ಅಖಾಡಕ್ಕಿಳಿದ ರಾಜಣ್ಣನ ಮಗ
Team Udayavani, Mar 15, 2019, 12:30 AM IST
ಕೋಲಾರ ಸೀನು ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿರುವ “ರಾಜಣ್ಣನ ಮಗ’ ತೆರೆಗೆ ಬರೋದಕ್ಕೆ ಸಿದ್ಧವಾಗಿದ್ದಾನೆ. ಆರಂಭದಲ್ಲಿ “ರಾಜಣ್ಣನ ಮಗ’ ಚಿತ್ರದ ಟೈಟಲ್ ಬಗ್ಗೆ ಒಂದಷ್ಟು ಅಂತೆ-ಕಂತೆಗಳು ಹರಿದಾಡಿ ಕಾಂಟ್ರವರ್ಸಿಗೆ ಕಾರಣವಾಗಿತ್ತು. ಈ ಚಿತ್ರಕ್ಕೂ ಅಣ್ಣಾವ್ರ ಫ್ಯಾಮಿಲಿಗೂ ಏನಾದರೂ ಸಂಬಂಧವಿದೆಯಾ? ಎನ್ನುವ ಪ್ರಶ್ನೆ ಕೂಡ ಎದ್ದಿತ್ತು. ನಂತರದ ಚಿತ್ರತಂಡ ಈ ಬಗ್ಗೆ ಇದ್ದ ಎಲ್ಲಾ ಗೊಂದಲಗಳಿಗೂ ತೆರೆ ಎಳೆದಿತ್ತು.
ಅಂತಿಮವಾಗಿ ಕಳೆದ ಎರಡು-ಮೂರು ತಿಂಗಳಿನಿಂದ ಪ್ರಮೋಶನ್ ಕೆಲಸಗಳಲ್ಲಿ ನಿರತನಾಗಿದ್ದ “ರಾಜಣ್ಣನ ಮಗ’ ಈ ವಾರ ತೆರೆಗೆ ಅಡಿಯಿಡುತ್ತಿದ್ದಾನೆ. ಇನ್ನು ಚಿತ್ರದ ಬಿಡುಗಡೆಗೂ ಮೊದಲು ಮಾಧ್ಯಮಗಳ ಮುಂದೆ ಬಂದಿದ್ದ “ರಾಜಣ್ಣನ ಮಗ’ ಮತ್ತವನ ಬಳಗ ಚಿತ್ರದ ವಿಶೇಷತೆಗಳು ಮತ್ತು ಬಿಡುಗಡೆಯ ಯೋಜನೆಗಳ ಬಗ್ಗೆ ಮಾತನಾಡಿತು. ನಿರ್ದೇಶಕ ಕೋಲಾರ ಸೀನು ಹೇಳುವಂತೆ, ಚಿತ್ರದ ಟೈಟಲ್‌ನಲ್ಲಿರುವಂತೆ ರಾಜಣ್ಣ ಎಂಬ ಆದರ್ಶ ತಂದೆ ಮತ್ತು ಅವನ ಮಗನ ನಡುವಿನ ಕಥೆಯೇ ಈ ಚಿತ್ರ. ತನ್ನ ಮಗ ದೊಡ್ಡ ಮನುಷ್ಯನಾಗಬೇಕು ಎಂದು ಕನಸು ಕಾಣುವ ರಾಜಣ್ಣನಿಗೆ ಅವನ ಮಗ ಆ ಕನಸುಗಳನ್ನು ನನಸು ಮಾಡುತ್ತಾನಾ? ಅನ್ನೋದು ಚಿತ್ರದ ಕಥೆಯ ಒಂದು ಎಳೆ. ಇದೊಂದು ತಂದೆ-ಮಗನ ಸೆಂಟಿಮೆಂಟ್ ಚಿತ್ರ. ಇದರಲ್ಲಿ ತಂದೆಯ ಪಾತ್ರ ತುಂಬಾ ಪ್ರಮುಖವಾಗಿದ್ದು, ಆ ಪಾತ್ರದ ಹೆಸರೇ ರಾಜಣ್ಣ. ಅದಕ್ಕಾಗಿ ಚಿತ್ರಕ್ಕೆ ರಾಜಣ್ಣನ ಮಗ ಹೆಸರಿಡಲಾಗಿದೆ ಎನ್ನುತ್ತಾರೆ.
