![ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು](https://www.udayavani.com/wp-content/uploads/2025/02/9-21-415x249.jpg)
![ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು](https://www.udayavani.com/wp-content/uploads/2025/02/9-21-415x249.jpg)
Team Udayavani, Apr 5, 2024, 11:30 AM IST
ನೀನಾಸಂ ಸತೀಶ್ ನಾಯಕರಾಗಿರುವ “ಮ್ಯಾಟ್ನಿ’ ಸಿನಿಮಾ ಇಂದು ಬಿಡುಗಡೆಯಾಗುತ್ತಿದೆ. ಈಗಾಗಲೇ ಚಿತ್ರದ ಟೀಸರ್, ಹಾಡು, ಟ್ರೇಲರ್ ಬಿಡುಗಡೆಯಾಗಿ ಹಿಟ್‌ಲಿಸ್ಟ್ ಸೇರಿದೆ. ಇವೆಲ್ಲವೂ ಸತೀಶ್ ವಿಶ್ವಾಸ ಹೆಚ್ಚಿಸಿದೆ. ಇಂದು ಬಿಡುಗಡೆಯಾಗುತ್ತಿರುವ ಈ ಚಿತ್ರದ ಕುರಿತು ಸತೀಶ್ ಇಲ್ಲಿ ಮಾತನಾಡಿದ್ದಾರೆ.
ಒಂದು ಗ್ಯಾಪ್ ಬಳಿಕ ನಿಮ್ಮ ಸಿನಿಮಾ ರಿಲೀಸ್ ಆಗುತ್ತಿದೆ?
-ಹೌದು, ನಾನಂತೂ ತುಂಬಾ ಎಕ್ಸೆ„ಟ್ ಆಗಿದ್ದೇನೆ. ಜನರ ಪ್ರತಿಕ್ರಿಯೆ ಹೇಗಿರುತ್ತದೆ ಎಂಬುದನ್ನು ನೋಡಬೇಕು. ಇಂದು ಅನುಪಮಾದಲ್ಲಿ ನಮ್ಮ ತಂಡದ ಜೊತೆ ಸಿನಿಮಾ ನೋಡುತ್ತಿದ್ದೇನೆ. ಜನ ಎಂಜಾಯ್ ಮಾಡೋದನ್ನು ನೋಡುವ ಕುತೂಹಲ ನನಗೂ ಇದೆ.
ಮ್ಯಾಟ್ನಿ ಸಿನಿಮಾದಲ್ಲಿ ನಿಮ್ಮ ಪಾತ್ರ?
– ಶ್ರೀಮಂತ ಮನೆತನದ ಹುಡುಗನಾಗಿ ಕಾಣಿಸಿಕೊಂಡಿªದೇನೆ. ಎಲ್ಲರಿಗೂ ಒಳ್ಳೆಯ ಫ್ರೆಂಡ್. ಲವ್, ಲೈಫ್… ಎಂದು ಖುಷಿ ಖುಷಿಯಾಗಿ ಇರುವ ಹುಡುಗ. ನನಗೆ ತುಂಬಾ ಹೊಸ ಅನುಭವ ನೀಡಿದ ಸಿನಿಮಾವಿದು.
ಮತ್ತೂಮ್ಮೆ ನೀವು, ರಚಿತಾ ರಾಮ್ ಜೊತೆಯಾಗಿ ಕಾಣಿಸಿಕೊಂಡಿದ್ದೀರಿ?
– ಈಗಾಗಲೇ ನಮ್ಮಿಬ್ಬರ ಕಾಂಬಿನೇಶನ್‌ನ ಹಾಡು ಹಿಟ್ ಆಗಿದೆ. ಇದು ಸಿನಿಮಾಕ್ಕೆ ದೊಡ್ಡ ಪ್ಲಸ್. ಒಂದು ಸಲ ನಮ್ಮಿಬ್ಬರ ಕಾಂಬಿನೇಶನ್ ನೋಡಿ ಖುಷಿಪಟ್ಟಿರುವ ಜನ ಮತ್ತೂಮ್ಮೆ ನೋಡುತ್ತಾರೆ ಎಂಬ ವಿಶ್ವಾಸವಿದೆ.
ನಿಮ್ಮ ಗೆಳೆಯರ ಬಳಗವೇ ಈ ಚಿತ್ರದಲ್ಲಿದೆ?
– ಹೌದು, ಅದೊಂದು ಖುಷಿ. ನಾಗಭೂಷಣ್, ಪೂರ್ಣ, ಶಿವರಾಜ್ ಕೆ ಆರ್‌ಪೇಟೆ… ರಿಯಲ್ ಲೈಫ್ನಲ್ಲಿ ನಾವೆಲ್ಲರೂ ಫ್ರೆಂಡ್ಸ್. ಸಿನಿಮಾ ಶೂಟಿಂಗ್ ಬದಲು ಎಲ್ಲೋ ಫ್ರೆಂಡ್ಸ್ ಜೊತೆ ಟ್ರಿಪ್‌ಗೆ ಬಂದಂತಹ ಫೀಲ್ ಆಗುತ್ತಿತ್ತು. ಅವರೆಲ್ಲರ ಪಾತ್ರಗಳು ಕೂಡಾ ತುಂಬಾ ಚೆನ್ನಾಗಿವೆ.
ಮ್ಯಾಟ್ನಿ ಹಾರರ್ ಸಿನಿಮಾನಾ?
– ಚಿತ್ರದಲ್ಲಿ ಹಾರರ್ ಅಂಶಗಳು ಇವೆ. ಇದು ಮನೆಯೊಳಗಡೆ ನಡೆಯುವ ಹಾರರ್ ಸಿನಿಮಾ.
ನಿಮ್ಮ ಕೆರಿಯರ್‌ನಲ್ಲಿ ಈ ಸಿನಿಮಾ ಎಷ್ಟು ಭಿನ್ನ?
– ಇಷ್ಟು ವರ್ಷದ ನನ್ನ ಕೆರಿಯರ್‌ನಲ್ಲಿ ನಾನು ಹಾರರ್ ಸಿನಿಮಾ ಮಾಡೇ ಇಲ್ಲ. ಮಾಡಬೇಕೆಂಬ ಆಸೆ ಇತ್ತು. ಅದು “ಮ್ಯಾಟ್ನಿ’ ಮೂಲಕ ಈಡೇರುತ್ತಿದೆ.
ಮ್ಯಾಟ್ನಿ ಸಿನಿಮಾನಾ ಜನ ಯಾಕೆ ನೋಡಬೇಕು?
– ಒಂದೊಳ್ಳೆಯ ಮನರಂಜನೆ ಇರುವ ಸಿನಿಮಾ ನೋಡಬೇಕೆಂದು ಬಯಸುವವರಿಗೆ ಮ್ಯಾಟ್ನಿ ಒಳ್ಳೆಯ ಆಯ್ಕೆ. ಕ್ವಾಲಿಟಿ ಇರುವ ಸಿನಿಮಾ. ಅದ್ಭುತವಾದ ಕಲಾವಿದರಿದ್ದಾರೆ.
ರವಿಪ್ರಕಾಶ್ ರೈ
Politics: ಸಿದ್ದರಾಮಯ್ಯ 5 ವರ್ಷವೂ ಸಿಎಂ: ಕೊತ್ತೂರು ಮಂಜುನಾಥ್
ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು
Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್
You seem to have an Ad Blocker on.
To continue reading, please turn it off or whitelist Udayavani.