ಮತ್ತೆ ಮೌನ,ಮುಂದುವರಿದ ಆತಂಕ! ರಿಲೀಸ್‌ ಡೇಟ್ಸ್‌ ಅನೌನ್ಸ್‌ ಮಾಡಿದ್ದ ಸಿನಿಮಾಗಳು ಮುಂದಕ್ಕೆ..


Team Udayavani, Jan 7, 2022, 2:31 PM IST

ಮತ್ತೆ ಮೌನ,ಮುಂದುವರಿದ ಆತಂಕ! ರಿಲೀಸ್‌ ಡೇಟ್ಸ್‌ ಅನೌನ್ಸ್‌ ಮಾಡಿದ್ದ ಸಿನಿಮಾಗಳು ಮುಂದಕ್ಕೆ..

ಒಮಿಕ್ರಾನ್‌ ಆತಂಕದ ಹಿನ್ನೆಲೆಯಲ್ಲಿ ಬುಧವಾರದಿಂದಲೇ ಜಾರಿಯಾಗುವಂತೆ, ರಾಜ್ಯ ಸರ್ಕಾರ ಥಿಯೇಟರ್‌ಗಳಲ್ಲಿ ಶೇಕಡ 50ರಷ್ಟು ಮಾತ್ರ ಪ್ರೇಕ್ಷಕರಿಗೆ ಪ್ರವೇಶಾತಿಗೆ ಅನುಮತಿ ನೀಡಿ ಮಾರ್ಗಸೂಚಿ ಹೊರಡಿಸಿದೆ. ಸರ್ಕಾರದ ಹೊಸ ಮಾರ್ಗಸೂಚಿ ಹೊರ ಬೀಳುತ್ತಿದ್ದಂತೆ, ಈಗಾಗಲೇ ತಮ್ಮ ಬಿಡುಗಡೆಯನ್ನು ಘೋಷಿಸಿಕೊಂಡಿದ್ದ ಸಿನಿಮಾಗಳು ಒಂದರ ಹಿಂದೊಂದರಂತೆ ತಮ್ಮ ಬಿಡುಗಡೆಯನ್ನು ಅನಿರ್ಧಿಷ್ಟಾವಧಿಗೆ ಮುಂದೂಡುತ್ತಿವೆ. ಹೀಗಾಗಿ, ಸಿನಿಮಾಗಳಿಲ್ಲದೆ ಥಿಯೇಟರ್‌ಗಳು ಬಂದ್‌ ಆಗುವ ಎಲ್ಲ ಲಕ್ಷಣಗಳೂ ಗೋಚರಿಸುತ್ತಿದ್ದು, ಮತ್ತೂಮ್ಮೆ ಚಿತ್ರರಂಗದ ಚಟುವಟಿಕೆಗಳು ನಿಧಾನವಾಗಿ ಸ್ತಬ್ಧವಾಗುತ್ತಿದೆ.

