ಇವರು ಯಾರು ಗೊತ್ತಾ? ರಿವೈಂಡ್ ಮಾಡಿಕೊಳ್ಳಿ..
Team Udayavani, Oct 9, 2020, 3:24 PM IST
ಇತ್ತೀಚೆಗಷ್ಟೇ ನಟಿ ಮೇಘನಾ ರಾಜ್ ಅವರ ಸೀಮಂತ ಕಾರ್ಯಕ್ರಮವನ್ನು ಅವರ ಕುಟುಂಬ ವರ್ಗ ಶಾಸ್ತ್ರೋಕ್ತವಾಗಿ, ಅದ್ಧೂರಿಯಾಗಿ ನೆರವೇರಿಸಿತ್ತು. ಈ ಕಾರ್ಯಕ್ರಮದ ಫೋಟೋಗಳು ಸೋಶಿಯಲ್ ಮೀಡಿಯಾಗಳಲ್ಲಿ ಸಾಕಷ್ಟು ಹರಿದಾಡಿದ್ದವು.
ಅಭಿಮಾನಿಗಳು, ಸಿನಿಪ್ರಿಯರು ಚೊಚ್ಚಲ ಮಗುವಿನ ನಿರೀಕ್ಷೆಯಲ್ಲಿರುವ ಮೇಘನಾಗೆ ಶುಭ ಹಾರೈಸಿದ್ದರು. ಇದೇ ವೇಳೆ ಮೇಘನಾ ರಾಜ್‌ಕುಟುಂಬದ ಫೋಟೋವೊಂದರಲ್ಲಿ ಇರುವ ತೇಜ್ ಎನ್ನುವವರು, ಚಿರು ಅವರಕಾರಿನ ಚಾಲಕ ಎಂದು ಸೋಶಿಯಲ್ ಮೀಡಿಯಾಗಳಲ್ಲಿ ಸುಳ್ಳು ಸುದ್ದಿ ಹರಿದಾಡಿತ್ತು. ಆದರೆ ವಾಸ್ತವಾಂಶ ಏನೆಂದರೆ, ಚಿತ್ರರಂಗದಲ್ಲಿ ಸಕ್ರಿಯವಾಗಿರು ವವರಿಗೆ, ಮೇಘನಾ ರಾಜ್‌ಕುಟುಂಬವನ್ನು ಹತ್ತಿರದಿಂದ ಬಲ್ಲವರಿಗೆ ಈ ತೇಜ್ ಅತ್ಯಂತ ಚಿರಪರಿಚಿತ ಹುಡುಗ.
ಹೌದು ತೇಜ್, ಮೇಘನಾ ರಾಜ್ ಅವರ ಸೋದರ ಸಂಬಂಧಿ. ಅಷ್ಟೇ ಅಲ್ಲದೆಕರಾಟೆಕಿಂಗ್ ಶಂಕರ್‌ನಾಗ್ ಅಭಿನಯದ ಚಿತ್ರದ ಮೂಲಕ ಬಾಲನಟನಾಗಿ ಚಿತ್ರರಂಗಕ್ಕೆ ಪರಿಚಯವಾದ ಹುಡುಗ. “ಮೀಸೆ ಚಿಗುರಿದಾಗ’ ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆನಾಯಕನಾಗಿ ಪರಿಚಯವಾದ ತೇಜ್ ಅವರ ಚಿತ್ರಕ್ಕೆ ಸ್ವತಃ ವರನಟ ಡಾ. ರಾಜಕುಮಾರ್ ಗಾಯನ ಮಾಡಿ, ಬೆನ್ನು ತಟ್ಟಿದ್ದರು. ಆನಂತರ ತಮಿಳು ಚಿತ್ರರಂಗದಲ್ಲಿ ಹೆಚ್ಚು ಸಕ್ರಿಯವಾದ ತೇಜ್, ಈಗಾಗಲೇ ತಮಿಳು ಚಿತ್ರರಂಗದಲ್ಲಿ ನಾಯಕ ನಟನಾಗಿ ಚಿರಪರಿಚಿತರಾಗಿದ್ದಾರೆ.
ಸಿನಿಮಾ ರಂಗದೊಂದಿಗೆ ನಂಟು ಹೊಂದಿರುವ, ತೇಜ್‌ಕೇವಲ ನಟ, ನಿರ್ಮಾಪಕ, ನಿರ್ದೇಶಕ ಮಾತ್ರವಲ್ಲದೆ ವೃತ್ತಿಯಲ್ಲಿ ಯುವ ವಿಜ್ಞಾನಿ ಕೂಡಾ ಆಗಿದ್ದಾರೆ. ಪ್ರತಿಭಾವಂತ ತೇಜ್ ಸದ್ಯಕನ್ನಡದಲ್ಲಿ “ರಿವೈಂಡ್’ ಚಿತ್ರದಲ್ಲಿ ನಾಯಕ ನಟನಾಗಿ ಅಭಿನಯಿಸಿದ್ದು, ಇನ್ನೇನುಕೆಲ ತಿಂಗಳಲ್ಲಿ ಈ ಚಿತ್ರ ತೆರೆಗೆ ಬರಲಿದೆ. ಅದರ ಬೆನ್ನಲ್ಲೇ “ರಾಮಾಚಾರಿ 2.0′ ಚಿತ್ರದಲ್ಲೂ ತೇಜ್ ಅಭಿನಯಿಸುತ್ತಿದ್ದು, ಈಗಾಗಲೇ ಪ್ರೀ- ಪ್ರೊಡಕ್ಷನ್ ಅಂತಿಮ ಹಂತದಲ್ಲಿರುವ ಈ ಚಿತ್ರದ ಶೂಟಿಂಗ್ ಇದೇ ವರ್ಷಾಂತ್ಯಕ್ಕೆ ಆರಂಭವಾಗಲಿದೆ.
