ಮಿಂಚಿನ ಓಟ: ರಮೇಶ್‌ ಭಟ್‌ 500


Team Udayavani, Apr 14, 2017, 3:50 AM IST

14-SUCHI-9.jpg

ಕೆಲವು ವರ್ಷಗಳ ಹಿಂದೆ ಸಬ್ಸಿಡಿ ಕಮಿಟಿಯವರು ಒಂದಿಷ್ಟು ಚಿತ್ರಗಳನ್ನು ನೋಡುತ್ತಿದ್ದರಂತೆ. ಸಮಿತಿಯ ಸದಸ್ಯರೊಬ್ಬರು ರಮೇಶ್‌
ಭಟ್‌ ಅವರಿಗೆ ಫೋನ್‌ ಮಾಡಿ 160 ಸಿನಿಮಾಗಳ ಪೈಕಿ ನಿಮ್ಮದೇ 70 ಸಿನಿಮಾಗಳಿವೆಯಲ್ಲಾ ಸ್ವಾಮಿ ಅಂದರಂತೆ … “ಆಗಲೇ ನಾನು ಎಷ್ಟು ಸಿನಿಮಾಗಳಲ್ಲಿ ನಟಿಸಿದ್ದೀನಿ ಅಂತ ಗೊತ್ತಾಗಿದ್ದು. ಮುಂಚೆ ನಮ್ಮ ಪಿ.ಆರ್‌.ಓ ಸುಧೀಂದ್ರ ಇದ್ದರು. ಅವರು ನಾನೆಷ್ಟು ಸಿನಿಮಾಗಳಲ್ಲಿ ನಟಿಸಿದ್ದೀನಿ ಅಂತ ಲೆಕ್ಕ ಕೊಡುತ್ತಿದ್ದರು. 250 ಸಿನಿಮಾಗಳವರೆಗೂ ಪಟ್ಟಿ ಮಾಡಿದ್ದೆ. ಆಮೇಲೆ ತುಂಬಾ ಪಟ್ಟಿ ಮಾಡೋದನ್ನೇ ಬಿಟ್ಟುಬಿಟ್ಟೆ. ಮಾಡಿದ ಚಿತ್ರಗಳಲ್ಲಿ ಅದೆಷ್ಟೋ ನೆನಪಲ್ಲಿ ಉಳಿಯುವುದಿಲ್ಲ. ಅದರಲ್ಲಿ ಅದೆಷ್ಟೋ ಒಂದು, ಎರಡು ದಿನದ ಪಾತ್ರಗಳೇ ಆಗಿದ್ದವು’ ಎನ್ನುತ್ತಾರೆ ರಮೇಶ್‌ ಭಟ್‌.

