ಈಗ ಕಾಣೆಯಾದವರ ಬಗ್ಗೆ ವರದಿ
Team Udayavani, Mar 23, 2018, 7:30 AM IST
ಪಾಳು ಬಂಗಲೆಯೊಳಗೆ ಹೋದ ತಂಡ, ಅಲ್ಲಿ ಅನುಭವಿಸುವ ದೆವ್ವದ ಕಾಟ, ಅದರಿಂದ ತಪ್ಪಿಸಿಕೊಳ್ಳಲು ಒದ್ದಾಡುವ
ಅಂಶಗಳನ್ನಿಟ್ಟುಕೊಂಡು ಈಗಾಗಲೇ ಸಾಕಷ್ಟು ಹಾರರ್ ಸಿನಿಮಾಗಳು ಬಂದಿವೆ. ಈಗ ಆ ಸಾಲಿಗೆ ಹೊಸ ಸೇರ್ಪಡೆ “ಕಾಣೆಯಾಗಿದ್ದಾರೆ’. ಇದು ಕೂಡಾ ಹಳೆಯ ಬಂಗಲೆಯೊಂದರಲ್ಲಿ ನಡೆಯುವ ಕಥೆ. ಬಂಗಲೆ ಮತ್ತು ಟೈಟಲ್ ಅನ್ನು ನೀವು
ಹೊಂದಿಸಿಕೊಂಡರೆ ಮುಂದೇನಾಗುತ್ತದೆ ಎಂಬುದನ್ನು ಸುಲಭವಾಗಿ ಊಹಿಸಿಕೊಳ್ಳಬಹುದು. ಅಂದಹಾಗೆ, “ಕಾಣೆಯಾಗಿದ್ದಾರೆ’ ಚಿತ್ರವನ್ನು ಕ್ರಿಶ್ ನಿರ್ದೇಶಿಸುತ್ತಿದ್ದಾರೆ. ಇವರ ಮೂಲ ಹೆಸರು ಕೃಷ್ಣ. ಈ ಹಿಂದೆ “ಜಾಸ್ಮಿನ್.5′ ಎಂಬ ಸಿನಿಮಾ ಮಾಡಿದ್ದರು. ಈಗ
“ಕಾಣೆಯಾಗಿದ್ದಾರೆ’ ಮಾಡುತ್ತಿದ್ದಾರೆ.
ಕೃಷ್ಣ ಹೇಳುವಂತೆ “ಕಾಣೆಯಾಗಿದ್ದಾರೆ’ ಕೇವಲ ಹಾರರ್ ಸಿನಿಮಾವಲ್ಲ. ಕಥೆ ಎರಡು ಟ್ರ್ಯಾಕ್‌ನಲ್ಲಿ ಸಾಗುತ್ತದೆಯಂತೆ. ಒಬ್ಬ ಸಹಾಯಕ ನಿರ್ದೇಶಕ, ತಾನು ನಿರ್ದೇಶಕ ಆಗಬೇಕೆಂಬ ಕನಸನ್ನು ಈಡೇರಿಸಿಕೊಳ್ಳುವಲ್ಲಿ ಎಷ್ಟು ಕಷ್ಟಪಡುತ್ತಾನೆ, ಆತನಿಗೆ ಎದುರಾಗುವ ಎಡರು ತೊಡರುಗಳೇನು ಎಂಬುದು ಒಂದು ಅಂಶವಾದರೆ, ಬಂಗಲೆಯೊಂದರಲ್ಲಿ ಎದುರಾಗುವ ದುಷ್ಟಶಕ್ತಿಯ ಕಾಟ ಮತ್ತೂಂದು ಅಂಶವಂತೆ. ಮನುಷ್ಯ ಅತಿಯಾಸೆ ಪಟ್ಟರೆ ಏನಾಗುತ್ತದೆ ಎಂಬ ಒಂದು ಸಣ್ಣ ಸಂದೇಶವನ್ನೂ ಈ ಚಿತ್ರದಲ್ಲಿ ಹೇಳಲು ಹೊರಟಿದ್ದಾರಂತೆ ಕ್ರಿಶ್. ಸವಣೂರು ಬಳಿಯ 100 ಬಾಗಿಲು ಹಾಗೂ 150 ಕಿಟಕಿಗಳಿರುವ ಹಳೆಯ ಬಂಗಲೆಯೊಂದರಲ್ಲಿ
ಚಿತ್ರೀಕರಣ ನಡೆಯಲಿದ್ದು, ಐದು ಮಂದಿಯ ತಂಡ ಆ ಬಂಗಲೆಯೊಳಗೆ ಹೋದಾಗ ಏನಾಗುತ್ತದೆ ಎಂಬುದು ಕುತೂಹಲಕರ
ಅಂಶವಂತೆ. ಚಿತ್ರದಲ್ಲಿ ಸ್ವತಂತ್ರ್ಯಪೂರ್ವದ ಅಂಶಗಳು ಕೂಡಾ ಬರಲಿದ್ದು, ಅವೆಲ್ಲವನ್ನು ಸೆಟ್ ಹಾಕಿ ಚಿತ್ರೀಕರಿಸುವ ಉದ್ದೇಶ ನಿರ್ದೇಶಕರಿಗಿದೆ.
