ಸೆಲ್ಫಿ ಕ್ರೇಜ್ ಹುಡುಗಿ ರಚಿತಾ ರಾಮ್ 100 ಸಂಭ್ರಮ
Team Udayavani, Jun 21, 2019, 5:00 AM IST
ರಚಿತಾ ರಾಮ್ ಸದ್ಯ “ಹಂಡ್ರೆಡ್’ ಸಿನಿಮಾದ ತಯಾರಿಯಲ್ಲಿದ್ದಾರೆ. ಹಾಗಂತ, ರಚಿತಾ ಅಷ್ಟು ಬೇಗ ನೂರು ಸಿನಿಮಾಗಳತ್ತ ಬಂದರಾ ಅಂತ ಕೇಳಬೇಡಿ. ನಾವು ಹೇಳುತ್ತಿರುವ ರಚಿತಾ ಅವರ “ಹಂಡ್ರೆಡ್’ ಸಿನಿಮಾದ ಬಗ್ಗೆಯೇ. ಆದ್ರೆ, ಅದು ಅವರ ನೂರನೇ ಸಿನಿಮಾ ಅಲ್ಲ. ಹೌದು, ರಚಿತಾ ರಾಮ್ ಅಭಿನಯಿಸುತ್ತಿರುವ ಹೊಸ ಚಿತ್ರದ ಟೈಟಲ್ ಅನೌನ್ಸ್ ಆಗಿದೆ. ಅಂದಹಾಗೆ, ಆ ಚಿತ್ರದ ಹೆಸರು “ಹಂಡ್ರೆಡ್’
ಕಳೆದ ವಾರವಷ್ಟೇ “ಐ ಲವ್ ಯು’ ಚಿತ್ರದ ಮೂಲಕ ಪ್ರೇಕ್ಷಕರ ಮುಂದೆ ಬಂದಿದ್ದ ರಚಿತಾ ರಾಮ್, ಸದ್ದಿಲ್ಲದೆ ಈಗ ಹೊಸ ಚಿತ್ರವೊಂದನ್ನು ಒಪ್ಪಿಕೊಂಡಿದ್ದಾರೆ. ಅಂದಹಾಗೆ, ರಚಿತಾ ಒಪ್ಪಿಕೊಂಡಿರುವ ಹೊಸ ಚಿತ್ರ “ಹಂಡ್ರೆಡ್’ ಅನ್ನು ನಟ ಕಂ ನಿರ್ದೇಶಕ ರಮೇಶ್ ಅರವಿಂದ್ ನಿರ್ದೇಶಿಸುತ್ತಿದ್ದು, ರಚಿತಾಗೆ ಈ ಚಿತ್ರದಲ್ಲಿ ಸ್ಪೆಷಲ್ ಪಾತ್ರವಿದೆಯಂತೆ.
ಇನ್ನು ತಮ್ಮ ಹೊಸಚಿತ್ರದ ಬಗ್ಗೆ ಮಾತನಾಡುವ ರಚಿತಾ ರಾಮ್, “ಕೆಲ ಸಮಯದ ಹಿಂದಷ್ಟೇ ಈ ಚಿತ್ರದ ಕಥೆಯನ್ನು ಕೇಳಿದ್ದೆ. ಚಿತ್ರದ ಕಥೆ ಮತ್ತು ಪಾತ್ರ ಎರಡೂ ಇಷ್ಟವಾಗಿದ್ದರಿಂದ ಚಿತ್ರವನ್ನು ಮಾಡಲು ಒಪ್ಪಿಕೊಂಡಿದ್ದೇನೆ. ಈ ಹಿಂದೆ ರಮೇಶ್ ಅರವಿಂದ್ ಅವರೊಂದಿಗೆ “ಪುಷ್ಪಕ ವಿಮಾನ’ ಸಿನಿಮಾದಲ್ಲಿ ವರ್ಕ್ ಮಾಡಿದ್ದೆ. ಈಗ ಮತ್ತೂಮ್ಮೆ ಅವರೊಂದಿಗೆ ವರ್ಕ್ ಮಾಡುವ ಚಾನ್ಸ್ ಇದರಲ್ಲಿ ಸಿಕ್ಕಿದೆ’ ಎನ್ನುತ್ತಾರೆ.
