ಡ್ಯಾನ್ಸ್‌ಗಾಗಿ ಸಿನಿಮಾ ಒಪ್ಪಿಕೊಂಡ ರಾಧಿಕಾ
Team Udayavani, Aug 4, 2017, 9:31 AM IST
ಕೆಲವು ವರ್ಷಗಳ ಹಿಂದೆ “ಕಾಂಟ್ರ್ಯಾಕ್ಟ್’ ಎಂಬ ಸಿನಿಮಾವೊಂದು ಆರಂಭವಾಗಿರೋದು ನಿಮಗೆ ಗೊತ್ತಿರಬಹುದು. ಆದರೆ, ನಂತರದ ದಿನಗಳಲ್ಲಿ ಕಾರಣಾಂತರಗಳಿಂದ ಆ ಸಿನಿಮಾ ನಿಂತುಹೋಗಿತ್ತು. ಈಗ “ಕಾಂಟ್ರ್ಯಾಕ್ಟ್’ ಚಿತ್ರ ಮತ್ತೆ ಆರಂಭವಾಗಿದೆ.
ಈಗಾಗಲೇ ಚಿತ್ರೀಕರಣ ಕೂಡಾ ಆರಂಭವಾಗಿದೆ. ಅರ್ಜುನ್ ಸರ್ಜಾ, ಜೆಡಿ ಚಕ್ರವರ್ತಿ, ರಾಧಿಕಾ ಕುಮಾರಸ್ವಾಮಿ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಕನ್ನಡ, ತಮಿಳು ಹಾಗೂ ತೆಲುಗಿನಲ್ಲಿ ಈ ಚಿತ್ರ ತಯಾರಾಗುತ್ತಿದೆ. ಸಮೀರ್ ಎನ್ನುವವರು ಈ ಚಿತ್ರದ ನಿರ್ದೇಶಕರು.
ಅಷ್ಟಕ್ಕೂ “ಕಾಂಟ್ರ್ಯಾಕ್ಟ್’ನಲ್ಲಿ ಏನು ಹೇಳಲು ಹೊರಟಿದ್ದಾರೆಂದು ನೀವು ಕೇಳಬಹುದು. ಸಮೀರ್ ಹೇಳುವಂತೆ ಇದೊಂದು ಔಟ್ ಅಂಡ್ ಔಟ್ ಕಮರ್ಷಿಯಲ್ ಸಿನಿಮಾ. ಸಸ್ಪೆನ್ಸ್, ಥ್ರಿಲ್ಲರ್ ಜಾನರ್ ನಲ್ಲಿ ಸಾಗುವ ಈ ಸಿನಿಮಾ ತುಂಬಾ ಸ್ಟೈಲಿಶ್ ಆಗಿರುತ್ತದೆಯಂತೆ. ಸಸ್ಪೆನ್ಸ್, ಥ್ರಿಲ್ಲರ್ ಎಂದಮೇಲೆ ನೀವು ಕಥೆ ಏನು ಎಂದು ಕೇಳಬಾರದು. ಏಕೆಂದರೆ ನಿರ್ದೇಶಕರು ಹೇಳಲು ರೆಡಿಯಿಲ್ಲ. ಇದೊಂದು ಫ್ಯಾಮಿಲಿ ಡ್ರಾಮಾ ಎಂದಷ್ಟೇ ಹೇಳುತ್ತಾರೆ.
ಚಿತ್ರದಲ್ಲಿ ಅರ್ಜುನ್ ಸರ್ಜಾ, ಅಂಬಾನಿ ರೀತಿಯ ದೊಡ್ಡ ಬಿಝಿನೆಸ್ ಮ್ಯಾನ್ ಆಗಿ ಕಾಣಿಸಿಕೊಂಡಿದ್ದು, ಅವರ ಎಂಟ್ರಿ ಕೂಡಾ ಸಖತ್ ಗ್ರ್ಯಾಂಡ್ ಆಗಿದೆ ಎನ್ನುವುದು ಸಮೀರ್ ಮಾತು. ಇನ್ನು, ಒಂದು ಗ್ಯಾಪ್‌ನ ನಂತರ ರಾಧಿಕಾ ಕುಮಾರಸ್ವಾಮಿ ತಮ್ಮ ಸಿನಿಮಾದಲ್ಲಿ ನಟಿಸುತ್ತಿರುವ ಖುಷಿ ಸಮೀರ್‌ಗಿದೆ. ಈ ಸಿನಿಮಾದ ಪಾತ್ರ ಅವರಿಗೆ ಹೊಂದಿಕೊಳ್ಳುತ್ತದೆ ಎಂಬ ಕಾರಣಕ್ಕೆ ಅವರನ್ನು ಕೇಳಿಕೊಂಡರಂತೆ. ಅದರಂತೆ ರಾಧಿಕಾ ಚಿತ್ರದಲ್ಲಿ ನಟಿಸಲು ಒಪ್ಪಿದ ಖುಷಿ ಹಂಚಿಕೊಳ್ಳುತ್ತಾರೆ.
