ರಮೇಶ್ 101; ಕೊಲೆಯ ಬೆನ್ನತ್ತಿ ಹೊರಟ ಶಿವಾಜಿ
Team Udayavani, Feb 21, 2020, 6:08 AM IST
ಯಶಸ್ವಿಯಾಗಿ ನೂರು ಚಿತ್ರಗಳಲ್ಲಿ ಅಭಿನಯಿಸಿ, ಶತಕದ ಸಂಭ್ರಮದಲ್ಲಿರುವ ನಟ ರಮೇಶ್ ಅರವಿಂದ್, ಈ ವಾರ 101ನೇ ಚಿತ್ರದ ಮೂಲಕ ಪ್ರೇಕ್ಷಕರ ಮುಂದೆ ಬರುತ್ತಿದ್ದಾರೆ. ಅಂದಹಾಗೆ, ಆ ಚಿತ್ರದ ಹೆಸರು “ಶಿವಾಜಿ ಸುರತ್ಕಲ್’. ಇಲ್ಲಿಯವರೆಗೆ ನೂರು ಚಿತ್ರಗಳಲ್ಲೂ ಕಾಣಿಸಿಕೊಳ್ಳದ, ಡಿಫರೆಂಟ್ ಗೆಟಪ್ ಮತ್ತು ಶೇಡ್‌ನಲ್ಲಿ ರಮೇಶ್ ಅರವಿಂದ್ ಕಾಣಿಸಿ ಕೊಳ್ಳುತ್ತಿರುವುದು ಈ ಚಿತ್ರದ ವಿಶೇಷ. ಹಾಗಾದ್ರೆ ಈ ಬಾರಿ
ಶಿವಾಜಿ ಗೆಟಪ್‌ನಲ್ಲಿ ಬರುತ್ತಿರುವ ರಮೇಶ್ ಅರವಿಂದ್, ಈ ಚಿತ್ರದ ವಿಶೇಷತೆಗಳ ಬಗ್ಗೆ “ಶಿವಾಜಿ ಸುರತ್ಕಲ್’ನಿರ್ದೇಶಕ ಆಕಾಶ್ ಶ್ರೀವತ್ಸ ಒಂದಷ್ಟು ವಿಷಯಗಳನ್ನು ಹಂಚಿಕೊಂಡಿದ್ದಾರೆ.
ನಟ ಕಂ ನಿರ್ದೇಶಕನಾಗಿ ಗುರುತಿಸಿಕೊಂಡಿರುವ ರಮೇಶ್ ಅರವಿಂದ್, ಇಲ್ಲಿಯವರೆಗೆ ನೂರು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಹತ್ತಾರು ಪಾತ್ರಗಳನ್ನು ಲೀಲಾಜಾಲವಾಗಿ ನಿರ್ವಹಿಸಿದ್ದಾರೆ. ಕನ್ನಡದ ಪ್ರೇಕ್ಷಕರು ಕೂಡ ರಮೇಶ್ ಅರವಿಂದ್ ಅವರನ್ನು ನಾನಾ ಪಾತ್ರಗಳಲ್ಲಿ ನೋಡಿದ್ದಾರೆ, ಮೆಚ್ಚಿಕೊಂಡಿದ್ದಾರೆ. ಆದರೆ, “ಇಲ್ಲಿಯವರೆಗೆ ರಮೇಶ್ ಅರವಿಂದ್ ಅವರನ್ನು ಎಲ್ಲೂ ನೋಡದ ಪಾತ್ರವನ್ನು “ಶಿವಾಜಿ ಸುರತ್ಕಲ್’ನಲ್ಲಿ ನೋಡಬಹುದು. ಇಲ್ಲಿ ರಮೇಶ್ ಅರವಿಂದ್ ನೀವು ನಿರೀಕ್ಷಿಸದ ರೀತಿ ಕಾಣುತ್ತಾರೆ ಅದು ಹೇಗೆ ಅನ್ನೋದನ್ನ ಸ್ಕ್ರೀನ್ ಮೇಲೆ ನೋಡಬೇಕು ಅದೇ ಸಸ್ಪೆನ್ಸ್’ ಎನ್ನುತ್ತಾರೆ ನಿರ್ದೇಶಕ ಆಕಾಶ್ ಶ್ರೀವತ್ಸ.