ಕಳೆದ ಒಂದು ವಾರದಿಂದ ಚಿತ್ರರಂಗವನ್ನು ಮೂರನೇ ಲಾಕ್‌ಡೌನ್‌ ಆತಂಕ ಆವರಿಸಿದ್ದು, ಅದರ ಮೊದಲ ಭಾಗ ಎನ್ನುವಂತೆ, ಬುಧವಾರದಿಂದಲೇ ರಾಜ್ಯದ ಸಿಂಗಲ್‌ ಸ್ಕ್ರೀನ್‌ ಥಿಯೇಟರ್‌ಗಳು ಮತ್ತು ಮಲ್ಟಿಪ್ಲೆಕ್ಸ್‌ಗಳಲ್ಲಿ ಶೇಕಡ 50ರಷ್ಟು ಮಾತ್ರ ಪ್ರೇಕ್ಷಕರಿಗೆ ಪ್ರವೇಶಾವಕಾಶ ನೀಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಇದಲ್ಲದೆ ಈಗಾಗಲೇ ಜಾರಿಯಲ್ಲಿರುವ ನೈಟ್‌ ಕರ್ಫ್ಯೂ ಕೂಡ ಮುಂದುವರೆಯಲಿದ್ದು, ಇದರ ಜೊತೆ ವಾರಾಂತ್ಯದಿಂದಲೇ ವೀಕೆಂಡ್‌ ಕರ್ಫ್ಯೂ ಕೂಡ ಈ ಮಾರ್ಗಸೂಚಿಯಲ್ಲಿ ಸೇರ್ಪಡೆಯಾಗಿದೆ. ಚಿತ್ರರಂಗದಲ್ಲಿ ಇದೆಲ್ಲದರ ನೇರ ಪರಿಣಾಮದ ಬಿಸಿ ಮೊದಲು ತಟ್ಟಿರುವುದು ಥಿಯೇಟರ್‌ ಮತ್ತು ಮಲ್ಟಿಪ್ಲೆಕ್ಸ್‌ಗಳ ಮೇಲೆ. ರಾಜ್ಯದಲ್ಲಿ ಡಿಸೆಂಬರ್‌ ಅಂತ್ಯದಿಂದಲೇ ಜಾರಿಯಾದ ನೈಟ್‌ ಕರ್ಫ್ಯೂದಿಂದಾಗಿ, ಬಿಡುಗಡೆಯಾಗಿರುವ ಸಿನಿಮಾಗಳ ಗಳಿಕೆಯಲ್ಲಿ ಶೇಕಡ 40ರಿಂದ 50ರಷ್ಟು ಇಳಿಕೆ ಕಂಡು ಬಂದಿದೆ. ಈಗ ಮತ್ತೂಮ್ಮೆ ಶೇಕಡ 50ರಷ್ಟು ಮಾತ್ರ ಪ್ರೇಕ್ಷಕರಿಗೆ ಪ್ರವೇಶಾವಕಾಶ ನೀಡಿರುವುದರಿಂದ, ಜೊತೆಗೆ ವೀಕೆಂಡ್‌ ಕರ್ಫ್ಯೂ ಕೂಡ ಜಾರಿಯಾಗುತ್ತಿರುವುದರಿಂದ ಇಡೀ ವಾರದಲ್ಲಿ ಸಿನಿಮಾಗಳ ಒಟ್ಟು ಗಳಿಕೆ ಥಿಯೇಟರ್‌ ಮತ್ತು ಮಲ್ಟಿಪ್ಲೆಕ್ಸ್‌ಗಳಲ್ಲಿ ಶೇಕಡ 10ರ ಗಡಿ ದಾಟುವುದೇ ಕಷ್ಟ ಎನ್ನುವುದು ಪ್ರದರ್ಶಕರು ಮತ್ತು ವಿತರಕರ ಮಾತು.

ಇದನ್ನೂ ಓದಿ:ಸದ್ದಿಲ್ಲದೆ ಚಿತ್ರೀಕರಣ ಮುಗಿಸಿದ ‘ವೆಡ್ಡಿಂಗ್‌ ಗಿಫ್ಟ್’

ಹೀಗಾಗಿ ಸರ್ಕಾರದ ಹೊಸ ಮಾರ್ಗಸೂಚಿ ಹೊರಬರುತ್ತಿದ್ದಂತೆ, ಈಗಾಗಲೇ ರಿಲೀಸ್‌ ಡೇಟ್‌ ಅನೌನ್ಸ್‌ ಮಾಡಿದ್ದ ಮತ್ತು ರಿಲೀಸ್‌ ಡೇಟ್‌ ಅನೌನ್ಸ್‌ ಮಾಡಲು ತಯಾರಿ ಮಾಡಿಕೊಂಡಿದ್ದ ಬಹುತೇಕ ಸಿನಿಮಾಗಳು ತಮ್ಮ ಬಿಡುಗಡೆಯ ದಿನಾಂಕವನ್ನು ಅನಿರ್ಧಿಷ್ಟವಧಿಗೆ ಮುಂದೂಡಿಕೊಳ್ಳುತ್ತಿವೆ.

