ಡಬಲ್ ಡೋಸ್ ಕಾಮಿಡಿ; ಹೊಸ ಅವತಾರದಲ್ಲಿ ಶರಣ್
Team Udayavani, May 6, 2022, 9:05 AM IST
ಕೆಲವು ಸಿನಿಮಾಗಳು ಆರಂಭದಿಂದಲೇ ಕುತೂಹಲ ಕೆರಳಿಸುತ್ತಾ ಬರುತ್ತವೆ. ಆ ಸಾಲಿಗೆ ಸೇರುವ ಸಿನಿಮಾ “ಅವತಾರ್ ಪುರುಷ’. ಸಿಂಪಲ್ ಸುನಿ ನಿರ್ದೇಶನ, ಶರಣ್ ನಾಯಕರಾಗಿರುವ ಈ ಸಿನಿಮಾ ಆರಂಭದಿಂದಲೂ ಕುತೂಹಲ ಕೆರಳಿಸುತ್ತಲೇ ಬಂದಿದ್ದು, ಇಂದು ತೆರೆಕಾಣುತ್ತಿದೆ. ಈಗಾಗಲೇ ಬಿಡುಗಡೆಯಾಗಿರುವ ಟ್ರೇಲರ್ ಹಿಟ್‌ಲಿಸ್ಟ್ ಸೇರುವ ಮೂಲಕ ಚಿತ್ರತಂಡದ ಮೊಗದಲ್ಲಿ ನಗುಮೂಡಿದೆ.
ಶರಣ್ ಸಿನಿಮಾ ಎಂದರೆ ಅಲ್ಲಿ ಕಾಮಿಡಿಗೆ ಬರವಿರುವುದಿಲ್ಲ. ಅದು “ಅವತಾರ ಪುರುಷ’ ಚಿತ್ರದಲ್ಲಿ ಡಬಲ್ ಆಗಿದೆ. ಈಗಾಗಲೇ ಟ್ರೇಲರ್ ನೋಡಿದವರಿಂದ ಒಂದು ಅಭಿಪ್ರಾಯ ವ್ಯಕ್ತವಾಗುತ್ತಿದೆ. ಅದೇನೆಂದರೆ ಇದು ಕೇವಲ ಕಾಮಿಡಿ ಸಿನಿಮಾವಲ್ಲ, ಬದಲಾಗಿ ಗಟ್ಟಿ ಕಥಾಹಂದರವೊಂದಿರುವ ಚಿತ್ರ ಎಂಬುದು. ಅದಕ್ಕೆ ಸಾಕ್ಷಿಯಾಗಿ ಟ್ರೇಲರ್‌ನಲ್ಲಿ ಸಾಕಷ್ಟು ಗಂಭೀರ ದೃಶ್ಯಗಳನ್ನು ನೀಡಲಾಗಿದೆ. ಶರಣ್ ಕೂಡಾ ಈ ಸಿನಿಮಾ ಮೇಲೆ ವಿಶ್ವಾಸವಿಟ್ಟಿದ್ದಾರೆ. ದೊಡ್ಡ ಗ್ಯಾಪ್‌ನ ನಂತರ ತೆರೆಮೇಲೆ ಬರುತ್ತಿರುವ ತನ್ನ ಚಿತ್ರವನ್ನು ಅಭಿಮಾನಿಗಳು ಇಷ್ಟಪಡುತ್ತಾರೆ ಎಂಬ ವಿಶ್ವಾಸವೂ ಇದೆ.
ಚಿತ್ರದ ಬಗ್ಗೆ ಮಾತನಾಡುವ ನಟ ಶರಣ್, “ಇಲ್ಲಿಯವರೆಗೆ ನೀವು ನೋಡಿರದ ಹೊಸ ಶರಣ್‌ನನ್ನು ಈ ಚಿತ್ರದಲ್ಲಿ ನೋಡುತ್ತೀರಿ. ನನ್ನ ಹಿಂದಿನ ಚಿತ್ರಗಳಂತೆ ಇದು ಕೂಡ ಔಟ್ ಆ್ಯಂಡ್ ಔಟ್ ಕಾಮಿಡಿ ಚಿತ್ರವಾಗಿದ್ದು, ಇದರಲ್ಲಿ ಪುಷ್ಕರ್ ಸ್ಟೈಲ್, ಶರಣ್ ಮ್ಯಾನರಿಸಂ, ಸುನಿ ಫ್ಲೇವರ್ ಕಾಣಬಹುದು. ಚಿತ್ರದಲ್ಲಿ ಒಂದು ಸೂಕ್ಷ್ಮ ವಿಚಾರವಿದೆ. ಅದೇನು ಅಂತ ಈಗಲೇ ಹೇಳಿದ್ರೆ ಅದರ ಸ್ವಾರಸ್ಯ ಕಡಿಮೆಯಾಗಬಹುದು. ಹಾಗಾಗಿ ಆ ಗುಟ್ಟು ಮಾತ್ರ ಬಿಟ್ಟು ಕೊಡಲಾರೆ. ಒಟ್ಟಾರೆ ಇದರಲ್ಲಿ ಕಾಮಿಡಿ, ರೊಮ್ಯಾನ್ಸ್ ಸೇರಿದಂತೆ ಮನರಂಜಿಸಲು ಬೇಕಾದ ಅಂಶಗಳಿಗಂತೂ ಕೊರತೆ ಇಲ್ಲ. ನಾನು ಇಲ್ಲಿಯವರೆಗೆ ಮಾಡಿದ ಚಿತ್ರಗಳಿಗಿಂತ ಇದು ಭಿನ್ನವಾದ ಚಿತ್ರ. ನೋಡುಗರಿಗೂ ಈ ಕಾನ್ಸೆಪ್ಟ್ ಇಷ್ಟವಾಗುವುದೆಂಬ ನಂಬಿಕೆ ನನಗಿದೆ’ ಎನ್ನುತ್ತಾರೆ ಶರಣ್.
