪ್ರಿಯಾಮಣಿಯವರ ಸಿನಿ ಕೆರಿಯರ್‌ನಲ್ಲೇ ಡಾಕ್ಟರ್ ಪಾತ್ರ ಇದೇ ಮೊದಲು. ಹೊಸ ಪಾತ್ರ ಮಾಡಿರುವ ಪ್ರಿಯಾಮಣಿ ತಮ್ಮ ಚಿತ್ರದ ಬಗ್ಗೆ ಹೇಳುವುದಿಷ್ಟು, ‘ಮದುವೆ ಬಳಿಕ ನಾನು ಒಪ್ಪಿಕೊಂಡ ಹಾಗೂ ರಿಲೀಸ್ ಆಗುತ್ತಿರುವ ಮೊದಲ ಸಿನಿಮಾ ‘ನನ್ನ ಪ್ರಕಾರ’. ನಾನಿಲ್ಲಿ ಅಮೃತಾ ಎಂಬ ಪಾತ್ರ ಮಾಡಿದ್ದೇನೆ. ನನಗೆ ಈ ಪಾತ್ರ ತುಂಬಾ ಹೊಸದು. ಅನೇಕರಿಗೆ ಚಿಕ್ಕಂದಿನಲ್ಲಿ ಡಾಕ್ಟರ್ ಆಗಬೇಕೆಂಬ ಆಸೆ ಇರುತ್ತದೆ. ಆದರೆ, ನನಗೆ ಆ ತರಹದ ಯಾವ ಆಸೆಯೂ ಇರಲಿಲ್ಲ. ಈಗ ತೆರೆಮೇಲೆ ವೈದ್ಯೆಯಾಗಿದ್ದೇನೆ. ಹಾಗಂತ ರೆಗ್ಯುಲರ್ ಆದ ಪಾತ್ರವಲ್ಲ. ಈ ಪಾತ್ರಕ್ಕಾಗಿ ಒಂದಷ್ಟು ಪೂರ್ವತಯಾರಿ ಮಾಡಿದ್ದೇನೆ. ಪ್ರೊಫೆಶನಲ್ ಡಾಕ್ಟರ್‌ಗಳು ಹೇಗಿರುತ್ತಾರೋ, ಅದೇ ರೀತಿ ಈ ಪಾತ್ರ ಮೂಡಿಬಂದಿದೆ. ಸಾಮಾನ್ಯವಾಗಿ ಯಾವುದೇ ಒಂದು ಪಾತ್ರವಾದರೂ, ಅದಕ್ಕೇ ಆದ ಒಂದು ಸಿನಿಮಾ ಲಿಬರ್ಟಿ ಇರುತ್ತದೆ. ಆದರೆ, ನಾನಿಲ್ಲಿ ಆ ಲಿಬರ್ಟಿಯನ್ನು ಬಳಸಿಕೊಂಡಿಲ್ಲ. ತುಂಬಾ ಸೀರಿಯಸ್ ಆದ ಪಾತ್ರ. ನಮ್ಮ ಅಂಕಲ್-ಆಂಟಿ ಡಾಕ್ಟರ್. ಹಾಗಾಗಿ, ಚಿಕ್ಕವಯಸ್ಸಿನಿಂದಲೇ ಅವರನ್ನು ಗಮನಿಸುತ್ತಿದ್ದೆ. ಈ ಪಾತ್ರಕ್ಕಾಗಿ ಹೊಸ ಮ್ಯಾನರಿಸಂ ಅನ್ನು ಮೈಗೂಢಿಸಿಕೊಳ್ಳಬೇಕಾಯಿತು’ ಎಂದು ತಮ್ಮ ಪಾತ್ರದ ಬಗ್ಗೆ ಮಾತನಾಡುತ್ತಾರೆ.
ಈಗಾಗಲೇ ಬಿಡುಗಡೆಯಾಗಿರುವ ಚಿತ್ರದ ಟ್ರೇಲರ್‌ಗೆ ಮೆಚ್ಚುಗೆ ವ್ಯಕ್ತವಾಗುವ ಮೂಲಕ ಪ್ರಿಯಾಮಣಿಗೆ ‘ನನ್ನ ಪ್ರಕಾರ’ ಚಿತ್ರದ ಮೇಲಿನ ವಿಶ್ವಾಸ ಹೆಚ್ಚಿದೆ. ‘ಇದು ಔಟ್ ಅಂಡ್ ಔಟ್ ಕ್ರೈಮ್ ಥ್ರಿಲ್ಲರ್ ಸಿನಿಮಾ. ತುಂಬಾ ಕುತೂಹಲದೊಂದಿಗೆ ಸಾಗುತ್ತದೆ. ನಿರ್ದೇಶಕ ವಿನಯ್ ಬಾಲಾಜಿ ಮಾಡಿಕೊಂಡಿರುವ ಸ್ಕ್ರೀನ್‌ಪ್ಲೇ ತುಂಬಾ ಹೊಸದಾಗಿದೆ. ಮೊದಲ ಬಾರಿಗೆ ನಿರ್ದೇಶನ ಮಾಡಿದ್ದಾರೆಂದು ಅನಿಸೋದಿಲ್ಲ. ಡಾ.ಅಮೃತಾ ಪಾತ್ರಕ್ಕೆ ನಾನೇ ಬೇಕೆಂದುಕೊಂಡು ನನ್ನಿಂದಲೇ ಮಾಡಿಸಿದ್ದಾರೆ. ಪಾತ್ರಕ್ಕೆ ನ್ಯಾಯ ಒದಗಿಸಿದ್ದೇನೆಂಬ ವಿಶ್ವಾಸ, ಖುಷಿ ಇದೆ’ ಎನ್ನುತ್ತಾರೆ ಪ್ರಿಯಾಮಣಿ.