ಆದರೆ, ಕೆಲವು ವರ್ಷಗಳ ಹಿಂದೆ ರಮೇಶ್‌ ಭಟ್‌ ಅವರು ಕನ್ನಡ ಚಿತ್ರರಂಗದ ಮೋಸ್ಟ್‌ ವಾಂಟೆಡ್‌ ಸಪೋರ್ಟಿಂಗ್‌ ನಟರಾಗಿದ್ದರು. ಡಾ. ವಿಷ್ಣುವರ್ಧನ್‌, ಅನಂತ್‌ನಾಗ್‌ ಮುಂತಾದವರ ಚಿತ್ರದಲ್ಲಿ ಹಲವು ಒಳ್ಳೆಯ ಪಾತಯಗಳನ್ನು ಮಾಡಿದ್ದರು. “ಮುಂಚೆ
ನಾನು ಇಷ್ಟು ಸಿನಿಮಾಗಳನ್ನು ಮಾಡೋಕೆ ಆಗಿರಲಿಲ್ಲ. ಹೆಚ್ಚೆಂದರೆ ವರ್ಷಕ್ಕೆ ಎಂಟತ್ತು ಸಿನಿಮಾಗಳು ಮಾಡಿದರೆ ಅದೇ ಹೆಚ್ಚು. ನನಗೆ ಹೆಚ್ಚಾಗಿ ಪ್ರಮುಖ ಪಾತ್ರಗಳು ಸಿಗುತ್ತಿದ್ದವು. ನಾಯಕನಲ್ಲದಿದ್ದರೂ ಸಮಾನಾಂತರ ಪಾತ್ರಗಳಿರುತ್ತಿದ್ದವು. ಪಾತ್ರಕ್ಕೆ ಹೆಚ್ಚು ಪ್ರಾಮುಖ್ಯ ಸಿಗುತಿತ್ತು. ಹಾಗಾಗಿ ಹೆಚ್ಚು ಚಿತ್ರಗಳಲ್ಲಿ ಮಾಡಬೇಕು ಅಂತ ಅನಿಸುತ್ತಿರಲಿಲ್ಲ. ಅಷ್ಟೇ ಅಲ್ಲ, ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸೋಕೂ ಸಾಧ್ಯವಾಗುತ್ತಿರಲಿಲ್ಲ. ಈಗ ಎರಡೂರು ದಿನಗಳ ಪಾತ್ರಗಳೇ ಜಾಸ್ತಿ. ನಮ್ಮಿಂದ ಹೆಚ್ಚು ದುಡಿಸಿಕೊಳ್ಳೋಕೂ
ಅದ್ಯಾಕೋ ಮುಂದೆ ಬರುತ್ತಿಲ್ಲ’ ಎನ್ನುತ್ತಾರೆ ರಮೇಶ್‌ ಭಟ್‌. ಹೆಚ್ಚು ದುಡಿಸಿಕೊಳ್ಳೋದಷ್ಟೇ ಅಲ್ಲ, ಪಾತ್ರಕ್ಕೆ ಪ್ರಾಮುಖ್ಯತೆ ಸಹ ಕಡಿಮೆಯಂತೆ.

ನಾಯಕಿಯ ಅಪ್ಪನ ಪಾತ್ರ ಅಂತಾರೆ. ನನ್ನ ಕೆಲಸ ಏನು ಎಂದರೆ, ಅವರೇನು ಆ ಬಗ್ಗೆ ಯೋಚಿಸಿರುವುದಿಲ್ಲ. ನಾನು ಕೇಳ್ಳೋದೇನು
ಎಂದರೆ, ಪಾತ್ರ ಸರಿ. ಆ ಪಾತ್ರ ಏನು ಮಾಡುತ್ತೆ? ಅದಕ್ಕೇನಾದರೂ ಒಂದು ಹಿನ್ನೆಲೆ ಇರಬೇಕಲ್ಲ? ಆ ಪಾತ್ರಕ್ಕೊಂದು ಸ್ವಭಾವ, ಮ್ಯಾನರಿಸಂ ಅಂತ ಬೇಕಲ್ಲ. ಅವನು ಯಾಕೆ ಹಾಗೆ ಆಡ್ತಿರ್ತಾನೆ ಅಂತಾದರೂ ಬೇಕಲ್ಲ? ಇದ್ಯಾವುದೂ ಇರುವುದೇ ಇಲ್ಲ. ನಾಯಕಿಯ ಲವ್‌ಸ್ಟೋರಿಗೊಂದು ಅಡಚಣೆ ಬೇಕು ಮತ್ತು ಆ ಅಡಚಣೆ ಮಾಡುವುದಕ್ಕೊಂದು ಪಾತ್ರಬೇಕು ಎನ್ನುವ ತರಹ ಇರುತ್ತದೆ.
ಮುಖ್ಯವಾಗಿ ಪಾತ್ರಕ್ಕೊಂದು ವ್ಯಾಪ್ತಿ ಇರುವುದಿಲ್ಲ. ನಾನಿಲ್ಲ ಅಂದರೆ ಬೇರೆ ಯಾರ ಹತ್ತಿರವೋ ಮಾಡಿಸುತ್ತಾರೆ’ ಎನ್ನುತ್ತಾರೆ ರಮೇಶ್‌ ಭಟ್‌. 

