ಬೆಳಕಿನ ಹಬ್ಬಕ್ಕೆ ಸಿನಿ ಮಂದಿಯ ಭರ್ಜರಿ ಗಿಫ್ಟ್
Team Udayavani, Nov 15, 2020, 9:02 PM IST
ಕೋವಿಡ್ ಲಾಕ್‌ಡೌನ್‌ನಿಂದಾಗಿ ಸ್ಥಗಿತಗೊಂಡಿದ್ದ ಅನೇಕ ಸಿನಿಮಾಗಳಕೆಲಸಗಳಿಗೆ, ಲಾಕ್‌ಡೌನ್ ತೆರವಾಗುತ್ತಿದ್ದಂತೆ ಮತ್ತೆ ಚಾಲನೆ ಸಿಕ್ಕಿದ್ದು, ಈಗ ಬಹುತೇಕ ಸಿನಿಮಾಗಳು ಬಿಡುಗಡೆ ಹಂತಕ್ಕೆ ಬಂದು ನಿಂತಿವೆ. ಇದೇ ವೇಳೆ ನಿಧಾನವಾಗಿ ತಮ್ಮ ಬಿಡುಗಡೆಗೆ ಪ್ಲಾನ್ ಮಾಡಿಕೊಳ್ಳುತ್ತಿರುವ ಚಿತ್ರತಂಡಗಳು, ಸದ್ಯ ದೀಪಾವಳಿ ಹಬ್ಬದ ಸಂದರ್ಭದಲ್ಲಿ ತಮ್ಮ ಟೀಸರ್, ಟ್ರೇಲರ್,ಹಾಡುಗಳನ್ನು ಬಿಡುಗಡೆ ಮಾಡುವ ಮೂಲಕ ಚಿತ್ರದ ಪ್ರಚಾರ ಕಾರ್ಯಗಳಿಗೆ ಚಾಲನೆ ನೀಡಿವೆ. ಮತ್ತೂಂದೆಡೆ ದೀಪಾವಳಿ ಸಂದರ್ಭದಲ್ಲಿ ಹೊಸ ಚಿತ್ರಗಳ ಕೆಲಸಗಳಿಗೆಚಾಲನೆ ನೀಡಿರುವ ಚಿತ್ರತಂಡಗಳು ಕೂಡ ತಮ್ಮ ಟೈಟಲ್, ಪೋಸ್ಟರ್, ಫಸ್ಟ್‌ಲುಕ್ ಗಳನ್ನು ಬಿಡುಗಡೆ ಮಾಡಿವೆ.
ಏಕ್ ಲವ್‌ಯಾ ಸ್ಪೆಷಲ್ ಪೋಸ್ಟರ್ :
ಜೋಗಿ ಪ್ರೇಮ್ ನಿರ್ದೇಶನದ ಮುಂಬರುವ ಚಿತ್ರ “ಏಕ್ ಲವ್ ಯಾ’ ಚಿತ್ರದ ಚಿತ್ರೀಕರಣ ಕೊನೆ ಹಂತಕ್ಕೆ ಬಂದಿದೆ. ಈಗಾಗಲೇ”ಏಕ್ ಲವ್ ಯಾ’ಚಿತ್ರದ ಟೀಸರ್ ಬಿಡುಗಡೆ ಮಾಡಿರುವ ಚಿತ್ರತಂಡ, ದೀಪಾವಳಿ ಹಬ್ಬದ ಸಂದರ್ಭದಲ್ಲಿ ಚಿತ್ರದ ಮತ್ತೂಂದು ಸ್ಪೆಷಲ್ ಪೋಸ್ಟರ್ ಅನ್ನು ಬಿಡುಗಡೆ ಮಾಡಿದೆ. ನಟಿ ರಕ್ಷಿತಾ ಅವರ ಸಹೋದರ ರಾಣಾ ಮೊದಲ ಬಾರಿಗೆ ಈ ಚಿತ್ರದಲ್ಲಿ ನಾಯಕ ನಟನಾಗಿ ಕಾಣಿಸಿಕೊಳ್ಳುತ್ತಿದ್ದು, ರಚಿತಾ ರಾಮ್, ರೀಷ್ಮಾ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ.
ಚಾರ್ಲಿಯ ಮತ್ತೂಂದು ಪೋಸ್ಟರ್ :
ನಟ ರಕ್ಷಿತ್ ಶೆಟ್ಟಿ ಅಭಿನಯದ ಮುಂಬರುವ ಚಿತ್ರ “ಚಾರ್ಲಿ 777′ ಸದ್ಯ ಪೋಸ್ಟ್ ಪ್ರೊಡಕ್ಷನ್ ಕೆಲಸಗಳಲ್ಲಿ ನಿರತವಾಗಿದೆ.ಕೆಲ ಸಮಯದ ಹಿಂದಷ್ಟೇ “ಚಾರ್ಲಿ 777’ಚಿತ್ರದ ಪೋಸ್ಟರ್ ಬಿಡುಗಡೆ ಮಾಡಿದ್ದ ಚಿತ್ರತಂಡ, ಈಗ ದೀಪಾವಳಿ ಹಬ್ಬದ ಪ್ರಯುಕ್ತ, “ಚಾರ್ಲಿ 777′ ಚಿತ್ರದ ಮತ್ತೂಂದು ವಿಭಿನ್ನ ಪೋಸ್ಟರ್ ಬಿಡುಗಡೆ ಮಾಡಿ ಪ್ರೇಕ್ಷರಿಗೆ ದೀಪಾವಳಿಯ ಶುಭಾಶಯ ತಿಳಿಸಿದೆ.
