Sandalwood: ಮಿಂಚುಹುಳ, ಗೋಪಿಲೋಲ, ಜನಕ.. ಇಂದು ತೆರೆಗೆ

Team Udayavani, Oct 4, 2024, 8:44 AM IST

Sandalwood: ಮಿಂಚುಹುಳ, ಗೋಪಿಲೋಲ, ಜನಕ.. ಇಂದು ತೆರೆಗೆ

ಕನ್ನಡದಲ್ಲಿ ಇಂದು ಮೂರು ಚಿತ್ರಗಳು ತೆರೆಗೆ ಬರುತ್ತಿದೆ. ಅವುಗಳ ವಿವರ ಇಲ್ಲಿದೆ

ಮಿಂಚುಹುಳ ನಂಬಿ ಬಂದವರು

“ಮಿಂಚು ಹುಳ’ ಎಂಬ ಸಿನಿಮಾವೊಂದು ಇಂದು ಬಿಡುಗಡೆಯಾಗುತ್ತಿದೆ. ಮಹೇಶ್‌ ಕುಮಾರ್‌ ನಿರ್ದೇಶನದ ಈ ಚಿತ್ರದಲ್ಲಿ ಡಾ.ರಾಜ್‌ ಅವರ ಸಹೋದರ ವರದಪ್ಪನವರ ಮೊಮ್ಮಗ ಪೃಥ್ವಿರಾಜ್‌ ಈ ಚಿತ್ರದಲ್ಲಿ ನಾಯಕರಾಗಿ ನಟಿಸಿದ್ದಾರೆ. ಚಿತ್ರವನ್ನು ಭೂನಿ ಪಿಕ್ಚರ್ಸ್‌ ಅಡಿ ರಾಜಗೋಪಾಲ್‌ ದೊಡ್ಡಹುಲ್ಲೂರು ಅವರು ಬಂಡವಾಳ ಹಾಕಿದ್ದು , ವಿಜಯ್‌ ಕುಮಾರ್‌ ಮತ್ತು ಅಬ್ದುಲ್‌ ರಫೀಕ್‌ ಉಲ್ಲಾ ಸಾಥ್‌ ನೀಡಿದ್ದಾರೆ.  ಬೇಜವಾಬ್ದಾರಿ ತಂದೆ ಹಾಗೂ ಮಗನ ನಡುವಿನ ಕಥೆ ಇದಾಗಿದ್ದು, ಆ ತಂದೆಯ ಬದುಕಿನ ವೈರುದ್ಯ, ಅಪ್ಪ- ಮಕ್ಕಳು ಬಾಡಿಗೆ ಕಟ್ಟಲಾಗದೆ ಪಾಳು ಮನೆ ಸೇರಿದಾಗ, ಆ ಮನೆಯಲ್ಲಿ ವಿದ್ಯುತ್‌ ಇರುವುದಿಲ್ಲ. ಏನಾದರೂ ಮಾಡಿ ವಿದ್ಯುತ್‌ ಹಾಕಿಸಬೇಕೆಂದು, ಪೇಪರ್‌ ಏಜೆಂಟ್‌ ಸಹಾಯದಿಂದ ಕರೆಂಟ್‌ ಹಾಕಿಸಲು ಮುಂದಾಗುತ್ತಾನೆ. ಆದರೆ ಒಮ್ಮೆ ಆತ ಕೂಡಿಟ್ಟ ಹಣವನ್ನು ಇಲಿಯೊಂದು ಕಚ್ಚಿ ಹಾಕುತ್ತದೆ. ಮಿಂಚು ಹುಳುವೊಂದನ್ನು ನೋಡಿದ ಆ ಹುಡುಗನಿಗೆ ಹೊಸ ಆಲೋಚನೆ ಬಂದು, ವಿದ್ಯಾರ್ಥಿಯ ಬದುಕಿನಲ್ಲಿ ಹೊಸದಾರಿಗೆ ಅವಕಾಶ ಮಾಡಿಕೊಡುತ್ತದೆ, ಅದು ಏನು ಎಂಬುದೇ ಮಿಂಚುಹುಳು ಚಿತ್ರದ ಕಥಾಹಂದರ.