ರಾಧಿಕಾ ಅವರು ಕೇರಳದಲ್ಲಿದ್ದಾಗ ನಿರ್ದೇಶಕ ಸಮೀರ್ ಫೋನ್ ಮಾಡಿ, ಸಿನಿಮಾದಲ್ಲಿ ನಟಿಸುವಂತೆ ಕೇಳಿಕೊಂಡರಂತೆ. ನಂತರ ರಾಧಿಕಾ ಕಥೆ ಕೇಳಿದಾಗ ಇದು ಕಂಬ್ಯಾಕ್‌ಗೆ ಒಳ್ಳೆಯ ಪಾತ್ರ ಎಂದುಕೊಂಡು ಒಪ್ಪಿದ್ದಾಗಿ ಹೇಳುತ್ತಾರೆ. ಮುಖ್ಯವಾಗಿ ರಾಧಿಕಾ ಈ ಸಿನಿಮಾ ಒಪ್ಪಿಕೊಳ್ಳಲು ಕಾರಣ ಡ್ಯಾನ್ಸ್. ಈ ಪಾತ್ರದಲ್ಲಿ ಅವರಿಗೆ ಡ್ಯಾನ್ಸ್‌ಗೂ ಹೆಚ್ಚಿನ ಅವಕಾಶವಿದೆಯಂತೆ. ಮಾಡರ್ನ್ ಹಾಗೂ ಗೃಹಿಣಿ ಪಾತ್ರದಲ್ಲಿ ರಾಧಿಕಾ ಕಾಣಿಸಿಕೊಳ್ಳುತ್ತಿದ್ದಾರೆ.
ಚಿತ್ರದಲ್ಲಿ ಜೆಡಿ ಚಕ್ರವರ್ತಿ ಪ್ರಮುಖ ಪಾತ್ರ ಮಾಡುತ್ತಿದ್ದಾರೆ. ನಿಮ್ಮ ಕ್ಯಾರೆಕ್ಟರ್ ಏನು ಎಂದರೆ ಕ್ಯಾರೆಕ್ಟರ್‌ಲೆಸ್ ಪಾತ್ರ ಎನ್ನುತ್ತಾರೆ. ಅಂದಹಾಗೆ, ನಿರ್ದೇಶಕ ಸಮೀರ್, ಜೆಡಿ ಚಕ್ರವರ್ತಿಯವರ ಜೊತೆ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ. ಈಗ ಶಿಷ್ಯನ ಸಿನಿಮಾದಲ್ಲಿ ಜೆಡಿ ನಟಿಸುತ್ತಿದ್ದಾರೆ. ಹಾಗಂತ ಶಿಷ್ಯನಿಗೆ ಯಾವುದೇ ಸಲಹೆ ಕೊಡುತ್ತಿಲ್ಲವಂತೆ. ಏಕೆಂದರೆ, ಸಮೀರ್‌ಗೆ ತಾನು ಮಾಡುತ್ತಿರುವ ಸಿನಿಮಾ ಬಗ್ಗೆ ಸ್ಪಷ್ಟ ಕಲ್ಪನೆ ಇದೆಯಂತೆ. ಚಿತ್ರದಲ್ಲಿ ಅಮೀರ್ ಖಾನ್ ಸಹೋದರ ಫೈಜಲ್ ಖಾನ್ ಕೂಡಾ ನಟಿಸುತ್ತಿದ್ದಾರಂತೆ
ರವಿಪ್ರಕಾಶ್ ರೈ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sandalwood: ಸ್ಟಾರ್ ಸಿನಿಮಾ ಹೆಚ್ಚು ಬಂದರೆ ಚಿತ್ರರಂಗಕ್ಕೆ ಪೂರಕ: ಎನ್. ನರಸಿಂಹಲು
Dhruva-Prem: ಡಿ.24ಕ್ಕೆ ʼಕೆಡಿʼ ಶಿವ ಶಿವ ಹಾಡು ರಿಲೀಸ್
Dhruva Sarja: ಪ್ರತಿ ಸಿನಿಮಾವೂ ನನಗೆ ಹೊಸ ಪಾಠ…: ಧ್ರುವ ಹೇಳಿದ್ದೇನು
Kiccha Sudeepa; ತಾಯಿಯನ್ನು ಉಳಿಸಿಕೊಳ್ಳಲಾಗದ ಆ ಕ್ಷಣ ನಾನು ಯೂಸ್‌ಲೆಸ್ ಅನಿಸಿತು…
UI Movie: 9 ವರ್ಷ ಬಳಿಕ ಉಪ್ಪಿ ಡೈರೆಕ್ಟ್ ಮಾಡಿದ ಯು-ಐ ಸಿನಿಮಾದ ಹೈಲೈಟ್ಸ್ ಏನು?
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ಬೈಕನ್ನೇ ಬೆನ್ನಟ್ಟಿ ದಾಳಿ ಮಾಡಿದ ಕರಡಿಗಳು… ಗ್ರಾಮ ಪಂಚಾಯತ್ ಸದಸ್ಯನಿಗೆ ಗಂಭೀರ ಗಾಯ
Rey Mysterio Sr: ಖ್ಯಾತ ರೆಸ್ಲರ್ ರೇ ಮಿಸ್ಟೀರಿಯೊ ಸೀನಿಯರ್ ಇನ್ನಿಲ್ಲ
Parliament Session: 26 ದಿನಗಳಲ್ಲಿ 7 ಮಸೂದೆಗಳಿಗೆ ಅನುಮೋದನೆ, 65 ಗಂಟೆ ನಷ್ಟ!
Parliament Session: ವಿಪಕ್ಷಗಳ ಕೋಲಾಹಲ ನಡುವೆ ಏಕ ಚುನಾವಣೆ ಮಸೂದೆ ಜೆಪಿಸಿಗೆ
ಜೋಡೋ ಯಾತ್ರೆಯಲ್ಲಿ”ನಗರ ನಕ್ಸಲರು’: ಮಹಾರಾಷ್ಟ್ರ ಸಿಎಂ ಫಡ್ನವೀಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.