ಹೊರಬಂತು ಹೊಸಬರ ಹಾರರ್-ಥ್ರಿಲ್ಲರ್ “ಸಕೂಚಿ’ ಟ್ರೇಲರ್
Team Udayavani, Oct 22, 2021, 2:13 PM IST
ಬಹುತೇಕ ಹೊಸ ಪ್ರತಿಭೆಗಳೇ ಸೇರಿ ನಿರ್ಮಿಸಿರುವ ಹಾರರ್-ಥ್ರಿಲ್ಲರ್ ಕಥಾಹಂದರವಿರುವ “ಸಕೂಚಿ’ ಚಿತ್ರದ ಟ್ರೇಲರ್ ಇತ್ತೀಚೆಗೆ ಬಿಡುಗಡೆಯಾಯಿತು. “ದಿಯಾ’ ಖ್ಯಾತಿಯ ನಟಿ ಖುಷಿ ರವಿ, ನಿರ್ದೇಶಕ ಮಹೇಶ್ ಬಾಬು ಸೇರಿದಂತೆ ಚಿತ್ರರಂಗ ಮತ್ತು ರಾಜಕೀಯ ರಂಗದ ಹಲವು ಗಣ್ಯರ ಸಮ್ಮುಖದಲ್ಲಿ “ಸಕೂಚಿ’ ಚಿತ್ರದ ಟ್ರೇಲರ್ ಹೊರಬಂದಿತು.
“ಸಕೂಚಿ’ ಚಿತ್ರದಲ್ಲಿ ತ್ರಿವಿಕ್ರಮ ನಾಯಕನಾಗಿ, ಡಯಾನಾ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಉಳಿದಂತೆ ಡಾಲಿ ರಾಜೇಶ್, ಸುಕುಮಾರ್, ಸುಮನರಾವ್, ಸಂಜಯ್ ರಾಜ್, ಅಶೋಕ್ ಮುಂತಾದವರು ಚಿತ್ರದ ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಬಿ.ಸಿ ಅಶ್ವಿನ್ ನಿರ್ಮಾಣದ ಈ ಚಿತ್ರಕ್ಕೆ ಅಶೋಕ್ ಎಸ್. ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ.
ಇದೇ ವೇಳೆ “ಸಕೂಚಿ’ ಚಿತ್ರದ ಬಗ್ಗೆ ಮಾತನಾಡಿದ ನಿರ್ದೇಶಕ ಅಶೋಕ್ ಎಸ್, “ಭಾರೀ ಸಿಡಿಲಿನ ಭಯಂಕರ ಶಬ್ದ ಬಗ್ಗೆ ತಿಳಿದುಕೊಳ್ಳಲು ಶುರು ಮಾಡಿದಾಗ ಹುಟ್ಟಿಕೊಂಡ ಕಥೆ ಇದು. “ಸಕೂಚಿ’ ಅನ್ನೋದು ಪ್ರೇತಾತ್ಮಗಳಿಗೆ ಪ್ರೇತಾತ್ಮ. ಇದೊಂದು ಪ್ರಯೋಗ. ಅದನ್ನು ಸಿನಿಮಾದಲ್ಲಿ ಹೇಳಿದ್ದೇವೆ’ ಎಂದರು.
ಇದನ್ನೂ ಓದಿ:ಟ್ರೇಲರ್, ಟೀಸರ್, ಸಾಂಗ್ಸ್ ಧಮಾಕ: ರಿಲೀಸ್ ಗೆ ತಯಾರಾದ ಚಿತ್ರಗಳ ಶರವೇಗದ ಪ್ರಮೋಷನ್
“ಮೇಲ್ನೋಟಕ್ಕೆ “ಸಕೂಚಿ’ ಹಾರರ್-ಥ್ರಿಲ್ಲರ್ ಸಿನಿಮಾದಂತೆ ಕಂಡರೂ ಇದರಲ್ಲಿ ಲವ್, ಎಮೋಶನ್ಸ್ ಎಲ್ಲವನ್ನೂ ಮನಮುಟ್ಟುವಂತೆ ಹೇಳಿದ್ದೇವೆ’ ಅನ್ನೋದು ಚಿತ್ರತಂಡ ಮಾತು. ಚಿತ್ರದ ಹಾಡುಗಳಿಗೆ ಗಣೇಶ್ ಗೋವಿಂದಸ್ವಾಮಿ ಸಂಗೀತ ಸಂಯೋಜಿಸಿದ್ದು, ಹೃದಯಶಿವ ಸಾಹಿತ್ಯವಿದೆ. ಚಿತ್ರಕ್ಕೆ ಆನಂದ್ ಸುಂದರೇಶ್ ಛಾಯಾಗ್ರಹಣ, ಮಹೇಶ್ ತೊಗಟ ಸಂಕಲನವಿದೆ. ಚಿತ್ರಕ್ಕೆ ಆನಂದ್ ಯಡಿಯೂರು ನೃತ್ಯ ಮತ್ತು ಕುಂಫು ಚಂದ್ರು ಸಾಹಸ ಸಂಯೋಜಿಸಿದ್ದಾರೆ. “ಸಕೂಚಿ’ ಚಿತ್ರದ ಶೀರ್ಷಿಕೆಗೆ “ಸಾವಿನ ಸೂಚಿ’ ಎಂಬ ಅಡಿಬರಹವಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Ankola; ಕಾರು ಢಿಕ್ಕಿ: ಪಾದಚಾರಿ ಮೃತ್ಯು; ಮೂವರಿಗೆ ಗಾಯ
Road Mishap: ಬೈಕ್- ಬಸ್ ಡಿಕ್ಕಿ; 8 ವರ್ಷದ ವಿದ್ಯಾರ್ಥಿನಿ ಸಾವು
Missing Case ಶಿರ್ವ: ವ್ಯಕ್ತಿ ನಾಪತ್ತೆ; ಪ್ರಕರಣ ದಾಖಲು
Rule; 5, 8ನೇ ತರಗತಿಯಲ್ಲಿ ಫೈಲ್ ಆದರೆ ಭಡ್ತಿ ನೀಡುವಂತಿಲ್ಲ; ಅದೇ ಕ್ಲಾಸಲ್ಲಿ ಮುಂದುವರಿಕೆ!
Manipur; ಪೊಲೀಸ್ ಇಲಾಖೆಯಲ್ಲಿ ಮೈತೇಯಿ ಮತ್ತು ಕುಕಿಗಳು ಒಟ್ಟಾಗಿ ಕೆಲಸ ಮಾಡಬೇಕು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.