ಗೋಪಿಲೋಲನ ಆಟ ಶುರು

“ಗೋಪಿಲೋಲ’ ಚಿತ್ರ ಇಂದು ತೆರೆಕಾಣುತ್ತಿದ್ದು, ಈ ಚಿತ್ರವನ್ನು ಆರ್‌.ರವೀಂದ್ರ ನಿರ್ದೇಶನ ಮಾಡಿದ್ದು, ಎಸ್‌.ಆರ್‌.ಸನತ್‌ ಕುಮಾರ್‌ ಹಾಗೂ ಮಂಜುನಾಥ್‌ ಅರಸ್‌ ನಿರ್ಮಾಣ ಮಾಡಿದ್ದಾರೆ. ನಿರ್ಮಾಪಕ ಸನತ್‌ ಕುಮಾರ್‌ ಅವರೇ ಈ ಚಿತ್ರದ ಕಥೆ ಬರೆದಿದ್ದಾರೆ. ಇದೊಂದು ನೈಸರ್ಗಿಕ ಕೃಷಿಗೆ ಸಂಬಂಧಿಸಿದ ಸಿನಿಮಾವಾಗಿದೆ. “ಗೋಪಿಲೋಲ ನೈಸರ್ಗಿಕ ಕೃಷಿಯ ಕುರಿತಾದ ಹಾಗೂ ಸುಂದರ ಪ್ರೇಮಕಥೆಯುಳ್ಳ ಚಿತ್ರ. ಜನರಿಗೆ ಒಂದೊಳ್ಳೆ ಸಂದೇಶ ಕೂಡ ಇದೆ’ ಎನ್ನುವುದು ನಿರ್ದೇಶಕರ ಮಾತು. ಮಂಜುನಾಥ್‌ ಅರಸ್‌ ಈ ಚಿತ್ರದ ನಿರ್ಮಾಣದಲ್ಲಿ ಸಾಥ್‌ ನೀಡುವ ಜೊತೆಗೆ ನಾಯಕರಾಗಿಯೂ ನಟಿಸಿದ್ದಾರೆ. ಚಿತ್ರದಲ್ಲಿ ನಾಯಕಿ ನಿಮಿಷ ನಟಿಸಿದ್ದಾರೆ. ಹಿರಿಯ ನಟಿ ಪದ್ಮಾ ವಾಸಂತಿ, ಎಸ್‌. ನಾರಾಯಣ, ನಟ ಕೆಂಪೇಗೌಡ ಮುಂತಾದವರು ಗೋಪಿಲೋಲ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ತಂದೆಮಗ ಸುತ್ತ ಜನಕ

ತಂದೆ ಮಗನ ಸುತ್ತ ನಡೆಯುವ ಕಥಾಹಂದರವೊಂದಿರುವ “ಜನಕ’ ಚಿತ್ರ ಇಂದು ತೆರೆಕಾಣುತ್ತಿದೆ. ನವಪ್ರತಿಭೆ ಮನು ಈ ಚಿತ್ರದ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡುವ ಜೊತೆಗೆ ಚಿತ್ರದ ನಾಯಕನಾಗಿಯೂ ಅಭಿನಯಿಸಿದ್ದಾರೆ. ಈ ಚಿತ್ರದಲ್ಲಿ ತಂದೆ ಮತ್ತು ಮಗನ ಸಂಬಂಧ ಮತ್ತು ಪ್ರೀತಿಯ ಕುರಿತು ಹೇಳಲಾಗಿದ್ದು, ಮಗ ತನ್ನ ತಂದೆಯ ಹೆಸರನ್ನು ಉಳಿಸಲು ಮತ್ತು ಅವನ ಕನಸನ್ನು ನನಸಾಗಿಸಲು ಹೋಗಿ ಏನೆಲ್ಲ ಸಮಸ್ಯೆಗಳನ್ನು ಎದುರಿಸುತ್ತಾನೆಂಬುದನ್ನು ವಿವರಿಸಲಾಗಿದೆ.

