ಸರ್ವಂ ಪ್ರೇಮಮಯಂ!
ಸಾಫ್ಟ್ವೇರ್ ಹುಡುಗನ ರಗಡ್ ಲವ್‌ಸ್ಟೋರಿ
Team Udayavani, Feb 7, 2020, 7:07 AM IST
“ಒಂದ್ಸಲ ತಪ್ಪಾಗಿದೆ. ಈಗ ಮತ್ತೆ ಆ ತಪ್ಪು ಮಾಡೋದಿಲ್ಲ…’ ಹೀಗೆ ಹೇಳಿ ಕ್ಷಣಕಾಲ ಸುಮ್ಮನಾದರು ನಿರ್ದೇಶಕ ಶಿವು ಕೋಲಾರ್. ಅವರು ಹೇಳಿದ್ದು “ಸರ್ವಂ ಪ್ರೇಮಂ’ ಚಿತ್ರದ ಬಗ್ಗೆ. ಹೌದು. ಇತ್ತೀಚೆಗೆ ಚಿತ್ರಕ್ಕೆ ಮುಹೂರ್ತ ನೆರವೇರಿದೆ. ಅವರು ಹಾಗೆ ಹೇಳ್ಳೋಕೆ ಕಾರಣ, ಈ ಹಿಂದೆ ಇದೇ ಚಿತ್ರವನ್ನು ನಿರ್ಮಿಸಿ, ನಿರ್ದೇಶಿಸಲು ಹೊರಟಿದ್ದರು. ಮುಹೂರ್ತ ನಡೆಸಿ, 30 ಲಕ್ಷ ರುಪಾಯಿ ಖರ್ಚು ಮಾಡಿ ಸಿನ್ಮಾ ಶುರು ಮಾಡಿದ್ದರು.
ಆದರೆ, ಕಾರಣಾಂತರದಿದ ಸಿನ್ಮಾ ಕಂಪ್ಲೀಟ್ ಆಗಲಿಲ್ಲ. ಹಾಗಂತ ಶಿವು ಕೋಲಾರ್ ಸುಮ್ಮನಾಗಲಿಲ್ಲ. ಈ ಸಿನಿಮಾವನ್ನು ಹೇಗಾದರ ಸರಿ ಮಾಡಲೇಬೇಕು ಅಂತ ನಿರ್ಧರಿಸಿ, ಇದೀಗ ಪುನಃ “ಸರ್ವಂ ಪ್ರೇಮಂ’ ಚಿತ್ರಕ್ಕೆ ಚಾಲನೆ ಕೊಟ್ಟಿದ್ದಾರೆ. ತಮ್ಮ ಸಿನಿಮಾ ಕುರಿತು ಹೇಳಿಕೊಳ್ಳಲೆಂದೇ ಪತ್ರಕರ್ತರ ಮುಂದೆ ಬಂದಿದ್ದರು. ಅಂದು ಚಿತ್ರತಂಡದ ಜೊತೆ ಮಾತು ಹಂಚಿಕೊಂಡಿದ್ದು ಹೀಗೆ.
“ಇದೊಂದು ಕುಟುಂಬದ ಕಥೆ. ಪ್ರೀತಿಗೆ ಹೆಚ್ಚು ಒತ್ತು ಕೊಡಲಾಗಿದೆ. ಶ್ರೀಮಂತ ಹುಡುಗನೊಬ್ಬನ ಪ್ರೀತಿ ಕಥೆ ಹೊಂದಿದೆ. ಚಿತ್ರದ ನಾಯಕ ಇಲ್ಲಿ ಸಾಫ್ಟ್ವೇರ್ ಕಂಪೆನಿ ನಡೆಸುವ ಉದ್ಯಮಿಯಾಗಿ ಕಾಣಿಸಿಕೊಂಡಿದ್ದಾರೆ. ನಮ್ಮ ನಡುವೆ ನಡೆಯುವ ನೈಜ ಘಟನೆಗಳು ಚಿತ್ರಕ್ಕೆ ಸ್ಫೂರ್ತಿ. ಬಳ್ಳಾರಿ, ಕೋಲಾರ, ಬೆಂಗಳೂರು ಸುತ್ತಮುತ್ತ ಚಿತ್ರೀಕರಣ ನಡೆಯಲಿದೆ. ಎಲ್ಲಾ ಲವ್‌ಸ್ಟೋರಿಯಲ್ಲೂ ಇರುವಂತೆ ಇಲ್ಲೂ ನೋವು-ನಲಿವು ಇದೆ.
