ನಾರಾಯಣನ ತೃಪ್ತಿ ಮತ್ತು ಚಾರ್ಲಿಯ ಕನಸು
ರಕ್ಷಿತ್ ಬ್ಯಾಕ್ ಟು ಬ್ಯಾಕ್ ಸಿನ್ಮಾ
Team Udayavani, Mar 13, 2020, 5:41 AM IST
ರಕ್ಷಿತ್ ಶೆಟ್ಟಿ ಈಗ ಹೊಸ ಕನಸು ಕಟ್ಟಿಕೊಂಡು ತಮ್ಮ ಸಿನಿಪಯಣ ಶುರುವಿಟ್ಟುಕೊಂಡಿದ್ದಾರೆ. ಸದ್ಯಕ್ಕೆ ಅವರ ಫೋಕಸ್ “777 ಚಾರ್ಲಿ’. ಇದು ರಕ್ಷಿತ್ ಶೆಟ್ಟಿಯವರ ಹೊಸ ಸಿನಿಮಾ. ಇದು ಕೂಡಾ ರೆಗ್ಯುಲರ್ ಪ್ಯಾಟರ್ನ್ ಬಿಟ್ಟು ಮಾಡುತ್ತಿರುವ ಮತ್ತೂಂದು ಸಿನಿಮಾ….
“ಅವನೇ ಶ್ರೀಮನ್ನಾರಾಯಣ ನನಗೆ ತೃಪ್ತಿ ಕೊಟ್ಟಿದೆ. ನಾನು ಆ ವಿಚಾರದಲ್ಲಿ ಪೂರ್ಣ ತೃಪ್ತ’
-ಹೀಗೆ ಹೇಳಿ ಒಂದು ಕ್ಷಣ ಮೌನವಾದರು ರಕ್ಷಿತ್ ಶೆಟ್ಟಿ. ಮಾತು ಮತ್ತೆ ಮುಂದುವರೆಯಿತು. “ಕನ್ನಡದಲ್ಲಿ ಆ ಚಿತ್ರ ಚೆನ್ನಾಗಿ ಹೋಯಿತು. ಕಲೆಕ್ಷನ್‌ನಿಂದ ಹಿಡಿದು ಪ್ರತಿಯೊಂದು ವಿಚಾರದಲ್ಲೂ ಆ ಚಿತ್ರಕ್ಕೆ ಒಳ್ಳೆಯ ಮೈಲೇಜ್ ಇತ್ತು. ಆದರೆ ಬೇರೆ ಭಾಷೆಗಳಲ್ಲಿ ಮತ್ತಷ್ಟು ಚೆನ್ನಾಗಿ ಹೋಗಬೇಕಿತ್ತು’ ಎಂದರು ರಕ್ಷಿತ್ ಶೆಟ್ಟಿ. ಹೌದು, “ಅವನೇ ಶ್ರೀಮನ್ನಾರಾಯಣ’ ರಕ್ಷಿತ್ ಶೆಟ್ಟಿಯವರ ಬಹುನಿರೀಕ್ಷಿತ ಸಿನಿಮಾ. ಸಾಕಷ್ಟು ನಿರೀಕ್ಷೆ ಹುಟ್ಟಿಸಿದ್ದ ಈ ಸಿನಿಮಾ ಬಿಡುಗಡೆಯಾದ ಮೇಲೆ ಒಂದಷ್ಟು ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾದವು. ಅದೇನೇ ಮಿಶ್ರಪ್ರತಿಕ್ರಿಯೆ ಬಂದರೂ ಆ ಚಿತ್ರ ಕನ್ನಡದಲ್ಲಿ ದೊಡ್ಡ ಮಟ್ಟದ ಕಲೆಕ್ಷನ್ ಮಾಡಿದ್ದು ಸುಳ್ಳಲ್ಲ. ಸಿನಿಮಾ ಬಗ್ಗೆ “ಏನೋ’ ಅಂದುಕೊಂಡಿದ್ದ ಮಂದಿಯೇ ಆರಂಭದ ವಾರಗಳಲ್ಲಿ ಆ ಚಿತ್ರದ ಕಲೆಕ್ಷನ್ ನೋಡಿ ಅಚ್ಚರಿಪಟ್ಟಿದ್ದರು. ಆದರೆ, ಕನ್ನಡದಲ್ಲಿ ಆದಂತೆ ಆ ಚಿತ್ರಕ್ಕೆ ಬೇರೆ ಭಾಷೆಗಳಲ್ಲಿ ಅಷ್ಟೇನೂ “ಸ್ವಾಗತ’ ಸಿಗಲಿಲ್ಲ. ಈ ಬೇಸರ ರಕ್ಷಿತ್ ಶೆಟ್ಟಿಯವರಿಗಿದೆ. ಬೇರೆ ಭಾಷೆಗಳಲ್ಲಿ ಆ ಸಿನಿಮಾ ಮತ್ತಷ್ಟು ರೀಚ್ ಆಗಬೇಕಿತ್ತು ಎಂಬ ಸಣ್ಣ ಬೇಸರ ರಕ್ಷಿತ್ ಶೆಟ್ಟಿಯವರದು. ಹಾಗಾದರೆ ಬೇರೆ ಭಾಷೆಗಳಲ್ಲಿ ತೊಡಕಾಗಿದ್ದು ಏನು ಎಂದು ನೀವು ಕೇಳಬಹುದು. ರಕ್ಷಿತ್ ಗಮನಕ್ಕೆ ಬಂದಂತೆ ಅಲ್ಲಿ ಮತ್ತಷ್ಟು ಪ್ರಚಾರ ಬೇಕಿತ್ತು. ಜೊತೆಗೆ ಆ ಚಿತ್ರರಂಗದ ಮಂದಿಯ ಬೆಂಬಲ ಕೂಡಾ ಬೇಕಿತ್ತು. ಹಾಗಂತ ರಕ್ಷಿತ್ ಶೆಟ್ಟಿ ಈಗ ಅದನ್ನೇ ಮೆಲುಕು ಹಾಕುತ್ತಾ ಕುಳಿತಿಲ್ಲ. ಹೊಸ ಕನಸು ಕಟ್ಟಿಕೊಂಡು ತಮ್ಮ ಸಿನಿಪಯಣ ಶುರುವಿಟ್ಟುಕೊಂಡಿದ್ದಾರೆ. ಸದ್ಯಕ್ಕೆ ಅವರ ಫೋಕಸ್ “777 ಚಾರ್ಲಿ’. ಇದು ರಕ್ಷಿತ್ ಶೆಟ್ಟಿಯವರ ಹೊಸ ಸಿನಿಮಾ. ಇದು ಕೂಡಾ ರೆಗ್ಯುಲರ್ ಪ್ಯಾಟರ್ನ್ ಬಿಟ್ಟು ಮಾಡುತ್ತಿರುವ ಸಿನಿಮಾ. ಶ್ವಾನ ಹಾಗೂ ಮನುಷ್ಯ ಸಂಬಂಧವೊಂದರ ಸುತ್ತ ಈ ಸಿನಿಮಾ ಸಾಗಲಿದೆ.
ಮುಖ್ಯವಾಗಿ “777 ಚಾರ್ಲಿ’ ಒಂದು ಜರ್ನಿ ಸಬೆjಕ್ಟ್. ಅದೇ ಕಾರಣದಿಂದ ರಕ್ಷಿತ್ ಹಲವು ರಾಜ್ಯಗಳನ್ನು ಈ ರಕ್ಷಿತ್ ಸುತ್ತುತ್ತಿದ್ದಾರೆ. “777 ಚಾರ್ಲಿ’ ಒಂದು ಜರ್ನಿ ಸಬೆjಕ್ಟ್. ಹಾಗಾಗಿ, ಬೇರೆ ಬೇರೆ ರಾಜ್ಯಗಳನ್ನು ಸುತ್ತಾಡಿಕೊಂಡೇ ಬರಬೇಕಾದ ಅನಿವಾರ್ಯತೆ ಕತೆಯಲ್ಲಿರುವ ಕಾರಣ ಚಿತ್ರೀಕರಣ ದಿನಗಳ ಕೂಡಾ ಹೆಚ್ಚಾಗುತ್ತಿವೆ ಎನ್ನುವುದು ರಕ್ಷಿತ್ ಶೆಟ್ಟಿ ಮಾತು.
ಗೋವಾ, ಗುಜರಾತ್, ರಾಜಸ್ತಾನ್, ಪಂಜಾಬ್, ಹಿಮಾಚಲ ಪ್ರದೇಶ, ಕಾಶ್ಮೀರಗಳಲ್ಲಿ “777 ಚಾರ್ಲಿ’ ಚಿತ್ರೀಕರಣ ನಡೆಯಲಿದೆ. ಇದು ಮನುಷ್ಯ ಮತ್ತು ಶ್ವಾನವೊಂದರ ನಡುವಿನ ಬಾಂಧವ್ಯದ ಕಥೆಯ ಜೊತೆಗೆ ಹಲವು ಅಂಶಗಳನ್ನು ಹೊಂದಿರುವುದರಿಂದ ಬೇರೆ ಬೇರೆ ರಾಜ್ಯಗಳನ್ನು ಸುತ್ತಾಡಬೇಕಿದೆ
“777′ ಚಾರ್ಲಿ’ 100 ದಿನಗಳ ಚಿತ್ರೀಕರಣ ದಾಟಿ ಮುನ್ನಡೆಯುತ್ತಿದೆ. ಇನ್ನೂ ಸಾಕಷ್ಟು ದಿನಗಳ ಚಿತ್ರೀಕರಣ ಬಾಕಿ ಇದೆ. ರಕ್ಷಿತ್ ಶೆಟ್ಟಿ ಹೇಳುವಂತೆ “ಚಾರ್ಲಿ’ಗೆ 140ಕ್ಕೂ ಹೆಚ್ಚು ದಿನಗಳ ಚಿತ್ರೀಕರಣ ಆಗುವ ಸಾಧ್ಯತೆ ಇದೆ. . ಈ ಹಿಂದೆ ರಕ್ಷಿತ್ ಶೆಟ್ಟಿಯವರ “ಅವನೇ ಶ್ರೀಮನ್ನಾರಾಯಣ’ ಚಿತ್ರ 200ಕ್ಕೂ ಹೆಚ್ಚು ದಿನಗಳ ಕಾಲ ಚಿತ್ರೀಕರಣವಾಗಿತ್ತು. ಕಿರಣ್ ರಾಜ್ ಈ ಚಿತ್ರದ ನಿರ್ದೇಶಕರು.