“ಏಕ್‌ ಲವ್‌ ಯಾ’ ರಿಲೀಸ್‌ ಮುಂದಕ್ಕೆ

ಎಲ್ಲ ಅಂದುಕೊಂಡಂತೆ ಆಗಿದ್ದರೆ, ಜೋಗಿ ಪ್ರೇಮ್‌ ನಿರ್ದೇಶನದ ನಟಿ ರಕ್ಷಿತಾ ಸಹೋದರ ರಾಣಾ ನಾಯಕ ನಟನಾಗಿ ಅಭಿನಯಿಸುತ್ತಿರುವ ಚೊಚ್ಚಲ ಚಿತ್ರ “ಏಕ್‌ ಲವ್‌ ಯಾ’ ಇದೇ ಜ. 21ರಂದು ತೆರೆ ಕಾಣಬೇಕಿತ್ತು. ಆದರೆ ಈಗಿನ ಪರಿಸ್ಥಿತಿಯಲ್ಲಿ ಒಮಿಕ್ರಾನ್‌ ಆತಂಕ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವುದರಿಂದ ಮತ್ತು ಶೇಕಡ 50ರಷ್ಟು ಮಾತ್ರ ಥಿಯೇಟರ್‌ಗಳಲ್ಲಿ ಪ್ರೇಕ್ಷಕರ ಪ್ರವೇಶಾತಿಗೆ ಆದೇಶ ಸರ್ಕಾರದಿಂದ ಹೊರಬಿದ್ದಿರುವುದರಿಂದ, ಜೊತೆಗೆ ವೀಕೆಂಡ್‌ ಕರ್ಫ್ಯೂ ಕೂಡ ಜಾರಿಯಾಗಿರುವುದರಿಂದ, ಚಿತ್ರತಂಡ ಸದ್ಯಕ್ಕೆ “ಏಕ್‌ ಲವ್‌ ಯಾ’ದ  ಬಿಡುಗಡೆಯನ್ನು ಮುಂದೂಡಿದೆ. ಕಳೆದ ಕೆಲ ತಿಂಗಳಿನಿಂದ ಭರ್ಜರಿಯಾಗಿ ಚಿತ್ರದ ಪ್ರಚಾರ ಕಾರ್ಯಗಳನ್ನು ಆರಂಭಿಸಿದ್ದ ಚಿತ್ರತಂಡ, ಬ್ಯಾಕ್‌ ಟು ಬ್ಯಾಕ್‌ “ಏಕ್‌ ಲವ್‌ ಯಾ’ ಚಿತ್ರದ ಹಾಡುಗಳನ್ನು ಬಿಡುಗಡೆ ಮಾಡಿತ್ತು. ಸದ್ಯ ಬಿಡುಗಡೆಯಾಗಿದ್ದ “ಏಕ್‌ ಲವ್‌ ಯಾ’ದ ಹಾಡುಗಳು ಸೋಶಿಯಲ್‌ ಮೀಡಿಯಾದಲ್ಲಿ ಸಿನಿಪ್ರಿಯರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದ್ದವು. ಇದೀಗ ಅನಿರೀಕ್ಷಿತವಾಗಿ ಮತ್ತೆ ಲಾಕ್‌ಡೌನ್‌ ಆತಂಕ ಎದುರಾಗಿರುವುದರಿಂದ, “ಕೋವಿಡ್‌ ಮಾರ್ಗಸೂಚಿ ಬದಲಾದ ನಂತರ ಚಿತ್ರದ ಬಿಡುಗಡೆ ಹೊಸ ದಿನಾಂಕವನ್ನು ಘೋಷಿಸಲಾಗುವುದು’ ಎಂದು ಚಿತ್ರತಂಡ ತಿಳಿಸಿದೆ.

