ಹೆಜ್ಜೆಗೊಂದು ಹೆಜ್ಜೆ: ಸ್ಟಾರ್ ಕಿಡ್ಸ್ ಸಿನಿ ಎಂಟ್ರಿ
Team Udayavani, Sep 3, 2021, 1:15 PM IST
ಸಾಮಾನ್ಯವಾಗಿ ಸಿನಿಮಾ, ರಾಜಕೀಯ, ಉದ್ಯಮ, ಕ್ರೀಡೆಯಂಥ ಆಕರ್ಷಣೀಯ ಕ್ಷೇತ್ರಗಳಲ್ಲಿ ಗುರುತಿಸಿಕೊಂಡು ಸ್ಟಾರ್, ಸೆಲೆಬ್ರಿಟಿ ಎನಿಸಿಕೊಂಡಿರುವ ವ್ಯಕ್ತಿಗಳ ಬಗ್ಗೆ, ಅವರಕುಟುಂಬ, ಮಕ್ಕಳ ಬಗ್ಗೆ ಸಹಜವಾಗಿಯೇ ಬಹುತೇಕರಿಗೆ ಕುತೂಹಲವಿರುತ್ತದೆ. ಸ್ಟಾರ್, ಸೆಲೆಬ್ರಿಟಿಗಳಂತೆ ಅವರ ಮುಂದಿನ ತಲೆಮಾರು ಕೂಡ ಅಂಥದ್ದೇ ಹೆಸರು, ಪ್ರಖ್ಯಾತಿ, ಜನಪ್ರಿಯತೆ ಪಡೆದುಕೊಳ್ಳುತ್ತದೆಯಾ? ಎಂಬ ಪ್ರಶ್ನೆ ಬಹುತೇಕ ಅಭಿಮಾನಿಗಳ ತಲೆಯಲ್ಲಿ ಒಮ್ಮೆಯಾದರೂ ಸುಳಿದಿರುತ್ತದೆ.
ಅದರಲ್ಲೂ ಸಿನಿಮಾ ಸ್ಟಾರ್, ಸೆಲೆಬ್ರಿಟಿಗಳ ಮಕ್ಕಳ ವಿಷಯದಲ್ಲಿ ಅವರ ಅಭಿಮಾನಿಗಳಿಗೆ ಇಂಥದ್ದೊಂದು ಆಸಕ್ತಿ, ಕುತೂಹಲ ಕೊಂಚ ಹೆಚ್ಚಾಗಿಯೇ ಇರುತ್ತದೆ. ತಮ್ಮ ನೆಚ್ಚಿನ ಸ್ಟಾರ್ ಮಕ್ಕಳು ಅವರ ತಂದೆ-ತಾಯಿ ದಾರಿಯಲ್ಲಿ ಮುನ್ನಡೆಯುತ್ತಾರಾ? ಸಿನಿಮಾರಂಗದಲ್ಲಿ ಮಿಂಚುತ್ತಾರಾ? ಹೆಸರು ಮಾಡುತ್ತಾರಾ? ಎಂಬ ಚರ್ಚೆಗಳು ಅಭಿಮಾನಿಗಳ ವಲಯದಲ್ಲಿ ನಡೆಯುತ್ತಲೇ ಇರುತ್ತದೆ. ಎಷ್ಟೋ ಬಾರಿ ಸ್ವತಃ ಅಭಿಮಾನಿಗಳೇ ಇಂಥ ಪ್ರಶ್ನೆಗಳನ್ನು ತಮ್ಮ ನೆಚ್ಚಿನ ಸ್ಟಾರ್ ಮುಂದೆ ಇಟ್ಟಿರುವುದು ಉಂಟು. ಇನ್ನೂಕೆಲವು ಬಾರಿ ಅಭಿಮಾನಿಗಳೇ ತಮ್ಮ ನೆಚ್ಚಿನ ಸ್ಟಾರ್ ಮಕ್ಕಳನ್ನು ಸಿನಿಮಾಕ್ಕೆ ಕರೆತರುವಂತೆ ಪ್ರೀತಿ ಪೂರ್ವಕವಾಗಿ ಆಗ್ರಹಿಸಿದ್ದೂ ಉಂಟು. ಇದು ಎಲ್ಲ ಕಾಲಘಟ್ಟದಲ್ಲೂ ಪ್ರತಿ ಚಿತ್ರರಂಗಗಳಲ್ಲೂ ನಡೆದುಕೊಂಡೆ ಬಂದಿದೆ.
