ಪಡ್ಡೆಯ ಅಡ್ಡದಿಂದ : ಹತ್ತು ಸೇರಿ ಒಂದಾಯಿತು


Team Udayavani, Apr 5, 2019, 6:00 AM IST

Suchi-Padde-726

ಆರಂಭದಿಂದಲೂ ಒಂದಲ್ಲ, ಒಂದು ವಿಚಾರದಲ್ಲಿ ಸದ್ದು ಮಾಡುತ್ತಲೇ ಬಂದ ‘ಪಡ್ಡೆಹುಲಿ’ ಚಿತ್ರ ಈಗ ಬಿಡುಗಡೆಯ ಹಂತಕ್ಕೆ ಬಂದಿದೆ. ಚಿತ್ರ ಏಪ್ರಿಲ್‌ 19 ರಂದು ತೆರೆಕಾಣುತ್ತಿದೆ. ಈ ಸಂದರ್ಭದಲ್ಲಿ ಚಿತ್ರತಂಡ ಮ್ಯಾಶಪ್‌ ಸಾಂಗ್‌ವೊಂದನ್ನು ಬಿಟ್ಟಿದೆ. ಏನಿದು ಮ್ಯಾಶಪ್‌ ಸಾಂಗ್‌ ಎಂದು ಕೇಳಬಹುದು. ‘ಪಡ್ಡೆಹುಲಿ’ ಚಿತ್ರದಲ್ಲಿ ಬರೋಬ್ಬರಿ ಹತ್ತು ಹಾಡುಗಳಿವೆ. ಈ ಹತ್ತು ಹಾಡುಗಳ ತುಣುಕುಗಳನ್ನೆಲ್ಲಾ ಸೇರಿಸಿ ಒಂದರಲ್ಲೇ ನೀಡಲಾಗಿದೆ. ಈ ಮೂಲಕ ಹತ್ತು ಹಾಡುಗಳು ಹೇಗಿರುತ್ತವೆ ಎಂಬುದರ ಸ್ಯಾಂಪಲ್‌ ಸಿಗಲಿದೆ. “ಪಡ್ಡೆಹುಲಿ’ ಚಿತ್ರದ ಮೂಲಕ ನಿರ್ಮಾಪಕ ಕೆ.ಮಂಜು ಅವರ ಪುತ್ರ ಶ್ರೇಯಸ್‌ ನಾಯಕರಾಗಿ ಎಂಟ್ರಿಕೊಡುತ್ತಿದ್ದಾರೆ. ಚಿತ್ರೀಕರಣದಲ್ಲೇ ಭರವಸೆ ಮೂಡಿಸಿದ್ದರಿಂದ ನಿರ್ಮಾಪಕ ಎಂ.ರಮೇಶ್‌ ರೆಡ್ಡಿ ಯಾವುದಕ್ಕೂ ಕಮ್ಮಿ ಮಾಡದೇ ಬಜೆಟ್‌ ನೀಡಿದ್ದಾರೆ. ಈ ಬಗ್ಗೆ ಮಾತನಾಡುವ ನಿರ್ಮಾಪಕ ರಮೇಶ್‌, “ನಾನು ಸೆಟ್‌ಗೆ ಒಂದೆರಡು ಬಾರಿ ಹೋಗಿದ್ದೇನೆ ಅಷ್ಟೇ. ಈ ವೇಳೆ ಶ್ರೇಯಸ್‌ ಹಾಗೂ ಚಿತ್ರತಂಡದ ಕೆಲಸ ಇಷ್ಟವಾಗಿದೆ. ಅದೇ ಕಾರಣದಿಂದ ಯಾವುದಕ್ಕೂ ಕಡಿಮೆಯಾಗದಂತೆ, ಸಿನಿಮಾ ನಿರ್ಮಿಸಿದ್ದೇನೆ’ ಎಂದು ಖುಷಿಯಿಂದ ಹೇಳಿಕೊಂಡರು. ಇನ್ನು, ಚಿತ್ರ ಮೂಡಿಬಂದಿರುವ ರೀತಿ ಬಗ್ಗೆ ಅವರಿಗೆ ಖುಷಿ ಇದೆಯಂತೆ.


