ನಟನೆಯ ಅಪೇಕ್ಷೆ
Team Udayavani, Aug 11, 2017, 7:35 AM IST
ಹೊಸ ಹೊಸ ಸಿನಿಮಾಗಳು ಬಂದಂತೆ ಹೊಸ ನಟ-ನಟಿಯರ ಆಗಮನ ಕೂಡಾ ಆಗುತ್ತಿರುತ್ತದೆ. ಅದರಲ್ಲಿ ಕೆಲವರು ಭರವಸೆ ಮೂಡಿಸುತ್ತಾರೆ. ಈಗ ಅಪೇಕ್ಷಾ ಪುರೋಹಿತ್ ಕೂಡಾ ಚಿತ್ರರಂಗಕ್ಕೆ ಎಂಟ್ರಿಕೊಟ್ಟಿದ್ದು, ತಮ್ಮ ಚೊಚ್ಚಲ ಸಿನಿಮಾ ಮೇಲೆ ಸಾಕಷ್ಟು ನಿರೀಕ್ಷೆ ಇಟ್ಟಿದ್ದಾರೆ. ಅಷ್ಟಕ್ಕೂ ಯಾರು ಅಪೇಕ್ಷಾ ಎಂದರೆ, ಉದಾಹರಣೆಯಾಗಿ “ಕಾಫಿ ತೋಟ’ವಿದೆ. ಟಿ.ಎನ್.ಸೀತಾರಾಂ ನಿರ್ದೇಶನದ “ಕಾಫಿತೋಟ’ ಚಿತ್ರದಲ್ಲಿ ಪ್ರಮುಖ ಪಾತ್ರ ಮಾಡಿರುವ ಅಪೇಕ್ಷಾಗೆ ಈಗ ಸಾಕಷ್ಟು ಅವಕಾಶಗಳು ಬರುತ್ತಿವೆ.
ಪಾತ್ರವೊಂದಕ್ಕೆ ತುಂಬಾ ಫ್ರೆಶ್ ಫೇಸ್‌ಬೇಕು ಮತ್ತು ವಿಭಿನ್ನವಾಗಿರಬೇಕೆಂದುಕೊಂಡು ಟಿಎನ್‌ಎಸ್ ಆಲೋಚಿಸುತ್ತಿದ್ದಾಗ ಸಿಕ್ಕಿದ್ದು ಅಪೇಕ್ಷಾ. ಅದರಂತೆ ಅಪೇಕ್ಷಾಗೆ “ಕಾಫಿ ತೋಟ’ದಲ್ಲಿ ಪ್ರಮುಖ ಪಾತ್ರ ಸಿಕ್ಕಿದೆ. ಸದ್ಯ ಅಪೇಕ್ಷಾ ಧಾರಾವಾಹಿಯಲ್ಲೂ ಬಿಝಿ ಇದ್ದಾರೆ. ಈಗಾಗಲೇ ಕೆಲವು “ಶ್ರೀಮತಿ ಭಾಗ್ಯಲಕ್ಷ್ಮೀ’ ಧಾರಾವಾಹಿಯಲ್ಲಿ ನಟಿಸಿದ್ದಾರೆ. ಅಪೇಕ್ಷಾ ಮೂಲತಃ ಬಾಗಲಕೋಟೆಯ ಹುಡುಗಿ. ಬಿಬಿಎಂ ಮುಗಿಸಿ, ಫ್ಯಾಶನ್ ಡಿಸೈನಿಂಗ್‌ನಲ್ಲಿ ಸ್ನಾತಕೋತ್ತರ ಪದವಿ ಮಾಡಿರುವ ಅಪೇಕ್ಷಾ ಈಗ ಬಣ್ಣದ ಲೋಕದಲ್ಲಿ ಬಿಝಿಯಾಗುತ್ತಿದ್ದಾರೆ. ಅಪೇಕ್ಷಾಗೆ ಟಿ.ಎನ್.ಸೀತಾರಾಂ ಅವರ ಧಾರಾವಾಹಿಯಲ್ಲಿ ನಟಿಸುವ ಆಸೆ ಇತ್ತಂತೆ. ಆದರೆ ಧಾರಾವಾಹಿಯಲ್ಲಿ ಆ ಅವಕಾಶ ಸಿಗದಿದ್ದರೂ ಈಗ ಅವರ ಸಿನಿಮಾದಲ್ಲಿ ನಟಿಸುವ ಅವಕಾಶ ಸಿಕ್ಕಿರುವುದರಿಂದ ಸಹಜವಾಗಿಯೇ ಅಪೇಕ್ಷಾ ಖುಷಿಯಾಗಿದ್ದಾರೆ.
