![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
Team Udayavani, Oct 9, 2020, 1:34 PM IST
ರಾಘವೇಂದ್ರ ರಾಜ್‌ಕುಮಾರ್ ಈಗಾಗಲೇ ಒಂದಷ್ಟು ಸಿನಿಮಾಗಳನ್ನು ಒಪ್ಪಿಕೊಂಡು ಮತ್ತೆ ನಟನೆಗೆ ಮರಳಿರುವ ವಿಚಾರ ನಿಮಗೆ ಗೊತ್ತೆ ಇದೆ. ಈಗ ಅವರು ಹೊಸ ಚಿತ್ರ “ರಾಜತಂತ್ರ’ದ ಚಿತ್ರೀಕರಣಕ್ಕೆಅಣಿಯಾಗುತ್ತಿದ್ದಾರೆ. ಮೊದಲ ಹಂತವಾಗಿ ಇತ್ತೀಚೆಗೆ ಚಿತ್ರದ ಮುಹೂರ್ತ ಸಮಾರಂಭ ನಡೆಯಿತು.
ಈ ಚಿತ್ರವನ್ನು ಪಿ.ವಿ.ಆರ್.ಸ್ವಾಮಿ ಈ ಚಿತ್ರದನಿರ್ದೇಶಕರು. ವಿಶ್ವಂ ಡಿಜಿಟಲ್ ಮೀಡಿಯಾನಿರ್ಮಾಣದಲ್ಲಿ ಈ ಚಿತ್ರ ಮೂಡಿಬರಲಿದೆ. ಚಿತ್ರದ ಬಗ್ಗೆ ಮಾತನಾಡುವ ನಿರ್ದೇಶಕರು, ರಾಜತಂತ್ರ ಚಿತ್ರ ದೇಶವನ್ನುಅಸ್ಥಿರಗೊಳಿಸುವ ವಿವಿಧ ಶಕ್ತಿಗಳ ವಿರುದ್ಧ ಸಾಮಾನ್ಯ ಮತ್ತುಅಸಾಮಾನ್ಯರ ಸಂಘರ್ಷ ಮತ್ತು ಹೋರಾಟಗಳ ಅನಾವರಣ ಎನ್ನುತ್ತಾರೆ. ರಾಘವೆಂದ್ರ ರಾಜ್‌ಕುಮಾರ್ ಇಲ್ಲಿ ನಾಯಕರಾಗಿ ನಟಿಸುತ್ತಿದ್ದು, ಚಿತ್ರದಲ್ಲಿ ಅವರು ನಿವೃತ್ತ ಸೈನಿಕರಾಗಿ ಕಾಣಿಸಿಕೊಳ್ಳಲಿದ್ದಾರೆ. ತಮ್ಮ ಚಾಣಕ್ಯತನದಿಂದ ದುಷ್ಟಶಕ್ತಿಗಳನ್ನ ಹೇಗೆ ಮಣಿಸುತ್ತಾರೆ ಎಂಬ ಅಂಶದೊಂದಿಗೆ ಚಿತ್ರ ಸಾಗುತ್ತದೆಯಂತೆ. ಚಿತ್ರದ ಬಗ್ಗೆ ರಾಘವೇಂದ್ರ ರಾಜ್ ಕುಮಾರ್ ಕೂಡಾ ಖುಷಿಯಿಂದ ಮಾತನಾಡಿದರು.
“ಒಳ್ಳೆಯ ಪಾತ್ರ ಸಿಕ್ಕಿದೆ. ದೇಶಪ್ರೇಮಿವಿರುವ ಪಾತ್ರ’ ಎಂದರು. ಹೊಸ ಬಗೆಯ ಪಾತ್ರವಿದೆಯಂತೆ. ಚಿತ್ರದಕಥೆ, ಚಿತ್ರಕಥೆ ಹಾಗೂ ಸಂಭಾಷಣೆಯ ಜವಾಬ್ದಾರಿಯನ್ನು ಜೆ.ಎಮ್.ಪ್ರಹ್ಲಾದ್ ವಹಿಸಿಕೊಂಡಿದ್ದಾರೆ. ಅವರ ಪ್ರಕಾರ, “ರಾಜತಂತ್ರ’ ಕನ್ನಡಕ್ಕೊಂದು ಹೊಸ ಬಗೆಯ ಸಿನಿಮಾವಾಗಲಿದೆ.
ಕಮರ್ಷಿಯಲ್ ಅಂಶಗಳೊಂದಿಗೆ ಚಿತ್ರ ಪ್ರೇಕ್ಷಕರನ್ನು ಸೆಳೆಯಲಿದೆ ಎಂಬ ವಿಶ್ವಾಸ ಪ್ರಹ್ಲಾದ್ ಅವರದು. ನಿರ್ದೇಶಕ ಪಿ.ವಿ.ಆರ್.ಸ್ವಾಮಿಯವರೇ ಈ ಚಿತ್ರದ ಛಾಯಾಗ್ರಹಣವನ್ನು ವಹಿಸಿಕೊಂಡಿದ್ದಾರೆ. ಇದುವರೆಗೆ 30 ಸಿನಿಮಾಗಳಿಗೆ ಛಾಯಾಗ್ರಾಹಕರಾಗಿ ದುಡಿದ ಅನುಭವ ಸ್ವಾಮಿಯವರಿಗಿದೆ.
Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್
Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?
Bharamasagara: ವಿದ್ಯುತ್ ಕಿಡಿಗೆ ಎರಡು ಮೇವಿನ ಬಣವೆ ಸಂಪೂರ್ಣ ಭಸ್ಮ
You seem to have an Ad Blocker on.
To continue reading, please turn it off or whitelist Udayavani.