ಈ ಚಿತ್ರವನ್ನು ಗುರುದೇಶಪಾಂಡೆ ನಿರ್ದೇಶಿಸಿದ್ದಾರೆ. ಈಗಾಗಲೇ ಚಿತ್ರದ ಹಾಡುಗಳು ಹಿಟ್‌ ಆಗಿದ್ದು, ಆ ಬಗ್ಗೆ ಖುಷಿಯಿಂದ ಮಾತನಾಡುತ್ತಾರೆ. “ಇವತ್ತು ಒಂದು ಸಿನಿಮಾದಲ್ಲಿ ಹತ್ತು ಹಾಡುಗಳನ್ನು ಕೊಡೋದು ಸುಲಭದ ಕೆಲಸವಲ್ಲ. ಜೊತೆಗೆ ಅಷ್ಟೂ ಹಾಡುಗಳನ್ನು ಚಿತ್ರೀಕರಿಸೋದು ಒಂದು ಸಾಹಸ. ಆ ನಿಟ್ಟಿನಲ್ಲಿ ನಮ್ಮ ನಿರ್ಮಾಪಕರು ಯಾವುದಕ್ಕೂ ಹಿಂದೇಟು ಹಾಕದೇ, ಅದ್ಧೂರಿ ಸೆಟ್‌ ಹಾಕಿ, ಕಲರ್‌ಫ‌ುಲ್‌ ಆಗಿ ಹಾಡುಗಳನ್ನು ಚಿತ್ರೀಕರಿಸಿದ್ದಾರೆ. ಇವತ್ತು ಸಿನಿಮಾ ಚೆನ್ನಾಗಿ ಮೂಡಿಬಂದಿದೆ ಎಂದರೆ ಅದಕ್ಕೆ ಕಾರಣ ನಿರ್ಮಾಪಕರು. ಬಹುಶಃ ಒಬ್ಬ ಹೊಸ ಹುಡುಗನ ಲಾಂಚ್‌ಗೆ ಇಷ್ಟೊಂದು ದೊಡ್ಡ ಬಜೆಟ್‌ ಕೊಡೋದು “ಜಾಗ್ವಾರ್‌’ ನಂತರ ಈ ಸಿನಿಮಾನೇ ಇರಬೇಕು’ ಎನ್ನುತ್ತಾ ನಾಯಕ ಸೇರಿದಂತೆ ಎಲ್ಲರ ಬಗ್ಗೆ ಮಾತನಾಡಿದರು. ಜೊತೆಗೆ ಸಂಗೀತ ನಿರ್ದೇಶಕ ಅಜನೀಶ್‌ ಲೋಕನಾಥ್‌ ಅವರ ಸಿನಿಮಾ ಪ್ರೀತಿ, ತಾಳ್ಮೆಯ ಬಗ್ಗೆಯೂ ಮಾತನಾಡಿದರು ಗುರು. ಇನ್ನು, ಇವತ್ತಿನ ಯುವಕರು ರ್ಯಾಪ್‌ ಸೇರಿದಂತೆ ಮಾಡರ್ನ್ ಹಾಡುಗಳ ಮೊರೆ ಹೋಗುತ್ತಿರುವ ಸಂದರ್ಭದಲ್ಲಿ ಅವರಿಗೆ ನಮ್ಮ ನೆಲದ, ಸಂಸ್ಕೃತಿಯ ಹಾಡುಗಳನ್ನು ಕೇಳಿಸಬೇಕೆಂಬ ಕಾರಣಕ್ಕೆ ವಚನ ಹಾಗೂ ನಮ್ಮ ಕವಿಗಳ ಹಾಡುಗಳನ್ನು ಬಳಸಿಕೊಂಡಿದ್ದಾಗಿ ಹೇಳಿದರು ಗುರುದೇಶಪಾಂಡೆ.


ನಾಯಕ ಶ್ರೇಯಸ್‌ ಕೂಡಾ ನಿರ್ಮಾಪಕರ ವಿಶ್ವಾಸ, ಗುರುದೇಶಪಾಂಡೆ ಶ್ರಮ ಸೇರಿದಂತೆ ಹಲವು ವಿಚಾರಗಳ ಬಗ್ಗೆ ಖುಷಿಯಿಂದ ಹಂಚಿಕೊಂಡರು. ನಿರ್ಮಾಪಕ ಕೆ.ಮಂಜು ಅವರಿಗೆ ಚಿತ್ರದ ಬಗ್ಗೆ ಖುಷಿ ಇದೆ. ಜೊತೆಗೆ ನಿರ್ಮಾಪಕ ರಮೇಶ್‌ ಅವರ ದೊಡ್ಡ ಗುಣದ ಬಗ್ಗೆ ಮೆಚ್ಚುಗೆ ಇದೆ. “ಈ ಸಿನಿಮಾಕ್ಕೆ ನಾನು ಒಂದು ರೂಪಾಯಿ ಖರ್ಚು ಮಾಡಿಲ್ಲ. ಯಾವುದೋ ಒಂದರ ಕಾಸು ಕೊಡೋಕೆ ಮುಂದಾದೆ. ಆಗಲೂ ರಮೇಶ್‌ ಬಿಡಲಿಲ್ಲ. ಬೇರೆಯವರಾದರೆ ಅವರ ಮಗನ ಲಾಂಚ್‌ ಕೊಟ್ಟರೆ ಕೊಡಲಿ ಎಂದು ಸುಮ್ಮನಿರುತ್ತಿದ್ದರು. ಆದರೆ ರಮೇಶ್‌ ಸಂಪೂರ್ಣ ಜವಾಬ್ದಾರಿ ವಹಿಸಿಕೊಂಡಿದ್ದಾರೆ’ ಎಂದ ಮಂಜು, ಮಗ ಶ್ರೇಯಸ್‌ ಯಾವತ್ತಿಗೂ ರಮೇಶ್‌ ಅವರಿಗೆ ಋಣಿಯಾಗಿರಬೇಕು ಎಂದರು. ಚಿತ್ರದ ನಾಯಕಿ ನಿಶ್ವಿ‌ಕಾ, ಸಂಗೀತ ನಿರ್ದೇಶಕ ಅಜನೀಶ್‌ ಸೇರಿದಂತೆ ಇಡೀ ಚಿತ್ರತಂಡ ಸಂತಸ ಹಂಚಿಕೊಂಡಿತು.

