ಸನಿಹ ಬರುವ ಸಮಯ

ರಾಜ್‌ ಮೊಮ್ಮಗಳ ರೊಮ್ಯಾಂಟಿಕ್‌ ಕಾಮಿಡಿ

Team Udayavani, Feb 28, 2020, 5:08 AM IST

ego-35

“ಮದರಂಗಿ’ ಕೃಷ್ಣ, “ದುನಿಯಾ’ ವಿಜಯ್‌ ಹೀಗೆ ಇತ್ತೀಚೆಗೆ ಕನ್ನಡ ಚಿತ್ರರಂಗದಲ್ಲಿ ಹಲವು ನಾಯಕ ನಟರು ನಿಧಾನವಾಗಿ ನಿರ್ದೇಶನದತ್ತ ಮುಖ ಮಾಡುತ್ತಿದ್ದಾರೆ. ಈಗ ಈ ಸಾಲಿಗೆ , ಮತ್ತೂಂದು ಹೆಸರು ಸೇರ್ಪಡೆಯಾಗುತ್ತಿದೆ. ಅವರೇ ಸೂರಜ್‌ ಗೌಡ. “ಮದುವೆಯ ಮಮತೆಯ ಕರೆಯೋಲೆ’ ಮೂಲಕ ಚಿತ್ರರಂಗ ಪ್ರವೇಶಿಸಿದ ಸೂರಜ್‌ ಗೌಡ, ಈಗ ನಟನೆ ಜೊತೆಗೆ ನಿರ್ದೇಶಕನ ಕ್ಯಾಪ್‌ ತೊಟ್ಟಿದ್ದಾರೆ. ಅಂದಹಾಗೆ ಸೂರಜ್‌ ಗೌಡ, ತಾವೇ ಬಯಸಿ ನಿರ್ದೇಶಕನ ಸ್ಥಾನ ಅಲಂಕರಿಸಿದ್ದಲ್ಲ. ಬದಲಾಗಿ ತಾನೇ ಹುಡುಕಿಕೊಂಡು ಬಂದ ಅನಿವಾರ್ಯ ಸನ್ನಿವೇಶವೊಂದು ಅವರನ್ನು ನಿರ್ದೇಶಕನನ್ನಾಗಿ ಮಾಡಿದೆ. ಸೂರಜ್‌ ಗೌಡ ತಾನೇ ಬರೆದು ನಾಯಕನಾಗಿ ಅಭಿನಯಿಸಬೇಕಿದ್ದ “ನಿನ್ನ ಸನಿಹಕೆ’ ಚಿತ್ರಕ್ಕೆ ಆರಂಭದಲ್ಲಿ ಸುಮನ್‌ ಜಾದೂಗರ್‌ ನಿರ್ದೇಶನ ಮಾಡಬೇಕಿತ್ತು. ಆದರೆ ಚಿತ್ರ ಶುರುವಾಗುವ ಹೊತ್ತಿಗೆ ಸುಮನ್‌ ಜಾದೂಗರ್‌ ಅಪಘಾತಕ್ಕಿಡಾಗಿ ಕೆಲ ತಿಂಗಳು ವಿಶ್ರಾಂತಿ ಪಡೆಯಬೇಕಾಗಿದ್ದರಿಂದ, ನಿರ್ದೇಶನದ ಜವಾಬ್ದಾರಿ ಸೂರಜ್‌ ಗೌಡ ಹೆಗಲಿಗೇರಿತು. ಮಾಧ್ಯಮಗಳ ಮುಂದೆ ಬಂದಿದ್ದ ಚಿತ್ರತಂಡ, “ನಿನ್ನ ಸನಿಹಕೆ’ ಚಿತ್ರ ಸಾಗಿಬಂದ ಈ ಎಲ್ಲ ವೃತ್ತಾಂತಗಳನ್ನು ಎಳೆ ಎಳೆಯಾಗಿ ಬಿಚ್ಚಿಟ್ಟಿತು.