ಹಿಂದಿನ ಕಾಲಕ್ಕೆ ಜಾರುವ ಅವರು, “ಹಿಂದೆ ಭಾರ್ಗವ, ಪಿ.ಎಚ್‌. ವಿಶ್ವನಾಥ್‌, ಸುನೀಲ್‌ ಕುಮಾರ್‌ ದೇಸಾಯಿ ಮುಂತಾದವರು ಕೂತು ಮಾಡೋರು. ಈಗ ಅದೇ “ನಿಷ್ಕರ್ಷ’ ಚಿತ್ರ ತೆಗೆದುಕೊಂಡರೆ, ಆ ಚಿತ್ರದಲ್ಲಿ ನನಗೆ ಎರಡು ಪಾತ್ರವಿತ್ತು. ದೇಸಾಯಿ ಬಂದು ಲಿಫ್ಟ್ ಮ್ಯಾನ್‌ ಪಾತ್ರ ಮಾಡುತ್ತೀರೋ, ಮೂಗನ ಪಾತ್ರ ಮಾಡುತ್ತೀರೋ ಎಂದು ಕೇಳಿದರು. ಅವರಿಗೂ ನಾನು ಯಾವ್ಯಾವ ಪಾತ್ರ ಮಾಡಬಹುದು ಎಂಬ ಅಂದಾಜಿರುತಿತ್ತು. ಒಂದು ಪಾತ್ರದ ಬಗ್ಗೆ ಹೇಳುವಾಗ, ಆ ಪಾತ್ರಕ್ಕೆ ನಾನು ಏನು ಕೊಡಬಹುದು ಎಂದು ಯೋಚಿಸೋರು. ಈಗ ಆ ತರಹದ್ದೊಂದು ಕಾಂಟ್ಯಾಕ್ಟ್ ತಪ್ಪಿ ಹೋಗಿದೆ. ಈಗ ಮ್ಯಾನೇಜರ್‌ ಫೋನ್‌ ಮಾಡುತ್ತಾರೆ. ಇಷ್ಟು ದಿನ ಇದೆ, ಯಾವಾಗ ಡೇಟ್ಸ್‌ ಸಿಗಬಹುದು ಎಂದು ಕೇಳುತ್ತಾರೆ. ಹಾಗಂತ ನನಗೆ ಆ ಬಗ್ಗೆ ಬೇಸರವಿಲ್ಲ. ಏಕೆಂದರೆ, ವರ್ಷಕ್ಕೆ 180 ಸಿನಿಮಾಗಳು ಬಿಡುಗಡೆಯಾಗುತ್ತಿವೆ. ಎಲ್ಲವೂ ಬೇಗಬೇಗ ಆಗಬೇಕು. ಇಂಥಾ ಸಂದರ್ಭದಲ್ಲಿ ನಾನು ಹೀಗೆ ಮಾಡಬೇಕು ಎಂದು ನಿರೀಕ್ಷೆ
ಮಾಡುವುದು ಸರಿಯಲ್ಲ. ಆದರೂ ಆ ಕಾಲ ಚೆನ್ನಾಗಿತ್ತು ಅಂತ ಎಷ್ಟೋ ಬಾರಿ ಅನಿಸೋದಿದೆ’ ಎಂದು ಫ್ಲಾಶ್‌ಬ್ಯಾಕ್‌ಗೆ ಜಾರುತ್ತಾರೆ ಭಟ್ಟರು.