ಟಾಪ್ ನ್ಯೂಸ್

Perfect: ಎಡ್‌ ಶಿರನ್‌ ಹಾಡಿನಿಂದ ರಾಷ್ಟ್ರೀಯ ಸೆನ್ಸೇಶನ್‌ ಆದ ಉಡುಪಿಯ ಹುಡುಗ

Perfect: ಎಡ್‌ ಶಿರನ್‌ ಹಾಡಿನಿಂದ ರಾಷ್ಟ್ರೀಯ ಸೆನ್ಸೇಶನ್‌ ಆದ ಉಡುಪಿಯ ಹುಡುಗ | Video

Pushpa 2: ಖಾಕಿಗೆ ಸವಾಲು‌ ಹಾಕುವ ʼಪುಷ್ಪ-2ʼ ಹಾಡು ರಿಲೀಸ್; ವಿವಾದದ ಬೆನ್ನಲ್ಲೇ ಡಿಲೀಟ್

Pushpa 2: ಖಾಕಿಗೆ ಸವಾಲು‌ ಹಾಕುವ ʼಪುಷ್ಪ-2ʼ ಹಾಡು ರಿಲೀಸ್; ವಿವಾದದ ಬೆನ್ನಲ್ಲೇ ಡಿಲೀಟ್

IRCTC: ತಾಂತ್ರಿಕ ದೋಷ- ರೈಲು ಟಿಕೆಟ್‌ ಬುಕ್ಕಿಂಗ್‌ ಸಮಸ್ಯೆ-ಪ್ರಯಾಣಿಕರ ಆಕ್ರೋಶ

IRCTC Down: ತಾಂತ್ರಿಕ ದೋಷ- ರೈಲು ಟಿಕೆಟ್‌ ಬುಕ್ಕಿಂಗ್‌ ಸಮಸ್ಯೆ-ಪ್ರಯಾಣಿಕರ ಆಕ್ರೋಶ

Kazakhstan: ವಿಮಾನ ದುರಂತ ಸಂದರ್ಭದ ಕೊನೆಯ ಕ್ಷಣದ ಭಯಾನಕ ವಿಡಿಯೋ ವೈರಲ್…

Kazakhstan: ವಿಮಾನ ದುರಂತ ಸಂದರ್ಭದ ಕೊನೆಯ ಕ್ಷಣದ ಭಯಾನಕ ವಿಡಿಯೋ ವೈರಲ್…

Belagavi: ಮಹಾತ್ಮ ಗಾಂಧಿ ಪುತ್ಥಳಿ ಅನಾವರಣಗೊಳಿಸಿದ ಸಿಎಂ ಸಿದ್ದರಾಮಯ್ಯ

Belagavi: ಮಹಾತ್ಮ ಗಾಂಧಿ ಪುತ್ಥಳಿ ಅನಾವರಣಗೊಳಿಸಿದ ಸಿಎಂ ಸಿದ್ದರಾಮಯ್ಯ

ಹುತಾತ್ಮ ಯೋಧರ ಕುಟುಂಬಕ್ಕೆ ಸರ್ಕಾರದಿಂದ ನೆರವು: ಸಿಎಂ ಘೋಷಣೆ

Belagavi: ಹುತಾತ್ಮ ಯೋಧರ ಕುಟುಂಬಕ್ಕೆ ಸರ್ಕಾರದಿಂದ ನೆರವು: ಸಿಎಂ ಘೋಷಣೆ

Mumbai: ಚಲಿಸುತ್ತಿರುವಾಗಲೇ ರಸ್ತೆ ಮಧ್ಯೆ ಹೊತ್ತಿ ಉರಿದ ಲ್ಯಾಂಬೋರ್ಘಿನಿ ಕಾರು!