ಮದುವೆಯಾದ ಬಳಿಕ ಬಹುತೇಕ ನಟಿಯರ ಸಿನಿಮಾ ಆಯ್ಕೆ ಬದಲಾಗುತ್ತದೆ. ಹಾಗಾದರೆ ಪ್ರಿಯಾಮಣಿ ಯಾವ ವಿಚಾರದಲ್ಲಿ ಬದಲಾಗಿದ್ದಾರೆಂದರೆ, ಸ್ಟೇಟಸ್ ಅಷ್ಟೇ ಬದಲಾಗಿದೆ ಎನ್ನುತ್ತಾರೆ. ‘ನಾನು ಕಲಾವಿದೆಯಾಗಿ ಅದೇ ಪ್ರಿಯಾಮಣಿಯಾಗಿದ್ದೇನೆ. ಯಾವುದೇ ಒಂದು ಭಾಷೆಗೆ ಬೌಂಡರಿ ಹಾಕಿಕೊಂಡಿಲ್ಲ. ಎಲ್ಲಿ ಒಳ್ಳೆಯ ಪಾತ್ರ ಸಿಗುತ್ತೋ, ಅಲ್ಲಿ ನಟಿಸುತ್ತೇನೆ’ ಎನ್ನುವುದು ಪ್ರಿಯಾಮಣಿ ಮಾತು.
ಸದ್ಯ ಪ್ರಿಯಾಮಣಿ ಹಿಂದಿ-ಇಂಗ್ಲೀಷ್‌ನಲ್ಲಿ ಪ್ರಸಾರವಾಗುವ ‘ದಿ ಫ್ಯಾಮಿಲಿ ಮ್ಯಾನ್’ ವೆಬ್ ಸೀರಿಸ್‌ನಲ್ಲಿ ನಟಿಸುತ್ತಿದ್ದಾರೆ.
•ರವಿಪ್ರಕಾಶ್ ರೈ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sandalwood: ಸ್ಟಾರ್ ಸಿನಿಮಾ ಹೆಚ್ಚು ಬಂದರೆ ಚಿತ್ರರಂಗಕ್ಕೆ ಪೂರಕ: ಎನ್. ನರಸಿಂಹಲು
Dhruva-Prem: ಡಿ.24ಕ್ಕೆ ʼಕೆಡಿʼ ಶಿವ ಶಿವ ಹಾಡು ರಿಲೀಸ್
Dhruva Sarja: ಪ್ರತಿ ಸಿನಿಮಾವೂ ನನಗೆ ಹೊಸ ಪಾಠ…: ಧ್ರುವ ಹೇಳಿದ್ದೇನು
Kiccha Sudeepa; ತಾಯಿಯನ್ನು ಉಳಿಸಿಕೊಳ್ಳಲಾಗದ ಆ ಕ್ಷಣ ನಾನು ಯೂಸ್‌ಲೆಸ್ ಅನಿಸಿತು…
UI Movie: 9 ವರ್ಷ ಬಳಿಕ ಉಪ್ಪಿ ಡೈರೆಕ್ಟ್ ಮಾಡಿದ ಯು-ಐ ಸಿನಿಮಾದ ಹೈಲೈಟ್ಸ್ ಏನು?
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Actress: ರೊಮ್ಯಾನ್ಸ್ ಮಾಡಿಕೊಂಡು ಇರುತ್ತೇನೆ ಮದುವೆ ಆಗೋದೆ ಇಲ್ಲ ಎಂದ ನಟಿ ಶ್ರುತಿ ಹಾಸನ್
Nyamathi: ಕಾಡುಪ್ರಾಣಿಗಳಿಗೆ ಇರಿಸಿದ್ದ 32 ನಾಡ ಬಾಂಬ್ ಗಳು ಪತ್ತೆ
INDvAUS: ಬ್ಯಾನ್ ತಪ್ಪಿಸಿಕೊಂಡ ವಿರಾಟ್ ಕೊಹ್ಲಿ; ಆದರೂ ಶಿಕ್ಷೆ ತಪ್ಪಲಿಲ್ಲ
Belagavi: ಪಿಒಕೆ ಬಗ್ಗೆ ಕಾಂಗ್ರೆಸ್ ನಿಲುವಿನ ಬಗ್ಗೆ ಮತ್ತೆ ಹೇಳಬೇಕಿಲ್ಲ: ಡಿಕೆ ಶಿವಕುಮಾರ್
ಮಂಗಳಮುಖಿಯನ್ನು ಪ್ರೀತಿಸಿ ಮದುವೆ ಆಗುತ್ತೇನೆಂದ ಪುತ್ರ; ಅವಮಾನದಿಂದ ಪೋಷಕರು ಆತ್ಮ*ಹತ್ಯೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.