ರಮೇಶ್ ಪತ್ತೇಧಾರಿ ಗೆಟಪ್ ರಿವೀಲ್ ಈಗಾಗಲೇ ಬಿಡುಗಡೆಯಾಗಿರುವ “ಶಿವಾಜಿ ಸುರತ್ಕಲ್’ ಚಿತ್ರದ ಪೋಸ್ಟರ್, ಟೀಸರ್, ಟ್ರೇಲರ್‌ನಲ್ಲಿ ರಮೇಶ್ ಅರವಿಂದ್ ಪತ್ತೇಧಾರಿ ಲುಕ್ ರಿವೀಲ್ ಆಗಿದೆ. ಆದರೆ, ಸಿನಿಮಾದಲ್ಲಿ ಇದಲ್ಲದೆ ಇನ್ನೂ ಬೇರೆ ಲುಕ್‌ಗಳಲ್ಲಿ ಕಾಣಲಿದ್ದಾರೆ ಅನ್ನೋದು ಚಿತ್ರತಂಡದ ಮಾತು. “ಪತ್ತೇಧಾರಿ ಚಿತ್ರದಲ್ಲಿ ಬರುವ ಒಂದು ಗೆಟಪ್ ಅಷ್ಟೇ. ಇದಲ್ಲದೇ ರಮೇಶ್ ಅರವಿಂದ್ ಬೇರೆ ಥರನೇ ಕಾಣಲಿದ್ದಾರೆ. ಇಲ್ಲಿಯವರೆಗೆ ನೂರು ಚಿತ್ರಗಳಲ್ಲಿ ವಿವಿಧ ಪಾತ್ರಗಳಲ್ಲಿ ಮಿಂಚಿರುವ ರಮೇಶ್ ಅರವಿಂದ್ ಅವರ ಸಿನಿ ಕೆರಿಯರ್‌ನಲ್ಲಿ ಇಂಥದ್ದೊಂದು ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವುದು ಇದೇ ಮೊದಲು’ ಎನ್ನುತ್ತಾರೆ ನಿರ್ದೇಶಕರು.
ಚಿತ್ರದ ಹೆಸರೇ ಹೇಳುವಂತೆ “ಶಿವಾಜಿ’ ಎನ್ನುವ ಪತ್ತೇಧಾರಿಯ ಕೆಲಸದ ಸುತ್ತ ಇಡೀ ಚಿತ್ರ ಸಾಗುತ್ತದೆ. ರಣಗಿರಿ ಎನ್ನುವ ಜಾಗದಲ್ಲಿ ಕೊಲೆ ನಡೆಯುತ್ತದೆ. ಹೈ-ಪ್ರೊಫೈಲ್ ಕೇಸ್ ಬೆನ್ನತ್ತಿ ಹೋಗುವ ಪೊಲೀಸ್ ಅಧಿಕಾರಿ. 48 ಗಂಟೆಯಲ್ಲಿ ಆ ಪ್ರಕರಣವನ್ನು ಹೇಗೆ ರೋಚಕವಾಗಿ ಭೇದಿಸುತ್ತಾನೆ ಅನ್ನೋದು ಚಿತ್ರ. ಇಲ್ಲಿ ಶಿವಾಜಿಯ ವೃತ್ತಿ ಜೀವನವಿದೆ, ವೈಯಕ್ತಿಕ ಜೀವನವೂ ಇದೆ. ಏಕಕಾಲಕ್ಕೆ ಚಿತ್ರದಲ್ಲಿ ಎರಡು ಕಥೆಗಳು ಸಮಾನಾಂತರವಾಗಿ ಸಾಗುತ್ತವೆ’ ಎಂದು ಚಿತ್ರದ ಕಥೆಯ ಸಣ್ಣ ಎಳೆಯನ್ನು ಬಿಚ್ಚಿಡುತ್ತಾರೆ ನಿರ್ದೇಶಕರು.