ಇನ್ನು ಚಿತ್ರದಲ್ಲಿ ರಾಜಣ್ಣನ ಪಾತ್ರದಲ್ಲಿ ಹಿರಿಯ ನಟ ಚರಣ್ ರಾಜ್ ಕಾಣಿಸಿಕೊಂಡರೆ, “ರಾಜಣ್ಣನ ಮಗ’ನ ಪಾತ್ರದಲ್ಲಿ ಹರೀಶ್ ಕಾಣಿಸಿಕೊಂಡಿದ್ದಾರೆ. ಮಗನ ಪಾತ್ರದಲ್ಲಿ ನಟ ಹರೀಶ್ ಖಡಕ್ಕಾಗಿ ಕಾಣಿಸಿಕೊಂಡಿದ್ದು, ಈ ಚಿತ್ರದ ಮೂಲಕ ಗಾಂಧಿನಗರಕ್ಕೆ ಒಳ್ಳೆಯ ಮಾಸ್ ಹೀರೋ ಸಿಗಲಿದ್ದಾನೆ ಅನ್ನೋದು ಚಿತ್ರತಂಡದ ಭರವಸೆಯ ಮಾತು.
ಚಿತ್ರದಲ್ಲಿ ನಾಯಕಿಯಾಗಿ ಅಕ್ಷತಾ ನಟಿಸಿದ್ದಾರೆ. ಉಳಿದಂತೆ ರಾಜೇಶ್ ನಟರಂಗ, ಕರಿಸುಬ್ಬು, ಶರತ್ ಲೋಹಿತಾಶ್ವ, ಮೈಕೋ ನಾಗರಾಜ್, ರಮೇಶ್ ಪಂಡಿತ್, ರಾಜ್ ರೆಡ್ಡಿ, ಕುರಿ ರಂಗ ಮುಂತಾದವರು ಚಿತ್ರದ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಇನ್ನು ಚಿತ್ರದಲ್ಲಿ ಐದು ಹಾಡುಗಳಿಗೆ ರವಿ ಬಸ್ರೂರ್ ಸಂಗೀತ ನೀಡಿದ್ದಾರೆ. ಕೆ.ಕಲ್ಯಾಣ್, ಮಳವಳ್ಳಿ ಸಾಯಿಕೃಷ್ಣ ಸಾಹಿತ್ಯ ಒದಗಿಸಿದ್ದಾರೆ. ಚಿತ್ರಕ್ಕೆ ಸಿದ್ದಪ್ಪಾಜಿ ಸಂಭಾಷಣೆ ಬರೆದಿದ್ದಾರೆ. ಪ್ರಮೋದ್. ಆರ್ ಛಾಯಾಗ್ರಹಣ, ಹರೀಶ್ ಗೌಡ ಸಂಕಲನವಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sandalwood: ಸ್ಟಾರ್ ಸಿನಿಮಾ ಹೆಚ್ಚು ಬಂದರೆ ಚಿತ್ರರಂಗಕ್ಕೆ ಪೂರಕ: ಎನ್. ನರಸಿಂಹಲು
Dhruva-Prem: ಡಿ.24ಕ್ಕೆ ʼಕೆಡಿʼ ಶಿವ ಶಿವ ಹಾಡು ರಿಲೀಸ್
Dhruva Sarja: ಪ್ರತಿ ಸಿನಿಮಾವೂ ನನಗೆ ಹೊಸ ಪಾಠ…: ಧ್ರುವ ಹೇಳಿದ್ದೇನು
Kiccha Sudeepa; ತಾಯಿಯನ್ನು ಉಳಿಸಿಕೊಳ್ಳಲಾಗದ ಆ ಕ್ಷಣ ನಾನು ಯೂಸ್‌ಲೆಸ್ ಅನಿಸಿತು…
UI Movie: 9 ವರ್ಷ ಬಳಿಕ ಉಪ್ಪಿ ಡೈರೆಕ್ಟ್ ಮಾಡಿದ ಯು-ಐ ಸಿನಿಮಾದ ಹೈಲೈಟ್ಸ್ ಏನು?
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
laws: ಕಠಿಣ ಕಾಯ್ದೆ ಇರುವುದು ಸ್ತ್ರೀ ರಕ್ಷಣೆಗೆ, ದುರ್ಬಳಕೆ ಸಲ್ಲ: ಸುಪ್ರೀಂ ಕೋರ್ಟ್
Daily Horoscope: ಈ ರಾಶಿಯವರಿಗಿಂದು ಅನಿರೀಕ್ಷಿತ ಮೂಲದಿಂದ ಧನಪ್ರಾಪ್ತಿ
Mangaluru: ಬಾಲಕಿ, ಮಹಿಳೆಯ ವೀಡಿಯೋ ಚಿತ್ರೀಕರಣ: ಆರೋಪಿಗೆ 5 ವರ್ಷಗಳ ಜೈಲು ಶಿಕ್ಷೆ
World Meditation Day; ಶರೀರಕ್ಕೆ ಊಟ, ಆತ್ಮಕ್ಕೆ ಧ್ಯಾನ
AICC ಅಧಿವೇಶನ: ಮುಖ್ಯಮಂತ್ರಿ ಅಧ್ಯಕ್ಷತೆಯಲ್ಲಿಂದು ಮಹತ್ವದ ಸಭೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.