ತೇಜ್ ಹೇಳಿದ ರಿವೈಂಡ್ ಸ್ಟೋರಿ!
Team Udayavani, Apr 16, 2021, 11:35 AM IST
ನಟ ತೇಜ್ ಅಭಿನಯದ “ರಿವೈಂಡ್’ ಚಿತ್ರ ಈ ವಾರ ತೆರೆಗೆ ಬರುತ್ತಿದೆ. ಈಗಾಗಲೇ ತನ್ನ ಟೈಟಲ್, ಪೋಸ್ಟರ್, ಟೀಸರ್ ಮೂಲಕ ಸಿನಿಪ್ರಿಯರ ಗಮನ ಸೆಳೆದಿರುವ “ರಿವೈಂಡ್’ ಚಿತ್ರದಲ್ಲಿ ನಟ ತೇಜ್ ಪತ್ರಕರ್ತನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಕನ್ನಡ ಮತ್ತು ತಮಿಳಿನಲ್ಲಿ ಏಕಕಾಲಕ್ಕೆ ನಿರ್ಮಾಣವಾಗಿರುವ “ರಿವೈಂಡ್’ ಎರಡೂ ಭಾಷೆಗಳಲ್ಲಿ ತೆರೆಕಾಣುತ್ತಿದೆ.
ಚಿತ್ರದ ಬಗ್ಗೆ ಮಾತನಾಡುವ ನಾಯಕ ನಟ ತೇಜ್, “ಒಮ್ಮೆ ನಮ್ಮ ಲೈಫ್ನ “ರಿವೈಂಡ್’ ಮಾಡಲು ಸಾಧ್ಯವಾಗುವುದಾದರೆ, ಏನೆಲ್ಲ ಮಾಡಬಹುದು? ಅದರಿಂದಾಗುವ ಅನುಕೂಲ, ಅನಾನುಕೂಲಗಳೇನು ಅನ್ನೋದು ಸಿನಿಮಾದ ಕಥೆಯ ಒಂದು ಎಳೆ. ಇದೊಂದು ಸಸ್ಪೆನ್ಸ್-ಥ್ರಿಲ್ಲರ್ ಶೈಲಿಯ ಸಿನಿಮಾ. ಕಾಲ್ಪನಿಕ ಕಥೆಯಾದರೂ ಒಂದು ಲಾಜಿಕ್ ಇಟ್ಟುಕೊಂಡು ಈ ಸಿನಿಮಾ ಮಾಡಿದ್ದೇವೆ. ಇಂದಿನ ಆಡಿಯನ್ಸ್ ಇಷ್ಟಪಡುವಂಥ ಹಲವು ಅಂಶಗಳು ಸಿನಿಮಾ ದಲ್ಲಿದೆ. ಎಲ್ಲ ವರ್ಗದ ಆಡಿಯನ್ಸ್ಗೂ ಸಿನಿಮಾ ಕನೆಕ್ಟ್ ಆಗುತ್ತದೆ’ ಎಂದು ವಿಶ್ವಾಸ ವ್ಯಕ್ತಪಡಿಸುತ್ತಾರೆ.
ಇದನ್ನೂ ಓದಿ:ದಂಗಲ್ ಬೆಡಗಿ Sanya Malhotra ಬ್ಯೂಟಿಫುಲ್ ಫೋಟೋ ಗ್ಯಾಲರಿ
ಇನ್ನು “ರಿವೈಂಡ್’ ಚಿತ್ರದಲ್ಲಿ ತೇಜ್ಗೆ ಚಂದನಾ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಚಿತ್ರದಲ್ಲಿ ಹಿರಿಯ ನಟ ಸುಂದರ್ ರಾಜ್, ಸಂದೀಪ್ ಮಲಾನಿ, ಧರ್ಮ ಮೊದಲಾದವರು ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.
“ಪನೋರೊಮಿಕ್ ಸ್ಟುಡಿಯೋ’ ಬ್ಯಾನರ್ ಅಡಿಯಲ್ಲಿ ವಿನೋದ್ ಈ ಚಿತ್ರವನ್ನು ನಿರ್ಮಿಸಿದ್ದಾರೆ. ಚಿತ್ರದ ಹಾಡುಗಳಿಗೆ ಸಬೇಶ್ ಸೊಲೊಮನ್ ಸಂಗೀತ ಮತ್ತು ರಿವಿಂದ್ ಸಂಗೀತ ಸಂಯೋಜಿಸಿದ್ದಾರೆ. ಚಿತ್ರಕ್ಕೆ ಪ್ರೇಮ್ ಛಾಯಾಗ್ರಹಣ, ವಿನೋದ್ ಬಸವರಾಜ್ ಸಂಕಲನವಿದೆ. ಹೊಸ ವಿಷಯವನ್ನು ಇಟ್ಟುಕೊಂಡು ತೆರೆಮೇಲೆ ಬರುತ್ತಿರುವ “ರಿವೈಂಡ್’ ಹೇಗಿದೆ ಅನ್ನೋದು ಇದೇ ವಾರಾಂತ್ಯದಲ್ಲಿ ಗೊತ್ತಾಗಲಿದೆ.
ಇದನ್ನೂ ಓದಿ: ಅಜೇಯ ವಿಜಯ: ಕೃಷ್ಣ ಟಾಕೀಸ್ ಬಗ್ಗೆ ಕೃಷ್ಣನ್ ಟಾಕ್!
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Bhavani Revanna: ಅಪಹರಣ ಕೇಸ್-ಭವಾನಿ ರೇವಣ್ಣ ಜಾಮೀನು ರದ್ದತಿಗೆ ಸುಪ್ರೀಂ ನಕಾರ
Puttur: ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯನಿರ್ವಹಣಾಧಿಕಾರಿ ಅಪಘಾತದಲ್ಲಿ ಮೃತ್ಯು
Simha Roopini: ಭಕ್ತಿ ಭಾವದ ʼಸಿಂಹ ರೂಪಿಣಿʼ: ಕಿನ್ನಾಳ್ ರಾಜ್ ನಿರ್ದೇಶನ
Bengaluru: ಪತಿ, ಪ್ರಿಯಕರನ ಕೊಂದು ಪತಿ ಆತ್ಮಹತ್ಯೆ!
INDvsNZ: ಪಂತ್ ಬದಲು ಧ್ರುವ್ ಜುರೆಲ್ ವಿಕೆಟ್ ಕೀಪಿಂಗ್; ರಿಷಭ್ ಪಂತ್ ಗೆ ಏನಾಗಿದೆ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.