ಮುಂದುವರಿದ ಮರುಬಿಡುಗಡೆ ಪರ್ವ
ಈ ವಾರ 10ಕ್ಕೂಹೆಚ್ಚು ಚಿತ್ರಗಳು ರೀ ರಿಲೀಸ್
Team Udayavani, Oct 23, 2020, 1:04 PM IST
ಕಳೆದ ವಾರ ಮರು ಬಿಡುಗಡೆಯಾದ ಚಿತ್ರಗಳಿಗೆ ಪ್ರೇಕ್ಷಕ ಉತ್ತಮ ಪ್ರತಿಕ್ರಿಯೆ ತೋರಿಸುವ ಮೂಲಕ ಕನ್ನಡ ಚಿತ್ರರಂಗದಲ್ಲಿ ಭರವಸೆ ಮೂಡಿದೆ. ಜೊತೆಗೆ ರೀ ರಿಲೀಸ್ ಸಿನಿಮಾ ಮೂಲಕ ಚಿತ್ರಮಂದಿರಕ್ಕೆ ಪ್ರೇಕ್ಷಕರನ್ನು ಸೆಳೆಯುವ ತಂತ್ರ ಮುಂದುವರೆದಿದೆ. ಪರಿಣಾಮವಾಗಿ ಈ ವಾರ ಅನೇಕ ಸಿನಿಮಾಗಳು ಮರು ಬಿಡುಗಡೆಯಾಗುತ್ತಿವೆ.
ವಿಶೇಷವೆಂದರೆ ಹೀಗೆ ಬಿಡುಗಡೆಯಾಗುತ್ತಿರುವ ಬಹುತೇಕ ಸಿನಿಮಾಗಳು ಸ್ಟಾರ್‌ಗಳು ನಟಿಸಿರೋದು. ದರ್ಶನ್, ಪುನೀತ್, ಯಶ್, ಶಿವರಾಜ್‌ಕುಮಾರ್, ಸುದೀಪ್… ಹೀಗೆ ಅನೇಕ ಸ್ಟಾರ್‌ಗಳ ಸಿನಿಮಾಗಳು ಬಿಡುಗಡೆಯಾಗುತ್ತಿವೆ. ಈ ಮೂಲಕ ಸ್ಟಾರ್‌ಗಳ ಅಭಿಮಾನಿಗಳನ್ನು ಮತ್ತೆ ಚಿತ್ರಮಂದಿರಕ್ಕೆ ಕರೆತರುವ ಪ್ರಯತ್ನಕ್ಕೆ ವಿತರಕರು ಮುಂದಾಗಿದ್ದಾರೆ. ಈ ವಾರ ಸ್ಟಾರ್‌ಗಳ ಹಾಗೂ ಹೊಸಬರ ಚಿತ್ರಗಳು ಜೊತೆ ಜೊತೆಯಾಗಿ ಮರುಬಿಡುಗಡೆಯಾಗುತ್ತಿವೆ. ಇದರಿಂದಾಗಿ ಭಿನ್ನ-ವಿಭಿನ್ನ ಸಿನಿಮಾಗಳನ್ನು ಕಣ್ತುಂಬಿಕೊಳ್ಳುವ ಅವಕಾಶ ಪ್ರೇಕ್ಷಕರಿಗೆ ಮತ್ತೂಮ್ಮೆ ಸಿಕ್ಕಿದೆ.