ಓಂ ಶಕ್ತಿ ಕ್ರಿಯೇಶನ್ಸ್‌ ಎ.ಪ್ರೇಮಾ ಅವರು ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಚಿತ್ರದ ಕುರಿತಂತೆ ಮಾತನಾಡಿದ ನಾಯಕ ಕಮ್‌ ನಿರ್ದೇಶಕ ಮನು, ನನ್ನ ತಾಯಿಯ ಆಸೆಯಂತೆ ನಾನು ಜನಕ ಚಿತ್ರಕ್ಕೆ ಕಥೆ ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದೇನೆ. ಅಲ್ಲದೆ, ಚಿತ್ರದ ನಾಯಕನಾಗಿಯೂ ಸಹ ಅಭಿನಯಿಸಿದ್ದೇನೆ. ಹೀಗೆ ಮೊದಲ ಚಿತ್ರದಲ್ಲೇ ಎರಡೂ ಕೆಲಸ ನಿಭಾಯಿಸುವುದು ನನಗೆ ಸ್ವಲ್ಪ ಕಷ್ಟವಾಯಿತು ಎನ್ನುತ್ತಾರೆ. ಈ ಚಿತ್ರದಲ್ಲಿ ರಕ್ಷಾ ಹಾಗೂ ಶಾಲಿನಿ ಇಬ್ಬರು ನಾಯಕಿಯರಾಗಿ ಕಾಣಿಸಿಕೊಂಡಿದ್ದು, ಸುರೇಶ್‌ ಬಾಬು, ರಾಜಲಕ್ಷ್ಮೀ ಆನಂದ್‌ ನಟಿಸಿದ್ದಾರೆ.

ಟಾಪ್ ನ್ಯೂಸ್

Bhairadevi is my dream project…: Radhika kumaraswamy

Radhika kumaraswamy: ಭೈರಾದೇವಿ ನನ್ನ ಡ್ರೀಮ್‌ ಪ್ರಾಜೆಕ್ಟ್…: ರಾಧಿಕಾ

PCB: ‘ನಮ್ಮ ಕ್ರಿಕೆಟ್‌ ಐಸಿಯುನಲ್ಲಿದೆ’ ಎಂದ ಪಾಕಿಸ್ತಾನದ ಮಾಜಿ ಆಟಗಾರ

PCB: ‘ನಮ್ಮ ಕ್ರಿಕೆಟ್‌ ಐಸಿಯುನಲ್ಲಿದೆ’ ಎಂದ ಪಾಕಿಸ್ತಾನದ ಮಾಜಿ ನಾಯಕ

Hashem

Hashem Safieddine: ಹಿಜ್ಬುಲ್ಲಾ ಉತ್ತರಾಧಿಕಾರಿಯನ್ನು ಹೊಡೆದುರುಳಿಸಿತಾ ಇಸ್ರೇಲ್?

Subrahmanya: ಕುಮಾರ ಪರ್ವತ ಚಾರಣ: ಅ.6ರ ಬಳಿಕ ಅವಕಾಶ ನಿರೀಕ್ಷೆ

Subrahmanya: ಕುಮಾರ ಪರ್ವತ ಚಾರಣ: ಅ.6ರ ಬಳಿಕ ಅವಕಾಶ ನಿರೀಕ್ಷೆ

Navaratri Special:  ನಮ್ಮೊಳಗಿನ ರಾವಣನ ಸುಡುವುದೆಂತು…?

Navaratri Special: ನಮ್ಮೊಳಗಿನ ರಾವಣನ ಸುಡುವುದೆಂತು…?

GST

GST;ನವೆಂಬರ್‌ನಿಂದ ಔಷಧ, ಆರೋಗ್ಯ ವಿಮೆ ಅಗ್ಗ?