ಪುಣ್ಯಕೋಟಿ ಮೊದಲು ರಿಚ್ಚಿ: ರಕ್ಷಿತ್ ಸದ್ಯ “777 ಚಾರ್ಲಿ’ಯಲ್ಲಿ ಬಿಝಿ. ಅದು ಮುಗಿಸಿಕೊಂಡು ಹೊಸ ಸಿನಿಮಾದಲ್ಲಿ ತೊಡಗಲಿದ್ದಾರೆ. ಅನೇಕರು ರಕ್ಷಿತ್ ಶೆಟ್ಟಿ “ಪುಣ್ಯಕೋಟಿ’ ಚಿತ್ರವನ್ನು ಕೈಗೆತ್ತಿಕೊಳ್ಳಲಿದ್ದಾರೆ. ಈ ಚಿತ್ರವನ್ನು ರಾಹುಲ್ ಎನ್ನುವವರು ನಿರ್ದೇಶಿಸಲಿದ್ದಾರೆ. ಈ ಹಿಂದೆ ರಕ್ಷಿತ್ ಅವರ ಹಲವು ಚಿತ್ರಗಳಲ್ಲಿ ಸಹಾಯಕರಾಗಿದ್ದ ರಾಹುಲ್ “ರಿಚ್ಚಿ’ ಮೂಲಕ ಸ್ವತಂತ್ರ ನಿರ್ದೇಶಕರಾಗು ತ್ತಿದ್ದಾರೆ. ಇನ್ನು, ಇತ್ತೀಚೆಗಷ್ಟೇ ರಕ್ಷಿತ್ ಕೊಡೈಕೆನಾಲ್‌ನ ಸುಂದರ ಪರಿಸರದಲ್ಲಿ ತಮ್ಮ ಹೊಸ ಚಿತ್ರ “ಪುಣ್ಯಕೋಟಿ’ಯ ಕಥೆ ಬರೆಯಲು ಹೋಗಿದ್ದರು. ಈ ಬಗ್ಗೆ ಮಾತನಾಡುವ ರಕ್ಷಿತ್, “10 ದಿನಗಳ ಕಾಲ ಕೊಡೈಕೆನಾಲ್‌ನಲ್ಲಿ “ಪುಣ್ಯಕೋಟಿ’ಗಾಗಿ ಕಥೆ ಬರೆದೆ. ಇನ್ನು ಸಾಕಷ್ಟು ಕೆಲಸವಿದೆ. ಈಗ ರಾಜಸ್ತಾನದಲ್ಲಿ ಚಿತ್ರೀಕರಣ ನಡೆಯುತ್ತಿದೆ. ಬಿಡುವಿನ ವೇಳೆಯಲ್ಲಿ ಇಲ್ಲಿ ಬರೆಯುತ್ತಿದ್ದೇನೆ’ ಎನ್ನುತ್ತಾರೆ.
ರವಿಪ್ರಕಾಶ್ ರೈ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
ಕಡಬ, ಬೆಳ್ತಂಗಡಿ ಸೇರಿದಂತೆ ಹಲವೆಡೆ ಮಾದಕವಸ್ತು, ಅಕ್ರಮ ಮದ್ಯ ಮಾರಾಟ ವಿರುದ್ಧ ಕಾರ್ಯಾಚರಣೆ
IPL Mega Auction: ಮೊದಲ ದಿನದ ಹರಾಜಿನ ಬಳಿಕ ಎಲ್ಲಾ 10 ತಂಡಗಳು ಹೀಗಿವೆ ನೋಡಿ
Rashmika Mandanna: ಸಾವಿರಾರು ಜನರ ಮುಂದೆ ಮದುವೆ ಆಗುವ ಹುಡುಗನ ಬಗ್ಗೆ ಮಾತನಾಡಿದ ರಶ್ಮಿಕಾ
Stock Market: ಷೇರುಪೇಟೆ ಸೂಚ್ಯಂಕ 1,300 ಅಂಕ ಜಿಗಿತ; ಅದಾನಿ ಗ್ರೂಪ್ ಷೇರು ಮೌಲ್ಯ ಏರಿಕೆ
Bidar: ವಕ್ಫ್ ಹೋರಾಟ ಆರಂಭಿಸಿದ ಯತ್ನಾಳ್- ಜಾರಕಿಹೊಳಿ ತಂಡ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.