ನಾಯಕನಾಗಿ ಮತ್ತು ನಿರ್ದೇಶಕನಾಗಿ ಚಿತ್ರದ ಬಗ್ಗೆ ಮಾತನಾಡಿದ ಸೂರಜ್‌ ಗೌಡ, “ನಾನು ಇಲ್ಲಿಯವರೆಗೆ ಐದು ಸಿನಿಮಾಗಳಲ್ಲಿ ಕೆಲಸ ಮಾಡಿದ್ದೇನೆ. ಈ ವೇಳೆ ನಟನೆ ಜೊತೆ ಜೊತೆಗೆ ನಿರ್ದೇಶನ ಸೇರಿದಂತೆ ಸಿನಿಮಾದ ಬೇರೆ ಬೇರೆ ಕೆಲಸಗಳನ್ನೂ ಕಲಿತುಕೊಳ್ಳುತ್ತಿದ್ದೆ. ನಾನೇ ಬರೆದ ಈ ಕಥೆಗೆ ನಾನೇ ನಿರ್ದೇಶಕನಾಗುತ್ತೇನೆ ಅಂದುಕೊಂಡಿರಲಿಲ್ಲ. ಅನಿರೀಕ್ಷಿತವಾಗಿ ಬಂದ ಅವಕಾಶ ಮತ್ತು ಸನ್ನಿವೇಶ ಈ ಸಿನಿಮಾದಲ್ಲಿ ನನ್ನನ್ನು ನಟನೆ ಜೊತೆಗೆ ನಿರ್ದೇಶಕನನ್ನಾಗಿಯೂ ಮಾಡಿತು. ನಟನೆ ಮತ್ತು ನಿರ್ದೇಶನ ಎರಡರಲ್ಲೂ ನನ್ನ ಕೈಲಾದ ಮಟ್ಟಿಗೆ ಬೆಸ್ಟ್‌ ಎನಿಸುವಂಥ ಪರ್ಫಾರ್ಮೆನ್ಸ್‌ ಕೊಡುವ ಪ್ರಯತ್ನ ಮಾಡಿದ್ದೇನೆ ‘ ಎಂದು ಭರವಸೆಯ ಮಾತುಗಳನ್ನಾಡಿದರು ಸೂರಜ್‌.

ಇನ್ನು “ನಿನ್ನ ಸನಿಹಕೆ’ ಚಿತ್ರದ ಮೂಲಕ ನಟ ರಾಮ್‌ಕುಮಾರ್‌ ಪುತ್ರಿ ಧನ್ಯಾ ರಾಮ್‌ಕುಮಾರ್‌ ನಾಯಕಿಯಾಗಿ ಪರಿಚಯವಾಗುತ್ತಿದ್ದಾರೆ. ಚಿತ್ರದ ಬಗ್ಗೆ ಮತ್ತು ತಮ್ಮ ಪಾತ್ರದ ಬಗ್ಗೆ ಮಾತಿಗಿಳಿದ ಧನ್ಯಾ ರಾಮ್‌ಕುಮಾರ್‌, “ಇಂಥದ್ದೊಂದು ಒಳ್ಳೆಯ ಟೀಮ್‌ ಸಿಕ್ಕಿದ್ದರಿಂದ, ನನ್ನ ಮೊದಲ ಸಿನಿಮಾದಲ್ಲಿಯೇ ಸಾಕಷ್ಟು ಕಲಿತುಕೊಳ್ಳಲು ಸಾಧ್ಯವಾಯ್ತು. ಈ ಸಿನಿಮಾ ಮತ್ತು ನನ್ನ ಪಾತ್ರ ಸಾಕಷ್ಟು ಕಲಿಸಿದೆ. ನಮ್ಮ ನಡುವೆಯೇ ನಡೆಯುವ ಕಥೆಯೊಂದು, ಎಲ್ಲರಿಗೂ ಇಷ್ಟವಾಗುವಂತೆ ತೆರೆ ಮೇಲೆ ಬರುತ್ತಿದೆ. ಎಲ್ಲರಿಗೂ ಇಷ್ಟವಾಗುವುದೆಂಬ ನಂಬಿಕೆ ಇದೆ’ ಎಂದರು ಧನ್ಯಾ.

