ಹಳ್ಳಿ ಸುತ್ತಲಿರುವ ಹೊಸಬರು
Team Udayavani, Mar 8, 2019, 12:30 AM IST
ಸಾಮಾನ್ಯವಾಗಿ ಹಿರಿಯರನ್ನು, ಪ್ರತಿಷ್ಠಿತ ವ್ಯಕ್ತಿಗಳನ್ನು ಗೌರವ ಸೂಚಕವಾಗಿ “ಸನ್ಮಾನ್ಯ ‘ಎಂಬ ಪದದಿಂದ ಸಂಬೋಧಿಸುವುದನ್ನು ಕೇಳಿದ್ದೇವೆ. ಕೆಲವೊಮ್ಮೆ ಇದೇ “ಸನ್ಮಾನ್ಯ’ ಎಂಬ ಪದ ಹಲವರ ಕಾಲೆಳೆಯಲೂ ಬಳಕೆಯಾಗುವುದುಂಟು. ಈಗೇಕೆ “ಸನ್ಮಾನ್ಯ’ನ ಬಗ್ಗೆ ಮಾತು ಅಂತೀರಾ? ಅದಕ್ಕೊಂದು ಕಾರಣವಿದೆ. ಕನ್ನಡದಲ್ಲಿ “ಸನ್ಮಾನ್ಯ’ ಎಂಬ ಅಪ್ಪಟ ಕನ್ನಡ ಶೀರ್ಷಿಕೆಯನ್ನು ಇಟ್ಟುಕೊಂಡ ಚಿತ್ರವೊಂದು ಇತ್ತೀಚೆಗೆ ಸೆಟ್ಟೇರಿದೆ.
ನಟ ಪ್ರಜ್ವಲ್ ದೇವರಾಜ್ “ಸನ್ಮಾನ್ಯ’ ಚಿತ್ರದ ಪ್ರಥಮ ದೃಶ್ಯಕ್ಕೆ ಕ್ಲಾಪ್ ಮಾಡುವ ಮೂಲಕ ಚಿತ್ರೀಕರಣಕ್ಕೆ ಚಾಲನೆ ನೀಡಿ, ಚಿತ್ರತಂಡಕ್ಕೆ ಶುಭ ಹಾರೈಸಿದರು. ಈ ಹಿಂದೆ “ಸ್ಟೈಲ್ ರಾಜ’ ಎನ್ನುವ ಚಿತ್ರವನ್ನು ನಿರ್ದೇಶಿಸಿದ್ದ ಹರೀಶ್ “ಸನ್ಮಾನ್ಯ’ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸುತ್ತಿದ್ದಾರೆ. ಇದೇ ವೇಳೆ ಚಿತ್ರದ ಕಥಾಹಂದರದ ಬಗ್ಗೆ ಮಾತನಾಡಿದ ನಿರ್ದೇಶಕ ಹರೀಶ್, “ಇದೊಂದು ಪಕ್ಕಾ ಹಳ್ಳಿ ಸೊಗಡಿನ ಚಿತ್ರವಾಗಿದೆ. ಹಳ್ಳಿಯಲ್ಲಿ ಪ್ರತಿದಿನ ನಡೆಯುವ ಸಾಮಾನ್ಯ ಘಟನೆಗಳ ಸುತ್ತ ಚಿತ್ರದ ಕಥೆ ಹೆಣೆಯಲಾಗಿದೆ. ಹಳ್ಳಿಯಲ್ಲಿ ಯಾವಾಗಲೂ ಕಿರಿಕ್ ಮಾಡಿಕೊಂಡಿರುವ ಒರಟ ಹುಡುಗನೊಬ್ಬನ ಕಥೆ ಚಿತ್ರದಲ್ಲಿದೆ. ಅವನು ಎದುರಿಗೆ ಬಂದರೆ ಎಲ್ಲರೂ “ಸನ್ಮಾನ್ಯ’ ಎಂದು ಗೌರವದಿಂದ ಮಾತನಾಡಿಸುತ್ತಾರೆ. ಅವನು ಹೋದರೆ, ಅವನ ಹಿಂದೆ ಅವನಿಗೆ ಹಿಡಿಶಾಪ ಹಾಕುತ್ತಾರೆ. ಇಡೀ ಚಿತ್ರವನ್ನು ಕಾಮಿಡಿ, ಆ್ಯಕ್ಷನ್ ಶೈಲಿಯಲ್ಲಿ ತೆರೆಮೇಲೆ ತರುತ್ತಿದ್ದೇವೆ. ಜೊತೆಗೆ ಕಮರ್ಷಿಯಲ್ ಚಿತ್ರದಲ್ಲಿ ಇರಬೇಕಾದ ಎಲ್ಲಾ ಅಂಶಗಳೂ ಚಿತ್ರದಲ್ಲಿ ಇರಲಿವೆ’ ಎಂದರು.