“ಓಲ್ಡ್‌ ಮಾಂಕ್‌’ ದರ್ಶನವಿಲ್ಲ

ನಟ ಶ್ರೀನಿ ಮತ್ತು ಅದಿತಿ ಪ್ರಭುದೇವ ಕಾಂಬಿನೇಶನ್‌ನಲ್ಲಿ ಮೂಡಿಬಂದಿರುವ “ಓಲ್ಡ್‌ ಮಾಂಕ್‌’ ಚಿತ್ರ ಕೂಡ ಇದೇ ಫೆಬ್ರವರಿ 11ಕ್ಕೆ ತೆರೆಗೆ ಬರುವ ಘೋಷಣೆ ಮಾಡಿಕೊಂಡಿತ್ತು. ಕಳೆದ ಒಂದು ತಿಂಗಳಿನಿಂದ ಚಿತ್ರದ ಪ್ರಚಾರ ಕಾರ್ಯಗಳಿಗೆ ಚಾಲನೆ ನೀಡಿದ್ದ ಚಿತ್ರತಂಡ, ಹಾಡುಗಳು, ಟ್ರೇಲರ್‌ಗಳ ಮೂಲಕ ಸೋಶಿಯಲ್‌ ಮೀಡಿಯಾದಲ್ಲಿ ಸಿನಿಪ್ರಿಯರ ಗಮನ ಸೆಳೆದಿತ್ತು. ಅನಾಗ್ಲಿಫ್ ಸ್ಟಾಂಡಿ, ಔಟ್‌ ಡೋರ್‌ ಪಬ್ಲಿಸಿಟಿ, ಆನ್‌ಲೈನ್‌ ಪಬ್ಲಿಸಿಟಿ ಮೂಲಕ ಸಿನಿಪ್ರಿಯರನ್ನು ಸೆಳೆಯುವ ಕಸರತ್ತು ಮಾಡುತ್ತಿದ್ದ “ಓಲ್ಡ್‌ ಮಾಂಕ್‌’ ಚಿತ್ರತಂಡ ಕೂಡ ಇದೀಗ ಅದೆಲ್ಲದಕ್ಕೂ ಬ್ರೇಕ್‌ ಹಾಕಿದೆ. “ಸದ್ಯದ ಪರಿಸ್ಥಿತಿಯಲ್ಲಿ ಫೆ. 11ಕ್ಕೆ ತೆರೆಗೆ ಬರುವ ಯೋಚನೆಯನ್ನು ಕೈ ಬಿಟ್ಟಿದ್ದೇವೆ. ಹೀಗಾಗಿ ತಾತ್ಕಾಲಿಕವಾಗಿ ಸಿನಿಮಾದ ಪ್ರಮೋಶನ್ಸ್‌ ಕೂಡ ನಿಲ್ಲಿಸಿದ್ದೇವೆ. ಮುಂದಿನ ಸಿನಿಮಾ ರಿಲೀಸ್‌ ಡೇಟ್‌ ಬಗ್ಗೆ ಈಗಲೇ ಏನೂ ನಿರ್ಧಾರ ತೆಗೆದುಕೊಳ್ಳುವಂತಿಲ್ಲ’ ಎನ್ನುತ್ತಾರೆ ಚಿತ್ರದ ನಾಯಕ ನಟ ಕಂ ನಿರ್ದೇಶಕ ಶ್ರೀನಿ.

“ವಿಕ್ರಾಂತ್‌ ರೋಣ’ ಕೂಡ ಮುಂದಕ್ಕೆ..?

ಈಗಾಗಲೇ “ಆರ್‌ಆರ್‌ಆರ್‌’ ನಂತರ ಬಿಗ್‌ ಬಜೆಟ್‌ನ ಬಿಗ್‌ ಸ್ಟಾರ್‌ ಸಿನಿಮಾಗಳು ತಮ್ಮ ರಿಲೀಸ್‌ ಮುಂದೂಡಿರುವುದರಿಂದ, ಫೆಬ್ರವರಿ ಅಂತ್ಯಕ್ಕೆ ರಿಲೀಸ್‌ ಡೇಟ್‌ ಅನೌನ್ಸ್‌ ಮಾಡಿಕೊಂಡಿರುವ ಮತ್ತೂಂದು ಬಿಗ್‌ ಬಜೆಟ್‌ನ ಬಿಗ್‌ ಸ್ಟಾರ್‌ ಸಿನಿಮಾ “ವಿಕ್ರಾಂತ್‌ ರೋಣ’ ಕೂಡ ತನ್ನ ರಿಲೀಸ್‌ ಡೇಟ್‌ ಬದಲಾವಣೆ ಮಾಡುವ ಸಾಧ್ಯತೆಗಳು ದಟ್ಟವಾಗಿದೆ. ಸದ್ಯಕ್ಕೆ ಇಲ್ಲಿಯವರೆಗೆ ಚಿತ್ರತಂಡ ಅಧಿಕೃತವಾಗಿ “ವಿಕ್ರಾಂತ್‌ ರೋಣ’ನ ಬಿಡುಗಡೆಯ ದಿವನ್ನು ಮುಂದೂಡುವ ವಿಷಯ ಪ್ರಸ್ತಾಪಿಸದಿದ್ದರೂ, ಮುಂದಿನ ದಿನಗಳಲ್ಲಿ 50-50 ಎಫೆಕ್ಟ್ “ವಿಕ್ರಾಂತ್‌ ರೋಣ’ನ ಬಿಡುಗಡೆ ಮುಂದೂಡಿದರೂ ಅಚ್ಚರಿಯಿಲ್ಲ.