ಅದರಿಂದಾಚೆ ಹೊಸ ವಿಷಯ ಹೇಳಹೊರಟಿದ್ದೇವೆ. ಅದನ್ನು ಸಿನಿಮಾದಲ್ಲೇ ನೋಡಬೇಕು’ ಎಂಬುದು ಶಿವು ಕೋಲಾರ್ ಮಾತು. ನಾಯಕ ಅಭಿ ಅವರಿಗೆ ಇಲ್ಲಿ ಎರಡು ಶೇಡ್ ಇರುವಂತಹ ಪಾತ್ರ ಸಿಕ್ಕಿದೆಯಂತೆ. ಆ ಪಾತ್ರಗಳಲ್ಲಿ ಸಾಕಷ್ಟು ಬದಲಾವಣೆಗಳಿವೆ. ಸಾಫ್ಟ್ವೇರ್ ಕಂಪೆನಿ ಉದ್ಯಮಿಯಾಗಿ ನಟಿಸಿದ್ದು, ಒಂದು ಹಂತದಲ್ಲಿ ಪ್ರೀತಿ ಶುರುವಾಗಿ, ಅದು ವಿಕೋಪಕ್ಕೆ ತಿರುಗಿ, ಗದ್ದಲ ಉಂಟಾಗುತ್ತದೆ.
ಅವೆಲ್ಲವನ್ನೂ ನಿಭಾಯಿಸಿ, ಎಲ್ಲವನ್ನೂ ಪ್ರೀತಿಯಿಂದಲೇ ಗೆಲ್ಲಬೇಕು ಅಂತ ಹೊರಡುವ ನಾಯಕನಿಗೆ ಅದೆಲ್ಲವೂ ದಕ್ಕುತ್ತದೆಯಾ ಅನ್ನೋದು ಕಥೆ. ಲವ್ ಇದೆ ಅಂದಮೇಲೆ, ಇಲ್ಲಿ ಆ್ಯಕ್ಷನ್ ಕೂಡ ಇರಲೇಬೇಕು. ರಾಜಕೀಯ ಹಾಗು ರೌಡಿಸಂ ಕೂಡ ಇಲ್ಲಿದೆ. ಹಾಗಾಗಿ ನಾಲ್ಕು ಫೈಟ್‌ಗಳಿವೆ. ಐದು ಹಾಡುಗಳಿವೆ’ ಎಂದು ವಿವರ ಕೊಡುತ್ತಾರೆ ಅಭಿ. ಚಿತ್ರಕ್ಕೆ ಇಬ್ಬರು ನಾಯಕಿಯರು ಆ ಪೈಕಿ ಸುಹಾನ ಅವರು ಕಳೆದ ಎರಡು ವರ್ಷಗಳ ಹಿಂದೆ ಶುರುವಾಗಿದ್ದ “ಸರ್ವ ಪ್ರೇಮಂ’ ಸಿನಿಮಾದಲ್ಲಿ ನಟಿಸಿದ್ದರಂತೆ.
ಹತ್ತು ದಿನಗಳ ಕಾಲ ಚಿತ್ರೀಕರಣ ನಡೆದು, ಆ ಬಳಿಕ ನಿಂತು ಹೋಗಿದ್ದರಿಂದ, ಅವರು ಸಿನಿಮಾ ಆಗುತ್ತೋ, ಇಲ್ಲವೋ ಎಂಬ ಗೊಂದಲದಲ್ಲಿದ್ದರಂತೆ. ಆದರೆ, ನಿರ್ದೇಶಕರು ಹಂಡ್ರೆಡ್ ಪರ್ಸೆಂಟ್ ಚಿತ್ರ ಮಾಡ್ತೀನಿ ಅಂತ ಮಾತು ಕೊಟ್ಟಿದ್ದರು. ಅದರಂತೆ, ಈಗ ಚಿತ್ರ ಪುನಃ ಶುರುವಾಗಿದೆ. ನಾನಿಲ್ಲಿ ಟೀಚರ್ ಆಗಿ ಕಾಣಿಸಿಕೊಂಡಿದ್ದೇನೆ. ಆಕೆಗೆ ಪ್ರೀತಿ ಶುರುವಾದಾಗ ಏನೆಲ್ಲಾ ಘಟನೆಗಳು ಎದುರಾಗುತ್ತವೆ ಎಂಬುದನ್ನು ಸಿನಮಾದಲ್ಲೇ ನೋಡಬೇಕು’ ಎನ್ನುತ್ತಾರೆ ಸುಹಾನ.