ಆಗ ಸ್ಕ್ರಿಪ್ಟ್ ಬರೆಯುವಾಗಲೇ, ರಮೇಶ್‌ ಭಟ್‌ ಅಂತ ಬರೆಯೋರಂತೆ. “ನಾಯಕನ ಮಿತ್ರ ಅನ್ನೋ ಜಾಗದಲ್ಲಿ ನನ್ನ ಹೆಸರು
ಬರೆಯೋರು. ಎಷ್ಟೋ ಬಾರಿ ನಾಯಕ ಯಾರು ಅಂತ ಗೊತ್ತಿಲ್ಲದಿದ್ದರೂ, ನಾಯಕನ ಸ್ನೇಹಿತನ ಪಾತ್ರ ನಾನು ಮಾಡಿದರೆ ಚೆಂದ ಅಂತ ನನ್ನ ಹೆಸರು ಬರೆಯೋರು. ಅಷ್ಟೇ ಅಲ್ಲ, ಆ ಪಾತ್ರಕ್ಕೆ ನಾನು ಒಂದಿಷ್ಟು ಕೊಡುಗೆ ಕೊಡುವುದಕ್ಕೂ ಅವಕಾಶವಿತ್ತು. ಈಗ ಅದು ಕಡಿಮೆಯಾಗಿದೆ. ಎಷ್ಟೋ ಬಾರಿ ನಾವು ಸ್ವಾರ್ಥದಲ್ಲಿ ತುಂಬಾ ಯೋಚ ೆ ಮಾಡುತ್ತೀವಾ ಅಥವಾ ಬೇರೆ ಯವರು ಯೋಚನೆ
ಮಾಡುವುದಿಲ್ಲವಾ ಅಂತ ಅ ನಿಸುತ್ತೆ. ಒಂದು ವಿಷಯವೇನೆಂದರೆ, ಕಳೆದ ಕೆಲವು ವರ್ಷಗಳಲ್ಲಿ ಆ ನಂದಪಟ್ಟು ಅಭಿನಯಿಸಿದ್ದು ಕೆಲವೇ ಸಿನಿಮಾಗಳಲ್ಲಿ. ಬಹುಶಃ ಒಳ್ಳೆಯ ತಂಡಗಳಲ್ಲಿ ಅವಕಾಶ ಸಿಕ್ಕಲಿಲ್ಲವೇನೋ. ನಾನು ಇದುವರೆಗೂ ಯೋಗರಾಜ್‌ ಭಟ್‌, ಸೂರಿ, ಸುನಿ ಮುಂತಾದವರ ಜೊತೆಗೆ ಕೆಲಸ ಮಾಡುವುದಕ್ಕೆ ಆಗಿಲ್ಲ. ಆಗ ನಾನು ಕೆಲಸ ಮಾಡಿದ್ದ ನಿರ್ದೇಶಕರೆಲ್ಲಾ ದಿಗ್ಗಜರೇ. ಹಾಗಾಗಿ 
ಚಿತ್ರ ಯಶಸ್ವಿಯಾಗುವುದಷ್ಟೇ ಅಲ್ಲ, ಪಾತ್ರಗಳು ಚೆನ್ನಾಗಿದ್ದವು’ ಎನ್ನುತ್ತಾರೆ ರಮೇಶ್‌ ಭಟ್‌.

ಇದೆಲ್ಲದರ ಮಧ್ಯೆ ರಮೇಶ್‌ ಭಟ್‌ ಅವರಿಗೆ ಒಂದು ಸಂತೋಷವಿದೆ. “ಇಷ್ಟು ವರ್ಷಗಳಲ್ಲಿ ನನ್ನ ಜರ್ನಿ ನಿಂತಿಲ್ಲ. ಇನ್ನೂ ನಡೆಯುತ್ತಲೇ
ಇದೆ. ಯಾವತ್ತೂ ನನಗೆ ಯಾಕೆ ಸಿನಿಮಾಗೆ ಬಂದೆ ಅಂತ ಅನಿಸಿಲ್ಲ. ಈಗಲೂ ಜನ ನನ್ನನ್ನು ಬಹಳ ಪ್ರೀತಿಸುತ್ತಾರೆ. ಗೌರವ ಕೊಡುತ್ತಾರೆ. ಎಲ್ಲರೂ ಇವನ್ನೆಲ್ಲಾ ಸಂಪಾದಿಸೋಕೆ ಆಗುವುದಿಲ್ಲ. ಇತ್ತೀಚೆಗೆ ಉತ್ತರ ಕರ್ನಾಟಕಕ್ಕೆ ಹೋಗಿದ್ದೆ. ಮುಜುಗರವಾಗುವಷ್ಟು ಪ್ರೀತಿ ಕಂಡೆ. ಅಲ್ಲಿಯ ಜನ, “ನಾವಂತೂ ಶಂಕರ್‌ನಾಗ್‌ ಮತ್ತು ವಿಷ್ಣುವರ್ಧನ್‌ ಅವರನ್ನು ನೋಡಿಲ್ಲ, ನಿಮ್ಮಲ್ಲಿ ಅವರನ್ನು ನೋಡುತ್ತೇವೆ’ ಎಂದು ನಮಸ್ಕಾರ ಮಾಡಿದರು. ಇವಕ್ಕೆಲ್ಲಾ ಸಂತೋಷಪಡದೇ ಏನು ಮಾಡಲಿ’ ಎಂದು ಪ್ರಶ್ನಿಸುತ್ತಾ ಮಾತು
ಮುಗಿಸುತ್ತಾರೆ ಅವರು.