ಬಿಡುಗಡೆ ಮುಂದೂಡಿದ 25ಕ್ಕೂ ಹೆಚ್ಚು ಸಿನಿಮಾಗಳು…

ಸ್ಟಾರ್‌ ಸಿನಿಮಾಗಳು ಮತ್ತು ಬಿಗ್‌ ಬಜೆಟ್‌ ಸಿನಿಮಾಗಳ ಹೊರತಾಗಿ ಮಧ್ಯಮ ಮತ್ತು ಸಣ್ಣ ಬಜೆಟ್‌ನ ಹೊಸಬರ ಸುಮಾರು 25ಕ್ಕೂ ಹೆಚ್ಚು ಸಿನಿಮಾಗಳು ಜನವರಿ ಮತ್ತು ಫೆಬ್ರವರಿ ತಿಂಗಳಿನಲ್ಲಿ ತಮ್ಮ ಬಿಡುಗಡೆಯನ್ನು ಪ್ಲಾನ್‌ ಮಾಡಿಕೊಂಡಿದ್ದವು. ಈ ವಾರ ತೆರೆಗೆ ಬರಬೇಕಾಗಿದ್ದ “ಡಿಎನ್‌ಎ’, ಮುಂದಿನವಾರ ಬಿಡುಗಡೆ ಘೋಷಿಸಿದ್ದ “ಗರುಡಾಕ್ಷ’, “ಗಂಡುಲಿ’, “ಖಾಸಗಿ ಪುಟಗಳು’, “ಲವ್‌ ಮಾಕ್ಟೇಲ್‌-2′, “ಮನಸಾಗಿದೆ’, “ಅತ್ಯುತ್ತಮ’ ಹೀಗೆ ರಿಲೀಸ್‌ ಡೇಟ್ಸ್‌ ಅನೌನ್ಸ್‌ ಮಾಡಿದ್ದ ಸುಮಾರು 25ಕ್ಕೂ ಹೆಚ್ಚು ಸಿನಿಮಾಗಳು ತಮ್ಮ ಬಿಡುಗಡೆಯನ್ನು ಅನಿರ್ಧಿಷ್ಟಾವಧಿಗೆ ಮುಂದೂಡಿಕೊಂಡಿವೆ.