Mumbai: ಚಲಿಸುತ್ತಿರುವಾಗಲೇ ರಸ್ತೆ ಮಧ್ಯೆ ಹೊತ್ತಿ ಉರಿದ ಲ್ಯಾಂಬೋರ್ಘಿನಿ ಕಾರು!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಸ್ಟಾರ್‌ ಸಿನಿಮಾ ಹೆಚ್ಚು ಬಂದರೆ ಚಿತ್ರರಂಗಕ್ಕೆ ಪೂರಕ: ಎನ್‌. ನರಸಿಂಹಲು

Sandalwood: ಸ್ಟಾರ್‌ ಸಿನಿಮಾ ಹೆಚ್ಚು ಬಂದರೆ ಚಿತ್ರರಂಗಕ್ಕೆ ಪೂರಕ: ಎನ್‌. ನರಸಿಂಹಲು

KD

Dhruva-Prem: ಡಿ.24ಕ್ಕೆ ʼಕೆಡಿʼ ಶಿವ ಶಿವ ಹಾಡು ರಿಲೀಸ್‌

Dhruva Sarja: ಪ್ರತಿ ಸಿನಿಮಾವೂ ನನಗೆ ಹೊಸ ಪಾಠ…: ಧ್ರುವ ಹೇಳಿದ್ದೇನು

Dhruva Sarja: ಪ್ರತಿ ಸಿನಿಮಾವೂ ನನಗೆ ಹೊಸ ಪಾಠ…: ಧ್ರುವ ಹೇಳಿದ್ದೇನು

Kiccha Sudeepa; ತಾಯಿಯನ್ನು ಉಳಿಸಿಕೊಳ್ಳಲಾಗದ ಆ ಕ್ಷಣ ನಾನು ಯೂಸ್‌ಲೆಸ್‌ ಅನಿಸಿತು…

Kiccha Sudeepa; ತಾಯಿಯನ್ನು ಉಳಿಸಿಕೊಳ್ಳಲಾಗದ ಆ ಕ್ಷಣ ನಾನು ಯೂಸ್‌ಲೆಸ್‌ ಅನಿಸಿತು…

UI Movie: 9 ವರ್ಷ ಬಳಿಕ ಉಪ್ಪಿ ಡೈರೆಕ್ಟ್‌ ಮಾಡಿದ ಯು-ಐ ಸಿನಿಮಾದ ಹೈಲೈಟ್ಸ್‌ ಏನು?

UI Movie: 9 ವರ್ಷ ಬಳಿಕ ಉಪ್ಪಿ ಡೈರೆಕ್ಟ್‌ ಮಾಡಿದ ಯು-ಐ ಸಿನಿಮಾದ ಹೈಲೈಟ್ಸ್‌ ಏನು?

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

5

Mangaluru: ಪದವು ಜಂಕ್ಷನ್‌- ಶರ್ಬತ್‌ ಕಟ್ಟೆ ರಸ್ತೆಗೆ ಅಗತ್ಯವಿದೆ ಫುಟ್‌ಪಾತ್‌

4

Padil: ಡಿಸಿ ಕಚೇರಿ ಸಂಕೀರ್ಣಕ್ಕೆ ಚಿನ್ನದ ಬಣ್ಣದ ರಾಷ್ಟ್ರ ಲಾಂಛನ

3(1

Uppunda: ಪಾಳು ಕೆರೆ ಈಗ ಈಜುಕೊಳ!; ಚೌಂಡಿ ಕೆರೆಗೆ ಊರಿನ ಯುವಕರಿಂದ ಕಾಯಕಲ್ಪ

2

Bajpe: ತಂಗುದಾಣ ತೆರವು, ಪ್ರಯಾಣಿಕರು ಅನಾಥ!

Perfect: ಎಡ್‌ ಶಿರನ್‌ ಹಾಡಿನಿಂದ ರಾಷ್ಟ್ರೀಯ ಸೆನ್ಸೇಶನ್‌ ಆದ ಉಡುಪಿಯ ಹುಡುಗ

Perfect: ಎಡ್‌ ಶಿರನ್‌ ಹಾಡಿನಿಂದ ರಾಷ್ಟ್ರೀಯ ಸೆನ್ಸೇಶನ್‌ ಆದ ಉಡುಪಿಯ ಹುಡುಗ | Video

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.