ಎರಡು ವರ್ಷದ ಪರಿಶ್ರಮ
“ಶಿವಾಜಿ ಸುರತ್ಕಲ್’ ಸುಮಾರು ಎರಡು ವರ್ಷಗಳ ಹಿಂದೆ ಶುರುವಾದ ಸಿನಿಮಾ. ಚಿತ್ರದ ಸ್ಕ್ರಿಪ್ಟ್ ವರ್ಕ್‌ಗಾಗಿಯೇ ಸರಿ ಸುಮಾರು ಒಂದು ವರ್ಷ ಸಮಯ ತೆಗೆದುಕೊಂಡಿದೆ. 7-8 ವರ್ಶನ್‌ನಲ್ಲಿ ಸ್ಕ್ರಿಪ್ಟ್ ಮಾಡಲಾಗಿದೆ. ಡಿಟೆಕ್ಟೀವ್ ಸಿನಿಮಾ ಆಗಿರುವುದರಿಂದ ಸಣ್ಣ ಸಣ್ಣ ಕುಸುರಿ ಕೆಲಸಗಳು ಸಾಕಷ್ಟಿದ್ದವು. ಆ ನಂತರ 40 ದಿನಗಳ ಶೂಟಿಂಗ್ ಮತ್ತೆ ಪೋಸ್ಟ್-ಪ್ರೊಡಕ್ಷನ್ ಕೆಲಸಕ್ಕೆ ಸುಮಾರು ಒಂದು ವರ್ಷ ಸಮಯ ಹಿಡಿಯಿತು. ಅಂತಿಮವಾಗಿ ಸಿನಿಮಾವನ್ನು ಸ್ಕ್ರೀನ್ ಮೇಲೆ ನೋಡಿದಾಗ ಸಿನಿಮಾ ಟೆಕ್ನಿಕಲಿ ತುಂಬಾ ಸ್ಟ್ರಾಂಗ್ ಆಗಿದೆ. ಒಂದು ಕ್ಷಣ ಕೂಡ ಕಣ್ಣು ಮಿಟುಕಿಸದಂತೆ ಫಸ್ಟ್ ಫ್ರೆàಮ್‌ನಿಂದ ಎಂಡ್ ಫ್ರೆàಮ್‌ವರೆಗೂ ಆಡಿಯನ್ಸ್ ಗಮನ ಹಿಡಿದಿಟ್ಟುಕೊಂಡು ನೋಡಿಸಿಕೊಂಡು ಹೋಗುತ್ತದೆ ಎಂಬ ಭರವಸೆ ಮೂಡಿಸಿದೆ. ಎರಡು ವರ್ಷದ ಪರಿಶ್ರಮಕ್ಕೆ ಈಗ ಫಲಸಿಗುವ ಸಮಯ ಬಂದಿದೆ ಎನ್ನುತ್ತದೆ ಚಿತ್ರತಂಡ.
ಚಿತ್ರತಂಡಕ್ಕೆ ತೃಪ್ತಿ ಕೊಟ್ಟ ಶಿವಾಜಿ
ಈ ಹಿಂದೆ ಧನಂಜಯ್ ಅಭಿನಯದ “ಬದ್ಮಾಶ್’ ಚಿತ್ರವನ್ನು ನಿರ್ದೇಶಿಸಿದ್ದ ಆಕಾಶ್ ಶ್ರೀವತ್ಸ, “ಶಿವಾಜಿ ಸುರತ್ಕಲ್’ ಚಿತ್ರಕ್ಕೆ ಆ್ಯಕ್ಷನ್-ಕಟ್ ಹೇಳಿದ್ದಾರೆ. ತಮ್ಮ ಎರಡನೇ ಚಿತ್ರದ ಬಗ್ಗೆ ಮಾತನಾಡುವ ಆಕಾಶ್ ಶ್ರೀವತ್ಸ, “ಈ ಮೊದಲು ನಾನು ಮಾಡಿದ್ದು, ಪಕ್ಕಾ ಔಟ್ ಆ್ಯಂಡ್ ಔಟ್ ಮಾಸ್ ಕಮರ್ಶಿಯಲ್ ಎಂಟರ್‌ಟೈನ್ಮೆಂಟ್ ಸಿನಿಮಾವಾಗಿತ್ತು. ಎರಡನೇ ಸಿನಿಮಾದಲ್ಲಿ ನನಗೊಂದು ಚೇಂಜ್ ಓವರ್ ಬೇಕಾಗಿತ್ತು. ಹಾಗಾಗಿ ಇಂಥದ್ದೊಂದು ಸಬ್ಜೆಕ್ಟ್ ಆಯ್ಕೆ ಮಾಡಿಕೊಂಡೆ. ನನ್ನ ಲೈಫ್ ಟೈಮ್‌ನಲ್ಲಿ ಹಿಂದೆ ತಿರುಗಿ ನೋಡಿದ್ರೆ ಇಂಥದ್ದೊಂದು ಸಿನಿಮಾ ಮಾಡಿದ್ದೆ ಅನೋ ತೃಪ್ತಿಯನ್ನ ಈ ಸಿನಿಮಾ ಕೊಟ್ಟಿದೆ’ ಎನ್ನುತ್ತಾರೆ.