ಚೇತನ್‌ ನಾಡಿಗೇರ್‌

ಟಾಪ್ ನ್ಯೂಸ್

6-madikeri-1

Madikeri: ಲಾರಿ ಡಿಕ್ಕಿಯಾಗಿ ರಸ್ತೆ ಬದಿ ನಡೆದುಕೊಂಡು ಹೋಗುತ್ತಿದ್ದ ಬಾಲಕಿ ಸಾವು

prithvi shaw

Mumbai Cricket: ಸಚಿನ್‌ ತೆಂಡೂಲ್ಕರ್‌ ಸಲಹೆಯನ್ನೂ ನಿರ್ಲಕ್ಷಿಸಿದರಾ ಪೃಥ್ವಿ ಶಾ..

Marriages: ನಗರದಲ್ಲಿ 1 ತಿಂಗಳಲ್ಲಿ 13,000 ಮದುವೆ!

Marriages: ನಗರದಲ್ಲಿ 1 ತಿಂಗಳಲ್ಲಿ 13,000 ಮದುವೆ!

Anthyarambha: ನ.28ರಂದು ಕೊಂಕಣಿ ಚಲನಚಿತ್ರ “ಅಂತ್ಯಾರಂಭ’ ಪ್ರದರ್ಶನ

Anthyarambha: ನ.28ರಂದು ಕೊಂಕಣಿ ಚಲನಚಿತ್ರ “ಅಂತ್ಯಾರಂಭ’ ಪ್ರದರ್ಶನ

Belagavi Session: ರಾಜಕೀಯ ಕಿತ್ತಾಟ ಏನಿದ್ದರೂ ಸದನದ ಹೊರಗೆ ನಡೆಸಿ: ಯು.ಟಿ. ಖಾದರ್

Belagavi Session: ರಾಜಕೀಯ ಕಿತ್ತಾಟ ಏನಿದ್ದರೂ ಸದನದ ಹೊರಗೆ ನಡೆಸಿ: ಯು.ಟಿ. ಖಾದರ್

4-bharamasagara

Bharamasagara: 3 ತಿಂಗಳ ಹಿಂದೆ ಮದುವೆಯಾಗಿ ಊರಿಗೆ ವಾಪಸ್‌ ಆದ ಯುವಕನ ಹತ್ಯೆ

ಸಿಎಸ್‌ ಕೆ ಮಾಲಿಕ ಶ್ರೀನಿವಾಸನ್‌ ವಿರುದ್ದ ಫಿಕ್ಸಿಂಗ್‌ ಆರೋಪ ಮಾಡಿದ ಲಲಿತ್ ಮೋದಿ

IPL : ಸಿಎಸ್‌ಕೆ ಮಾಲಿಕ ಶ್ರೀನಿವಾಸನ್‌ ವಿರುದ್ದ ಫಿಕ್ಸಿಂಗ್‌ ಆರೋಪ ಮಾಡಿದ ಲಲಿತ್ ಮೋದಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Maryade Prashne: ಮಧ್ಯಮ ವರ್ಗದ ಸುತ್ತ ಹೀಗೊಂದು ಚಿತ್ರ