ಇನ್ನು, ಅಲ್ಮಾಸ್ ಮೋತಿವಾಲ ಅವರಿಲ್ಲಿ ನಾಯಕನ ಮನೆಯಲ್ಲೇ ಇರುವಂತಹ ಪಾತ್ರ ಸಿಕ್ಕಿದೆಯಂತೆ. ಸದ್ಯಕ್ಕೆ ಇದಿಷ್ಟು ವಿವರ. ಮಿಕ್ಕಿದ್ದು ಹೇಳುವಂತಿಲ್ಲ’ ಅಂದರು ಅವರು. ಹರ್ಷ ಅರ್ಜುನ್ ಇಲ್ಲಿ ಖಳನಟರಾಗಿ ಕಾಣಿಸಿಕೊಳ್ಳುತ್ತಿದ್ದು, ಶೋಭರಾಜ ಅವರ ಸಹೋದರನ ಪಾತ್ರವಂತೆ. ಇದೊಂದು ಸ್ಟೈಲಿಶ್ ವಿಲನ್ ಪಾತ್ರ. ಚಿತ್ರದ ಪಾತ್ರಕ್ಕೆ ಸಾಕಷ್ಟು ತಯಾರಿ ನಡೆಸಿದ್ದೇನೆ’ ಎಂದರು ಹರ್ಷ.
ಯೋಗೇಶ್ ಚಿತ್ರದ ನಿರ್ಮಾಪಕರು. ಅವರಿಗೆ ಚಿಕ್ಕಂದಿನಿಂದಲೂ ಸಿನಿಮಾ ಮೇಲೆ ಪ್ರೀತಿ ಇತ್ತಂತೆ. ಹಾಗಾಗಿ, ಒಳ್ಳೆಯ ಕಥೆ ಸಿಕ್ಕರೆ ನಿರ್ಮಾಣ ಮಾಡುವ ನಿರ್ಧಾರದಲ್ಲಿದ್ದ ಅವರಿಗೆ “ಸರ್ವಂ ಪ್ರೇಮಂ’ ಕಥೆ ಸಿಕ್ಕಿದೆ. ಈಗ ಸಿನಿಮಾಗೆ ಚಾಲನೆ ಸಿಕ್ಕಿದ್ದು, ಫೆಬ್ರವರಿ ಮೂರನೇ ವಾರದಿಂದ ಚಿತ್ರೀಕರಣ ನಡೆಯಲಿದೆ’ ಎಂದರು. ರಮ್ಯಾ ಯೋಗೀಶ್, ರಾಜೀವ್ ಹಾಗು ಗಿರೀಶ್ ಸಹ ನಿರ್ಮಾಪಕರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sandalwood Rewind 2024; ಹಳಬರಿಗೆ ಜೈಕಾರ ಹೊಸಬರಿಗೆ ಉರಿ ಖಾರ; ಚಂದನವನದ ಚೆಂದದ ಲೆಕ್ಕ
Sandalwood: ಸ್ಟಾರ್ ಸಿನಿಮಾ ಹೆಚ್ಚು ಬಂದರೆ ಚಿತ್ರರಂಗಕ್ಕೆ ಪೂರಕ: ಎನ್. ನರಸಿಂಹಲು
Dhruva-Prem: ಡಿ.24ಕ್ಕೆ ʼಕೆಡಿʼ ಶಿವ ಶಿವ ಹಾಡು ರಿಲೀಸ್
Dhruva Sarja: ಪ್ರತಿ ಸಿನಿಮಾವೂ ನನಗೆ ಹೊಸ ಪಾಠ…: ಧ್ರುವ ಹೇಳಿದ್ದೇನು
Kiccha Sudeepa; ತಾಯಿಯನ್ನು ಉಳಿಸಿಕೊಳ್ಳಲಾಗದ ಆ ಕ್ಷಣ ನಾನು ಯೂಸ್‌ಲೆಸ್ ಅನಿಸಿತು…
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.