ಈ ಚಿತ್ರದ ಮೂಲಕ ನವನಟ ಉತ್ಸವ್ ನಾಯಕ ನಟರಾಗಿ ಪರಿಚಯವಾಗುತ್ತಿದ್ದಾರೆ. ಉಳಿದಂತೆ ಬುಲೆಟ್ ಪ್ರಕಾಶ್, ಶೋಭರಾಜ್, ಹರಿ, ಅಚ್ಯುತ ಕುಮಾರ್, ತುಳಸಿ ಶಿವಮಣಿ, ಅಮಿತ್, ಸಂಜು ಬಸಯ್ಯ, ಮಾಸ್ಟರ್ ಹೇಮಂತ್, ಉಮೇಶ್ ಪುಂಗ, ಗಡ್ಡಪ್ಪ ಮೊದಲಾದ ಕಲಾವಿದರು ಚಿತ್ರದ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ. ಸದ್ಯ ಚಿತ್ರದ ನಾಯಕಿಯ ಹುಡುಕಾಟದಲ್ಲಿರುವ ಚಿತ್ರತಂಡ, ಇದೇ ತಿಂಗಳಾಂತ್ಯಕ್ಕೆ “ಸನ್ಮಾನ್ಯ’ನ ಶೂಟಿಂಗ್ ಅರಂಭಿಸಲು ಪ್ಲಾನ್ ಮಾಡಿಕೊಂಡಿದೆ.
“ಸನ್ಮಾನ್ಯ’ ಚಿತ್ರಕ್ಕೆ ಎಸ್.ಎ ಚಂದ್ರಶೇಖರ್, ಜ್ಞಾನೇಂದ್ರ ಕುಮಾರ್, ದಯಾನಂದ್ ಮತ್ತು ಎಂ. ನಾಗರಾಜ್ ಜಂಟಿಯಾಗಿ ನಿರ್ಮಿಸುತ್ತಿದ್ದಾರೆ. ಕುಣಿಗಲ್, ಹುಲಿಯೂರು ದುರ್ಗ, ಟಿ. ನರಸೀಪುರ, ಮಡಿಕೇರಿ, ಮಂಗಳೂರು ಸುತ್ತಮುತ್ತ ಚಿತ್ರದ ಚಿತ್ರೀಕರಣ ನಡೆಸಲು ಚಿತ್ರತಂಡ ಪ್ಲಾನ್ ಹಾಕಿಕೊಂಡಿದೆ. ಚಿತ್ರದಲ್ಲಿ ಒಟ್ಟು 4 ಹಾಡುಗಳಿದ್ದು, ಎ.ಟಿ ರವೀಶ್, ಸುರೇಶ್ ಚಂದ್, ಶ್ರೀಧರ್ ಕಶ್ಯಪ್, ಸನ್ನಿ ಮಾಧವನ್ ಚಿತ್ರದ ತಲಾ ಒಂದೊಂದು ಹಾಡನ್ನು ಸಂಯೋಜಿಸುತ್ತಿದ್ದಾರೆ. ಚಿತ್ರಕ್ಕೆ ಎಂ.ಬಿ ಅಳ್ಳಿಕಟ್ಟಿ ಛಾಯಾಗ್ರಹಣವಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sandalwood: ಸ್ಟಾರ್ ಸಿನಿಮಾ ಹೆಚ್ಚು ಬಂದರೆ ಚಿತ್ರರಂಗಕ್ಕೆ ಪೂರಕ: ಎನ್. ನರಸಿಂಹಲು
Dhruva-Prem: ಡಿ.24ಕ್ಕೆ ʼಕೆಡಿʼ ಶಿವ ಶಿವ ಹಾಡು ರಿಲೀಸ್
Dhruva Sarja: ಪ್ರತಿ ಸಿನಿಮಾವೂ ನನಗೆ ಹೊಸ ಪಾಠ…: ಧ್ರುವ ಹೇಳಿದ್ದೇನು
Kiccha Sudeepa; ತಾಯಿಯನ್ನು ಉಳಿಸಿಕೊಳ್ಳಲಾಗದ ಆ ಕ್ಷಣ ನಾನು ಯೂಸ್‌ಲೆಸ್ ಅನಿಸಿತು…
UI Movie: 9 ವರ್ಷ ಬಳಿಕ ಉಪ್ಪಿ ಡೈರೆಕ್ಟ್ ಮಾಡಿದ ಯು-ಐ ಸಿನಿಮಾದ ಹೈಲೈಟ್ಸ್ ಏನು?
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.