ಹೆಸರಿಡದ ಉಪ್ಪಿ 54ನೇ ಚಿತ್ರ :
ರಿಯಲ್ ಸ್ಟಾರ್ ಉಪೇಂದ್ರ ಅಭಿನಯದ ಮತ್ತು ಶಶಾಂಕ್ ನಿರ್ದೇಶನದ ಹೊಸಚಿತ್ರದ ಫಸ್ಟ್‌ಲುಕ್ ಕೂಡ ದೀಪಾವಳಿ ಹಬ್ಬದ ಸಂದರ್ಭದಲ್ಲಿ ಬಿಡುಗಡೆಯಾಗಿದೆ. ಉಪೇಂದ್ರ ಅಭಿನಯದ 54ನೇ ಸಿನಿಮಾ ಇದಾಗಿದ್ದು, 2021ಕ್ಕೆ ಈ ಚಿತ್ರದ ಚಿತ್ರೀಕರಣ ಆರಂಭವಾಗಲಿದೆ. ನೈಜ ಘಟನೆಗಳಆಧರಿತ ಎಂದು ಹೇಳಲಾಗುತ್ತಿರುವ ಈ ಚಿತ್ರದ ಟೈಟಲ್, ಇತರ ಕಲಾವಿದರು ಮತ್ತುತಾರಾಗಣದ ಬಗ್ಗೆ ಇನ್ನಷ್ಟೇ ಮಾಹಿತಿ ಹೊರಬರಬೇಕಿದೆ.
ರೈಡರ್ ಮತ್ತೂಂದು ಪೋಸ್ಟರ್ :
ನಟ ನಿಖೀಲ್ ಕುಮಾರ್ ಅಭಿನಯದ ಹೊಸಚಿತ್ರ “ರೈಡರ್’ನಮತ್ತೂಂದು ಪೋಸ್ಟರ್ ದೀಪಾವಳಿ ಹಬ್ಬದ ಸಂದರ್ಭದಲ್ಲಿ ಬಿಡುಗಡೆಯಾಗಿದೆ. ಈಗಾಗಲೇ ಈ ಚಿತ್ರದ ಪ್ರೀ-ಪ್ರೊಡಕ್ಷನ್ ಕೆಲಸಗಳು ಭರದಿಂದ ನಡೆಯುತ್ತಿದ್ದು, ಜನವರಿ ವೇಳೆಗೆ ಚಿತ್ರದ ಶೂಟಿಂಗ್ ಪ್ರಾರಂಭವಾಗುವ ಸಾಧ್ಯತೆ ಇದೆ.
ಸಂಚಾರಿ ವಿಜಯ್ ಹೊಸಚಿತ್ರ “ಅವಸ್ಥಾಂತರ’ :
ಸಂಚಾರಿ ವಿಜಯ್ ಅಭಿನಯದ ಹೊಸ ಚಿತ್ರದ ಟೈಟಲ್ ಕೂಡ ದೀಪಾವಳಿ ಹಬ್ಬದ ಸಂದರ್ಭದಲ್ಲಿ ಅನೌನ್ಸ್ ಆಗಿದೆ. ಚಿತ್ರಕ್ಕೆ “ಅವಸ್ಥಾಂತರ’ ಎಂದು ಹೆಸರಿಡಲಾಗಿದ್ದು, ಈ ಚಿತ್ರಕ್ಕೆ ಜಿ. ದೀಪಕ್ ಕುಮಾರ್ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. ಚಿತ್ರದಲ್ಲಿ ರಂಜನಿ ರಾಘವನ್, ದಿಶಾ ಕೃಷ್ಣಯ್ಯ ನಾಯಕಿಯರಾಗಿ ಕಾಣಿಸಿಕೊಳ್ಳುತ್ತಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ನಕ್ಸಲರನ್ನು ಅಮಿತ್ ಶಾ ಸ್ವಾಗತಿಸಿದಾಗ ಏಕೆ ಬೆಚ್ಚಿ ಬಿದ್ದಿಲ್ಲ?: ಸಿಎಂ ತಿರುಗೇಟು
Naxal Package: “ಮೊದಲೇ ಪ್ಯಾಕೇಜ್ ನೀಡಿದ್ದರೆ ವಿಕ್ರಂಗೌಡ ಪ್ರಾಣ ಉಳಿಯುತ್ತಿತ್ತು’: ಸಹೋದರ
Belagavi: ಜೀವಂತ ವ್ಯಕ್ತಿ ಹೆಸರಿನಲ್ಲಿ ಮರಣ ಪ್ರಮಾಣ ಪತ್ರ ನೀಡಿದ ಅಧಿಕಾರಿಗಳು!
Udupi: ಗೀತಾರ್ಥ ಚಿಂತನೆ-150: ತಣ್ತೀನಿಶ್ಚಯ ಬಳಿಕವೇ ಧ್ಯಾನ
Mangaluru; ಹಳೆ ನಾಣ್ಯ ಖರೀದಿ ಹೆಸರಲ್ಲಿ 58 ಲಕ್ಷ ರೂ. ವಂಚನೆ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.