ಸದ್ಯಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗುತ್ತಿರುವ ತೇಜ್, ಮುಂದಿನ ದಿನಗಳಲ್ಲಿ ಒಳ್ಳೆಯ ಚಿತ್ರಗಳು, ವಿಭಿನ್ನ ಪಾತ್ರಗಳ ಮೂಲಕಕನ್ನಡ ಸಿನಿಪ್ರಿಯರ ಮುಂದೆ ಬರುವ ತಯಾರಿಯಲ್ಲಿದ್ದಾರೆ. ಈ ಬಗ್ಗೆ ಮಾತನಾಡುವ ತೇಜ್, “ನಾನು ಬಾಲನಟನಾಗಿ ಕನ್ನಡ ಚಿತ್ರರಂಗಕ್ಕೆ ಬಂದವನು. ಶಂಕರ್ ನಾಗ್ ಅವರಂಥ ಲೆಜೆಂಡರಿ ವ್ಯಕ್ತಿಯ ಜೊತೆಕೆಲಸ ಮಾಡಿದ್ದೇನೆ. ನಾನು ಸಿನಿಮಾರಂಗಕ್ಕೆ ಬರಲು ಅವರೇ ಸ್ಫೂರ್ತಿ. ಈಗಾಗಲೇ ತಮಿಳಿನಲ್ಲಿ ನಾಲ್ಕೈದು ಸಿನಿಮಾಗಳಲ್ಲಿ ಅಭಿನಯಿಸಿದ್ದೇನೆ. ಸದ್ಯ ಕನ್ನಡದಲ್ಲೂ ಎರಡು ಸಿನಿಮಾಗಳಲ್ಲಿಅಭಿನಯಿಸುತ್ತಿದ್ದೇನೆ. ಅದರಲ್ಲಿ ಒಂದು ಸಿನಿಮಾ “ರಿವೈಂಡ್’ ಈಗಾಗಲೇ ರಿಲೀಸ್‌ಗೆ ರೆಡಿಯಾಗಿದ್ದು, ಆದಷ್ಟು ಬೇಗ ತೆರೆಗೆ ಬರಲಿದೆ’ ಎನ್ನುತ್ತಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sandalwood Rewind 2024; ಹಳಬರಿಗೆ ಜೈಕಾರ ಹೊಸಬರಿಗೆ ಉರಿ ಖಾರ; ಚಂದನವನದ ಚೆಂದದ ಲೆಕ್ಕ
Sandalwood: ಸ್ಟಾರ್ ಸಿನಿಮಾ ಹೆಚ್ಚು ಬಂದರೆ ಚಿತ್ರರಂಗಕ್ಕೆ ಪೂರಕ: ಎನ್. ನರಸಿಂಹಲು
Dhruva-Prem: ಡಿ.24ಕ್ಕೆ ʼಕೆಡಿʼ ಶಿವ ಶಿವ ಹಾಡು ರಿಲೀಸ್
Dhruva Sarja: ಪ್ರತಿ ಸಿನಿಮಾವೂ ನನಗೆ ಹೊಸ ಪಾಠ…: ಧ್ರುವ ಹೇಳಿದ್ದೇನು
Kiccha Sudeepa; ತಾಯಿಯನ್ನು ಉಳಿಸಿಕೊಳ್ಳಲಾಗದ ಆ ಕ್ಷಣ ನಾನು ಯೂಸ್‌ಲೆಸ್ ಅನಿಸಿತು…
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Bandipur: ಆನೆಮರಿಯನ್ನೇ ಬೇಟೆಯಾಡಿ ಕೊಂದ ಹುಲಿ… ಅರಣ್ಯ ಅಧಿಕಾರಿಗಳಿಂದ ಪರಿಶೀಲನೆ
Suzuki; ಆಟೋಮೊಬೈಲ್ ಕ್ಷೇತ್ರದ ದಿಗ್ಗಜ ಒಸಾಮು ಸುಜುಕಿ ವಿಧಿವಶ
Hubli: ವರೂರಿನ ನವಗ್ರಹ ತೀರ್ಥ ಕ್ಷೇತ್ರದಲ್ಲಿ ಜ. 15ರಿಂದ 26ರವರೆಗೆ ಮಹಾಮಸ್ತಕಾಭಿಷೇಕ
Punjab: ನಿಯಂತ್ರಣ ತಪ್ಪಿ ನದಿಗೆ ಬಿದ್ದ ಬಸ್… 8 ಮಂದಿ ಮೃತ್ಯು, ಹಲವರಿಗೆ ಗಾಯ
Hubli; ಅಯ್ಯಪ್ಪ ಶಿಬಿರದಲ್ಲಿ ಸಿಲಿಂಡರ್ ಸ್ಪೋಟ ಪ್ರಕರಣ; ನಾಲ್ಕಕ್ಕೇರಿದ ಮೃತರ ಸಂಖ್ಯೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.