ಸ್ಟಾರ್‌ಗಳಿಗೆ ನೂರೆಂಟು ದಾರಿ, ಹೊಸಬರಿಗೆ ಕಷ್ಟ …

ಇನ್ನು ಬಿಗ್‌ ಬಜೆಟ್‌ನ ಸ್ಟಾರ್ ಸಿನಿಮಾಗಳು ಸೆಟ್ಟೇರಿದಾಗಿನಿಂದಲೂ ಸಾಕಷ್ಟು ಪ್ರಚಾರ ಪಡೆದುಕೊಳ್ಳುತ್ತಿರುವುದರಿಂದ, ಅಂಥ ಸಿನಿಮಾಗಳಿಗೆ ಅದರದ್ದೇ ಆದ ಸ್ಟಾರ್ ಮತ್ತು ಫ್ಯಾನ್ಸ್‌ ಇರುವುದರಿಂದ, ಅಂಥ ಸಿನಿಮಾಗಳಿಗೆ ಥಿಯೇಟರ್‌ ಮಾತ್ರವಲ್ಲದೆ ಬೇರೆ ಬೇರೆ ವ್ಯಾಪಾರ ಮಾರ್ಗಗಳು ದಟ್ಟವಾಗಿರುತ್ತವೆ. ಡಿಜಿಟಲ್‌, ಸ್ಯಾಟಲೈಟ್‌, ಒಟಿಟಿ ಹೀಗೆ ಸಿನಿಮಾದ ಬೇರೆ ಬೇರೆ ರೈಟ್ಸ್‌ಗಳಿಗೆ ಸಾಕಷ್ಟು ಡಿಮ್ಯಾಂಡ್‌ ಇದ್ದೇ ಇರುತ್ತದೆ. ಆ ಮೂಲಕ ಬಿಗ್‌ ಬಜೆಟ್‌ನ ಸ್ಟಾರ್ ಸಿನಿಮಾಗಳು, ಥಿಯೇಟರ್‌ನಲ್ಲಿ ಬಿಡುಗಡೆಯಾಗದ ಹೊರತಾಗಿಯೂ ಹಾಕಿದ ಬಂಡವಾಳವನ್ನು ಜೊತೆಗೆ ಲಾಭವನ್ನೂ ತಂದುಕೊಡಬಲ್ಲವು. ಆದರೆ ಮಧ್ಯಮ ಮತ್ತು ಸಣ್ಣ ಬಜೆಟ್‌ನ ಸಿನಿಮಾಗಳಿಗೆ ಅಂಥ ಯಾವುದೇ ದೊಡ್ಡ ಮಾರ್ಗಗಳಿಲ್ಲ. ಮಧ್ಯಮ ಮತ್ತು ಸಣ್ಣ ಬಜೆಟ್‌ನ ಬಹುತೇಕ ಸಿನಿಮಾಗಳು ತಮ್ಮ ಗಳಿಕೆಯ ಮುಕ್ಕಾಲು ಭಾಗ ಥಿಯೇಟರ್‌ಗಳ ಗಳಿಕೆಯ ಮೇಲೆಯೇ ಅವಲಂಭಿಸಿರುವುದರಿಂದ, ಬಿಡುಗಡೆಗೆ ತಯಾರಾಗಿರುವ ಮಧ್ಯಮ, ಸಣ್ಣ ಬಜೆಟ್‌ ಸಿನಿಮಾಗಳಿಗೆ ದಾರಿ ಕಾಣದಂತಾಗಿದೆ.

ಇದರ ಜೊತೆಗೆ ಒಮಿಕ್ರಾನ್‌ ಸಂಕಟ ತಿಳಿಯಾದ ಬಳಿಕ ಮತ್ತೆ ಬಿಗ್‌ಬಜೆಟ್‌, ಸ್ಟಾರ್‌ ಸಿನಿಮಾಗಳೇ ಡೇಟ್‌ ಅನೌನ್ಸ್‌ ಮಾಡುವ ಮೂಲಕ ಮತ್ತೂಮ್ಮೆ ಹೊಸಬರು ತಮ್ಮ ಬಿಡುಗಡೆಯನ್ನು ಮುಂದಕ್ಕೆ ಹಾಕಬೇಕಾಗುತ್ತದೆ. ಸರತಿಯಲ್ಲಿರುವ ಸ್ಟಾರ್‌ ಸಿನಿಮಾಗಳು ಬರುತ್ತಿದ್ದಂತೆ ಹೊಸಬರು ಅನಿವಾರ್ಯವಾಗಿ ಬದಿಗೆ ನಿಲ್ಲಬೇಕಾಗುತ್ತದೆ.

ಜಿ ಎಸ್ ಕಾರ್ತಿಕ ಸುಧನ್

ಟಾಪ್ ನ್ಯೂಸ್

sullia

Davanagere: ವೃದ್ಧೆ ಮೇಲೆ ಅತ್ಯಾ*ಚಾರ; ಯುವಕನಿಗೆ 10 ವರ್ಷ ಕಠಿಣ ಶಿಕ್ಷೆ

Baduta-Mandya

Mandya: ಸಾಹಿತ್ಯ ಸಮ್ಮೇಳನದಲ್ಲಿ ಬಾಡೂಟ ಗಲಾಟೆ: ಪೊಲೀಸರೊಂದಿಗೆ ಮಾತಿನ ಚಕಮಕಿ!