ಸದ್ಯ ಅಪೇಕ್ಷಾಗೆ ಸಿನಿಮಾ ಹಾಗೂ ಧಾರಾವಾಹಿಗಳಿಂದ ಒಂದಷ್ಟು ಅವಕಾಶಗಳು ಬರುತ್ತಿವೆ. ಅಪೇಕ್ಷಾಗೆ ತಮಿಳು ಚಿತ್ರಗಳಲ್ಲೂ ನಟಿಸಬೇಕೆಂಬ ಆಸೆ ಇರುವುದರಿಂದ ಮೊದಲ ಹಂತವಾಗಿ ತಮಿಳು ಧಾರಾವಾಹಿಯೊಂದರಲ್ಲಿ ನಟಿಸುತ್ತಿದ್ದಾರೆ. ಮುಂದೆ ಕನ್ನಡದಲ್ಲೂ ಒಳ್ಳೆಯ ಪಾತ್ರ ಮಾಡುವ ಆಸೆ ಅಪೇಕ್ಷಾಗಿದೆ. “ಕಾಫಿ ತೋಟದಲ್ಲಿ ನಟಿಸಿದ್ದು ಒಳ್ಳೆಯ ಅನುಭವ. ಈ ಪಾತ್ರದ ಮೂಲಕ ಮತ್ತಷ್ಟು ಒಳ್ಳೆಯ ಪಾತ್ರಗಳು ಸಿಗುವ ನಿರೀಕ್ಷೆ ಇದೆ’ ಎನ್ನುತ್ತಾರೆ ಅಪೇಕ್ಷಾ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sandalwood: ಸ್ಟಾರ್ ಸಿನಿಮಾ ಹೆಚ್ಚು ಬಂದರೆ ಚಿತ್ರರಂಗಕ್ಕೆ ಪೂರಕ: ಎನ್. ನರಸಿಂಹಲು
Dhruva-Prem: ಡಿ.24ಕ್ಕೆ ʼಕೆಡಿʼ ಶಿವ ಶಿವ ಹಾಡು ರಿಲೀಸ್
Dhruva Sarja: ಪ್ರತಿ ಸಿನಿಮಾವೂ ನನಗೆ ಹೊಸ ಪಾಠ…: ಧ್ರುವ ಹೇಳಿದ್ದೇನು
Kiccha Sudeepa; ತಾಯಿಯನ್ನು ಉಳಿಸಿಕೊಳ್ಳಲಾಗದ ಆ ಕ್ಷಣ ನಾನು ಯೂಸ್‌ಲೆಸ್ ಅನಿಸಿತು…
UI Movie: 9 ವರ್ಷ ಬಳಿಕ ಉಪ್ಪಿ ಡೈರೆಕ್ಟ್ ಮಾಡಿದ ಯು-ಐ ಸಿನಿಮಾದ ಹೈಲೈಟ್ಸ್ ಏನು?
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Gold & Cash: ಕಾಡಿನ ಬಳಿ ನಿಲ್ಲಿಸಿದ್ದ ಕಾರಿನಲ್ಲಿ 52 ಕೆ.ಜಿ ಚಿನ್ನ, 9 ಕೋಟಿ ನಗದು ಪತ್ತೆ
Aligarh; ಮುಸ್ಲಿಂ ಬಾಹುಳ್ಯದ ಪ್ರದೇಶದಲ್ಲಿ ಮತ್ತೊಂದು ಶಿವ ದೇವಾಲಯ ಪತ್ತೆ
ಹೊಸ ವರ್ಷಾಚರಣೆಗೆ ಡ್ರಗ್ಸ್ ಪಾರ್ಟಿ: ಪೊಲೀಸ್ ನಿಗಾ
Mandya:ಹಲವು ರೋಗ ನಿವಾರಕ ವೈದ್ಯನಾಥೇಶ್ವರ ಸ್ವಾಮಿ-ಚರ್ಮದ ರೋಗಕ್ಕೆ ಹುತ್ತದ ಮಣ್ಣು ರಾಮಬಾಣ
C.T. Ravi ಅವರನ್ನು ತತ್ ಕ್ಷಣ ಬಿಡುಗಡೆ ಮಾಡಿ: ಹೈಕೋರ್ಟ್ ಆದೇಶ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.