ಹಾಗಾದರೆ ಈವಾರ ತೆರೆಕಾಣುತ್ತಿರುವ ಚಿತ್ರಗಳು ಯಾವುವು ಎಂದು ನೋಡೋದಾದರೆ, “ಕೋಟಿಗೊಬ್ಬ-2′, “ಕೆಜಿಎಫ್’, “ಕುರುಕ್ಷೇತ್ರ’, “ಟಗರು’, “ಮಫ್ತಿ’, “ರಾಜ್‌ಕುಮಾರ’, “ನಾಗರಹಾವು’, “ವಜ್ರಮುಖೀ’, “ದಿಯಾ’, “ದಮಯಂತಿ’, “ರಗಡ್’ ಚಿತ್ರಗಳು ಬಿಡುಗಡೆಯಾಗುತ್ತಿವೆ. ಇನ್ನು ಕೆಲವು ಚಿತ್ರಗಳು ಸದ್ದಿಲ್ಲದೇ ತಾಲೂಕು ಕೇಂದ್ರಗಳಲ್ಲಿ ಬಿಡುಗಡೆಯಾಗಲಿದೆ. ಒಟ್ಟಾರೆಯಾಗಿ ಹೇಳುವುದಾದರೆ 11ಕ್ಕೂ ಹೆಚ್ಚು ಸಿನಿಮಾಗಳು ಈ ವಾರ ಮರುಬಿಡುಗಡೆಯಾಗುತ್ತಿವೆ ಎನ್ನಬಹುದು. ಹಾಗಾದರೆ ಈ ಚಿತ್ರಗಳ ಮುಖ್ಯಚಿತ್ರಮಂದಿರ ಯಾವುದು, ಕೆ.ಜಿ.ರಸ್ತೆಯ ಯಾವ ಚಿತ್ರಮಂದಿದಲ್ಲಿ ಈ ಚಿತ್ರಗಳು ಬಿಡುಗಡೆಯಾಗುತ್ತಿವೆ ಎಂದು ನೀವು ಕೇಳಬಹುದು. ಆದರೆ, ಬಹುತೇಕ ಚಿತ್ರಗಳು ಈ ಬಾರಿ ಸಿಂಗಲ್ ಸ್ಕ್ರೀನ್‌ಗಿಂತ ಮಲ್ಟಿಪ್ಲೆಕ್ಸ್ ನಂಬಿಕೊಂಡಿವೆ. ಅದಕ್ಕೆ ಕಾರಣ ಇನ್ನೂ ದೊಡ್ಡ ಮಟ್ಟದಲ್ಲಿ ಸಿಂಗಲ್ ಸ್ಕ್ರೀನ್‌ಓಪನ್ ಆಗದಿದ್ದರಿಂದ ಮಲ್ಟಿಪ್ಲೆಕ್ಸ್‌ನಲ್ಲಿ ಪ್ರದರ್ಶನವಾಗುತ್ತಿವೆ. ಇಲ್ಲಿ ಗಮನಿಸಬೇಕಾದ ಒಂದು ಅಂಶವೆಂದರೆ ಈ ವಾರ ಮರುಬಿಡುಗಡೆಯಾಗುತ್ತಿರುವ ಬಹುತೇಕ ಸಿನಿಮಾಗಳೆಲ್ಲವೂ ಒಮ್ಮೆ ತೆರೆಕಂಡು ಪ್ರೇಕ್ಷಕರಿಂದ ಮೆಚ್ಚುಗೆ ಪಡೆದವು. ಈಗ ಮತ್ತೂಮ್ಮೆ ಮೆಚ್ಚುಗೆ ಗಳಿಸಲು ಬರುತ್ತಿವೆ. ಒಂದರ್ಥದಲ್ಲಿ ಹೇಳುವುದಾದರೆ ಈ ವರ್ಷಾಂತ್ಯದಿಂದಲೇ ಸ್ಟಾರ್ ಸಿನಿಮಾಗಳು ಪ್ರೇಕ್ಷಕರ ಮುಂದೆ ಬರಲಿವೆ.
ಮೊದಲ ಹಂತವಾಗಿ ರೀ ರಿಲೀಸ್ ಚಿತ್ರಗಳು ತೆರೆಕಂಡರೆ, ಡಿಸೆಂಬರ್ ಕೊನೆಯವಾರದಿಂದ ಸ್ಟಾರ್‌ಗಳ ಹೊಸ ಚಿತ್ರಗಳು ಬಿಡುಗಡೆಯಾಗಲಿವೆ. “ಕೋಟಿಗೊಬ್ಬ-3′, “ಪೊಗರು’, “ಸಲಗ’, “ರಾಬರ್ಟ್’ “ಭಜರಂಗಿ-2′, “ಯುವರತ್ನ’, “ಕೆಜಿಎಫ್-2’… ಹೀಗೆ ಸ್ಟಾರ್‌ಗಳ ನಿರೀಕ್ಷಿತ ಚಿತ್ರಗಳು ತೆರೆಗಪ್ಪಲಿಸಲಿವೆ.
ನಮ್ಮ ಶಿವಾರ್ಜುನ ಚಿತ್ರ ಚೆನ್ನಾಗಿ ಹೋಗುತ್ತಿದೆ. ದಿನದಿಂದ ದಿನಕ್ಕೆ ಜನ ಚಿತ್ರಮಂದಿರಕ್ಕೆ ಬರುತ್ತಿದ್ದಾರೆ. ಈ ನಡುವೆಯೇ ಜೂನಿಯರ್ ಚಿರು ಬಂದಿರೋದು ಖುಷಿ ಕೊಟ್ಟಿದೆ.-ಶಿವಾರ್ಜುನ್, ನಿರ್ಮಾಪಕರು
–ರವಿಪ್ರಕಾಶ್ ರೈ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.