“ವೈಟ್‌ ಆಂಡ್‌ ಗ್ರೇ ಪಿಕ್ಚರ್’ ಬ್ಯಾನರ್‌ ಮೂಲಕ ಅಕ್ಷಯ ರಾಜಶೇಖರ್‌, ರಂಗನಾಥ ಕೂಡ್ಲಿ ಈ ಚಿತ್ರಕ್ಕೆ ನಿರ್ಮಾಪಕರು. ಚಿತ್ರಕ್ಕೆ ಅಭಿಲಾಶ್‌ ಕಳತ್ತಿ ಛಾಯಾಗ್ರಹಣವಿದೆ. ಸುರೇಶ ಆರ್ಮುಗಂ ಸಂಕಲನವಿದೆ. ರಘು ದೀಕ್ಷಿತ್‌ ಸಂಗೀತ ಸಂಯೋಜಿಸಿದ್ದಾರೆ. ಪ್ರವೀಣ ಕುಮಾರ್‌ ಜೆ ಸಂಭಾಷಣೆ, ವಾಸುಕಿ ವೈಭವ್‌ ಸಾಹಿತ್ಯವಿದೆ.

“ನಿನ್ನ ಸನಿಹಕೆ’ ಚಿತ್ರದ ರೊಮ್ಯಾಂಟಿಕ್‌ ಕಾಮಿಡಿ ಶೈಲಿಯಲ್ಲಿ ಮೂಡಿ ಬಂದಿದ್ದು, ಚಿತ್ರದಲ್ಲಿ 2 ಭರ್ಜರಿ ಫೈಟ್ಸ್, 4 ಮೆಲೋಡಿ ಸಾಂಗ್‌ ಇದೆ. ಬೆಂಗಳೂರು, ಕೊಡಗು ಸುತ್ತಮುತ್ತ ಚಿತ್ರೀಕರಣ ನಡೆಸಲಾಗಿದೆ.

ಟಾಪ್ ನ್ಯೂಸ್

Sagara: ಚಿರತೆ ಉಗುರು, ಹಲ್ಲು ಅಕ್ರಮ ಸಾಗಣೆ… ಸೊತ್ತು ಸಮೇತ ವ್ಯಕ್ತಿ ವಶ

Sagara: ಚಿರತೆ ಉಗುರು, ಹಲ್ಲು ಅಕ್ರಮ ಸಾಗಣೆ… ಸೊತ್ತು ಸಮೇತ ವ್ಯಕ್ತಿ ವಶ

Mudhol: ಸಾಲಬಾಧೆಗೆ ಹೆದರಿ ರೈತ ಮಹಿಳೆ ಬಾವಿಗೆ ಹಾರಿ ಆತ್ಮಹತ್ಯೆ

Mudhol: ಸಾಲಬಾಧೆಗೆ ಹೆದರಿ ರೈತ ಮಹಿಳೆ ಬಾವಿಗೆ ಹಾರಿ ಆತ್ಮಹತ್ಯೆ

Belegavi: ‘ನಾ ಡ್ರೈವರ್’ ಹಾಡಿನ ಗಾಯಕ ಮಾಳು ನಿಪನಾಳನಿಂದ ಯುವಕನ ಮೇಲೆ ಹಲ್ಲೆ

Belegavi: ‘ನಾ ಡ್ರೈವರ್’ ಹಾಡಿನ ಗಾಯಕ ಮಾಳು ನಿಪನಾಳನಿಂದ ಯುವಕನ ಮೇಲೆ ಹಲ್ಲೆ

121

Horoscope: ಉದ್ಯೋಗ ಸ್ಥಾನದಲ್ಲಿ ಎರಡೂ ಬಗೆಯ ಅನುಭವಗಳು ಆಗಲಿದೆ

CM-Siddu-High-Court

MUDA Case: ತನಿಖೆ ಸಿಬಿಐಗೆ ವಹಿಸಲು ಹೈಕೋರ್ಟ್‌ಗೆ ಅರ್ಜಿ; ಇಂದು ವಿಚಾರಣೆ

Trump–Kamala

US Election 2024, Kamala Vs Trump: ಅಮೆರಿಕ ಅಧ್ಯಕ್ಷರ ಚುನಾವಣೆ ಹೇಗೆ? ಏನು? ಎತ್ತ?