1-women

ODI; ವೆಸ್ಟ್ ಇಂಡೀಸ್ ವಿರುದ್ಧ ಭಾರತದ ವನಿತೆಯರಿಗೆ 211 ರನ್ ಜಯ:ಸ್ಮೃತಿ ನರ್ವಸ್ 90

Kuwait-PM

Highest honour: ಪ್ರಧಾನಿ ನರೇಂದ್ರ ಮೋದಿಗೆ ಕುವೈಟ್‌ನ ಅತ್ಯುನ್ನತ ಗೌರವ ಪ್ರದಾನ

police crime

Delhi; ಅಕ್ರಮ ಬಾಂಗ್ಲಾ ವಲಸಿಗರ ವಿರುದ್ಧ ಕಾರ್ಯಾಚರಣೆ: 175 ಮಂದಿ ಪತ್ತೆ

Agumbe Ghat: ಟ್ರಾಫಿಕ್ ಜಾಮ್, ವಾಹನ ಸವಾರರ ಪರದಾಟ..!

Agumbe Ghat: ಟ್ರಾಫಿಕ್ ಜಾಮ್, ವಾಹನ ಸವಾರರ ಪರದಾಟ..!

mohan bhagwat

Mohan Bhagwat; ತಿಳಿವಳಿಕೆಯ ಕೊರತೆಯಿಂದ ಧರ್ಮದ ಹೆಸರಿನಲ್ಲಿ ಶೋಷಣೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Gurunandan

Gurunandan: ಡಿ.27ಕ್ಕೆ ತೆರೆಗೆ ಬರುತ್ತಿಲ್ಲ ʼರಾಜು ಜೇಮ್ಸ್‌ ಬಾಂಡ್‌’ ಚಿತ್ರ

Nodidavaru Enanthare Movie: ನವೀನ್‌ ಶಂಕರ್‌ ಚಿತ್ರದ ಟೀಸರ್‌ ಬಂತು

Nodidavaru Enanthare Movie: ನವೀನ್‌ ಶಂಕರ್‌ ಚಿತ್ರದ ಟೀಸರ್‌ ಬಂತು

BBK11: ಸತತ ಮೂರನೇ ವಾರವೂ ಕಳಪೆ ಪಟ್ಟಿ: ಖುಷಿಯಿಂದಲೇ ಜೈಲು ಸೇರಿದ ಚೈತ್ರಾ

BBK11: ಸತತ ಮೂರನೇ ವಾರವೂ ಕಳಪೆ ಪಟ್ಟಿ: ಖುಷಿಯಿಂದಲೇ ಜೈಲು ಸೇರಿದ ಚೈತ್ರಾ

KD

Dhruva-Prem: ಡಿ.24ಕ್ಕೆ ʼಕೆಡಿʼ ಶಿವ ಶಿವ ಹಾಡು ರಿಲೀಸ್‌

Dhruva Sarja: ಪ್ರತಿ ಸಿನಿಮಾವೂ ನನಗೆ ಹೊಸ ಪಾಠ…: ಧ್ರುವ ಹೇಳಿದ್ದೇನು

Dhruva Sarja: ಪ್ರತಿ ಸಿನಿಮಾವೂ ನನಗೆ ಹೊಸ ಪಾಠ…: ಧ್ರುವ ಹೇಳಿದ್ದೇನು

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

4

Karkala: ಅಸ್ವಸ್ಥಗೊಂಡು ವ್ಯಕ್ತಿ ಸಾವು

sullia

Davanagere: ವೃದ್ಧೆ ಮೇಲೆ ಅತ್ಯಾ*ಚಾರ; ಯುವಕನಿಗೆ 10 ವರ್ಷ ಕಠಿಣ ಶಿಕ್ಷೆ

1-vasu

Vasundhara Raje ಬೆಂಗಾವಲು ವಾಹನ ಪಲ್ಟಿ; ನಾಲ್ವರು ಪೊಲೀಸರಿಗೆ ಗಾಯ

Baduta-Mandya

Mandya: ಸಾಹಿತ್ಯ ಸಮ್ಮೇಳನದಲ್ಲಿ ಬಾಡೂಟ ಗಲಾಟೆ: ಪೊಲೀಸರೊಂದಿಗೆ ಮಾತಿನ ಚಕಮಕಿ!

1-women

ODI; ವೆಸ್ಟ್ ಇಂಡೀಸ್ ವಿರುದ್ಧ ಭಾರತದ ವನಿತೆಯರಿಗೆ 211 ರನ್ ಜಯ:ಸ್ಮೃತಿ ನರ್ವಸ್ 90

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.