ಚಿತ್ರದ ತಾರಾಬಳಗ ಕೂಡಾ ದೊಡ್ಡದಾಗಿದೆ. ಶರಣ್, ಆಶಿಕಾ, ಶ್ರೀನಗರ ಕಿಟ್ಟಿ, ಸಾಯಿ ಕುಮಾರ್, ಆಶುತೋಷ್ ರಾಣಾ, ಸುಧಾರಾಣಿ ಮುಂತಾದ ಕಲಾವಿದರ ಬಳಗ ಈ ಚಿತ್ರದಲ್ಲಿದೆ.
ಗೆಲ್ಲೋ ವಿಶ್ವಾಸ: ವಿಭಿನ್ನ ಸಿನಿಮಾಗಳನ್ನು ನಿರ್ಮಿಸುತ್ತಾ ಬಂದಿರುವ ಪುಷ್ಕರ್ ಈ ಸಿನಿಮಾ ಮೇಲೆ ಸಿಕ್ಕಾಪಟ್ಟೆ ವಿಶ್ವಾಸವಿಟ್ಟಿದ್ದಾರೆ. ಅದಕ್ಕೆ ಕಾರಣ ಚಿತ್ರದ ಕಥೆ ಹಾಗೂ ಮೂಡಿಬಂದಿರುವ ರೀತಿ. “ಅವತಾರ್ ಪುರುಷ ಪಕ್ಕಾ ಮನರಂಜನೆ ನೀಡುವ ಸಿನಿಮಾ. ಕಾಮಿಡಿ ಹಿನ್ನೆಲೆಯಲ್ಲಿ ಸಾಗುವ ಚಿತ್ರದಲ್ಲಿ ಒಂದು ಹೊಸ ಲೋಕವೇ ತೆರೆದುಕೊಳ್ಳಲದೆ. ಕೋವಿಡ್ ಬಳಿಕ ಔಟ್ ಅಂಡ್ ಔಟ್ ನಗುವಿನ ಸಿನಿಮಾವಾಗಿ “ಅವತಾರ್ ಪುರುಷ’ ಪ್ರೇಕ್ಷಕರನ್ನು ರಂಜಿಸಲಿದೆ’ ಎನ್ನುವುದು ಪುಷ್ಕರ್ ಮಾಡಿದೆ.
ರವಿಪ್ರಕಾಶ್ ರೈ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Max Movie: ಸಖತ್ ರೆಸ್ಪಾನ್ಸ್ ಪಡೆದ ಕಿಚ್ಚನ ʼಮ್ಯಾಕ್ಸ್ʼ ಮೊದಲ ದಿನ ಗಳಿಸಿದ್ದೆಷ್ಟು?
Actor Health: ಸ್ವಲ್ಪ ಜರುಗಿದ ದರ್ಶನ್ ಬೆನ್ನುಮೂಳೆ; ತುರ್ತಾಗಿ ಆಪರೇಷನ್ ಇಲ್ಲ: ವೈದ್ಯರು
Prashanth Neel: ಸಲಾರ್‌ಗೆ ನಾನು ಇನ್ನಷ್ಟು ಶ್ರಮ ಹಾಕಬೇಕಿತ್ತು; ಪ್ರಶಾಂತ್ ನೀಲ್
UI Movie: ಉಪ್ಪಿ ಯುಐ ಮೆಚ್ಚಿದ ಯಶ್
Shivaraj Kumar: ಶಿವರಾಜ್ ಕುಮಾರ್ ಅವರ ಆಪರೇಷನ್ ಯಶಸ್ವಿಯಾಗಿದೆ – ಪತ್ನಿ ಗೀತಾ ಮಾಹಿತಿ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ಹುಬ್ಬಳ್ಳಿ ಸಿಲಿಂಡರ್ ಸ್ಫೋಟ ಪ್ರಕರಣ: 16 ವರ್ಷದ ಬಾಲಕ ಮೃತ್ಯು, ಮೃತರ ಸಂಖ್ಯೆ 3ಕ್ಕೆ ಏರಿಕೆ
ನನ್ನ ಮಾರ್ಗದರ್ಶಕರನ್ನು ಕಳೆದುಕೊಂಡಿದ್ದೇನೆ… ಮಾಜಿ ಪ್ರಧಾನಿ ನಿಧನಕ್ಕೆ ರಾಹುಲ್ ಸಂತಾಪ
Gangavathi: 25 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಬಂಧನ
Patna: “ರಘುಪತಿ ರಾಘವ’ ಭಜನೆ ಹಾಡಿದ ಗಾಯಕಿ ವಿರುದ್ಧ ಪ್ರತಿಭಟನೆ: ಹಾಡುಗಾರ್ತಿ ಕ್ಷಮೆ
Canada: ಮಾನವ ಕಳ್ಳಸಾಗಣೆಯಲ್ಲಿ ಕೆನಡಾದ 260 ಕಾಲೇಜು! ವಿದ್ಯಾರ್ಥಿ ವೀಸಾ ಮೂಲಕ ಆಮಿಷ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.