ಮಂಗಳೂರಿಗೆ ವಾಟರ್‌ ವೆುಟ್ರೋ; ಎಂಡಬ್ಲ್ಯುಎಂಪಿ ನಿರ್ಮಾಣಕ್ಕೆ ಮುಂದಾಗಿರುವ ಕೆಎಂಬಿ

ಮಂಗಳೂರಿಗೆ ವಾಟರ್‌ ವೆುಟ್ರೋ; ಎಂಡಬ್ಲ್ಯುಎಂಪಿ ನಿರ್ಮಾಣಕ್ಕೆ ಮುಂದಾಗಿರುವ ಕೆಎಂಬಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

aaram aravinda swamy movie song hudukuta hoda

Aaram Aravinda Swamy: ಹುಡುಕತ್ತಾ ಹೋದ ಅರವಿಂದ್‌ ಸ್ವಾಮಿ

Sandalwood: ಗೆಲುವಿನ ಓಟದಲ್ಲಿ ಮಂಕಾದ ಹೊಸಬರು; ಕೈ ಹಿಡಿಯದ ಪ್ರೇಕ್ಷಕ

Sandalwood: ಗೆಲುವಿನ ಓಟದಲ್ಲಿ ಮಂಕಾದ ಹೊಸಬರು; ಕೈ ಹಿಡಿಯದ ಪ್ರೇಕ್ಷಕ

abhimanyu kashinath ellige payana yavudo daari movie

Ellige Payana Yavudo Daari Movie; ದಾರಿ ಹೊಸದಾಗಿದೆ ಗೆಲುವು ಬೇಕಾಗಿದೆ

Komal Kumar: ಯಲಾಕುನ್ನಿ ಪೈಸಾ ವಸೂಲ್‌ ಸಿನಿಮಾ

Komal Kumar: ಯಲಾಕುನ್ನಿ ಪೈಸಾ ವಸೂಲ್‌ ಸಿನಿಮಾ

director suri

Cini Talk: ಸಿನಿಮಾ ನಿರ್ದೇಶಕ ಬಿಝಿನೆಸ್‌ ಮ್ಯಾನ್‌ ಅಲ್ಲ!: ನಿರ್ದೇಶಕ ಸೂರಿ ಮಾತು

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

Sagara: ಚಿರತೆ ಉಗುರು, ಹಲ್ಲು ಅಕ್ರಮ ಸಾಗಣೆ… ಸೊತ್ತು ಸಮೇತ ವ್ಯಕ್ತಿ ವಶ

Sagara: ಚಿರತೆ ಉಗುರು, ಹಲ್ಲು ಅಕ್ರಮ ಸಾಗಣೆ… ಸೊತ್ತು ಸಮೇತ ವ್ಯಕ್ತಿ ವಶ

Mudhol: ಸಾಲಬಾಧೆಗೆ ಹೆದರಿ ರೈತ ಮಹಿಳೆ ಬಾವಿಗೆ ಹಾರಿ ಆತ್ಮಹತ್ಯೆ

Mudhol: ಸಾಲಬಾಧೆಗೆ ಹೆದರಿ ರೈತ ಮಹಿಳೆ ಬಾವಿಗೆ ಹಾರಿ ಆತ್ಮಹತ್ಯೆ

Belegavi: ‘ನಾ ಡ್ರೈವರ್’ ಹಾಡಿನ ಗಾಯಕ ಮಾಳು ನಿಪನಾಳನಿಂದ ಯುವಕನ ಮೇಲೆ ಹಲ್ಲೆ

Belegavi: ‘ನಾ ಡ್ರೈವರ್’ ಹಾಡಿನ ಗಾಯಕ ಮಾಳು ನಿಪನಾಳನಿಂದ ಯುವಕನ ಮೇಲೆ ಹಲ್ಲೆ

121

Horoscope: ಉದ್ಯೋಗ ಸ್ಥಾನದಲ್ಲಿ ಎರಡೂ ಬಗೆಯ ಅನುಭವಗಳು ಆಗಲಿದೆ

CM-Siddu-High-Court

MUDA Case: ತನಿಖೆ ಸಿಬಿಐಗೆ ವಹಿಸಲು ಹೈಕೋರ್ಟ್‌ಗೆ ಅರ್ಜಿ; ಇಂದು ವಿಚಾರಣೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.