Maryade Prashne: ಮಧ್ಯಮ ವರ್ಗದ ಸುತ್ತ ಹೀಗೊಂದು ಚಿತ್ರ

Aaram Aravinda Swamy: ಸ್ವಾಮಿ ನಂಬಿ ಬಂದ ಅನೀಶ್‌; ಪ್ರೇಕ್ಷಕ ಕೈ ಹಿಡಿಯೋ ನಿರೀಕ್ಷೆ

Aaram Aravinda Swamy: ಸ್ವಾಮಿ ನಂಬಿ ಬಂದ ಅನೀಶ್‌; ಪ್ರೇಕ್ಷಕ ಕೈ ಹಿಡಿಯೋ ನಿರೀಕ್ಷೆ

Sandalwood: ಮಾಸ್‌ ಸಿನಿಮಾಗಳಿಗ ಜೈ ಎಂದ ಪ್ರೇಕ್ಷಕ

Sandalwood: ಮಾಸ್‌ ಸಿನಿಮಾಗಳಿಗೆ ಜೈ ಎಂದ ಪ್ರೇಕ್ಷಕ

priyanka upendra in life is beautiful movie

Priyanka Upendra: ಬ್ಯೂಟಿಫುಲ್‌ ಲೈಫ್‌ ನಲ್ಲಿ ಪ್ರಿಯಾಂಕಾ

Sanju Weds Geetha 2: ಅವನು ಸಂಜು ಅವಳು ಗೀತಾ!; ಹಾಡಿನಲ್ಲಿ ಪ್ರೇಮ ಕಥನ

Sanju Weds Geetha 2: ಅವನು ಸಂಜು ಅವಳು ಗೀತಾ!; ಹಾಡಿನಲ್ಲಿ ಪ್ರೇಮ ಕಥನ

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

6-madikeri-1

Madikeri: ಲಾರಿ ಡಿಕ್ಕಿಯಾಗಿ ರಸ್ತೆ ಬದಿ ನಡೆದುಕೊಂಡು ಹೋಗುತ್ತಿದ್ದ ಬಾಲಕಿ ಸಾವು

prithvi shaw

Mumbai Cricket: ಸಚಿನ್‌ ತೆಂಡೂಲ್ಕರ್‌ ಸಲಹೆಯನ್ನೂ ನಿರ್ಲಕ್ಷಿಸಿದರಾ ಪೃಥ್ವಿ ಶಾ..

Teacher: ಸ್ವಂತ ಖರ್ಚಲ್ಲಿ ಶಿಕ್ಷಕನಿಂದ ವಿದ್ಯಾರ್ಥಿಗಳಿಗೆ ವಿಮಾನ ಪ್ರವಾಸ!

Teacher: ಸ್ವಂತ ಖರ್ಚಲ್ಲಿ ಶಿಕ್ಷಕನಿಂದ ವಿದ್ಯಾರ್ಥಿಗಳಿಗೆ ವಿಮಾನ ಪ್ರವಾಸ!

Marriages: ನಗರದಲ್ಲಿ 1 ತಿಂಗಳಲ್ಲಿ 13,000 ಮದುವೆ!

Marriages: ನಗರದಲ್ಲಿ 1 ತಿಂಗಳಲ್ಲಿ 13,000 ಮದುವೆ!

High Court: ಗುರು ರಾಘವೇಂದ್ರ ಬ್ಯಾಂಕ್‌ ಅಧ್ಯಕಗೆ ಜಾಮೀನು ನಿರಾಕರಣೆ

High Court: ಗುರು ರಾಘವೇಂದ್ರ ಬ್ಯಾಂಕ್‌ ಅಧ್ಯಕಗೆ ಜಾಮೀನು ನಿರಾಕರಣೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.