ಇಂದಿನಿಂದ ಪೃಥ್ವಿ ಅಂಬರ್ ನಟನೆಯ ‘ಶುಗರ್ ಲೆಸ್’
Team Udayavani, Jul 8, 2022, 10:15 AM IST
ಪೃಥ್ವಿ ಅಂಬರ್ ನಾಯಕರಾಗಿರುವ “ಶುಗರ್‌ಲೆಸ್’ ಚಿತ್ರ ಇಂದು ತೆರೆಕಾಣುತ್ತಿದೆ. ಕೆ.ಎಂ. ಶಶಿಧರ್ ಈ ಚಿತ್ರದ ನಿರ್ದೇಶಕರು. ನಿರ್ದೇಶನದ ಜೊತೆಗೆ ನಿರ್ಮಾಣ ಕೂಡಾ ಇವರದ್ದೇ. ಶಶಿಧರ್ ಸ್ಟುಡಿಯೋಸ್ ಪ್ರೊಡಕ್ಷನ್ಸ್ ಮೂಲಕ ದಿವ್ಯ ಶಶಿಧರ್ ಹಾಗೂ ವಿಜಯಲಕ್ಷ್ಮೀ ಕೃಷ್ಣೇಗೌಡ ಅವರ ನಿರ್ಮಾಣದಲ್ಲಿ ಈ ಚಿತ್ರ ತಯಾರಾಗಿದೆ.
“ನಮ್ಮ ಸಿನಿಮಾದ ಟೈಟಲ್ಲೇ ಹೇಳುವಂತೆ, ಇದು ಡಯಾಬಿಟಿಕ್ (ಸಕ್ಕರೆ ಖಾಯಿಲೆ) ಸುತ್ತ ನಡೆಯುವ ಸಿನಿಮಾ. ಹಾಗಾಗಿ ಸಿನಿಮಾದ ಸಬ್ಜೆಕ್ಟ್ ಗೆ ಹೊಂದಾಣಿಕೆ ಯಾಗುತ್ತದೆ ಅನ್ನೋ ಕಾರಣಕ್ಕೆ ಈ ಸಿನಿಮಾಕ್ಕೆ “ಶುಗರ್‌ಲೆಸ್’ ಅಂಥ ಟೈಟಲ್ ಇಟ್ಟಿದ್ದೇವೆ. ಚಿಕ್ಕ ವಯಸ್ಸಿನಲ್ಲಿ ಶುಗರ್ ಬಂದ ಹುಡುಗನೊಬ್ಬನ ಜೀವನ ಹೇಗಿರುತ್ತದೆ. ಅವನ ಜೀವನದಲ್ಲಿ ಡಯಾಬಿಟಿಕ್‌ನಿಂದ ಏನೇನು ತಿರುವುಗಳು ಸಿಗುತ್ತದೆ ಎನ್ನುವುದರ ಸುತ್ತ ಈ ಸಿನಿಮಾದ ಕಥೆ ಸಾಗುತ್ತದೆ’ ಎನ್ನುತ್ತಾರೆ ಶಶಿಧರ್.
“ಭಾರತದಲ್ಲಿ ಇಲ್ಲಿಯವರೆಗೆ ನೂರಾರು ವಿಷಯಗಳ ಮೇಲೆ ಸಾವಿರಾರು ಸಿನಿಮಾಗಳು ಬಂದಿವೆ. ಆದ್ರೆ ಡಯಾಬಿಟಿಕ್ (ಶುಗರ್) ಕುರಿತು ಯಾವುದೇ ಸಿನಿಮಾಗಳು ಬಂದಿಲ್ಲ. ನಮಗೆ ಗೊತ್ತಿರುವಂತೆ ಇಡೀ ಭಾರತದಲ್ಲೇ ಡಯಾಬಿಟಿಕ್ ಸಬ್ಜೆಕ್ಟ್ ಮೇಲೆ ಬರುತ್ತಿರುವ ಮೊದಲ ಸಿನಿಮಾ ನಮ್ಮದು. ಸಾಮಾನ್ಯವಾಗಿ ಡಯಾಬಿಟಿಕ್ ವಿಷಯ ಅಂದ್ರೆ, ಬಹುತೇಕರು ತುಂಬ ಸೀರಿಯಸ್ ಆಗುತ್ತಾರೆ. ಆದ್ರೆ ನಾವು ಸೀರಿಯಸ್ ವಿಷಯವಾದ್ರೂ ಅದನ್ನು ಹ್ಯೂಮರಸ್ ಆಗಿ, ನೋಡುಗರಿಗೆ ಮುಟ್ಟುವಂತೆ ತೆರೆಮೇಲೆ ತರುತ್ತಿದ್ದೇವೆ. ಇದರಲ್ಲಿ ಲವ್, ಸೆಂಟಿಮೆಂಟ್, ಎಮೋಶನ್ಸ್, ಕಾಮಿಡಿ ಜೊತೆಗೊಂದು ಮೆಸೇಜ್, ಹೀಗೆ ಎಂಟರ್‌ಟೈನ್ಮೆಂಟ್‌ಗೆ ಏನೇನು ಎಲಿಮೆಂಟ್ಸ್ ಇರಬೇಕೋ, ಅದೆಲ್ಲವೂ “ಶುಗರ್ ಲೆಸ್’ನಲ್ಲಿದೆ’ ಎನ್ನುತ್ತಾರೆ ನಿರ್ಮಾಪಕ ಕಂ ನಿರ್ದೇಶಕ ಶಶಿಧರ್ ಕೆ.ಎಂ.
ಇದನ್ನೂ ಓದಿ:ಸ್ಯಾಂಡಲ್ ವುಡ್: ಈ ವಾರ ತೆರೆಗೆ 9 ಚಿತ್ರಗಳು
ಪೃಥ್ವಿ ಅಂಬರ್, ಪ್ರಿಯಾಂಕಾ ತಿಮ್ಮೇಶ್ ಜೋಡಿಯಾಗಿ ಅಭಿನಯಿಸಿದ್ದಾರೆ. ಉಳಿದಂತೆ ಹಿರಿಯ ನಟ ದತ್ತಣ್ಣ, ಧರ್ಮಣ್ಣ ಕಡೂರ್, ಎಸ್. ನಾರಾಯಣ್, ನವೀನ್ ಪಡೀಲ್, ಪದ್ಮಜಾ ರಾವ್, ಜತ್ತಿ ಮೊದಲಾದವರು ಚಿತ್ರದ ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಚಿತ್ರಕ್ಕೆ ಲವಿತ್ ಚಾಯಾಗ್ರಹಣ, ಅನೂಪ್, ರವಿಚಂದ್ರನ್ ಸಂಕಲನ, ಗುರು ಕಶ್ಯಪ್ ಸಂಭಾಷಣೆಯಿದೆ. ಚಿತ್ರದ ಹಾಡುಗಳಿಗೆ ಅನೂಪ್ ಸೀಳೀನ್ ಸಂಗೀತ ಸಂಯೋಜಿಸಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.