ಅಂದಹಾಗೆ, ವೈಯಕ್ತಿಕವಾಗಿ ಸೆಲ್ಫಿ ಅಂದ್ರೆ ರಚಿತಾಗೆ ಆಗೋದಿಲ್ಲವಂತೆ. “ನಾನು ಸಾಮಾನ್ಯವಾಗಿ ಸೆಲ್ಫಿ ತೆಗೆದುಕೊಳ್ಳುವುದಿಲ್ಲ. ಸೆಲ್ಫಿ ಅಂದ್ರೆ ನನಗೆ ಕಿರಿಕಿರಿ ಅನಿಸುತ್ತದೆ. ಆದ್ರೆ ಈ ಚಿತ್ರದಲ್ಲಿ ನನಗೆ ವಿರುದ್ಧ ಎನಿಸುವಂಥ ಪಾತ್ರ ಸಿಕ್ಕಿದೆ. ಚಿತ್ರದ ಬಗ್ಗೆ, ಪಾತ್ರದ ಬಗ್ಗೆ ನನಗೂ ಸಾಕಷ್ಟು ಕುತೂಹಲವಿದ್ದು, ಚಿತ್ರ ಹೇಗೆ ಬರಬಹುದು ಎಂಬ ಕುತೂಹಲದಲ್ಲಿ ನಾನೂ ಇದ್ದೇನೆ’ ಎನ್ನುತ್ತಾರೆ ರಚಿತಾ. ಬುಧವಾರವಷ್ಟೇ “ಹಂಡ್ರೆಡ್’ ಚಿತ್ರದ ಮುಹೂರ್ತ ನಡೆದಿದ್ದು, ಸದ್ಯ ಚಿತ್ರತಂಡ ಶೂಟಿಂಗ್ ಪ್ರಾರಂಭಿಸಿದೆ. ಸದ್ಯ ಬೆಂಗಳೂರು, ಮೈಸೂರು ಸುತ್ತಮುತ್ತ ಶೂಟಿಂಗ್ ನಡೆಸಲು ಚಿತ್ರತಂಡ ಪ್ಲಾನ್ ಹಾಕಿಕೊಂಡಿದೆ.
ಇನ್ನು ರಚಿತಾಗೆ “ಹಂಡ್ರೆಡ್’ ಚಿತ್ರದಲ್ಲಿ ತುಂಬಾ ಪ್ರಾಮುಖ್ಯತೆಯಿರುವ ಪಾತ್ರ ಸಿಕ್ಕಿದೆಯಂತೆ. ತಮ್ಮ ಪಾತ್ರದ ಬಗ್ಗೆ ಹೆಚ್ಚಿಗೆ ಗುಟ್ಟು ಬಿಟ್ಟುಕೊಡದ ರಚಿತಾ, “ಇಲ್ಲಿಯವರೆಗೆ ನಾನು ಮಾಡಿದ ಪಾತ್ರಗಳಿಗಿಂತ ವಿಭಿನ್ನವಾದ ಪಾತ್ರ ಈ ಚಿತ್ರದಲ್ಲಿ ಸಿಕ್ಕಿದೆ. ಮಾಮೂಲಿ ಹೀರೋ ಹೀರೋಯಿನ್ ಇರುವಂಥ ಪಾತ್ರ ಇದಲ್ಲ. ತುಂಟ ಸ್ವಭಾವದ, ಎಲ್ಲೇ ಹೋದ್ರು ಸೆಲ್ಫಿ ಕ್ಲಿಕ್ಕಿಸಿಕೊಳ್ಳುವ, ಸೆಲ್ಫಿ ಹುಚ್ಚು ಇರುವಂಥ, ಫನ್ ಎನಿಸುವಂಥ ಹುಡುಗಿಯ ಪಾತ್ರ ನನ್ನದು. ನಿರ್ದೇಶಕರು ನನ್ನ ಪಾತ್ರದ ಬಗ್ಗೆ ಹೆಚ್ಚೇನು ರಿವೀಲ್ ಮಾಡಬಾರದು ಅಂತ ಹೇಳಿದ್ದಾರೆ. ಹೀಗಾಗಿ ಇದಕ್ಕಿಂತ ಹೆಚ್ಚು ನನ್ನ ಪಾತ್ರದ ಬಗ್ಗೆ ಹೆಚ್ಚೇನು ಹೇಳಲಾರೆ’ ಎನ್ನುತ್ತಾರೆ.
ಜಿ.ಎಸ್.ಕಾರ್ತಿಕ ಸುಧನ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sandalwood: ಸ್ಟಾರ್ ಸಿನಿಮಾ ಹೆಚ್ಚು ಬಂದರೆ ಚಿತ್ರರಂಗಕ್ಕೆ ಪೂರಕ: ಎನ್. ನರಸಿಂಹಲು
Dhruva-Prem: ಡಿ.24ಕ್ಕೆ ʼಕೆಡಿʼ ಶಿವ ಶಿವ ಹಾಡು ರಿಲೀಸ್
Dhruva Sarja: ಪ್ರತಿ ಸಿನಿಮಾವೂ ನನಗೆ ಹೊಸ ಪಾಠ…: ಧ್ರುವ ಹೇಳಿದ್ದೇನು
Kiccha Sudeepa; ತಾಯಿಯನ್ನು ಉಳಿಸಿಕೊಳ್ಳಲಾಗದ ಆ ಕ್ಷಣ ನಾನು ಯೂಸ್‌ಲೆಸ್ ಅನಿಸಿತು…
UI Movie: 9 ವರ್ಷ ಬಳಿಕ ಉಪ್ಪಿ ಡೈರೆಕ್ಟ್ ಮಾಡಿದ ಯು-ಐ ಸಿನಿಮಾದ ಹೈಲೈಟ್ಸ್ ಏನು?
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.