ಸ್ಕೇಟಿಂಗ್ ಸುತ್ತ ರಂಕಲ್ ರಾಟೆ
Team Udayavani, Feb 23, 2018, 11:34 AM IST
“ಜೀವನದಲ್ಲಿ ತಲೆ ತಗ್ಗಿಸಿ, ತಾಳ್ಮೆಯಿಂದ ನಡೆದರೆ ಯಶಸ್ಸು ಸಿಗುತ್ತದೆ … ಹೀಗೊಂದು ಸಂದೇಶ ಹೊಂದಿರುವ ಚಿತ್ರ “ರಂಕಲ್ ರಾಟೆ’ ಚಿತ್ರ ಇಂದು ತೆರೆಕಾಣುತ್ತಿದೆ. ಈ ಸಂದೇಶವನ್ನು ಕ್ರೀಡೆಯ ಹಿನ್ನೆಲೆಯಲ್ಲಿ ಹೇಳಲು ಹೊರಟಿದ್ದಾರೆ ನಿರ್ದೇಶಕ ಗೋಪಿ ಕೆರೂರ್. ಸ್ಕೇಟಿಂಗ್ ಹಿನ್ನೆಲೆಯನ್ನಿಟ್ಟುಕೊಂಡು ಗೋಪಿಯರು “ರಂಕಲ್ ರಾಟೆ’ ಸಿನಿಮಾ ಮಾಡಿದ್ದಾರೆ.
ಚಿತ್ರದ ಬಗ್ಗೆ ಮಾತನಾಡುವ ಗೋಪಿ, “ಎಲ್ಲಾ ಗೇಮ್‌ಗಳನ್ನು ತಲೆ ಎತ್ತಿ, ಎದೆಯುಬ್ಬಿಸಿ ಆಡಬೇಕು. ಆದರೆ, ಸ್ಕೇಟಿಂಗ್ ಮಾತ್ರ ಅದಕ್ಕೆ ಸಂಪೂರ್ಣ ಉಲ್ಟಾ. ಇಲ್ಲಿ ತಲೆ ತಗ್ಗಿಸಿ, ತಾಳ್ಮೆಯಿಂದ ಇರಬೇಕು. ಜೀವನದಲ್ಲೂ ತಲೆ ತಗ್ಗಿಸಿ, ತಾಳ್ಮೆಯಿಂದ ನಡೆದರೆ ಯಶಸ್ಸು ಸಿಗುತ್ತದೆ. ಪ್ರತಿಭೆಗೆ ಶ್ರೀಮಂತ, ಬಡವ ಎಂಬುದನ್ನು ನೋಡಿಕೊಂಡು ಬರೋದಿಲ್ಲ’ ಎಂಬುದು ನಿರ್ದೇಶಕ ಗೋಪಿ ಮಾತು.
ಚಿತ್ರವನ್ನು ಬೈಸಾನಿ ಸತೀಶ್ ಕುಮಾರ್ ನಿರ್ಮಿಸಿದ್ದಾರೆ. ಚಿತ್ರದಲ್ಲಿ ಮನು ಅದ್ವಿಕ್ ನಾಯಕರಾಗಿ ನಟಿಸಿದ್ದಾರೆ. ಅವರಿಲ್ಲಿ ಸ್ಕೇಟಿಂಗ್ ಕೋಚ್ ಆಗಿ ಕಾಣಿಸಿಕೊಂಡಿದ್ದಾರೆ. ಚಿತ್ರದಲ್ಲಿ ನಟಿಸಿದ ಅನುಭವ ಹಂಚಿಕೊಂಡು ಖುಷಿಯಾದರು ಅದ್ವಿಕ್. ಕೃಷ್ಣಮೂರ್ತಿ ಕವತ್ತಾರು ಕೂಡಾ ಚಿತ್ರದಲ್ಲೊಂದು ಪ್ರಮುಖ ಪಾತ್ರ ಮಾಡಿದ್ದಾರೆ.
ಚಿತ್ರದ ವಿತರಣೆಯನ್ನು ನವರಸನ್ ಮಾಡುತ್ತಿದ್ದು, 65 ಕೇಂದ್ರಗಳಲ್ಲಿ ಬಿಡುಗಡೆ ಮಾಡುತ್ತಿದ್ದಾರಂತೆ. ಬಹುತೇಕ ಚಿತ್ರಮಂದಿರಗಳಲ್ಲಿ ಶೇಕಡವಾರು ಮಾತನಾಡಿದ್ದರಿಂದ ನಿರ್ಮಾಪಕರಿಗೆ ಬಿಡುಗಡೆಯ ಕಷ್ಟ ಕಡಿಮೆಯಾಗಲಿದೆ ಎಂಬುದು ನವರಸನ್ ಮಾತು. ಚಿತ್ರಕ್ಕೆ ಅವಿನಾಶ್ ಶ್ರೀರಾಮ್ ಸಂಗೀತ, ಪ್ರವೀಣ್ ಛಾಯಾಗ್ರಹಣ, ಕೆ.ಜೆ.ವೆಂಕಟೇಶ್ ಸಂಕಲನವಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Kollywood: ಬಹಿರಂಗ ಪತ್ರ ಬರೆದು ಧನುಷ್ ಮೇಲೆ ರೇಗಾಡಿದ ನಟಿ ನಯನತಾರಾ; ಆಗಿರುವುದೇನು?
Nara Ramamurthy: ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ಸಹೋದರ ನಾರಾ ರಾಮಮೂರ್ತಿ ನಾಯ್ಡು ನಿಧನ
Actor Darshan ವಿರುದ್ದ ಸುಪ್ರೀಂನಲ್ಲಿ ಮೇಲ್ಮನವಿ: ಬೆಂಗ್ಳೂರು ಕಮೀಷನರ್
Mangaluru: ನೋಟು ಬ್ಯಾನ್‌ಗೆ 8 ವರ್ಷ: ಹುಂಡಿಗೆ ಹಾಕೋದು ನಿಂತಿಲ್ಲ!
Desi Swara@150:ವಿದೇಶ ನೆಲದಲ್ಲಿ ಕರ್ನಾಟಕದ ಖಾದ್ಯವನ್ನು ಉಣಬಡಿಸುತ್ತಿರುವ ದಂಪತಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.