ಎಸ್.ನಾರಾಯಣ್ ಪುತ್ರ ಈಗ ನಿರ್ದೇಶಕ : ನವಮಿ ಮೂಲಕ ಎಂಟ್ರಿ
ಪೋಸ್ಟರ್ ರಿಲೀಸಿಗೆ ಒಂಭತ್ತು ನಿರ್ದೇಶಕರ ಸಾಥ್
Team Udayavani, Oct 30, 2020, 3:43 PM IST
ಹಿರಿಯ ನಿರ್ದೇಶಕ ಎಸ್. ನಾರಾಯಣ್ ಪುತ್ರ ಪವನ್ ಸಿನಿಮಾವೊಂದರಲ್ಲಿ ಹೀರೋ ಆಗುತ್ತಿರುವ ಸುದ್ದಿಯನ್ನು ನೀವು ಓದಿರಬಹುದು. ಆದರೆ, ಈಗ ಪವನ್ ಸಿನಿಮಾದ ಮತ್ತೂಂದು ಆಯಾಮಕ್ಕೆ ತೆರೆದುಕೊಂಡಿದ್ದಾರೆ. ಅದು ನಿರ್ದೇಶನ. ಹೌದು,
ಪವನ್ ಸಿನಿಮಾವೊಂದನ್ನು ನಿರ್ದೇಶಿಸಿದ್ದಾರೆ. ಅದು “ನವಮಿ’. ಈ ಚಿತ್ರಕ್ಕೆ 9.9.1999 ಎಂಬ ಟ್ಯಾಗ್‌ಲೈನ್ ಬೇರೆ ಇದೆ. ಇತ್ತೀಚೆಗೆ ಚಿತ್ರದ ಫಸ್ಟ್‌ಲುಕ್ ಹಾಗೂ ಪೋಸ್ಟರ್ ಬಿಡುಗಡೆಯಾಗಿದೆ. ಒಂಭತ್ತು ಜನ ನಿರ್ದೇಶಕರಲ್ಲಿ ಚಿತ್ರದ ಪೋಸ್ಟರ್ ಲಾಂಚ್ ಮಾಡಿಸಿದ್ದು
ಮತ್ತೂಂದು ವಿಶೇಷ, ನಿರ್ದೇಶಕರಾದ ಎಸ್ ನಾರಾಯನಣ್, ಶಶಾಂಕ್, ರವಿ ಶ್ರೀವತ್ಸ, ಸಿಂಪಲ್ ಸುನಿ, ಪವನ್ ಒಡೆಯರ್, ಎ.ಪಿ.ಅರ್ಜುನ್, ಚಂದ್ರಶೇಖರ್ ಬಂಡಿಯಪ್ಪ, ಖದರ್ ಕುಮಾರ್ ಹಾಗೂ ಅಭಿರಾಮ್ ಅವರು ಟೈಟಲ್ ಲಾಂಚ್ ಮಾಡಿ ಹಾರೈಸಿದರು. ಈ ಚಿತ್ರದಲ್ಲಿ ನಾಯಕ ನಟರಾಗಿ ಯಶಸ್ ನಟಿಸುತ್ತಿದ್ದಾರೆ. ಈ ಹಿಂದೆ ಪ್ರಸೆಂಟ್ ಪ್ರಪಂಚ ಜೀರೋಪರ್ಸೆಂಟ್ ಲವ್ ಹಾಗೂಕ್ರಿಟಿಕಲ್ ಕೀರ್ತನೆಗಳು ಎನ್ನುವ ಚಿತ್ರದಲ್ಲಿ ಅಭಿನಯಿಸಿದ ಅನುಭವವಿದೆ. ಚಿತ್ರದಲ್ಲಿ ನಂದಿನಿ ಗೌಡ ನಾಯಕಿಯಾಗಿದ್ದು ನಾಯಕ ನಟ ಯಶಸ್ ಅಭಿ ಮತ್ತು ಕೃಷ್ಣ ಗುಡೆಮಾರನ ಹಳ್ಳಿ ಯವರು ಸೇರಿ ಕಥೆ ಹಾಗೂ ಚಿತ್ರಕತೆ ರಚಿಸಿ ಪದ್ಮ ಸುಂದರಿ ಕ್ರಿಯೇಶನ್ಸ್‌ನಡಿ ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ.
ಚಿತ್ರದಲ್ಲಿ ಎಸ್ .ನಾರಾಯಣ್, ಶಂಕರ್ ಅಶ್ವಥ್, ಓಂ ಪ್ರಕಾಶ್ ರಾವ್, ಹುಚ್ಚ ವೆಂಕಟ್, ಸಂದೀಪ್, ಅನುಶ್ರೀ ಕುರಿಬಾಂಡ್ ಸುನೀಲ್ ಅರುಣಾ ಬಾಲರಾಜ್ ಮುಂತಾದವರು ನಟಿಸಿದ್ದಾರೆ. ಚಿತ್ರಕ್ಕೆ ಕೆ.ಪಿ.ಎಚ್.ಎಸ್. ಅವರ ಛಾಯಾಗ್ರಹಣ, ಧರ್ಮ ಸಂಗೀತ ನಿರ್ದೇಶನ, ನಾಗಾರ್ಜುನ್ ಶರ್ಮಾರವರ ಸಾಹಿತ್ಯ, ಮಾಸ್ ಮಾದ ಸಾಹಸ ನಿರ್ದೇಶನವಿದೆ