ಕನ್ನಡ ಚಿತ್ರರಂಗದಲ್ಲೂ ಹುಡುಕಿದರೆ, ಇಂಥ ನೂರಾರು ಉದಾಹರಣೆಗಳು ನಮ್ಮಕಣ್ಮುಂದೆ ಸಿಗುತ್ತದೆ. ಅಭಿಮಾನಿಗಳಲ್ಲೂ ಈ ಬಗ್ಗೆ ಚರ್ಚೆ ನಡೆಯುತ್ತಿರುತ್ತದೆ. ಕೆಲ ವರ್ಷಗಳ ಹಿಂದೆ ಸ್ಟಾರ್ ಮಕ್ಕಳು ಸಿನಿಮಾರಂಗಕ್ಕೆ ನಾಯಕ ನಟನಾಗಿಯೇ ಎಂಟ್ರಿಯಾಗುವ ಪರಿಪಾಠವಿತ್ತು. ಸ್ಟಾರ್ ಮಕ್ಕಳ ಸಿನಿಮಾಕ್ಕಾಗಿಯೇ ವರ್ಷಗಳ ಕಾಲ ಕಥೆ ಮಾಡಿ ಬಜೆಟ್, ಬಿಗ್‌ಕ್ಯಾನ್ವಾಸ್ ಇಟ್ಟುಕೊಂಡು ಗ್ರ್ಯಾಂಡ್ ಎಂಟ್ರಿ ಮೂಲಕ ಸ್ಟಾರ್ ಮಕ್ಕಳನ್ನು ಇಂಡಸ್ಟ್ರಿಗೆ ಪರಿಚಯಿಸಲಾಗುತ್ತಿತ್ತು. ಆ ಮೂಲಕ ತಮ್ಮ ಅಭಿಮಾನಿಗಳನ್ನು, ತಮ್ಮ ಮುಂದಿನ ತಲೆಮಾರಿಗೂ ಕರೆದೊಯ್ಯುವ ಯೋಚನೆ ಅದರ ಹಿಂದೆ ಇರುತ್ತಿತ್ತು. ಅದರಲ್ಲೂ ಕನ್ನಡಕ್ಕಿಂತ ಪರಭಾಷೆಯಲ್ಲಿ ಇಂಥದ್ದೊಂದು ಟೆಂಡ್ ತುಂಬ ಜೋರಾಗಿಯೇ ನಡೆದಿತ್ತು.
ಇದನ್ನೂ ಓದಿ:ವಿಕ್ರಾಂತ್ ರೋಣ ನಿರೀಕ್ಷೆ ದುಪ್ಪಟ್ಟು: ಪ್ಯಾನ್ ಇಂಡಿಯಾ ರೋಣ ಸೌಂಡ್ ಜೋರು
ಆದರೆ ಈಗ ಕಾಲ ಮತ್ತು ಸನ್ನಿವೇಶ ಎಲ್ಲವೂ ಬದಲಾಗಿದೆ. ಹಿಂದಿ, ತೆಲುಗು, ತಮಿಳು, ಮಲೆಯಾಳಂ ನಿಂದ ಕನ್ನಡದವರೆಗೆ ಬಹುತೇಕ ಸ್ಟಾರ್ ತಮ್ಮ ಮಕ್ಕಳ ವಿಷಯದಲ್ಲಿ ತುಂಬ ಮುಕ್ತವಾಗಿದ್ದಾರೆ. ತಮ್ಮಂತೆ ತಮ್ಮ ಮಕ್ಕಳೂ
ಕೂಡ ಸಿನಿಮಾ ಸ್ಟಾರ್ ಆಗಬೇಕು ಎಂಬ ಯೋಚನೆಗಿಂತ, ತಮ್ಮ ಮಕ್ಕಳು ಅವರಿಗಿಷ್ಟವಾದ, ಅವರ ಅಭಿರುಚಿಕೆ ತಕ್ಕಂಥ ಕ್ಷೇತ್ರದಲ್ಲಿ ಮುಂದುವರೆಯಲಿ ಎಂದು ಬಹುತೇಕ ಸ್ಟಾರ್ ಬಯಸುತ್ತಿದ್ದಾರೆ. ಉಳಿದಂತೆ ತಮ್ಮ ಮಕ್ಕಳು ತಾವಾಗಿಯೇ ತಮ್ಮ ತಂದೆ-ತಾಯಿಯಂತೆ ಸಿನಿಮಾ ಕ್ಷೇತ್ರದಲ್ಲೇ ಮುಂದುವರೆಯಲು ಬಯಸಿದರೆ “ವೆಲ್ ಆ್ಯಂಡ್ ಗುಡ್’ ಅದಕ್ಕೆ ತಮ್ಮ ಸಪೋರ್ಟ್ ಇದ್ದೇ ಇರುತ್ತದೆ ಎನ್ನುವುದು ಬಹುತೇಕ ಸ್ಟಾರ್ಗಳ ಮನದಾಳದ ಮಾತು.