ಚೇತನ್ ಎನ್ನುವವರು ಇಲ್ಲಿ ಪ್ರಮುಖ ಪಾತ್ರ ಮಾಡುತ್ತಿದ್ದು, ಸಹಾಯಕ ನಿರ್ದೇಶಕನಿಂದ ನಿರ್ದೇಶಕನಾಗುವ ಚಕ್ರವರ್ತಿ ಎಂಬ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರಂತೆ. ಉಳಿದಂತೆ ಸಚಿನ್, ಸೂಯೇìಶ್, ಪ್ರಜ್ವಿತ್, ಧನ್ಯಾ ಪಾಟೀಲ್, ಶಿಲ್ಪಾ ಸಂಪಂಗಿ, ದೀಪಶ್ರಿ, ಬೇಬಿ ರಿಶಿತಾ ಸೇರಿದಂತೆ ಅನೇಕರು ನಟಿಸುತ್ತಿದ್ದು, ಪ್ರತಿಯೊಬ್ಬರು ತಮ್ಮ ಪಾತ್ರದ ಬಗ್ಗೆ ಹೇಳಿಕೊಂಡರು. ಚಿತ್ರವನ್ನು ಶಿವರಾಜ ಎನ್ನುವವರು ನಿರ್ಮಿಸುತ್ತಿದ್ದಾರೆ. ಚಿತ್ರಕ್ಕೆ ಹರ್ಷ ಸಂಗೀತ, ಸೂರ್ಯ ಎಸ್ ಕಿರಣ್ ಛಾಯಾಗ್ರಹಣವಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sandalwood: ಸ್ಟಾರ್ ಸಿನಿಮಾ ಹೆಚ್ಚು ಬಂದರೆ ಚಿತ್ರರಂಗಕ್ಕೆ ಪೂರಕ: ಎನ್. ನರಸಿಂಹಲು
Dhruva-Prem: ಡಿ.24ಕ್ಕೆ ʼಕೆಡಿʼ ಶಿವ ಶಿವ ಹಾಡು ರಿಲೀಸ್
Dhruva Sarja: ಪ್ರತಿ ಸಿನಿಮಾವೂ ನನಗೆ ಹೊಸ ಪಾಠ…: ಧ್ರುವ ಹೇಳಿದ್ದೇನು
Kiccha Sudeepa; ತಾಯಿಯನ್ನು ಉಳಿಸಿಕೊಳ್ಳಲಾಗದ ಆ ಕ್ಷಣ ನಾನು ಯೂಸ್‌ಲೆಸ್ ಅನಿಸಿತು…
UI Movie: 9 ವರ್ಷ ಬಳಿಕ ಉಪ್ಪಿ ಡೈರೆಕ್ಟ್ ಮಾಡಿದ ಯು-ಐ ಸಿನಿಮಾದ ಹೈಲೈಟ್ಸ್ ಏನು?
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.