“ಶಿವಾಜಿ ಸುರತ್ಕಲ್’ ಜೊತೆಗೆ ನಿಂತವರು…
“ಶಿವಾಜಿ ಸುರತ್ಕಲ್’ ಚಿತ್ರದಲ್ಲಿ ರಮೇಶ್ ಅರವಿಂದ್ ಅವರೊಂದಿಗೆ ರಾಧಿಕಾ ನಾರಾಯಣ್, ಆರೋಹಿ ನಾರಾಯಣ್, ರಾಘು ರಮಣಕೊಪ್ಪ, ಅವಿನಾಶ್, ರಮೇಶ್ ಪಂಡಿತ್, ವಿದ್ಯಾ ಮೂರ್ತಿ, ರೋಹಿತ್ ಭಾನುಪ್ರಕಾಶ್, ವಿನಯ್ ಗೌಡ ಮೊದಲಾದವರು ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಚಿತ್ರಕ್ಕೆ ಗುರುಪ್ರಸಾದ್ ಎಂ.ಜಿ ಛಾಯಾಗ್ರಹಣ, ಜ್ಯೂಡಾ ಸ್ಯಾಂಡಿ ಸಂಗೀತ ನಿರ್ದೇಶನವಿದೆ. “ಅಂಜನಾದ್ರಿ ಸಿನಿ ಕ್ರಿಯೇಶನ್ಸ್’ ಬ್ಯಾನರ್‌ನಲ್ಲಿ ರೇಖಾ ಕೆ.ಎನ್, ಅನೂಪ್ ಗೌಡ ನಿರ್ಮಿಸಿರುವ ಈ ಚಿತ್ರವನ್ನು ಮಡಿಕೇರಿ, ಮೈಸೂರು, ಬೆಂಗಳೂರು ಸುತ್ತಮುತ್ತ ಚಿತ್ರೀಕರಿಸಲಾಗಿದೆ. ಈ ವಾರ ರಾಜ್ಯಾದ್ಯಂತ 120ಕ್ಕೂ ಹೆಚ್ಚಿನ ಕೇಂದ್ರಗಳಲ್ಲಿ ಚಿತ್ರ ಬಿಡುಗಡೆಯಾಗುತ್ತಿದ್ದು, ಮುಂದಿನವಾರ ವಿದೇಶಗಳಲ್ಲೂ ಚಿತ್ರ ಬಿಡುಗಡೆಯಾಗಲಿದೆ.
ಜಿ. ಎಸ್. ಕಾರ್ತಿಕ ಸುಧನ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sandalwood Rewind 2024; ಹಳಬರಿಗೆ ಜೈಕಾರ ಹೊಸಬರಿಗೆ ಉರಿ ಖಾರ; ಚಂದನವನದ ಚೆಂದದ ಲೆಕ್ಕ
Sandalwood: ಸ್ಟಾರ್ ಸಿನಿಮಾ ಹೆಚ್ಚು ಬಂದರೆ ಚಿತ್ರರಂಗಕ್ಕೆ ಪೂರಕ: ಎನ್. ನರಸಿಂಹಲು
Dhruva-Prem: ಡಿ.24ಕ್ಕೆ ʼಕೆಡಿʼ ಶಿವ ಶಿವ ಹಾಡು ರಿಲೀಸ್
Dhruva Sarja: ಪ್ರತಿ ಸಿನಿಮಾವೂ ನನಗೆ ಹೊಸ ಪಾಠ…: ಧ್ರುವ ಹೇಳಿದ್ದೇನು
Kiccha Sudeepa; ತಾಯಿಯನ್ನು ಉಳಿಸಿಕೊಳ್ಳಲಾಗದ ಆ ಕ್ಷಣ ನಾನು ಯೂಸ್‌ಲೆಸ್ ಅನಿಸಿತು…
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.