ಚಾರಣಿಗರಿಗೆ ಆನ್‌ಲೈನ್‌ ಬುಕ್ಕಿಂಗ್‌ ಪ್ರಾರಂಭ: ಮುಂಗಡ ನೋಂದಣಿ ಮಾಡಲು ಅವಕಾಶ

ಚಾರಣಿಗರಿಗೆ ಆನ್‌ಲೈನ್‌ ಬುಕ್ಕಿಂಗ್‌ ಪ್ರಾರಂಭ: ಮುಂಗಡ ನೋಂದಣಿ ಮಾಡಲು ಅವಕಾಶ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Bhairadevi is my dream project…: Radhika kumaraswamy

Radhika kumaraswamy: ಭೈರಾದೇವಿ ನನ್ನ ಡ್ರೀಮ್‌ ಪ್ರಾಜೆಕ್ಟ್…: ರಾಧಿಕಾ

BBK11: ಇವತ್ತು ಅಥವಾ ನಾಳೆ ಈ ರಾಜ್ಯದ ಸಿಎಂ ಆಗುವವನು ನಾನು: ಜಗದೀಶ್

BBK11: ಇವತ್ತು ಅಥವಾ ನಾಳೆ ಈ ರಾಜ್ಯದ ಸಿಎಂ ಆಗುವವನು ನಾನು: ಜಗದೀಶ್

Zebra Movie:  ಡಾಲಿ ‘ಜೀಬ್ರಾ’ಗೆ ಶಿವಣ್ಣ ಸಾಥ್‌

Zebra Movie: ಡಾಲಿ ‘ಜೀಬ್ರಾ’ಗೆ ಶಿವಣ್ಣ ಸಾಥ್‌

14

Paru Parvathy Movie: ಇನ್ಫಿನಿಟಿ ರೋಡ್‌ನ‌ಲ್ಲಿ ಪಾರ್ವತಿ!

Bhairadevi Movie: ಇಂದು ಭೈರಾದೇವಿ ತೆರೆಗೆ

Bhairadevi Movie: ಇಂದು ಭೈರಾದೇವಿ ತೆರೆಗೆ

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

Bhairadevi is my dream project…: Radhika kumaraswamy

Radhika kumaraswamy: ಭೈರಾದೇವಿ ನನ್ನ ಡ್ರೀಮ್‌ ಪ್ರಾಜೆಕ್ಟ್…: ರಾಧಿಕಾ

PCB: ‘ನಮ್ಮ ಕ್ರಿಕೆಟ್‌ ಐಸಿಯುನಲ್ಲಿದೆ’ ಎಂದ ಪಾಕಿಸ್ತಾನದ ಮಾಜಿ ಆಟಗಾರ

PCB: ‘ನಮ್ಮ ಕ್ರಿಕೆಟ್‌ ಐಸಿಯುನಲ್ಲಿದೆ’ ಎಂದ ಪಾಕಿಸ್ತಾನದ ಮಾಜಿ ನಾಯಕ

Sandalwood: ಮಿಂಚುಹುಳ, ಗೋಪಿಲೋಲ, ಜನಕ.. ಇಂದು ತೆರೆಗೆ

Sandalwood: ಮಿಂಚುಹುಳ, ಗೋಪಿಲೋಲ, ಜನಕ.. ಇಂದು ತೆರೆಗೆ

Hashem

Hashem Safieddine: ಹಿಜ್ಬುಲ್ಲಾ ಉತ್ತರಾಧಿಕಾರಿಯನ್ನು ಹೊಡೆದುರುಳಿಸಿತಾ ಇಸ್ರೇಲ್?

Subrahmanya: ಕುಮಾರ ಪರ್ವತ ಚಾರಣ: ಅ.6ರ ಬಳಿಕ ಅವಕಾಶ ನಿರೀಕ್ಷೆ

Subrahmanya: ಕುಮಾರ ಪರ್ವತ ಚಾರಣ: ಅ.6ರ ಬಳಿಕ ಅವಕಾಶ ನಿರೀಕ್ಷೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.