ಇನ್ನು ಈಗಿನ ತಲೆಮಾರಿನಕನ್ನಡದ ಸ್ಟಾರ್ ಮಕ್ಕಳ ಬಗ್ಗೆ ಹೇಳುವುದಾದರೆ, ಬಹುತೇಕ ಸ್ಟಾರ್ ಮಕ್ಕಳು ಮನೆಯಲ್ಲಿ ತಮ್ಮ ತಂದೆ-ತಾಯಿಯ ಕೆಲಸ ನೋಡಿಯೇ ಸಿನಿಮಾದತ್ತ ಆಸಕ್ತರಾಗುತ್ತಿದ್ದಾರೆ. ಕನ್ನಡದ ಅನೇಕ ಸ್ಟಾರ್ ನಟರ ಮಕ್ಕಳು ಬಾಲನಟರಾಗಿ ಬೆಳ್ಳಿತೆರೆಗೆ ಸಣ್ಣ ಎಂಟ್ರಿಯನ್ನು ಕೊಟ್ಟಾಗಿದೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಪುತ್ರ ವಿನೀಶ್ “ಐರಾವತ’, “ಒಡೆಯ’ ಸಿನಿಮಾಗಳಲ್ಲಿ ಬಾಲನಟನಾಗಿ ಕಾಣಿಸಿಕೊಂಡಿದ್ದರೆ, ಲಲವ್ಲಿ ಸ್ಟಾರ್ ಪ್ರೇಮ್ ಪುತ್ರ ಏಕಾಂತ್ ಈಗಾಗಲೇ ಮಕ್ಕಳ ಚಿತ್ರವೊಂದರಲ್ಲಿ ಕಾಣಿಸಿಕೊಂಡಿದ್ದು, ಮಗಳು ಅಮೃತಾಕೂಡ ತೆರೆಗೆ ಬರುವ ತಯಾರಿಯಲ್ಲಿದ್ದಾರೆ ಎನ್ನಲಾಗಿದೆ. ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ “ಚಮಕ್’ ಚಿತ್ರದಲ್ಲಿ ಗಣೇಶ್ ಪುತ್ರಿ ಚಾರಿತ್ರ್ಯ ಅಭಿನಯಿಸಿದ್ದರು. ಮಗ ವಿಹಾನ್ ಈಗ “ಸಖತ್’ ಚಿತ್ರದಲ್ಲಿ ಬಾಲನಟನಾಗಿ ಅಭಿನಯಿಸುತ್ತಿದ್ದಾರೆ. ರಿಯಲ್‌ಸ್ಟಾರ್ ಉಪೇಂದ್ರ ಮತ್ತು ಪ್ರಿಯಾಂಕಾ ದಂಪತಿ ಪುತ್ರಿ ಐಶ್ವಯಾ “ದೇವಕಿ’ ಚಿತ್ರದ ಮೂಲಕ ಬಾಲನಟಿಯಾಗಿ ಚಿತ್ರರಂಗ ಪ್ರವೇಶಿಸಿದ್ದು, ಉಪ್ಪಿ ದಂಪತಿ ಪುತ್ರ ಆಯುಶ್‌ಕೂಡ ಸಿನಿಮಾದತ್ತ ಆಸಕ್ತಿ ಬೆಳೆಸಿಕೊಂಡಿದ್ದಾರೆ. ದುನಿಯಾ ವಿಜಯ್ ಪುತ್ರ ಸಮರ್ಥ್ ಕೂಡ ಈ ಹಿಂದೆ “ಕುಸ್ತಿ’ ಚಿತ್ರದ ಮೂಲಕ ಸಿನಿಮಾಕ್ಕೆ ಎಂಟ್ರಿ ಆಗುವುದಾಗಿಘೋಷಿಸಲಾಗಿತ್ತು. ಆದರೆ ಕಾರಣಾಂತರಗಳಿಂದ ಆಚಿತ್ರ ಅರ್ಧಕ್ಕೆ ನಿಂತಿದ್ದರಿಂದ, ವಿಜಿ ಪುತ್ರನ ಸಿನಿ ಎಂಟ್ರಿ ಆಗಲಿಲ್ಲ. ನಟ ಜೋಗಿ ಪ್ರೇಮ್ ರಕ್ಷಿತಾ ದಂಪತಿ ಪುತ್ರ ಸೂರ್ಯ “ಡಿ.ಕೆ’ ಚಿತ್ರದಲ್ಲಿ ಪುಟ್ಟ ಪಾತ್ರವೊಂದರಲ್ಲಿ ಕಾಣಿಸಿಕೊಂಡಿದ್ದರು.
ಹೀಗೆ ಹುಡುಕುತ್ತ ಹೋದರೆ ಕನ್ನಡ ಚಿತ್ರರಂಗದಲ್ಲಿ ತಮ್ಮ ಮಕ್ಕಳನ್ನು ಬಾಲ ಕಲಾವಿದರಾಗಿ ಚಿತ್ರರಂಗಕ್ಕೆ ಕರೆತರುವ ಟ್ರೆಂಡ್ ನಿಧಾನವಾಗಿ ಹೆಚ್ಚಾಗುತ್ತಿದೆ. ಏಕಾಏಕೀ ಹೀರೋ ಅಥವಾ ಹೀರೋಯಿನ್ ಆಗಿ ಚಿತ್ರರಂಗಕ್ಕೆ ಪರಿಚಯಿಸುವ ಬದಲು, ಹೀಗೆ ಬಾಲ ಕಲಾವಿದರಾಗಿ ಚಿತ್ರರಂಗಕ್ಕೆ ಪರಿಚಯಿಸಿದರೆ, ಬಾಲ್ಯದಿಂದಲೇ ಕಲಿಕೆಗೆ ಸಾಕಷ್ಟು ಸಮಯ ಸಿಗುತ್ತದೆ. ತಮ್ಮ ಮಕ್ಕಳಿಗೂ ಚಿತ್ರರಂಗದ ಒಳ-ಹೊರ, ಆಳ-ಅಗಲ ಅರಿವಾಗುತ್ತದೆ ಎಂಬ ಆಲೋಚನೆ ಬಹತೇಕ ಸ್ಟಾರ್ ಗಳದ್ದು.
ಜಿ.ಎಸ್. ಕಾರ್ತಿಕ ಸುಧನ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gurunandan: ಡಿ.27ಕ್ಕೆ ತೆರೆಗೆ ಬರುತ್ತಿಲ್ಲ ʼರಾಜು ಜೇಮ್ಸ್ ಬಾಂಡ್’ ಚಿತ್ರ
Nodidavaru Enanthare Movie: ನವೀನ್ ಶಂಕರ್ ಚಿತ್ರದ ಟೀಸರ್ ಬಂತು
BBK11: ಸತತ ಮೂರನೇ ವಾರವೂ ಕಳಪೆ ಪಟ್ಟಿ: ಖುಷಿಯಿಂದಲೇ ಜೈಲು ಸೇರಿದ ಚೈತ್ರಾ
Dhruva-Prem: ಡಿ.24ಕ್ಕೆ ʼಕೆಡಿʼ ಶಿವ ಶಿವ ಹಾಡು ರಿಲೀಸ್
Dhruva Sarja: ಪ್ರತಿ ಸಿನಿಮಾವೂ ನನಗೆ ಹೊಸ ಪಾಠ…: ಧ್ರುವ ಹೇಳಿದ್ದೇನು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.